For Quick Alerts
  ALLOW NOTIFICATIONS  
  For Daily Alerts

  ತಾರೆ ವಿದ್ಯಾ ಬಾಲನ್ ಮದುವೆ ಮುಹೂರ್ತ ಫಿಕ್ಸ್!

  By Rajendra
  |

  ತಮ್ಮ ಮದುವೆ ಬಗ್ಗೆ ಬಾಲಿವುಡ್ ತಾರೆ ವಿದ್ಯಾ ಬಾಲನ್ ಇದುವರೆಗೂ ತುಟಿ ಬಿಚ್ಚಿಲ್ಲ. ಆದರೂ ವಿದ್ಯಾ ಮದುವೆ ಸಿದ್ಧಾರ್ಥ್ ರಾಯ್ ಕಪೂರ್ ಜೊತೆ ಡಿಸೆಂಬರ್ 14ಕ್ಕೇ ನಡೆಯಲಿದೆ ಎನ್ನಲಾಗಿದೆ. ಸದ್ದುಗದ್ದಲವಿಲ್ಲದಂತೆ ಮದುವೆ ಸಿದ್ಧತೆಗಳು ಈಗಾಗಲೆ ಭರದಿಂದ ನಡೆಯುತ್ತಿವೆಯಂತೆ.

  ಈಗಾಗಲೆ ಮದುವೆ ಬಗ್ಗೆ ವಿದ್ಯಾ ಬಾಲನ್ ಕುಟುಂಬಿಕರು ತಮ್ಮ ಬಂಧು, ಬಳಗ, ಗೆಳೆಯರಿಗೆ ಸುದ್ದಿ ಮುಟ್ಟಿಸಿದ್ದಾರೆ. ಡಿಸೆಂಬರ್ 11ರಿಂದ 14ರ ನಡುವೆ ಮದುವೆ ನಡೆಯಲಿದೆ. ನೀವೆಲ್ಲಾ ಸಿದ್ಧವಾಗಿರಿ ಎಂಬ ಮದುವೆ ಸಂದೇಶ ಅವರಿಗೆಲ್ಲಾ ರವಾನೆಯಾಗಿದೆ ಎನ್ನುತ್ತಾರೆ.

  ಈ ಎಲ್ಲಾ ಅಂತೆಕಂತೆಗಳಿಗೆ ತಲೆಮೇಲೆ ಹೊಡೆದಂತೆ ಮತ್ತೊಂದು ಸುದ್ದಿಯೂ ಇದೆ. ಅದೇನೆಂದರೆ ವಿದ್ಯಾ ಅವರು 15 ದಿನಗಳ ರಜೆ ಹಾಕಲು ಮುಂದಾಗಿರುವುದು. 'ಘನ್ ಚಕ್ಕರ್' ಚಿತ್ರೀಕರಣಕ್ಕೆ 15 ದಿನ ರಜೆ ಹಾಕಲಿದ್ದಾರೆ ಎಂಬ ಸುದ್ದಿಯೂ ಇದೆ. ಮದುವೆಗಾಗಿ ಈಗಾಗಲೆ ಸೀರೆಗಳನ್ನು ಸಂಗ್ರಹಿಸಿದ್ದಾರೆ ವಿದ್ಯಾ.

  ಮದುವೆಗೆಂದೇ 18 ಬಗೆಯ ಸೀರೆಗಳಿಗೆ ಆರ್ಡರ್ ಮಾಡಿದ್ದಾರೆ. ತಮಿಳು ಹಾಗೂ ಪಂಜಾಬಿ ಸಂಪ್ರದಾಯದಂತೆ ಮದುವೆ ಶಾಸ್ತ್ರಗಳು ನಡೆಯಲಿವೆ. ಮದುವೆಗೆ ಮದ್ರಾಸ್ ರೇಶ್ಮೆ ಸೀರೆಗೂ ಆರ್ಡರ್ ನೀಡಿದ್ದಾರಂತೆ.

  ಒಂದು ಕಡೆಗೆ ಮದುವೆಗೆ ಮುಹೂರ್ತ ಫಿಕ್ಸ್ ಆಗಿದ್ದರೆ, ಇನ್ನೊಂದು ಕಡೆ ವಿದ್ಯಾ ಬಾಲನ್ ಮಧುಚಂದ್ರಕೆ ಮಧುಮಂಚವೂ ಸಿದ್ಧವಾಗಿದೆ! ಅವರ ಮಧುಚಂದ್ರ ಪ್ಲಾನ್ ಎಲ್ಲಿ ಎಂಬ ಸೀಕ್ರೇಟ್ ಕೂಡ ಬಯಲಾಗಿದೆ. ವಿವರಗಳಿಗೆ ಮುಂದೆ ಓದಿ...(ಏಜೆನ್ಸೀಸ್)

  English summary
  Actress Vidya Balan and her beau Siddharth Roy Kapur planning to get married in December 14. According to sources, friends and family have been asked to keep their date books free from 11 to 14 December.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X