For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್ ಸಿನಿಮಾದಲ್ಲಿ ಯಶ್: ಖ್ಯಾತ ಹಿಂದಿ ನಿರ್ಮಾಪಕರ ಜೊತೆ ರಾಕಿಂಗ್ ಸ್ಟಾರ್ ಸಿನಿಮಾ

  |

  ರಾಕಿಂಗ್ ಸ್ಟಾರ್ ಯಶ್ ಸದ್ಯ ಬಹುನಿರೀಕ್ಷೆಯ ಕೆಜಿಎಫ್-2 ಸಿನಿಮಾದ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. ಈಗಾಗಲೇ ಟ್ರೈಲರ್ ಮೂಲಕ ಇಡೀ ವಿಶ್ವದ ಗಮನ ಸೆಳೆದಿರುವ ಕೆಜಿಎಫ್-2 ನೋಡಲು ಪ್ರೇಕ್ಷಕರು ಕಾತರರಾಗಿದ್ದಾರೆ.

  ಸದ್ಯ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಕೆಜಿಎಫ್-2 ಸಿನಿಮಾತಂಡ ನಿರತವಾಗಿದೆ. ಈ ನಡುವೆ ಯಶ್ ಮುಂದಿನ ಸಿನಿಮಾ ಯಾವುದು ಎನ್ನುವ ಕುತೂಹಲ ಮೂಡಿಸಿದ್ದು ಸಿಕ್ಕಾಪಟ್ಟೆ ಚರ್ಚೆ ನಡೆಯುತ್ತಿದೆ. ಮೂಲಗಳ ಪ್ರಕಾರ ರಾಕಿಂಗ್ ಸ್ಟಾರ್ ಮುಂದಿನ ಸಿನಿಮಾಗೆ ಮಫ್ತಿ ಖ್ಯಾತಿಯ ನಿರ್ದೇಶಕ ನರ್ತನ್ ಆಕ್ಷನ್ ಹೇಳುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.

  ಆದರೀಗ ಮತ್ತೊಂದು ಸುದ್ದಿ ಕೇಳಿಬರುತ್ತಿದ್ದು, ಯಶ್ ಬಾಲಿವುಡ್ ನಿರ್ಮಾಪಕರ ಜೊತೆ ಸಿನಿಮಾ ಮಾಡಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಅಂದಹಾಗೆ ರಾಕಿ ಭಾಯ್ ಹಿಂದಿ ಸಿನಿಮಾ ಯಾವುದು? ಯಾರ ಜೊತೆ ಮಾಡುತ್ತಿದ್ದಾರೆ? ಮುಂದೆ ಓದಿ..

  ರಣ್ವೀರ್ ಸಿಂಗ್ 83 ಸಿನಿಮಾ ನಿರ್ಮಾಪಕರ ಜೊತೆ ಯಶ್ ಸಿನಿಮಾ

  ರಣ್ವೀರ್ ಸಿಂಗ್ 83 ಸಿನಿಮಾ ನಿರ್ಮಾಪಕರ ಜೊತೆ ಯಶ್ ಸಿನಿಮಾ

  ಯಶ್ ಬಾಲಿವುಡ್ ಗೆ ಎಂಟ್ರಿ ಕೊಡುತ್ತಿರುವುದು ಬಹುತೇಕ ಖಚಿತವಾಗಿದ್ದು, ರಾಕಿಂಗ ಸ್ಟಾರ್ ಹಿಂದಿ ಸಿನಿಮಾಗೆ ಖ್ಯಾತ ನಿರ್ಮಾಪಕ ವಿಷ್ಣುವರ್ಧನ್ ಇಂದೂರಿ ಬಂಡವಾಳ ಹೂಡುತ್ತಿದ್ದಾರೆ. ರಣ್ವೀರ್ ಸಿಂಗ್ ನಟನೆಯ 83 ಸಿನಿಮಾ ನಿರ್ಮಾಣ ಮಾಡಿರುವ ವಿಷ್ಣುವರ್ಧನ್ ತಮ್ಮ ಮುಂದಿನ ಸಿನಿಮಾವನ್ನು ಯಶ್ ಜೊತೆ ಮಾಡಲು ನಿರ್ಧರಿಸಿದ್ದಾರಂತೆ. ಈಗಾಗಲೇ ಯಶ್ ಜೊತೆ ಹಲವು ಸುತ್ತಿನ ಮಾತುಕತೆ ಸಹ ನಡೆದಿದೆ ಎನ್ನಲಾಗುತ್ತಿದೆ.

  ಮತ್ತೊಂದು ಪ್ಯಾನ್ ಇಂಡಿಯಾ ಆಕ್ಷನ್ ಸಿನಿಮಾದಲ್ಲಿ ಯಶ್

  ಮತ್ತೊಂದು ಪ್ಯಾನ್ ಇಂಡಿಯಾ ಆಕ್ಷನ್ ಸಿನಿಮಾದಲ್ಲಿ ಯಶ್

  ಅಂದಹಾಗೆ ಇದು ಪಕ್ಕಾ ಪ್ಯಾನ್ ಇಂಡಿಯಾ ಆಕ್ಷನ್ ಸಿನಿಮಾವಾಗಿದೆಯಂತೆ. ಸದ್ಯ ಯಶ್ ಜೊತೆ ಮಾತುಕತೆಯಲ್ಲಿದ್ದು, ರಾಕಿ ಭಾಯ್ ಕಡೆಯಿಂದ ಗ್ರೀನ್ ಸಿಗ್ನಲ್ ಗಾಗಿ ಕಾಯುತ್ತಿದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ ಹಲವು ಸುತ್ತಿನ ಮಾತುಕತೆ ನಡೆದಿದ್ದು, ಹಿಂದಿ ನಿರ್ಮಾಪಕರ ಜೊತೆ ಯಶ್ ಸಿನಿಮಾ ಮಾಡುವುದು ಬಹುತೇಕ ಖಚಿತ ಎನ್ನುವ ಮಾತುಗಳು ಕೇಳಿಬರುತ್ತಿದೆ.

  ಈ ವರ್ಷವೇ ಸೆಟ್ಟೇರಲಿದೆ ಸಿನಿಮಾ

  ಈ ವರ್ಷವೇ ಸೆಟ್ಟೇರಲಿದೆ ಸಿನಿಮಾ

  ಈ ವರ್ಷವೇ ಸಿನಿಮಾ ಸೆಟ್ಟೇರುವ ಸಾಧ್ಯತೆ ಇದ್ದು, ಚಿತ್ರಕ್ಕೆ ಈಗಾಗಲೇ ಅನೇಕ ನಿರ್ದೇಶಕರ ಜೊತೆಯೂ ಮಾತುಕತೆ ನಡೆಸಲಾಗಿದೆಯಂತೆ. ಯಶ್ ಕಡೆಯಿಂದ ಸಹಿ ಬಿದ್ದ ಬಳಿಕವಷ್ಟೆ ಅಧಿಕೃತವಾಗಿ ಸಿನಿಮಾದ ಬಗ್ಗೆ ಮಾಹಿತಿ ಹೊರಬೀಳಲಿದೆ ಎನ್ನಲಾಗುತ್ತಿದೆ. ಯಶ್ ಮತ್ತು ನರ್ತನ್ ಕಾಂಬಿನೇಷನ್ ಸಿನಿಮಾ ಮುಗಿದ ಬಳಿಕ ಹಿಂದಿ ನಿರ್ಮಾಪಕರ ಸಿನಿಮಾದಲ್ಲಿ ಯಶ್ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

  ಜುಲೈ 16ಕ್ಕೆ ಕೆಜಿಎಫ್-2 ರಿಲೀಸ್

  ಜುಲೈ 16ಕ್ಕೆ ಕೆಜಿಎಫ್-2 ರಿಲೀಸ್

  ಬಹುನಿರೀಕ್ಷೆಯ ಕೆಜಿಎಫ್-2 ಸಿನಿಮಾ ಜುಲೈ 16ರಂದು ದೇಶದಾದ್ಯಂತ ತೆರೆಗೆ ಬರುತ್ತಿದೆ. ಪಾರ್ಟ್ ನಲ್ಲಿ ಬಾಲಿವುಡ್ ನಟರಾದ ಸಂಜಯ್ ದತ್ ಮತ್ತು ರವೀನಾ ಟಂಡನ್ ಕಾಣಿಸಿಕೊಂಡಿದ್ದು, ಸಿನಿಮಾದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ನಾಯಕಿಯಾಗಿ ಶ್ರಿನಿಧಿ ಶೆಟ್ಟಿ ಮಿಂಚಿದ್ದಾರೆ.

  English summary
  After KGF-2 yash next movie likely to with bollywood producer for action packed.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X