»   » ದಕ್ಷಿಣ ಭಾರತದ ಬಹುದೊಡ್ಡ ಪ್ರಾಜೆಕ್ಟ್ ನಲ್ಲಿ ಶ್ರೀದೇವಿ ಪುತ್ರಿ.!

ದಕ್ಷಿಣ ಭಾರತದ ಬಹುದೊಡ್ಡ ಪ್ರಾಜೆಕ್ಟ್ ನಲ್ಲಿ ಶ್ರೀದೇವಿ ಪುತ್ರಿ.!

By Bharath Kumar
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ದಿವಂಗತ ನಟಿ ಶ್ರೀದೇವಿ ಅವರ ಪುತ್ರಿ ಜಾಹ್ನವಿ ಕಪೂರ್ 'ದಡಕ್' ಚಿತ್ರದ ಮೂಲಕ ಬಾಲಿವುಡ್ ಗೆ ಲಗ್ಗೆಯಿಟ್ಟಾಗಿದೆ. ನಿರೀಕ್ಷೆಯ ಮಟ್ಟಕ್ಕೆ ಈ ಸಿನಿಮಾ ಸದ್ದು ಮಾಡಿಲ್ಲ ಅಂದ್ರು, ಜಾಹ್ನವಿ ಎಲ್ಲರ ಗಮನ ಸೆಳೆದಿದ್ದಾರೆ.

  ಈಗ ಶ್ರೀದೇವಿ ಮಗಳ ಎರಡನೇ ಸಿನಿಮಾ ಯಾವುದು ಎಂಬ ಲೆಕ್ಕಾಚಾರ ಶುರುವಾಗಿದೆ. ಸದ್ಯದ ಮೂಲಗಳ ಪ್ರಕಾರ ತಂದೆ ಬೋನಿ ಕಪೂರ್ ನಿರ್ಮಾಣದಲ್ಲೇ ಜಾಹ್ನವಿ ನಟಿಸಲಿದ್ದಾರೆ ಎನ್ನಲಾಗಿದೆ.

  ಮತ್ತೊಂದೆಡೆ 'ದಡಕ್' ಸಿನಿಮಾ ನೋಡಿ ಮೆಚ್ಚಿಕೊಂಡಿರುವ ಹಲವು ನಿರ್ಮಾಪಕರು ಕಥೆ ಹಿಡಿದು ಜಾಹ್ನವಿ ಬಳಿ ಬರ್ತಿದ್ದಾರಂತೆ. ಹೀಗೆ, ಶ್ರೀದೇವಿ ಪುತ್ರಿಯ ಕಾಲ್ ಶೀಟ್ ಪಡೆಯಲು ಬಂದ ನಿರ್ಮಾಪಕರಲ್ಲಿ ದಕ್ಷಿಣ ಭಾರತದ 'ಸ್ಟಾರ್' ಡೈರೆಕ್ಟರ್ ಒಬ್ಬರಿದ್ದಾರಂತೆ. ಯಾರದು.? ಯಾವ ಚಿತ್ರಕ್ಕೆ ಆಫರ್ ಮಾಡಲು ಹೋಗಿದ್ದರು.? ಎಂಬುದನ್ನ ತಿಳಿಯಲು ಮುಂದೆ ಓದಿ.....

  ಸೌತ್ ಇಂಡಸ್ಟ್ರಿಗೆ ಶ್ರೀದೇವಿ ಪುತ್ರಿ.!

  ಬಾಲಿವುಡ್ ಮೂಲಕ ಸಿನಿ ಪಯಣ ಆರಂಭಿಸಿರುವ ಶ್ರೀದೇವಿ ಪುತ್ರಿ ಜಾಹ್ನವಿ, ತಮ್ಮ ತಾಯಿಯಂತೆ ಸೌತ್ ಇಂಡಸ್ಟ್ರಿಯಲ್ಲೂ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ. ಮೊದಲ ಚಿತ್ರಕ್ಕೂ ಮೊದಲೇ ಸೌತ್ ಸಿನಿಮಾಗಳಲ್ಲಿ ನಟಿಸುವ ಆಫರ್ ಜಾಹ್ನವಿಗಿತ್ತು. ಆದ್ರೆ, ಶ್ರೀದೇವಿ ಒಪ್ಪಿರಲಿಲ್ಲ. ಆದ್ರೀಗ, ದೊಡ್ಡ ನಿರ್ದೇಶಕನ ಸಿನಿಮಾ ಬಂದಿರುವುದು ಕುತೂಹಲ ಮೂಡಿಸಿದೆ.

  ರಾಜಮೌಳಿ ಚಿತ್ರಕ್ಕೆ ಜಾಹ್ನವಿ ನಾಯಕಿ.!

  'ಬಾಹುಬಲಿ' ಚಿತ್ರದ ನಂತರ ಎಸ್ ಎಸ್ ರಾಜಮೌಳಿ ನಿರ್ದೇಶನ ಮಾಡಲಿರುವ ಮಲ್ಟಿಸ್ಟಾರ್ ಸಿನಿಮಾಗೆ ಜಾಹ್ನವಿ ಕಪೂರ್ ಅವರನ್ನ ನಾಯಕಿಯನ್ನಾಗಿಸಲು ನಿರ್ದೇಶಕರು ಚಿಂತಿಸಿದ್ದಾರಂತೆ. ಹೀಗಾಗಿ, ಈ ಸಿನಿಮಾದಲ್ಲಿ ನಟಿಸುವಂತೆ ಆಫರ್ ಮಾಡಿದ್ದಾರೆ ಎನ್ನಲಾಗಿದೆ.

  ಕರಣ್ ನೆರವಿನಿಂದ ಚರ್ಚೆ

  ಬಾಲಿವುಡ್ ಖ್ಯಾತ ನಿರ್ಮಾಪಕ ಹಾಗೂ ಶ್ರೀದೇವಿ ಕುಟುಂಬಕ್ಕೆ ಆಪ್ತರಾಗಿರುವ ಕರಣ್ ಜೋಹರ್ ಅವರ ಮೂಲಕ ಜಾಹ್ನವಿ ಕಪೂರ್ ಅವರನ್ನ ಟಾಲಿವುಡ್ ಗೆ ಕರೆತರಲು ಮಾಸ್ಟರ್ ಪ್ಲಾನ್ ಆಗುತ್ತಿದೆ. ಆದ್ರೆ, ಈ ಬಗ್ಗೆ ಜಾಹ್ನವಿ ಕಪೂರ್ ಕಡೆಯಿಂದ ಯಾವುದೇ ಸ್ಪಷ್ಟನೆ ನೀಡಿಲ್ಲ. ಕರಣ್ ಜೋಹರ್ ಈ ಕಡೆ ರಾಜಮೌಳಿಗೂ ಆಪ್ತರು. ಹೀಗಾಗಿ, ಎಲ್ಲವೂ ಮಾತುಕತೆಯಂತೆ ಆದ್ರೆ, ತೆಲುಗು ಇಂಡಸ್ಟ್ರಿಗೆ ಜಾಹ್ನವಿ ಬರಬಹುದು.

  ಮೆಗಾ ಸಿನಿಮಾ ಇದು

  'ಬಾಹುಬಲಿ' ನಂತರ ರಾಜಮೌಳಿ ಮಾಡ್ತಿರೋ ಈ ಚಿತ್ರ ಮೆಗಾ ಸಿನಿಮಾ. ಯಾಕಂದ್ರೆ, ಈ ಚಿತ್ರಕ್ಕೆ ಜೂನಿಯರ್ ಎನ್.ಟಿ.ಆರ್ ಹಾಗೂ ರಾಮ್ ಚರಣ್ ತೇಜ್ ನಾಯಕರು. ಇವರಿಬ್ಬರಲ್ಲಿ ಯಾರ ಜೋಡಿ ಪಾತ್ರಕ್ಕೆ ಜಾಹ್ನವಿಯನ್ನ ಕರೆತರುವ ಸಾಹಸಕ್ಕೆ ಕೈಹಾಕಿದ್ದಾರೋ ಗೊತ್ತಿಲ್ಲ. ಆದ್ರೆ, ಇಂತಹದೊಂದು ಸುದ್ದಿ ಮಾತ್ರ ದೊಡ್ಡ ಸಂಚಲನ ಸೃಷ್ಟಿಸಿದೆ.

  'ಸ್ಟಾರ್' ಸಿನಿಮಾ ರಿಜೆಕ್ಟ್ ಮಾಡಿದ್ದ ಶ್ರೀದೇವಿ

  ಜಾಹ್ನವಿ ಕಪೂರ್ ಚೊಚ್ಚಲ ಸಿನಿಮಾ ಎಲ್ಲಿಂದ ಆರಂಭವಾಗಬೇಕು ಎಂದು ಆಲೋಚಿಸುತ್ತಿದ್ದಾಗ ಬಂದ ಅವಕಾಶಗಳನ್ನ ಶ್ರೀದೇವಿ ಕೈಬಿಟ್ಟಿದ್ದರು. ಅದರಲ್ಲಿ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಸಿನಿಮಾ, ಜೂನಿಯರ್ ಎನ್.ಟಿ.ಆರ್ ಸಿನಿಮಾ ಸೇರಿದಂತೆ ದೊಡ್ಡ ನಟರ ಪ್ರಾಜೆಕ್ಟ್ ಗಳಿದ್ದವು.

  English summary
  A source close to the development said, Janhvi Kapoor, D/O legendary actress Sridevi going to star in SS Rajamouli’s RRR?

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more