ಉಪ್ಪಿಟ್ಟಲ್ಲಿ ವಿದ್ಯಾಬಾಲನ್ ಆಗಲಿದ್ದಾರೆ ಅವರೇಕಾಳು

By ಜೀವನರಸಿಕ

ರಿಯಲ್ ಸ್ಟಾರ್ ಉಪೇಂದ್ರ ತಮ್ಮ 45 ನೇ ಬರ್ತಡೇಗೆ ಬಹು ನಿರೀಕ್ಷಿತ ಉಪ್ಪಿಟ್ಟನ್ನ ಅಭಿಮಾನಿಗಳಿಗೆ ಕೊಡೋಕೆ ರೆಡಿಯಾಗ್ತಿದ್ದಾರೆ. ಆದರೆ ಈ ಉಪ್ಪಿ 2 ಸಿನಿಮಾದ ತಾರಾಗಣ ಹೇಗಿರುತ್ತೆ. ಯಾರು ಮ್ಯೂಸಿಕ್ ಮಾಡ್ತಾರೆ, ಯಾರು ಹೀರೋಯಿನ್ ಅನ್ನೊ ಸುದ್ದಿಯನ್ನ ಯಾರಿಗೂ ಬಿಟ್ಟುಕೊಟ್ಟಿರ್ಲಿಲ್ಲ.

ಈಗ ಬಂದಿರೋ ಸುದ್ದಿಯ ಪ್ರಕಾರ ಬಾಲಿವುಡ್ ನ ಡರ್ಟಿ ಬ್ಯೂಟಿ ವಿದ್ಯಾ ಬಾಲನ್ ಉಪ್ಪಿ-2ಗೆ ಸಿನಿಮಾದಲ್ಲಿ ಮಿಂಚೋ ಸಾಧ್ಯತೆಗಳಿವೆಯಂತೆ. ಉಪ್ಪಿ ತಮ್ಮ ಚಿತ್ರದ ಇನ್ವಿಟೇಷನನ್ನೇ ಅಷ್ಟು ಡಿಫ್ರೆಂಟಾಗಿ ಮಾಡಿದ್ರು. ಆಮಂತ್ರಣ ಪತ್ರಿಕೆಯಲ್ಲಿ ಇದ್ದಿದ್ದು ಕೇವಲ ಒಂದು ಕನ್ನಡಿ.

1999ರಲ್ಲಿ ಬಂದ ಉಪೇಂದ್ರ ಸಿನಿಮಾದಲ್ಲಿ ನಾನು ಯಾರು ಅನ್ನೋ ತರ್ಕ ಮಾಡಿ ತಲೆಗೆ ಹುಳಬಿಟ್ಟ ಉಪ್ಪಿ ಮತ್ತೆ ತಾನು ಡಿಫ್ರೆಂಟ್ ಅಂತ ಕನ್ನಡಿ ಕೊಟ್ಟು ಪ್ರೂವ್ ಮಾಡಿದ್ದಾರೆ. ಇನ್ನು ಉಪ್ಪಿ ಅಂಡ್ ಟೀಂ ಈಗಾಗಲೇ ವಿದ್ಯಾಬಾಲನ್ ಗೆ ಬಲೆ ಬೀಸಿರೋ ಸುದ್ದಿ ಬಂದಿದ್ದು ಸದ್ಯದಲ್ಲೇ ಈ ಸುದ್ದಿ ಕೂಡ ಕನ್ಫರ್ಮ್ ಆಗಲಿದೆ.

ಟೈಟಲ್ ಇಲ್ದೇ ಸಿಂಬಲ್ ಇಟ್ಟು ಸಿನಿಮಾ ಮಾಡಿದ ಉಪ್ಪಿಗೆ, ಈಗ ಟೈಟಲ್ ಇಲ್ಲದೇನೂ ಸಿನಿಮಾ ಮಾಡ್ತೀನಿ ಅಂತಿರೋ ಉಪ್ಪಿಗೇ ಇದೇನು ಕಷ್ಟದ ಮಾತಾ ಅಂತ ಮಾತಾಡಿಕೊಳ್ತಿದೆ ಗಾಂಧಿನಗರ. ಉಪ್ಪಿ ಏನೇ ಮಾಡಿದ್ರೂ ಸೂಪರ್ ಅಲ್ವಾ. ಉಪ್ಪಿಟ್ಟಲ್ಲಿ ವಿದ್ಯಾ ಬಾಲನ್ ಅವರೇಕಾಳಾಗಲಿದ್ದಾರಾ?

More from Filmibeat

English summary
Bollywood actress Vidya Balan all set to debut Sandalwood. The dirty girl may act in Real Star Upendra's upcoming film 'Uppi 2', which will be directed and produced by the actor, will be launched amidst much hoopla at the Kanteerava studio.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X