For Quick Alerts
  ALLOW NOTIFICATIONS  
  For Daily Alerts

  'ಬಾಹುಬಲಿ' ಬಳಿಕ ಮತ್ತೆ ಒಂದಾಗ್ತಾರೆ ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ: ಸಿನಿಮಾ ಯಾವುದು?

  |

  ಟಾಲಿವುಡ್‌ನ ಮೋಸ್ಟ್ ಬ್ಯೂಟಿಫುಲ್ ಜೋಡಿ ಅಂದರೆ, ಅದು ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ. ಈ ಜೋಡಿ ತೆರೆ ಮೇಲೆ ನಟಿಸಿದ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಸೋತಿದ್ದೇ ಇಲ್ಲ. ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿಯನ್ನು ಒಟ್ಟಿಗೆ ನೋಡಬೇಕು. ಈ ಪೇರ್ ಮತ್ತೊಂದು ಅದ್ಬುತ ಸಿನಿಮಾ ಮಾಡಬೇಕು ಅಂತ ಇಬ್ಬರ ಫ್ಯಾನ್ ಕಾತುರದಿಂದ ಕಾಯುತ್ತಲೇ ಇದ್ದಾರೆ.

  ಪ್ರಭಾಸ್ ಪ್ಯಾನ್ ಇಂಡಿಯಾ ಸ್ಟಾರ್ ಆಗುತ್ತಿದ್ದಂತೆ ದೊಡ್ಡ ದೊಡ್ಡ ಸಿನಿಮಾಗಳಲ್ಲಿಯೇ ನಟಿಸುತ್ತಿದ್ದಾರೆ. ಇನ್ನೊಂದ್ಕಡೆ ಅನುಷ್ಕಾ ಶೆಟ್ಟಿ ಸುದ್ದಿನೇ ಇಲ್ಲ. ಈ ಕಾರಣಕ್ಕೆ ಮತ್ತೆ ಈ ಜೋಡಿ ಒಟ್ಟಿಗೆ ನಟಿಸುವುದು ಅನುಮಾನ ಎಂದೇ ಭಾವಿಸಲಾಗಿತ್ತು.

  ನಟಿ ಅನುಷ್ಕಾಶೆಟ್ಟಿ ಸೋದರನ ಹತ್ಯೆಗೆ ಸ್ಕೆಚ್ ಹಾಕಿದ್ದು ಯಾರು? ಏಕೆ? ನಟಿ ಅನುಷ್ಕಾಶೆಟ್ಟಿ ಸೋದರನ ಹತ್ಯೆಗೆ ಸ್ಕೆಚ್ ಹಾಕಿದ್ದು ಯಾರು? ಏಕೆ?

  ಈ ಮಧ್ಯೆ ಡಾರ್ಲಿಂಗ್ ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ಇಬ್ಬರೂ ರಿಯಲ್‌ ಲೈಫ್‌ನಲ್ಲೂ ಒಂದಾಗುತ್ತಾರೆ ಎಂದು ಗುಲ್ಲೆದ್ದಿತ್ತು. ಆದರೆ, ಇಬ್ಬರೂ ಈ ವಿಷಯವನ್ನು ತಿರಸ್ಕರಿಸುತ್ತಲೇ ಬರುತ್ತಿದ್ದಾರೆ. ಇಷ್ಟೆಲ್ಲಾ ನಿರಾಸೆಗಳ ನಡುವೆಯೇ ಇಬ್ಬರ ಅಭಿಮಾನಿಗಳೂ ಮತ್ತೊಮ್ಮೆ ಖುಷಿಪಡುವ ಸುದ್ದಿಯೊಂದು ಹರಿದಾಡುತ್ತಲೇ ಇದೆ.

  ಅನುಷ್ಕಾ ಶೆಟ್ಟಿಗೆ ಮತ್ತೆ ಅದೇ ಸಮಸ್ಯೆ: ಹೊಸ ಸಿನಿಮಾ ಮತ್ತೆ ಮುಂದೂಡಿಕೆಅನುಷ್ಕಾ ಶೆಟ್ಟಿಗೆ ಮತ್ತೆ ಅದೇ ಸಮಸ್ಯೆ: ಹೊಸ ಸಿನಿಮಾ ಮತ್ತೆ ಮುಂದೂಡಿಕೆ

  ರಿಯಲ್ ಲೈಫ್‌ನಲ್ಲಿ ಒಂದಾಗ್ತಾರಾ?

  ರಿಯಲ್ ಲೈಫ್‌ನಲ್ಲಿ ಒಂದಾಗ್ತಾರಾ?

  'ಬಾಹುಬಲಿ 2' ಬಳಿಕ ಟಾಲಿವುಡ್‌ನಲ್ಲಿ ಸಿನಿಮಾಗಿಂತಲೂ ಹೆಚ್ಚು ಸುದ್ದಿಯಾಗಿದ್ದು ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ಮದುವೆ. ಇವರಿಬ್ಬರೂ ರಿಯಲ್‌ ಲೈಫ್‌ನಲ್ಲೂ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಸುದ್ದಿಯಾಗಿತ್ತು. ಇನ್ನೇನು ಮದುವೆ ಆಗೇ ಬಿಡುತ್ತಾರೆ ಎಂಬ ಸುದ್ದಿ ಕೂಡ ಹರಿದಾಡಿತ್ತು. ಆದರೆ, ಇಬ್ಬರೂ ಪ್ರತಿ ಬಾರೀ ಈ ಸುದ್ದಿಯನ್ನು ತಿರಸ್ಕರಿಸುತ್ತಲೇ ಬಂದಿದ್ದಾರೆ. ತಮ್ಮ ಅಭಿಮಾನಿಗಳಿಗೆ ನಿರಾಸೆ ಮಾಡುತ್ತಲೇ ಇದ್ದಾರೆ.

  ಪ್ರಭಾಸ್-ಅನುಷ್ಕಾ ಜೋಡಿ ಸಿನಿಮಾ

  ಪ್ರಭಾಸ್-ಅನುಷ್ಕಾ ಜೋಡಿ ಸಿನಿಮಾ

  ಪ್ರಭಾಸ್ ಹಾಗೂ ಅನುಷ್ಕಾ ಸೂಪರ್‌ ಹಿಟ್ ಸಿನಿಮಾಗಳನ್ನು ಕೊಟ್ಟಿದ್ದಾರೆ. ಅದರಲ್ಲೂ ಇವರಿಬ್ಬರೂ ಜೊತೆಯಾಗಿ ನಟಿಸಿದ್ದ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಸೋತಿದ್ದೇ ಇಲ್ಲ. ಬಿಲ್ಲಾ, ಮಿರ್ಚಿ, ಬಾಹುಬಲಿ , ಬಾಹುಬಲಿ 2 ಸಿನಿಮಾಗಳೇ ಸಾಕ್ಷಿ. ಆದರೆ, 'ಬಾಹುಬಲಿ 2' ಸಿನಿಮಾ ಬಳಿಕ ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿಲ್ಲ. ಆದ್ರೀಗ ಈ ಜೋಡಿ ಮತ್ತೆ ಒಂದಾಗುತ್ತಿದೆ ಎಂದು ಟಾಲಿವುಡ್‌ನಲ್ಲಿ ಗುಲ್ಲೆದ್ದಿದೆ.

  ಹೊಸ ಸಿನಿಮಾ ಯಾವುದು?

  ಹೊಸ ಸಿನಿಮಾ ಯಾವುದು?

  ಡಾರ್ಲಿಂಗ್ ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿಯನ್ನು ಮತ್ತೆ ತೆರೆಮೇಲೆ ನಿರ್ದೇಶಕ ಮಾರುತಿ ಕರೆದುಕೊಂಡು ಬರುತ್ತಿದ್ದಾರಂತೆ. ಈಗಾಗಲೇ ಅನುಷ್ಕಾ ಹಾಗೂ ಪ್ರಭಾಸ್ ಇಬ್ಬರೂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎಂಬ ಸುದ್ದಿ ಕೂಡ ಓಡಾಡುತ್ತಿದೆ. ಆದರೆ, ಇನ್ನೂ ಈ ಮೂವರೂ ಅಧಿಕೃತ ಹೇಳಿಕೆ ಕೊಟ್ಟಿಲ್ಲ. ಟಾಲಿವುಡ್ ಮೂಲಗಳ ಪ್ರಕಾರ, ಈ ಸಿನಿಮಾ ದಸರಾಗೆ ಸೆಟ್ಟೇರುವ ಎಲ್ಲಾ ಸಾಧ್ಯಗಳೂ ಇವೆ.

  ಮೂರು ನಾಯಕಿಯರು

  ಮೂರು ನಾಯಕಿಯರು

  ಟಾಲಿವುಡ್‌ನಲ್ಲಿ ಇನ್ನೂ ಒಂದು ಓಡಾಡುತ್ತಿದೆ. ಈ ಸಿನಿಮಾ ಮೂವರು ನಾಯಕಿಯರು ಇರಲಿದ್ದಾರೆ. ಇನ್ನು ಇಬ್ಬರು ನಟಿಯರು ಯಾರು ಎಂಬುದು ಇನ್ನೂ ರಿವೀಲ್ ಆಗಿಲ್ಲ. ಇದು ಪಕ್ಕಾ ಕಾಮಿಡಿ ಎಂಟರ್‌ಟೈನರ್ ಆಗಿದ್ದು, ಡಿವಿವಿ ದಾನಯ್ಯ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರಂತೆ. ಈ ಸಿನಿಮಾವನ್ನು 2-3 ಹಂತದಲ್ಲಿ ಶೂಟಿಂಗ್ ಅನ್ನು ಮುಗಿಸಲಿದ್ದಾರಂತೆ.

  English summary
  After Billa, Mirchi and Baahubali Prabhas To Romance Anushka Shetty Again, Know more

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X