Leo: 'ಜೈಲರ್' ಸಕ್ಸಸ್ ನೋಡಿ 'ಲಿಯೋ' ಟೀಂ ಶಾಕ್: ದಳಪತಿ ಸಿನಿಮಾ ರೀ ಶೂಟ್?

ಕಾಲಿವುಡ್‌ನಲ್ಲಿ ಅದ್ಯಾಕೋ ರಜನಿಕಾಂತ್ ಫ್ಯಾನ್ಸ್ ವರ್ಸಸ್ ದಳಪತಿ ವಿಜಯ್ ಫ್ಯಾನ್ಸ್ ನಡುವಣ ಸಂಘರ್ಷ ಸದ್ಯಕ್ಕೆ ಅಂತ್ಯವಾಗುವಂತೆ ಕಾಣುತ್ತಿಲ್ಲ. 'ಜೈಲರ್' ಹಾಗೂ 'ಲಿಯೋ' ಸಿನಿಮಾಗಳ ಸುತ್ತಾ ಪ್ರತಿದಿನ ಒಂದಿಲ್ಲೊಂದು ಸುದ್ದಿ ಸದ್ದು ಮಾಡ್ತಿದೆ.

ಇತ್ತೀಚೆಗೆ ಲೋಕೇಶ್ ಕನಕರಾಜ್ ತಲೈವರ್ 171 ಚಿತ್ರದಿಂದ ಹೊರಬಂದಿದ್ದಾರೆ ಎಂದು ಸುದ್ದಿ ಆಗಿತ್ತು. ಅದಕ್ಕೆ ಕಾರಣ ಕಿಡಿಗೇಡಿಗಳು ಹಬ್ಬಿಸಿದ ಸುಳ್ಳು ಸುದ್ದಿ. ಸನ್ ಪಿಕ್ಚರ್ಸ್ ಸಂಸ್ಥೆ ಅಧಿಕೃತವಾಗಿ ತಲೈವರ್ 171 ಸಿನಿಮಾ ಘೋಷಿಸಿ ಎಲ್ಲಾ ಗೊಂದಲಕ್ಕೆ ಬ್ರೇಕ್ ಹಾಕಿತ್ತು. ಇದೀಗ 'ಲಿಯೋ' ಸಿನಿಮಾ ಸುತ್ತಾ ದಿನಕ್ಕೊಂದು ಸುದ್ದಿ ಕೇಳಿಬರ್ತಿದೆ. ಲೋಕೇಶ್ ಕನಕರಾಜ್ ನಿರ್ದೇಶನದ ಈ ಚಿತ್ರದಲ್ಲಿ ದಳಪತಿ ವಿಜಯ್ ಬಣ್ಣ ಹಚ್ಚಿದ್ದಾರೆ.

After Jailer success Thalapathy vijays Leo in Re-shoot mode?

'ಕೈದಿ', 'ಮಾಸ್ಟರ್', 'ವಿಕ್ರಂ' ಬಳಿಕ ಲೋಕೇಶ್ ಕನಕರಾಜ್ ಕಾಲಿವುಡ್‌ ಸೆನ್ಸೇಷನಲ್ ಡೈರೆಕ್ಟರ್ ಆಗಿ ಹೊರಹೊಮ್ಮಿದ್ದಾತೆ. ಲೋಕೇಶ್ ಮುಂದಿನ ಸಿನಿಮಾಗಳ ಬಗ್ಗೆ ಭಾರೀ ನಿರೀಕ್ಷೆಯಿದೆ. 'ಮಾಸ್ಟರ್' ಕಾಂಬಿನೇಷನ್‌ನಲ್ಲಿ ಬರ್ತಿರೋ 'ಲಿಯೋ' ಸಿನಿಮಾ ಭಾರೀ ಹೈಪ್ ಕ್ರಿಯೇಟ್ ಮಾಡಿದೆ. ತ್ರಿಷಾ ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದ್ದಾರೆ. ಸಂಜಯ್ ದತ್, ಅರ್ಜುನ್ ಸರ್ಜಾ ಕೂಡ ತಾರಾಗಣದಲ್ಲಿದ್ದಾರೆ.

ಸೆವೆನ್ ಸ್ಕ್ರೀನ್ ಸ್ಟುಡಿಯೋ ಸಂಸ್ಥೆ 'ಲಿಯೋ' ಸಿನಿಮಾ ನಿರ್ಮಾಣ ಮಾಡಿದೆ. ಇದು ಆಕ್ಷನ್ ಥ್ರಿಲ್ಲರ್ ಸಿನಿಮಾ ಆಗಿದ್ದು ಬಹುಕೋಟಿ ವೆಚ್ಚದಲ್ಲಿ ಸಿನಿಮಾ ರಿಲೀಸ್ ಆಗಿದೆ. ಇನ್ನು ರಜನಿಕಾಂತ್ ನಟನೆಯ 'ಜೈಲರ್' ಸಿನಿಮಾ 600 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದ್ದು ಗೊತ್ತೇಯಿದೆ. ಇನ್ನು ಸೂಪರ್ ಸ್ಟಾರ್ ಟೈಟಲ್‌ಗಾಗಿ ವಿಜಯ್ ಹಾಗೂ ತಲೈವಾ ಫ್ಯಾನ್ಸ್ ನಡುವೆ ಭಾರೀ ತಿಕ್ಕಾಟ, ಸಂಘರ್ಷ ನಡೀತಿದೆ. 'ಜೈಲರ್' ಸಕ್ಸಸ್ ಬೆನ್ನಲ್ಲೇ 'ಲಿಯೋ' ಸಿನಿಮಾ ರೀಶೂಟ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗುತ್ತಿದೆ.

'ಜೈಲರ್' ದಾಖಲೆಯನ್ನು 'ಲಿಯೋ' ಸಿನಿಮಾ ಮುರಿಯುತ್ತೆ ಎನ್ನುವ ನಿರೀಕ್ಷೆ ಕಾಲಿವುಡ್‌ನಲ್ಲಿದೆ. ಪೋಷಕ ನಟ ಮೀಸೆ ರಾಜೇಂದ್ರನ್ ಇತ್ತೀಚೆಗೆ 'ಲಿಯೋ' ಸಿನಿಮಾ ಬಗ್ಗೆ ನೀಡಿದ್ದ ಹೇಳಿಕೆ ವೈರಲ್ ಆಗಿತ್ತು. 'ಜೈಲರ್' ಬಾಕ್ಸಾಫೀಸ್ ದಾಖಲೆ 'ಲಿಯೋ' ಮುರಿದರೆ ನಾನು ನನ್ನ ಮೀಸೆ ಬೋಳಿಸಿಕೊಳ್ಳುತ್ತೇನೆ ಎಂದಿದ್ದರು. ಇದು ವಿಜಯ್ ಅಭಿಮಾನಿಗಳನ್ನು ಕೆರಳಿಸಿತ್ತು. ಇದೀದ ರಾಜೇಂದ್ರನ್ 'ಜೈಲರ್' ಹಿಟ್ ಆದ ಬಳಿಕ 'ಲಿಯೋ' ಸಿನಿಮಾ ರೀಶೂಟ್ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

'ಜೈಲರ್' ಸಕ್ಸಸ್ ನೋಡಿ ಏನಾದರೂ ಮಾಡಿ 'ಲಿಯೋ' ಚಿತ್ರವನ್ನು ಅದಕ್ಕಿಂತ ದೊಡ್ಡಮಟ್ಟದಲ್ಲಿ ಹಿಟ್ ಮಾಡಲು ಚಿತ್ರತಂ ಶತಾಯಗತಾಯ ಪ್ರಯತ್ನಿಸುತ್ತಿದೆ ಎಂದಿದ್ದಾರೆ. ಮೀಸೆ ರಾಜೇಂದ್ರನ್ ಹೇಳಿಕೆ ವೈರಲ್ ಆಗುತ್ತಿದೆ. ಸಾಕಷ್ಟು ಜನ 'ಲಿಯೋ' ರೀ ಶೂಟ್ ನಿಜವೇ ಎನ್ನುತ್ತಿದ್ದಾರೆ. ಮತ್ತೆ ಕೆಲವರು ರೀ ಶೂಟ್ ಮಾಡಿದರೆ ಏನು ತಪ್ಪು ಎಂದು ಕೇಳುತ್ತಿದ್ದಾರೆ. ಅಭಿಮಾನಿಗಳಲ್ಲಿ'ಜೈಲರ್' ವರ್ಸಸ್ 'ಲಿಯೋ' ಫೈಟ್ ಮುಂದುವರದಿದೆ.

ಅಕ್ಟೋಬರ್ 19ರಂದು 'ಲಿಯೋ' ಸಿನಿಮಾ ರಿಲೀಸ್ ಆಗಬೇಕಿದೆ. ಈಗಾಗಲೇ ಯುಕೆಯಲ್ಲಿ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಕೂಡ ಆರಂಭವಾಗಿದೆ. ಇನ್ನು ಚಿತ್ರದಲ್ಲಿ ವಿಜಯ್ ಸಿಗರೇಟ್ ಸೇದುವ ದೃಶ್ಯಗಳಿದ್ದು ಅದಕ್ಕೆ ಸೆನ್ಸಾರ್ ಮಂಡಳಿ ಕಟ್ಸ್ ಹೇಳುವ ಸಾಧ್ಯತೆಯಿದೆ. ಆದರೆ ಯುಕೆಯಲ್ಲಿ ಯಾವುದೇ ಕಟ್ಸ್ ಇಲ್ಲದೇ ಸಿನಿಮಾ ಪ್ರದರ್ಶನವಾಗುವ ಸಾಧ್ಯತೆಯಿದೆ.

ಮನೋಜ್ ಪರಮಹಂಸ ಛಾಯಾಗ್ರಹಣ, ಅನಿರುದ್ದ್ ರವಿಚಂದರ್ ಸಂಗೀತ 'ಲಿಯೋ' ಚಿತ್ರಕ್ಕಿದೆ. 200 ಕೋಟಿ ರೂ.ಗೂ ಅಧಿಕ ಬಜೆಟ್‌ನಲ್ಲಿ ಸಿನಿಮಾ ತೆರೆಗೆ ಬರ್ತಿದೆ. ಕಳೆದ ವರ್ಷ 'ಬೀಸ್ಟ್' ಸಿನಿಮಾ ಮೂಲಕ ವಿಜಯ್ ಪ್ರೇಕ್ಷಕರ ಮುಂದೆ ಬಂದಿದ್ದರು. ಆದರೆ ಅಷ್ಟಾಗಿ ಸಿನಿಮಾ ಸದ್ದು ಮಾಡಲಿಲ್ಲ. 'ಜೈಲರ್' ಸಿನಿಮಾ ನಿರ್ದೇಶಕ ನೆಲ್ಸನ್ ಆ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು.

More from Filmibeat

English summary
Thalapathy vijay Leo team to reshoot some scenes?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X