For Quick Alerts
  ALLOW NOTIFICATIONS  
  For Daily Alerts

  ಪವಿತ್ರಾ ಲೋಕೇಶ್‌ ನೋಡಿ ಹುಚ್ಚೆದ್ದ ಪ್ರೇಕ್ಷಕರು: ಸಂಭಾವನೆ ಹೆಚ್ಚಿಸಿಕೊಂಡ ನಟಿ?

  |

  ಅಂದುಕೊಂಡಿದ್ದು ಒಂದು, ಆಗಿದ್ದು ಇನ್ನೊಂದು ಅನ್ನುವ ಮಾತು ಬಹುಭಾಷಾ ನಟಿ ಪವಿತ್ರಾ ಲೋಕೇಶ್ ವಿಚಾರದಲ್ಲಿ ನಿಜವಾಗ್ತಿದೆ. ತೆಲುಗು ನಟ ನರೇಶ್‌ ಜೊತೆಗಿನ ವಿವಾದದ ನಂತರ ಆಕೆಗೆ ಸಿನಿಮಾ ಅವಕಾಶಗಳು ಸಿಗಲ್ಲ ಅನ್ನಲಾಗ್ತಿತ್ತು. ಆದರೆ ಈಗ ಆಗುತ್ತಿರುವುದೇ ಬೇರೆ.

  ಕೆಲ ದಿನಗಳ ಹಿಂದೆ ಪವಿತ್ರಾ ಲೋಕೇಶ್, ತೆಲುಗು ನಟ​​​​​​​​​​ ನರೇಶ್ ಅವರನ್ನು ಮದುವೆಯಾಗಿದ್ದಾರೆ. ಅವರಿಬ್ಬರ ನಡುವೆ ಅಫೇರ್ ಇದೆ ಎನ್ನುವ ಸುದ್ದಿ ಭಾರೀ ಸದ್ದು ಮಾಡಿತ್ತು.ಇದಕ್ಕೆ ಸಾಕ್ಷಿ ಅನ್ನುವಂತೆ ಇಬ್ಬರೂ ಮೈಸೂರಿನ ಹೋಟೆಲ್​​ ಒಂದರಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದು, ದೊಡ್ಡ ರಾದ್ಧಾಂತವನ್ನೇ ಸೃಷ್ಟಿಸಿಬಿಟ್ಟಿತ್ತು. ಇಷ್ಟೆಲ್ಲಾ ಆದಮೇಲೆ ಆಕೆ ತೆಲುಗು ಚಿತ್ರರಂಗದಲ್ಲಿ ನೆಲೆ ಕಳೆದುಕೊಳುತ್ತಿದ್ದಾರೆ ಅನ್ನುವ ಮಾತುಗಳು ಕೇಳಿಬಂದಿತ್ತು. ಆದರೆ ಈಗ ಕಥೆನೇ ಬೇರೆ ಆಗ್ತಿದೆ.

  ಶ್ರೀದೇವಿ ಡ್ರಾಮ ಕಂಪನಿಯಲ್ಲಿ ನರೇಶ್-ಪವಿತ್ರಾ ಮದುವೆ: ವಿಡಿಯೋ ವೈರಲ್!ಶ್ರೀದೇವಿ ಡ್ರಾಮ ಕಂಪನಿಯಲ್ಲಿ ನರೇಶ್-ಪವಿತ್ರಾ ಮದುವೆ: ವಿಡಿಯೋ ವೈರಲ್!

  ನಟ ನರೇಶ್ ಹಾಗೂ ರಮ್ಯ ರಘುಪತಿ ವೈವಾಹಿಕ ಜೀವನದಲ್ಲಿ ಬಿರುಕು ಮೂಡಲು ನಟಿ ಪವಿತ್ರಾ ಲೋಕೇಶ್ ಕಾರಣ ಅನ್ನುವ ಆರೋಪ ಕೇಳಿ ಬಂದಿತ್ತು. ಇದೆಲ್ಲದರ ನಡುವೆ ಕಳೆದ ವಾರ ರಿಲೀಸ್ ಆಗಿರುವ 'ರಾಮಾರಾವ್ ಆನ್ ಡ್ಯೂಟಿ' ಚಿತ್ರದಲ್ಲಿ ನರೇಶ್ ಹಾಗೂ ಪವಿತ್ರಾ ಲೋಕೇಶ್ ಅಣ್ಣ- ತಂಗಿ ಆಗಿ ನಟಿಸಿದ್ದಾರೆ. ಥಿಯೇಟರ್‌ಗಳಲ್ಲಿ ಇವರಿಬ್ಬರ ಎಂಟ್ರಿಗೆ ಸಿಗ್ತಿರೋ ರೆಸ್ಪಾನ್ಸ್ ನೋಡುತ್ತಿದ್ದರೆ, ಎಲ್ಲರ ಲೆಕ್ಕಾಚಾರ ಉಲ್ಟಾ ಪಲ್ಟಾ ಆಗುವಂತೆ ಕಾಣುತ್ತಿದೆ. ಇದರ ಬೆನ್ನಲ್ಲೇ ಟಾಲಿವುಡ್‌ನಲ್ಲಿ ಈಗ ಹೊಸ ಗುಸು ಗುಸು ಶುರುವಾಗಿದೆ.

   ಪವಿತ್ರ- ನರೇಶ್ ನೋಡಿ ಹುಚ್ಚೆದ್ದ ಪ್ರೇಕ್ಷಕರು

  ಪವಿತ್ರ- ನರೇಶ್ ನೋಡಿ ಹುಚ್ಚೆದ್ದ ಪ್ರೇಕ್ಷಕರು

  ರವಿತೇಜಾ ನಟನೆಯ ಆಕ್ಷನ್ ಎಂಟರ್‌ಟೈನರ್ 'ರಾಮಾರಾವ್ ಆನ್ ಡ್ಯೂಟಿ' ಸಿನಿಮಾ ಶುಕ್ರವಾರ ರಿಲೀಸ್ ಆಗಿದೆ. ಸಿನಿಮಾ ಪ್ರೇಕ್ಷಕರನ್ನು ರಂಜಿಸುವಲ್ಲಿ ಸೋತಿದೆ. ಆದರೆ ತೆರೆಮೇಲೆ ನರೇಶ್ ಹಾಗೂ ಪವಿತ್ರಾ ಲೋಕೇಶ್ ಕಾಣಿಸಿಕೊಂಡಾಗ ಪ್ರೇಕ್ಷಕರು ಹುಚ್ಚೆದ್ದು ಕಿರುಚಾಡುತ್ತಿದ್ದಾರೆ. ರವಿತೇಜಾ ಎಂಟ್ರಿ ಸೀನ್‌ಗೂ ಇಲ್ಲದ ರೆಸ್ಪಾನ್ಸ್ ಇವರಿಬ್ಬರ ಸೀನ್ಸ್‌ ಬಂದಾಗ ಸಿಗುತ್ತಿದೆ. ನಿಜ ಜೀವನದಲ್ಲಿ ಇಷ್ಟೆಲ್ಲಾ ಆದಮೇಲೆ ತೆರೆಮೇಲೆ ಇಬ್ಬರನ್ನು ಅಣ್ಣ- ತಂಗಿ ಪಾತ್ರಗಳಲ್ಲಿ ನೋಡಿ ಬಿದ್ದು ಬಿದ್ದು ನಗುತ್ತಿದ್ದಾರೆ.

  ಪವಿತ್ರಾ ಲೋಕೇಶ್‌ ಜೊತೆ ಮೈಸೂರಿನ ಹೋಟೆಲ್‌ನಲ್ಲಿರುವ ವಿಷಯ ಪತ್ನಿಗೆ ತಿಳಿಸಿದ್ದೇ ನರೇಶ್: ಕಥೆಯಲ್ಲಿ ಟ್ವಿಸ್ಟ್?ಪವಿತ್ರಾ ಲೋಕೇಶ್‌ ಜೊತೆ ಮೈಸೂರಿನ ಹೋಟೆಲ್‌ನಲ್ಲಿರುವ ವಿಷಯ ಪತ್ನಿಗೆ ತಿಳಿಸಿದ್ದೇ ನರೇಶ್: ಕಥೆಯಲ್ಲಿ ಟ್ವಿಸ್ಟ್?

   ಪವಿತ್ರಾ ಸಂಭಾವನೆ ಹೆಚ್ಚಾಯ್ತು?

  ಪವಿತ್ರಾ ಸಂಭಾವನೆ ಹೆಚ್ಚಾಯ್ತು?

  ನಟ ನರೇಶ್ ಜೊತೆಗಿನ ವಿವಾದದ ಬೆನ್ನಲ್ಲೇ ನಟಿ ಪವಿತ್ರಾ ಲೋಕೇಶ್ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ ಅನ್ನುವ ಮಾತುಗಳು ಟಾಲಿವುಡ್‌ನಲ್ಲಿ ಕೇಳಿ ಬರುತ್ತಿದೆ. ಮೊದಲು ದಿನವೊಂದಕ್ಕೆ 60 ಸಾವಿರ ರೂ. ಸಂಭಾವನೆ ಪಡೀತಿದ್ದ ನಟಿ ಈಗ ದಿನಕ್ಕೆ 1 ಲಕ್ಷ ರೂ. ಸಂಭಾವನೆ ಕೇಳುತ್ತಿದ್ದಾರೆ ಅನ್ನಲಾಗ್ತಿದೆ. ವಿವಾದದಿಂದ ಸಿಕ್ಕಿದ ಕ್ರೇಜ್‌ನ ಎನ್‌ಕ್ಯಾಶ್ ಮಾಡಿಕೊಳ್ಳಲು ಪ್ರಯತ್ನಿಸುತ್ತಿರುವಂತೆ ಕಾಣುತ್ತಿದೆ.

   ಟಾಲಿವುಡ್ ಸ್ವೀಟ್ ಮಮ್ಮಿ ಪವಿತ್ರಾ!

  ಟಾಲಿವುಡ್ ಸ್ವೀಟ್ ಮಮ್ಮಿ ಪವಿತ್ರಾ!

  ಪೋಷಕ ನಟಿಯಾಗಿ ಮೊದಲಿನಿಂದಲೂ ತೆಲುಗು ಚಿತ್ರರಂಗದಲ್ಲಿ ಪವಿತ್ರಾ ಲೋಕೇಶ್‌ಗೆ ಭಾರೀ ಡಿಮ್ಯಾಂಡ್ ಇದೆ. ನಾಯಕ- ನಾಯಕಿಯ ತಾಯಿ ಪಾತ್ರಗಳಲ್ಲಿ ಹೆಚ್ಚು ನಟಿಸುತ್ತಿರುತ್ತಾರೆ. ಅಲ್ಲು ಅರ್ಜುನ್‌ ಇವರನ್ನು ಸ್ವೀಟ್ ಮಮ್ಮಿ ಅಂತಲೇ ಕರೆಯುತ್ತಾರೆ. 'ಸನ್ ಆಫ್ ಸತ್ಯಮೂರ್ತಿ', 'ದುವ್ವಾಡೆ ಜಗನ್ನಾಥಂ', 'ಜೈ ಲವ ಕುಶ' ಹೀಗೆ ಸಾಕಷ್ಟು ಸಿನಿಮಾಗಳಲ್ಲಿ ತಾಯಿ ಪಾತ್ರಗಳಲ್ಲಿ ನಟಿಸಿ ಗೆದ್ದಿದ್ದಾರೆ.

   ಡಿಮ್ಯಾಂಡ್ ಕಮ್ಮಿ ಆಗುತ್ತಾ?

  ಡಿಮ್ಯಾಂಡ್ ಕಮ್ಮಿ ಆಗುತ್ತಾ?

  ಅಷ್ಟೆಲ್ಲಾ ವಿವಾದ ಆದಮೇಲೆ ತಾಯಿ ಪಾತ್ರಕ್ಕೆ ಪವಿತ್ರಾ ಲೋಕೇಶ್‌ನ ಆಯ್ಕೆ ಮಾಡಿಕೊಳ್ಳುವುದು ಸರಿಯಲ್ಲ ಅನ್ನುವ ಚರ್ಚೆ ಕೂಡ ಟಾಲಿವುಡ್‌ನಲ್ಲಿ ಶುರುವಾಗಿದೆ. 'ರಾಮಾರಾವ್ ಆನ್ ಡ್ಯೂಟಿ' ಚಿತ್ರದಲ್ಲಿ ನಾಯಕ ರಾಮಾರಾವ್ ತಾಯಿ ಮಹಾಲಕ್ಷ್ಮಿ ಪಾತ್ರದಲ್ಲಿ ನೋಡಿದವರು ವ್ಯಂಗ್ಯ ಮಾಡುತ್ತಿದ್ದಾರೆ. ಇತ್ತ ಪವಿತ್ರಾ ಸಂಭಾವನೆ ಹೆಚ್ಚಿಸಿಕೊಳ್ಳುತ್ತಿದ್ದಾರೆ ಅನ್ನುವ ಗುಸುಗುಸು ಶುರುವಾಗಿದೆ. ಹಾಗಾಗಿ ಇದು ಮುಂದೆ ಯಾವ ತಿರುವು ಪಡೆದುಕೊಳ್ಳುತ್ತೋ ಗೊತ್ತಿಲ್ಲ.

  English summary
  After Contovercy Pavitra Lokesh Hikes Her remuneration. Know More.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X