ಹೊಸ ಗರ್ಲ್ ಫ್ರೆಂಡ್ ಜೊತೆ ಧನುಷ್ : ಹೋಟೆಲ್‌ನಲ್ಲಿ ಇದ್ದ ಆ ಯುವತಿ ಯಾರು?
ನಟ ಧನುಷ್ ಕಳೆದ ಒಂದು ತಿಂಗಳಿನಿಂದ ಸುದ್ದಿಯಲ್ಲಿದ್ದಾರೆ. ಧನುಷ್ ತನ್ನ ಪತ್ನಿ ಐಶ್ವರ್ಯಾ ರಜನಿಕಾಂತ್‌ನಿಂದ ಬೇರೆ ಆಗಿದ್ದಾರೆ. ಈ ಸುದ್ದಿ ಅಚ್ಚರಿ ಜೊತೆಗೆ ಅವರ ಅಭಿಮಾನಿಗಳಿಗೆ ಶಾಕ್ ಕೊಟ್ಟಿತ್ತು. ಹಾಗಾಗಿ ಈ ಜೋಡಿಯ ನಿರ್ಧಾರವನ್ನು ಸಾಕಷ್ಟು ಅಭಿಮಾನಿಗಳು ವಿರೋಧಿಸಿದ್ದರು.
ವಿಚ್ಛೇದನದ ಸುದ್ದಿಯನ್ನು ಅಧಿಕೃತವಾಗಿ ಪ್ರಕಟ ಮಾಡಿದ ಬಳಿಕ, ಧನುಷ್ ಮತ್ತು ಐಶ್ವರ್ಯ ಇಬ್ಬರು ಕೂಡ ತಮ್ಮ, ತಮ್ಮ ಕೆಲಸಗಳಲ್ಲಿ ಬ್ಯುಸಿಯಾಗಿದ್ದರು. ಧನುಷ್ ಅವರು ತಮ್ಮ ಮುಂದಿನ ಸಿನಿಮಾಗಳ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಐಶ್ವರ್ಯಾ ರಜನಿಕಾಂತ್ ಅವರು ಅನಾರೋಗ್ಯದ ಕಾರಣಕ್ಕೆ ಸುದ್ದಿಯಾಗಿದ್ದರು.
ಅದರೆ ಇದೇ ಮೊದಲ ಬಾರಿಗೆ ಐಶ್ವರ್ಯ ನಂತರ ಧನುಷ್ ಹೆಸರು ಮತ್ತೊಬ್ಬ ಹುಡುಗಿಯ ಜೊತೆಗೆ ಕೇಳಿ ಬಂದಿದೆ. ಈಗ ಧನುಷ್ ಅವರು ಅದೇ ಕಾರಣಕ್ಕೆ ಸುದ್ದಿ ಆಗಿತ್ತಿದ್ದಾರೆ. ಧನುಷ್ ಬಾಳಲ್ಲಿ ಹೊಸ ಹುಡುಗಿಯ ಎಂಟ್ರಿ ಆಗಿದೆ ಎನ್ನುವ ಸುದ್ದಿಗಳು ಹರಿದಾಡುತ್ತಿವೆ. ಅದಕ್ಕೆ ಹುಡುಗಿ ಜೊತೆಗಿನ ಫೊಟೋಗಳು ಕೂಡ ವೈರಲ್ ಆಗಿವೆ.

ಮಿಲಿಟರಿ ಹೋಟೆಲ್‌ನಲ್ಲಿ ಧನುಷ್ ಜೊತೆ ಹೊಸ ಹುಡುಗಿ!
1980 ರ ಹೈದರಾಬಾದಿನ ಮಿಲ್ಟ್ರಿ ಹೊಟೇಲ್ ಒಂದರಲ್ಲಿ ಧನುಷ್ ಕಾಣಿಸಿಕೊಂಡಿದ್ದಾರೆ. ಕಪ್ಪು ವಸ್ತ್ರ ಧರಿಸಿ, ಕಪ್ಪು ಟೋಪಿ ಹಾಕಿಕೊಂಡು ಸಾಮಾನ್ಯನಂತೆ ಹೋಟೆಲ್‌ಗೆ ಹೋಗಿ ಧನುಷ್ ಊಟ ಮಾಡಿದ್ದಾರೆ. ಅಲ್ಲಿದ್ದ ಹೋಟೆಲ್ ಸಿಬ್ಬಂದಿ ಧನುಷ್ ಅವರನ್ನು ಗುರುತಿಸಿ, ಧನುಷ್ ಊಟ ಮಾಡುತ್ತಿರುವ ಫೋಟೋ ತೆಗೆದಿದ್ದಾರೆ. ಈ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ಈ ಫೋಟೊದಲ್ಲಿ ನಟ ಧನುಷ್ ಜೊತೆಗೆ ಒಂದು ಹುಡುಗಿ ಕೂತಿದ್ದಾಳೆ.

ಧನುಷ್ ಜೊತೆ ಊಟ ಮಾಡಿದ ಹುಡುಗಿ ಯಾರು?
ಧನುಷ್ ಜನ ಸಾಮಾನ್ಯನಂತೆ ಹೋಟೆಲ್‌ನಲ್ಲಿ ಕುಳಿತು ಊಟ ಮಾಡಿದ್ದಾರೆ. ಆದರೆ ಇಲ್ಲಿ ಧನುಷ್‌ಗಿಂತ ಹೆಚ್ಚಾಗಿ ಅವರ ಪಕ್ಕದಲ್ಲಿ ಹುಡುಗಿಯ ಬಗ್ಗೆ ಪ್ರಶ್ನೆ ಎದ್ದಿದೆ. ಧನುಷ್ ಜೊತೆಗೆ ಹೋಟೆಲ್‌ನಲ್ಲಿ ಊಟ ಮಾಡಿದ ಹುಡುಗಿ ಯಾರೆಂದು ಹಲವರು ಪ್ರಶ್ನೆ ಮಾಡುತ್ತಿದ್ದಾರೆ. ಈ ಫೋಟೋಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಅಸಮಾಧಾನ ವ್ಯಕ್ತವಾಗಿದೆ. ಆದರೆ ಧನುಷ್ ಪಕ್ಕ ಇದ್ದ ಆ ಹುಡುಗಿ ಯಾರು ಎಂದು ತಿಳಿದು ಬಂದಿಲ್ಲ. ಆದರೆ ಫೋಟೋ ಮಾತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗಿದೆ.

ಹೈದ್ರಾಬಾದ್‌ನಲ್ಲಿ ಧನುಷ್ ಶೂಟಿಂಗ್‌ನಲ್ಲಿ ಬ್ಯುಸಿ!
ಈ ಮಧ್ಯೆ ನಟ ಧನುಷ್ ಪ್ರಸ್ತುತ ತಮ್ಮ ಮುಂಬರುವ ದ್ವಿಭಾಷಾ ಚಿತ್ರದ ಚಿತ್ರೀಕರಣವನ್ನು ಹೈದರಾಬಾದ್‌ನಲ್ಲಿ ಮಾಡುತ್ತಿದ್ದಾರೆ. ತಮಿಳು ಮತ್ತು ತೆಲುಗು ಎರಡೂ ಭಾಷೆಗಳಲ್ಲಿ ಸಿನಿಮಾ ತಯಾರಾಗುತ್ತಿದೆ. ಚಿತ್ರಕ್ಕೆ ತಮಿಳಿನಲ್ಲಿ 'ವಾತಿ' ಮತ್ತು ತೆಲುಗಿನಲ್ಲಿ 'ಸರ್' ಎಂದು ಹೆಸರಿಡಲಾಗಿದೆ. ವೆಂಕಿ ಅಟ್ಲೂರಿ ನಿರ್ದೇಶನದ ಈ ಚಿತ್ರದಲ್ಲಿ ಧನುಷ್ ಜೊತೆ ಸಂಯುಕ್ತಾ ಮೆನನ್ ನಟಿಸಿಸುತ್ತಿದ್ದಾರೆ. ಈಗಾಗೇ ಚಿತ್ರದ ಫಸ್ಟ್ ಲುಕ್ ಕೂಡ ರಿಲೀಸ್ ಆಗಿದೆ.

ಧನುಷ್ ಸಾಲು ಸಾಲು ಚಿತ್ರಗಳು ರಿಲೀಸ್‌ಗಾಗಿ ಕಾಯುತ್ತಿವೆ!
ಇನ್ನು ಧನುಷ್ ಅಭಿನಯದ ಸಾಲು ಸಾಲು ಸಿನಿಮಾಗಳು ರಿಲೀಸ್‌ಗೆ ಕಾಯುತ್ತಿವೆ. 'ಮಾರನ್' ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಹಾಲಿವುಡ್ ಚಿತ್ರ 'ದಿ ಗ್ರೇ ಮ್ಯಾನ್' ಕೂಡ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ಜೊತೆಗೆ 'ತಿರುಚಿರಂ ಬಲಂ' ಚಿತ್ರದ ಚಿತ್ರೀಕರಣ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ. ಡಬ್ಬಿಂಗ್ ಕೆಲಸ ಶುರುವಾಗಿದೆ ಎಂದು ನಿರ್ದೇಶಕ ಮಿತ್ರನ್ ಜವಾಹರ್ ಇತ್ತೀಚೆಗೆ ಸಂದರ್ಶನದಲ್ಲಿ ಹೇಳಿದ್ದಾರೆ.


Click it and Unblock the Notifications











