For Quick Alerts
  ALLOW NOTIFICATIONS  
  For Daily Alerts

  'ನಗ್ನ ಸತ್ಯಂ' ಚಿತ್ರದಲ್ಲಿ ತಾರೆ ವೀಣಾ ಮಲಿಕ್ ಬಂಧನ

  By ಅನಂತರಾಮು, ಹೈದರಾಬಾದ್
  |

  ಬಾಲಿವುಡ್ ಗೆ ಅಡಿಯಿಟ್ಟಿರುವ ಪಾಕಿಸ್ತಾನದ ಹಾಟ್ ಬೆಡಗಿ ವೀಣಾ ಮಲಿಕ್ ಅವರನ್ನು ಪೊಲೀಸರು ಹೈದರಾಬಾದಿನಲ್ಲಿ ಬಂಧಿಸಿದ್ದಾರೆ. ಯಾವಾಗ, ಏನು , ಯಾಕೆ, ಎತ್ತ? ವೀಣಾ ಮಲಿ ಏನು ಎಡವಟ್ಟು ಮಾಡಿದರಪ್ಪಾ ಎಂದು ಶಾಖ್ ಆದ್ರಾ! ಅಯ್ಯೋ ಅದು ರಿಯಲ್ ಬಂಧನ ಅಲ್ಲ ಗುರು. ಲೈಟ್ಸ್ ಕ್ಯಾಮೆರಾ ಆಕ್ಷನ್ ಕಟ್ ಬಂಧನ ಅಷ್ಟೇ.

  ಸದ್ಯಕ್ಕೆ ತೆಲುಗಿನ 'ನಗ್ನ ಸತ್ಯಂ' ಎಂಬ ಚಿತ್ರದಲ್ಲಿ ಅಭಿನಯಿಸುತ್ತಿರುವ ವೀಣಾರ ಬಂಧನ ಸೀಸನ್ನು ಚಿತ್ರೀಕರಿಸಿಕೊಳ್ಳಲಾಯಿತು. 'ನಗ್ನ ಸತ್ಯಂ' ಚಿತ್ರದ ಶೂಟಿಂಗ್ ಸ್ಟಿಲ್ಸ್ ನಿಮಗಾಗಿ ಇಲ್ಲಿವೆ ನೋಡಿ. ಈ ಚಿತ್ರದಲ್ಲಿ ಕೇವಲ ಸತ್ಯ ಇರುತ್ತದೋ ಅದರ ಜೊತೆಗೆ ನಗ್ನ ದೃಶ್ಯಗಳೂ ಇರುತ್ತವೋ ಈಗಲೇ ಏನೂ ಹೇಳಲಿಕ್ಕಾಗದು.

  ವೀಣಾ ಮಲಿಕ್ ಟಾಲಿವುಡ್ ಚೊಚ್ಚಲ ಚಿತ್ರ

  ವೀಣಾ ಮಲಿಕ್ ಟಾಲಿವುಡ್ ಚೊಚ್ಚಲ ಚಿತ್ರ

  ರಾಮಾ ರಾವ್ ಎಂಬುವವರು ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ ಇದಾಗಿದ್ದು 2013ರ ಬೇಸಿಗೆಗೆ ಚಿತ್ರಮಂದಿರಗಳಲ್ಲಿ ತಂಪೆರೆಯಲಿದೆಯಂತೆ. ಇಷ್ಟಕ್ಕೂ ಚಿತ್ರದಲ್ಲಿ ವೀಣಾರನ್ನು ಪೊಲೀಸರು ಬಂಧಿಸಿದ್ದೇಕೆ? ಎಂಬುದು ಗೊತ್ತಾಗಬೇಕಾದರೆ ಚಿತ್ರ ಬಿಡುಗಡೆವರೆಗೂ ಕಾಯಲೇಬೇಕಂತೆ.

  ಆಹಾ ಏನು ಲೀಲಾಜಾಲ ಅಭಿನಯ!

  ಆಹಾ ಏನು ಲೀಲಾಜಾಲ ಅಭಿನಯ!

  ಪೊಲೀಸರು ಧರಧರನೆ ಎಳೆದೊಯ್ಯುತ್ತಿದ್ದರೆ ವೀಣಾ ಅವರಿಂದ ಬಿಡಿಸಿಕೊಳ್ಳುವ ಯತ್ನ ಮಾಡುತ್ತಿರುವುದನ್ನು ಚಿತ್ರದಲ್ಲಿ ಕಾಣಬಹುದು. ಅಬ್ಬಾ ಎಷ್ಟೊಂದು ಲೀಲಾಜಾಲ ಅಭಿನಯ.

  ಕಥೆ ಬ್ಯೂಟಿಫುಲ್ ಆಗಿದೆ ಅದಕ್ಕೇ ಒಪ್ಕೊಂಡೆ

  ಕಥೆ ಬ್ಯೂಟಿಫುಲ್ ಆಗಿದೆ ಅದಕ್ಕೇ ಒಪ್ಕೊಂಡೆ

  ಚಿತ್ರದ ಕಥೆ ಬ್ಯೂಟಿಫುಲ್ ಆಗಿದೆ. ಹಾಗಾಗಿ ಈ ಚಿತ್ರವನ್ನು ಒಪ್ಪಿಕೊಂಡೆ. ಟಾಲಿವುಡ್ ನಲ್ಲಿ ತಮಗೆ ಬಿಗ್ ಬ್ರೇಕ್ ನೀಡುತ್ತದೆ ಎಂಬ ನಿರೀಕ್ಷೆಯಲ್ಲಿ ವೀಣಾ ಮಲಿಕ್ ಇದ್ದಾರೆ. ಈ ಚಿತ್ರದ ಬಗ್ಗೆ ಬಹಳಷ್ಟು ನಿರೀಕ್ಷೆಗಳು ಇವೆಯಂತೆ.

  ನಾನಂತೂ ಚಿತ್ರದಲ್ಲಿ ಎಂಜಾಯ್ ಮಾಡಿದ್ದೇನೆ

  ನಾನಂತೂ ಚಿತ್ರದಲ್ಲಿ ಎಂಜಾಯ್ ಮಾಡಿದ್ದೇನೆ

  ಪೊಲೀಸರ ಕಿರುಕುಳ ಹೇಗಿರುತ್ತದೆ. ಜೈಲುವಾಸ ಅನುಭವಿಸುವವರ ಪಾಡೇನು ಎಂಬುದು ತಮಗೆ ಈ ಚಿತ್ರದ ಮೂಲಕ ಗೊತ್ತಾಯಿತು. ಬೇರೆಯವರ ಪರಿಸ್ಥಿತಿ ಹೇಗೋ ಏನೋ ಗೊತ್ತಿಲ್ಲ. ನಾನಂತೂ ಚಿತ್ರದಲ್ಲಿ ಬಂಧನ, ಜೈಲು ಶಿಕ್ಷೆಯನ್ನು ಎಂಜಾಯ್ ಮಾಡಿದ್ದೇನೆ ಎನ್ನುತ್ತಾರೆ ವೀಣಾ.

  ದಕ್ಷಿಣಕ್ಕೆ ಲಗ್ಗೆ ಹಾಕಿರುವ ಪಾಕಿಸ್ತಾನಿ ಹಾಟ್ ಬಾಂಬ್

  ದಕ್ಷಿಣಕ್ಕೆ ಲಗ್ಗೆ ಹಾಕಿರುವ ಪಾಕಿಸ್ತಾನಿ ಹಾಟ್ ಬಾಂಬ್

  ದಕ್ಷಿಣ ಭಾರತಕ್ಕೆ ಲಗ್ಗೆ ಹಾಕಿರುವ ವೀಣಾ ಮಲಿಕ್ ಅತ್ತ ತೆಲುಗು ಇತ್ತ ಕನ್ನಡ ತಲಾ ಒಂದೊಂದು ಚಿತ್ರದಲ್ಲಿ ಅಭಿನಯಿಸಿದ್ದಾರೆ. 'ಡರ್ಟಿ ಪಿಕ್ಚರ್ : ಸಿಲ್ಕ್ ಸಖತ್ ಹಾಟ್ ಮಗಾ' ಚಿತ್ರ ಕಾಪಿರೈಟ್ ಕಾಯಿದೆಯನ್ನು ಉಲ್ಲಂಘಿಸಿದೆ ಎಂಬ ಆರೋಪಕ್ಕೂ ಗುರಿಯಾಗಿರುವುದು ಗೊತ್ತೇ ಇದೆ.


  ಕನ್ನಡದ 'ಡರ್ಟಿ ಪಿಕ್ಚರ್: ಸಿಲ್ಕ್ ಸಖತ್ ಹಾಟ್ ಮಗಾ' ಚಿತ್ರದಲ್ಲಿ ಅಭಿನಯಿಸುವ ಮೂಲಕ ದಕ್ಷಿಣ ಭಾರತಕ್ಕೂ ಅಡಿಯಿಟ್ಟ ವೀಣಾ ಈಗ ತೆಲುಗು ಚಿತ್ರರಂಗಕ್ಕೂ ಪಾದಾರ್ಪಣೆ ಮಾಡಿದ್ದಾರೆ. 'ನಗ್ನ ಸತ್ಯಂ' ಆಕೆ ಅಭಿನಯಿಸುತ್ತಿರುವ ಚೊಚ್ಚಲ ತೆಲುಗು ಚಿತ್ರ.
  English summary
  Hot actress Veena Malik was arrested on the sets of the this Telugu film Nagna Satyam and sent to a jail in Hyderabad. Wait!!! It is not a real life arrest. It was meant for her reel life. The former Bigg Boss contestants has shot a scene for her debut Tollywood film in which she will be arrested by the police for some reason.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X