For Quick Alerts
  ALLOW NOTIFICATIONS  
  For Daily Alerts

  ಗಾಸಿಪ್‌ನಿಂದ ಬೇಸತ್ತ ರಶ್ಮಿಕಾ: 8 ತಿಂಗಳ ಗ್ಯಾಪ್ ಬಳಿಕ ವಿಜಯ್ ದೇವರಕೊಂಡ ಬಗ್ಗೆ ಟ್ವೀಟ್!

  |

  ನಟಿ ರಶ್ಮಿಕಾ ಮಂದಣ್ಣ ಸದ್ಯ ಬಾಲಿವುಡ್, ಕಾಲಿವುಡ್ ಮತ್ತು ಟಾಲಿವುಡ್‌ನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ರಶ್ಮಿಕಾ ಮಂದಣ್ಣ ತಮ್ಮ ಸಿನಿಮಾ ಮತ್ತು ಪಾತ್ರಗಳ ಜೊತೆ ಜೊತೆಗೆ ಆಗಾಗ ಹಲವು ವಿಚಾರಕ್ಕೆ ಟ್ರೋಲ್ ಆಗುತ್ತಿರುತ್ತಾರೆ. ಜೊತೆಗೆ ಅವರ ಬಗ್ಗೆ ಆಗಾಗ ಹಲವು ಗಾಸಿಪ್‌ಗಳು ಹರಿದಾಡುತ್ತಲೇ ಇರುತ್ತೆ. ಆದರೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ರಶ್ಮಿಕಾ ಮಂದಣ್ಣ ಬಿಂದಾಸ್ ಬೆಡಗಿ ರಶ್ಮಿಕಾ.

  ಆದರೆ ಕಳೆದ ಕೆಲ ದಿನಗಳಿಂದ ರಶ್ಮಿಕಾ ಮಂದಣ್ಣ ಬಗ್ಗೆ ಒಂದು ಅಚ್ಚರಿಯ ವಿಚಾರ ಚರ್ಚೆಗೆ ಗ್ರಾಸವಾಗಿತ್ತು. ನಟಿ ರಶ್ಮಿಕಾ ಮಂದಣ್ಣ ಇತ್ತೀಚೆಗೆ ವಿಜಯ್ ದೇವರಕೊಂಡ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಗಲಿ, ಅಥವಾ ಬೇರೆ ಎಲ್ಲೂ ಅವರ ಹೆಸರನ್ನು ಪ್ರಸ್ತಾಪ ಮಾಡುತ್ತಿರಲಿಲ್ಲ. ಯಾಕೆ ರಶ್ಮಿಕಾ ಮಂದಣ್ಣ ವಿಜಯ್ ಬಗ್ಗೆ ಏನೂ ಮಾತನಾಡುತ್ತಿಲ್ಲ ಎನ್ನುವ ಚರ್ಚೆಗಳು ಕೂಡ ಬಂದು ಹೋಗಿವೆ.

  ರಶ್ಮಿಕಾ ಮಂದಣ್ಣ ನನ್ನ ಡಾರ್ಲಿಂಗ್, ಆದರೆ...! ವಿಜಯ್ ದೇವರಕೊಂಡ ಹೇಳಿದ್ದೇನು?ರಶ್ಮಿಕಾ ಮಂದಣ್ಣ ನನ್ನ ಡಾರ್ಲಿಂಗ್, ಆದರೆ...! ವಿಜಯ್ ದೇವರಕೊಂಡ ಹೇಳಿದ್ದೇನು?

  ಎಲ್ಲಾ ಗಾಸಿಪ್‌ಗಳಿಗೂ ಬ್ರೇಕ್ ಹಾಕಿರುವ ರಶ್ಮಿಕಾ ಮಂದಣ್ಣ, ಇದೀಗ ನಟ ವಿಜಯ್ ದೇವರಕೊಂಡ ಬಗ್ಗೆ ಟ್ವೀಟ್ ಮಾಡುತ್ತಿದ್ದಾರೆ. ದೊಡ್ಡ ಗ್ಯಾಪ್ ಬಳಿಕ ಟ್ವಿಟ್ಟರ್‌ನಲ್ಲಿ ವಿಜಯ್ ದೇವರಕೊಂಡ ಕುರಿತು ಪೋಸ್ಟ್ ಹಂಚಿಕೊಂಡಿದ್ದಾರೆ. ಆದರೆ ಇದರ ಹಿಂದಿರುವ ಕಾರಣ ಬೇರೆಯೇ ಅಂತಿದೆ ಟಾಲಿವುಡ್. ಅದೇನು ಅಂತ ಮುಂದೆ ಓದಿ...

  ವಿಜಯ್ ಬಗ್ಗೆ ಕೊನೆ ಟ್ವೀಟ್ ಯಾವಾಗ?

  ವಿಜಯ್ ಬಗ್ಗೆ ಕೊನೆ ಟ್ವೀಟ್ ಯಾವಾಗ?

  ರಶ್ಮಿಕಾ ಮಂದಣ್ಣ ಟ್ವಿಟರ್ ಅಕೌಂಟ್ ಗಮನಿಸಿದರೆ ಕೊನೆಯದಾಗಿ ಅವರು ವಿಜಯ್ ದೇವರಕೊಂಡ ಬಗ್ಗೆ ಟ್ವೀಟ್ ಮಾಡಿರುವುದು ಕಳೆದ ವರ್ಷ. ಹೌದು, ಕಳೆದ ವರ್ಷ ಡಿಸೆಂಬರ್ 15 ರಂದು ವಿಜಯ್ ದೇವರಕೊಂಡ ಹೆಸರನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದರು. ವಿಜಯ್ ದೇವರಕೊಂಡ ರಶ್ಮಿಕ ಮಂದಣ್ಣ ಅಭಿನಯದ ಪುಷ್ಪ ಚಿತ್ರಕ್ಕೆ ಶುಭ ಕೋರಿದ್ದರು. ಅದನ್ನೇ ರೀ ಟ್ವೀಟ್ ಮಾಡಿ ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡಗೆ ಧನ್ಯವಾದ ತಿಳಿಸಿದರು.

  ರಮ್ಯಾ ಶಹಬ್ಬಾಶ್‌ಗಿರಿ: ಕುಂತಲ್ಲೇ ಕುಣಿದಾಡಿದ ಕಿರಿಕ್ ಬೆಡಗಿ ರಶ್ಮಿಕಾ!ರಮ್ಯಾ ಶಹಬ್ಬಾಶ್‌ಗಿರಿ: ಕುಂತಲ್ಲೇ ಕುಣಿದಾಡಿದ ಕಿರಿಕ್ ಬೆಡಗಿ ರಶ್ಮಿಕಾ!

  8 ತಿಂಗಳ ಗ್ಯಾಪ್ ಬಳಿಕ ಟ್ವೀಟ್!

  8 ತಿಂಗಳ ಗ್ಯಾಪ್ ಬಳಿಕ ಟ್ವೀಟ್!

  ಇನ್ನು ಕಳೆದ ವರ್ಷ ಡಿಸೆಂಬರ್‌ನಲ್ಲಿ ವಿಜಯ್ ದೇವರಕೊಂಡ ಬಗ್ಗೆ ಪ್ರಸ್ತಾಪ ಮಾಡಿರುವ ರಶ್ಮಿಕಾ ಬಳಿಕ ಮತ್ತೆ ವಿಜಯ್ ದೇವರಕೊಂಡ ಕುರಿತು ಯಾವ ಪೋಸ್ಟನ್ನು ಹಾಕಿಲ್ಲ. ವಿಜಯ್ ದೇವರಕೊಂಡ ಅಭಿನಯದ ಮುಂದಿನ ಚಿತ್ರಕ್ಕೂ ಕೂಡ ರಶ್ಮಿಕ ಮಂದಣ್ಣ ಶುಭಕೋರಿ ಟ್ವೀಟ್ ಮಾಡಲಿಲ್ಲ. 'ಲೈಗರ್' ಚಿತ್ರದ ಟ್ರೈಲರ್ ರಿಲೀಸ್ ಆದಾಗಲೂ ಕೂಡ ರಶ್ಮಿಕಾ ಸುದ್ದಿ ಇರಲಿಲ್ಲ. ಇದೀಗ 8 ತಿಂಗಳ ಬಳಿಕ ಈಗ ವಿಜಯ್ ದೇವರಕೊಂಡ ಹೆಸರಿಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಿ ಗಮನ ಎಳೆದಿದ್ದಾರೆ.

  ವಿಜಯ್ ಹುಟ್ಟುಹಬ್ಬಕ್ಕೆ ಶುಭ ಕೋರಿಲ್ಲ!

  ವಿಜಯ್ ಹುಟ್ಟುಹಬ್ಬಕ್ಕೆ ಶುಭ ಕೋರಿಲ್ಲ!

  ನಟಿ ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ ಅವರಿಂದ ಅಂತರ ಕಾಯ್ದುಕೊಂಡಿದ್ದಾರೆ ಎನ್ನುವ ಚರ್ಚೆ ಹುಟ್ಟುವುದಕ್ಕೆ ಕಾರಣ ರಶ್ಮಿಕಾ ಮಂದಣ್ಣ ಮೌನವಾಗಿ ಇದ್ದಿದ್ದು. ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ ಹುಟ್ಟುಹಬ್ಬಕ್ಕೆ ಕೂಡ ಶುಭಕೋರಿಲ್ಲ. ಮೇ ತಿಂಗಳ 9ರಂದು ವಿಜಯ್ ದೇವರಕೊಂಡ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಆದರೆ ರಶ್ಮಿಕಾ ಮಂದಣ್ಣ ಅವರ ಹುಟ್ಟುಹಬ್ಬಕ್ಕೆ ವಿಶ್ ಮಾಡದಿರುವುದು ಕೂಡ ಚರ್ಚೆಗೆ ಗ್ರಾಸವಾಗಿತ್ತು.

  'ಲೈಗರ್' ಟ್ರೈಲರ್‌ಗೂ ಪ್ರತಿಕ್ರಿಯೆ ಇಲ್ಲ!

  'ಲೈಗರ್' ಟ್ರೈಲರ್‌ಗೂ ಪ್ರತಿಕ್ರಿಯೆ ಇಲ್ಲ!

  ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಒಟ್ಟಿಗೆ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇನ್ನು ಜೋಡಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಸಿನಿಮಾಗಳಿಗೂ ಪರಸ್ಪರ ಶುಭ ಕೋರುತ್ತಾರೆ. ಹಲವು ವಿಚಾರಗಳಿದ್ದರೂ ಹಂಚಿಕೊಳ್ಳುತ್ತಾರೆ. ಆದರೆ ವಿಜಯ್ ದೇವರಕೊಂಡ ಸಿನಿ ಕೆರಿಯರ್‌ನ ಬಹುದೊಡ್ಡ ಸಿನಿಮಾ 'ಲೈಗರ್' ಚಿತ್ರದ ಟ್ರೈಲರ್ ರಿಲೀಸ್ ಆದಾಗಲೂ ರಶ್ಮಿಕಾ ಮಂದಣ್ಣ ಪ್ರತಿಕ್ರಿಯೆ ಕೊಟ್ಟಿಲ್ಲ. ಸಾರಾ ಅಲಿ ಖಾನ್, ಅನನ್ಯಾ ಪಾಂಡೆ ಸೇರಿದಂತೆ ಬಾಲಿವುಡ್‌, ಟಾಲಿವುಡ್‌ನ ಹಲವರು ವಿಜಯ್ ದೇವರಕೊಂಡಗೆ ಶುಭ ಕೋರಿದರು. 'ಲೈಗರ್' ಚಿತ್ರದ ಟ್ರೈಲರ್ ಬಗ್ಗೆ ಅಭಿಪ್ರಾಯವನ್ನು ತಿಳಿಸಿದ್ದರು. ಆದರೆ, ಆಗಲು ರಶ್ಮಿಕಾ ಮಂದಣ್ಣ ಸುಮ್ಮನೆ ಇದ್ದ ಕಾರಣ ಇವರಿಬ್ಬರೂ ದೂರ ಆಗಿದ್ದಾರೆ ಎನ್ನುವ ಗುಸು ಗುಸು ಕೂಡ ಕೇಳಿಬಂದಿತ್ತು

  ವಿಜಯ್ ಬೆಂಕಿ ಎಂದು ರಶ್ಮಿಕಾ ಟ್ವೀಟ್!

  ವಿಜಯ್ ಬೆಂಕಿ ಎಂದು ರಶ್ಮಿಕಾ ಟ್ವೀಟ್!

  ದೊಡ್ಡ ಗ್ಯಾಪ್ ಬಳಿಕ ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ ನನ್ನ ನೆನಪಿಸಿಕೊಂಡಿದ್ದಾರೆ. ಇದೇ ಜುಲೈ 26 ರಂದು 'ಡಿಯರ್ ಕಾಮ್ರೆಡ್' ಸಿನಿಮಾಕ್ಕೆ ಮೂರು ವರ್ಷ ತುಂಬಿದ್ದು ಈ ಚಿತ್ರದ ಬಗ್ಗೆ ಟ್ವೀಟ್ ಮಾಡಿರುವ ರಶ್ಮಿಕಾ ಮಂದಣ್ಣ ಅದನ್ನು ವಿಜಯ್ ದೇವರಕೊಂಡನಿಗೆ ಟ್ಯಾಗ್ ಮಾಡಿದ್ದರು. ಬಳಿಕ ಜುಲೈ 29ರಂದು ವಿಜಯ್ ದೇವರಕೊಂಡ 'ಲೈಗರ್' ಚಿತ್ರದ ಟೀಸರ್ ತುಣುಕನ್ನು ಮೆಚ್ಚಿ ಟ್ವೀಟ್ ಮಾಡಿದ್ದಾರೆ. ವಿಜಯ್ ದೇವರಕೊಂಡ ಹಂಚಿಕೊಂಡ ಟೀಸರ್ ಮರು ಟ್ವೀಟ್ ಮಾಡಿರುವ ರಶ್ಮಿಕಾ ಮಂದಣ್ಣ ಬೆಂಕಿಯ ಚಿಹ್ನೆ ಹಾಕಿ ಟ್ವೀಟ್ ಮಾಡಿದ್ದಾರೆ.

  Recommended Video

  Sudeep|Veerendra Heggade |'ವಿಕ್ರಾಂತ್ ರೋಣ' ರಿಲೀಸ್ ದಿನವೇ ಭೇಟಿ ಆಗಿದ್ದು ಯಾಕೆ | Vikrant Rona *Sandalwood
  English summary
  After 8 Months Rashmika Mandanna Tweet About Vijay Devarakonda, Long Gap To Avoid Gossip, Know More,
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X