Vidya Balan: ವಿದ್ಯಾ ಬಾಲನ್‌ಗೆ ಇಷ್ಟು ದೊಡ್ಡ ಮಗಳಿದ್ದಾಳಾ..? ನಟಿ ರಿಯಾಕ್ಷನ್ ಏನು..?
ಇತ್ತೀಚೆಗಿನ ವಿಮಾನ ನಿಲ್ದಾಣದಲ್ಲಿ ನಟಿ ವಿದ್ಯಾಬಾಲನ್ ಅವರ ಒಂದು ಹೆಣ್ಣು ಮಗುವಿನೊಂದಿಗೆ ಕಾಣಿಸಿಕೊಂಡಿದ್ದರು. ಅವರಿಬ್ಬರ ನಡುವಿನ ಸಂಭಾಷಣೆ, ಲುಕ್ ಎಲ್ಲವೂ ತಾಯಿ ಮಗಳಂತೆ ಕಾಣಿಸುತ್ತಿತ್ತು. ಇದೇ ಕಾರಣಕ್ಕೆ ಈ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು.
ಈ ವಿಡಿಯೋಗೆ ಕೆಲವು ಪಾಪರಾಜಿಗಳು 'ವಿದ್ಯಾ ಬಾಲನ್ ತಮ್ಮ ಮುದ್ದಾದ ಮಗಳೊಂದಿಗೆ' ಎಂದು ಶೀರ್ಷಿಕೆ ನೀಡಿ ಶೇರ್ ಮಾಡಿದ್ದರು. ಇದರಿಂದ ಈ ಫೋಟೋ, ವಿಡಿಯೋಗಳು ಭಾರಿ ವೈರಲ್ ಆಗಿದ್ದವು. ನೆಟ್ಟಿಗರು ಪೂರ್ತಿ ಗೊಂದಲಕ್ಕೆ ಒಳಗಾಗಿದ್ದರು. ವಿದ್ಯಾ ಬಾಲನ್‌ಗೆ ಯಾವಾಗ ಮಗುವಾಯಿತು ಎಂದು ತಲೆ ಕೆಡಿಸಿಕೊಂಡಿದ್ದರು.

ವಿದ್ಯಾ ಬಾಲನ್‌ಗೆ ಇಷ್ಟು ದೊಡ್ಡ ಮಗಳಾ?
ಇಷ್ಟು ವರ್ಷ ಇಲ್ಲದ ಮಗಳು ಸಡನ್ ಆಗಿ ಕಾಣಿಸಿಕೊಂಡರಾ ಎಂದು ನೆಟ್ಟಿಗರು ಪ್ರಶ್ನೆ ಮಾಡಲು ಆರಂಭಿಸಿದರು. ನಟಿ ಮಗಳನ್ನು ಇಷ್ಟು ದಿನ ರಹಸ್ಯವಾಗಿ ಸಾಕುತ್ತಿದ್ದಾರೆ ಎಂದು ಹಲವು ಮಂದಿ ಹೇಳಿದ್ದಾರೆ. ನಟಿ ವಿದ್ಯಾ ಬಾಲನ್ ಮತ್ತು ಪತಿ ಸಿದ್ಧಾರ್ಥ್ ಕಪೂರ್ ಅವರಿಗೆ ಒಬ್ಬ ಮಗಳು ಇದ್ದಾಳೆ ಎಂದು ಆಶ್ಚರ್ಯ ಪಡುತ್ತಿದ್ದಾರೆ.
ಮಗಳಿದ್ದಾಳೆ ಎಂಬ ವದಂತಿಗೆ ನಟಿಯ ಪ್ರತಿಕ್ರಿಯೆ
ವಿದ್ಯಾ ಬಾಲನ್ ವಿಡಿಯೋ, ಫೋಟೋಗಳು ವೈರಲ್ ಆಗುತ್ತಿದ್ದಂತೆಯೇ ನಟಿ ಪ್ರತಿಕ್ರಿಯಿಸಿದ್ದಾರೆ. ಹಿಂದೂಸ್ತಾನ್ ಟೈಮ್ಸ್ ಜೊತೆ ಮಾತನಾಡಿದ ವಿದ್ಯಾ ಬಾಲನ್, "ವಿಮಾನ ನಿಲ್ದಾನದಲ್ಲಿ ನನ್ನ ಜೊತೆಗೆ ಇದ್ದದ್ದು ನನ್ನ ಸಹೋದರಿಯ ಮಗಳು ಇರಾ! ಆಕೆಗೆ ಅವಳಿ ಮಕ್ಕಳಿದ್ದಾರೆ. ನನ್ನ ಸಹೋದರಿಗೆ ರುಹಾನ್ ಎಂಬ ಬಾಲಕ ಮತ್ತು ಇರಾ ಎಂಬ ಮಗಳಿದ್ದಾಳೆ" ಎಂದು ಹೇಳಿದ್ದಾರೆ.

ವೈರಲ್ ವಿಡಿಯೋ ನೋಡಿದರೆ ವಿದ್ಯಾ ಬಾಲನ್ ತನ್ನ ಸಹೋದರಿಯ ಮಗಳೊಂದಿಗೆ ಆತ್ಮೀಯ ಬಾಂಧವ್ಯ ಹೊಂದಿದ್ದಾರೆ ಎಂಬುದು ಮತ್ತು ಮಗುವನ್ನು ತಾಯಿಯಂತೆ ಪ್ರೀತಿಸುತ್ತಾಳೆ ಎಂಬುದು ಸ್ಪಷ್ಟವಾಗಿದೆ. ಆದರೆ ಪಾಪರಾಜಿಗಳು ಮಾಡಿದ ಎಡವಟ್ಟಿನಿಂದಾಗಿ ಹಲವರಿಗೆ ವಿದ್ಯಾ ಬಾಲನ್ ತಮ್ಮ ಮಗಳನ್ನು ರಹಸ್ಯವಾಗಿ ಬೆಳೆಸಿದ್ದಾರೆ ಎಂಬ ಅನುಮಾನ ಮೂಡಿತ್ತು.
ನಟಿ ವಿದ್ಯಾ ಬಾಲನ್ ಡಿಸೆಂಬರ್ 14, 2012 ರಂದು ಸಿದ್ಧಾರ್ಥ್ ರಾಯ್ ಕಪೂರ್ ಅವರನ್ನು ವಿವಾಹವಾಗಿದ್ದರು. ಮದುವೆಗೂ ಮುನ್ನ ಒಂದೆರಡು ವರ್ಷಗಳ ಕಾಲ ಅವರೊಂದಿಗೆ ಡೇಟಿಂಗ್ ಮಾಡಿದ್ದರು. ನಿರ್ದೇಶಕ, ನಿರ್ಮಾಪಕ್ ಕರಣ್ ಜೋಹರ್ ತಮ್ಮ ನಡುವೆ ಸೇತುವೆಯಾಗಿದ್ದರು ಎಂದು ವಿದ್ಯಾ ಈ ಹಿಂದೆ ಹೇಳಿದ್ದರು. 2017 ರಲ್ಲಿ ವಿದ್ಯಾ ಬಾಲನ್ ಮಗು ಮಾಡಿಕೊಳ್ಳಲು ನನಗೆ ಸಮಯವಿಲ್ಲ. ನನ್ನ ಪ್ರತಿ ಚಿತ್ರವೂ ಒಂದು ಮಗು ಎಂದು ಹೇಳಿದ್ದರು.
ವಿದ್ಯಾ ಬಾಲನ್ ಮುಂಬರುವ ಚಿತ್ರಗಳು
ಕೆಲಸದ ವಿಷಯವನ್ನು ನೋಡುವುದಾದರೇ, ಇತ್ತೀಚೆಗೆ ಬಿಡುಗಡೆಯಾದ 'ನೀಯತ್' ಸಿನಿಮಾದಲ್ಲಿ ವಿದ್ಯಾ ಕೊನೆಯದಾಗಿ ಕಾಣಿಸಿಕೊಂಡಿದ್ದರು, ಮರ್ಡರ್ ಮಿಸ್ಟ್ರಿ ಎನ್ನಲಾಗಿದ್ದ ಪತ್ತೇದಾರಿ ಚಿತ್ರದಲ್ಲಿ ನಟಿ ನಟಿಸಿದ್ದರು. ಆದರೆ, ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸೋಲು ಕಂಡಿತು. ಮುಂದೆ 'ಲವರ್ಸ್' ಚಿತ್ರದಲ್ಲಿ ಪ್ರತಿಕ್ ಗಾಂಧಿ, ಸೆಂಧಿಲ್ ರಾಮಮೂರ್ತಿ ಮತ್ತು ಇಲಿಯಾನಾ ಡಿಕ್ರೂಜ್ ಜೊತೆಗೆ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾ ಡಿಸೆಂಬರ್ 2021 ರಲ್ಲಿ ಚಿತ್ರೀಕರಣವನ್ನು ಪೂರ್ಣಗೊಂಡಿತ್ತು.


Click it and Unblock the Notifications











