Don't Miss!
- News
ಬೆಂಗಳೂರಿನಲ್ಲಿ ಇಂದು ಬುಧವಾರ ಭಾರೀ ಮಳೆ: ಆರೆಂಜ್ ಅಲರ್ಟ್ ಘೋಷಣೆ
- Lifestyle
ಪ್ಲಾಸ್ಟಿಕ್ ಸರ್ಜರಿ ಕುರಿತ 10 ಆಸಕ್ತಿಕರ ಸಂಗತಿಗಳು
- Sports
ಟಿ20 ಕ್ರಿಕೆಟ್ನಲ್ಲಿ 250 ವಿಕೆಟ್ ಪಡೆದ ಬುಮ್ರಾ: ಈ ಸಾಧನೆ ಮಾಡಿದ ಭಾರತದ ಮೊದಲ ವೇಗದ ಬೌಲರ್
- Finance
ಮೇ 17ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Automobiles
ಹೊಸ ಕಿಯಾ ಇವಿ6 ಎಲೆಕ್ಟ್ರಿಕ್ ಕಾರು ಮಾಹಿತಿ ಬಹಿರಂಗ: 528 ಕಿ.ಮೀ ರೇಂಜ್, ಅಲ್ಟ್ರಾ-ಫಾಸ್ಟ್ ಚಾರ್ಜಿಂಗ್
- Technology
ಅಪೆಕ್ಸ್ ಲೆಜೆಂಡ್ಸ್ ಮೊಬೈಲ್ ಗೇಮ್ ಬಿಡುಗಡೆ! ಡೌನ್ಲೋಡ್ ಮಾಡುವುದು ಹೇಗೆ?
- Education
Oil India Recruitment 2022 : 16 ನರ್ಸಿಂಗ್ ಟ್ಯೂಟರ್ ಮತ್ತು ಇತರೆ ಹುದ್ದೆಗಳಿಗೆ ನೇರ ಸಂದರ್ಶನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಲಾಲ್ ಸಿಂಗ್ ಚಡ್ಡಾ ಬಿಡುಗಡೆ ಬಳಿಕ ಆಮಿರ್ ಖಾನ್ 3ನೇ ಮದುವೆ: ಆ ನಟಿ ಯಾರು?
ಬಾಲಿವುಡ್ ಸೂಪರ್ಸ್ಟಾರ್, ಬಾಕ್ಸಾಫೀಸ್ ಕಿಂಗ್ ಆಮಿರ್ ಖಾನ್ ತನ್ನ ಸಿನಿಮಾಗಳಿಂದ ಎಷ್ಟು ಸುದ್ದಿಯಲ್ಲಿ ಇರುತ್ತಾರೋ, ಅಷ್ಟೇ ಅವರ ವೈವಾಹಿಕ ಜೀವನದಿಂದಲೂ ಸುದ್ದಿಯಲ್ಲಿದ್ದಾರೆ. ಕಳೆದ ಆಗಸ್ಟ್ ತಿಂಗಳಲ್ಲಿ ಆಮಿರ್ ಖಾನ್ ತಮ್ಮ ಎರಡನೇ ಪತ್ನಿ ಕಿರಣ್ ರಾವ್ಗೆ ಡಿವೋರ್ಸ್ ನೀಡಿದ್ದರು. ಈ ಸುದ್ದಿ ಬಾಲಿವುಡ್ ಮಂದಿಗಷ್ಟೇ ಅಲ್ಲ ಆಮಿರ್ ಖಾನ್ ಅಭಿಮಾನಿಗಳಿಗೂ ದೊಡ್ಡ ಶಾಕ್ ಆಗಿತ್ತು.
ಆಮಿರ್ ಖಾನ್ ಹಾಗೂ ಕಿರಣ್ ರಾವ್ ಇಬ್ಬರು ಒಮ್ಮತದಿಂದ ವಿಚ್ಛೇದನ ಪಡೆದು ಬೇರೆಯಾಗಿದ್ದಾರೆ. ಇವರಿಗೆ 9 ವರ್ಷದ ಅಜಾದ್ ಖಾನ್ ಎಂಬ ಪುತ್ರನೂ ಇದ್ದಾನೆ. ಈಗ, ಆಮಿರ್ ಖಾನ್ ಮೂರನೇ ಮದುವೆ ಆಗಲು ಸಿದ್ಧತೆ ನಡೆಸಿದ್ದಾರೆಂಬ ಸುದ್ದಿ ಬಾಲಿವುಡ್ನಿಂದ ಹರಿದು ಬಂದಿದೆ. ತನ್ನ ಜೊತೆ ನಟಿಸಿದ ನಟಿಯನ್ನೇ ವಿವಾಹವಾಗಲಿದ್ದಾರೆ ಎನ್ನಲಾಗಿತ್ತಿದೆ. ಹಾಗಿದ್ದರೆ, ಆಮಿರ್ ಮೂರನೇ ಮದುವೆ ಯಾವಾಗ? ಯಾರೊಂದಿಗೆ ಮದುವೆ? ಬಾಲಿವುಡ್ನಲ್ಲಿ ಹರಿದಾಡುತ್ತಿರುವ ಅಸಲಿ ಸುದ್ದಿಯೇನು? ಅನ್ನುವ ಮಾಹಿತಿಗೆ ಮುಂದೆ ಓದಿ.

ಆಮಿರ್ 3ನೇ ಮದುವೆಗೆ ಸಜ್ಜು
ಆಮಿರ್ ಖಾನ್ ತಮ್ಮ ಸಿನಿಮಾ ಲಾಲ್ ಸಿಂಗ್ ಚಡ್ಡಾ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಕೆಜಿಎಫ್ 2 ಜೊತೆ ಲಾಲ್ ಸಿಂಗ್ ಚಡ್ಡ ಥಿಯೇಟರ್ಗೆ ಬರುವುದಾಗಿ ಹೇಳಿಕೊಂಡಿತ್ತು. ಆದರೆ, ಕೆಜಿಎಫ್ 2 ಅಬ್ಬರ ಕಂಡು ಆಮಿರ್ ಖಾನ್ ಬಿಡುಗಡೆ ದಿನವನ್ನು ಮುಂದೂಡಲಿದ್ದಾರೆ ಅನ್ನುವ ಮಾತು ಕೇಳಿಬರುತ್ತಿದೆ. ಕೆಜಿಎಫ್ 2ಗೆ ಟಕ್ಕರ್ ಕೊಡೋಕೆ ಬಂದು ಸುದ್ದಿಯಾಗಿದ್ದ ಲಾಲ್ ಸಿಂಗ್ ಚಡ್ಡ ಈ ಮೂರನೇ ಮದುವೆ ಮ್ಯಾಟರ್ನಲ್ಲಿ ಸದ್ದು ಮಾಡುತ್ತಿದ್ದಾರೆ. ಲಾಲ್ ಸಿಂಗ್ ಚಡ್ಡ ಸಿನಿಮಾಗಿಂತ ಆಮಿರ್ ಮೂರನೇ ಮದುವೆ ಬಗ್ಗೆನೇ ಚರ್ಚೆಯಾಗುತ್ತಿದೆ.

ಲಾಲ್ ಸಿಂಗ್ ಚಡ್ಡಾ ತೆರೆಕಾಣುತ್ತಿದ್ದಂತೆ 3ನೇ ಮದುವೆ
ಬಹು ನಿರೀಕ್ಷಿತ ಸಿನಿಮಾ ಲಾಲ್ ಸಿಂಗ್ ಚಡ್ಡ ಬಿಡುಗಡೆಯಾಗುತ್ತಿದ್ದಂತೆ ಆಮಿರ್ ಖಾನ್ ಮೂರನೇ ಮದುವೆ ಆಗುತ್ತಾರೆ ಅನ್ನುವ ಮಾತು ಕೇಳಿಬರುತ್ತಿದೆ. ಬಾಲಿವುಡ್ನಲ್ಲಿ ಆಮಿರ್ ಮದುವೆ ಬಗ್ಗೆನೇ ಸಾಕಷ್ಟು ಚರ್ಚೆ ಆಗುತ್ತಿದ್ಯಂತೆ. ಅಲ್ಲದೆ ಸೋಶಿಯಲ್ ಮೀಡಿಯಾದಲ್ಲೂ 3ನೇ ಮದುವೆ ಬಗ್ಗೆನೇ ಚರ್ಚೆಯಾಗುತ್ತಿದೆ. ಸಿನಿಮಾ ಬಿಡುಗಡೆಗೂ ಮುನ್ನ 3ನೇ ಮದುವೆ ಆದರೆ, ಜನ ಸಿನಿಮಾ ನೋಡುವುದಿಲ್ಲವೆಂಬ ಭಯ ಕಾಡುತ್ತಿದೆಯಂತೆ. ಈ ಕಾರಣಕ್ಕೆ ಲಾಲ್ ಸಿಂಗ್ ಚಡ್ಡಾ ತೆರೆಕಂಡ ಬಳಿಕ ಮದುವೆ ಆಗಲು ನಿರ್ಧರಿಸಿದ್ದಾರೆಂಬ ಗುಲ್ಲೆದ್ದಿದೆ.

ಆಮಿರ್ ಮದುವೆ ಆಗಲಿರೋ ನಟಿ ಯಾರು?
ಆಮಿರ್ ಖಾನ್ 2ನೇ ಪತ್ನಿ ಕಿರಣ್ ರಾವ್ಗೆ ವಿಚ್ಛೇದನ ನೀಡಿದ ದಿನದಿಂದ್ಲೇ ನಟಿ ಫಾತಿಮಾ ಸನಾ ಶೇಕ್ ವಿರುದ್ಧ ಟ್ರೋಲ್ ಮಾಡಲಾಗಿತ್ತು. ಆಮಿರ್ ಜೊತೆ ದಂಗಲ್ ಹಾಗೂ ಥಗ್ಸ್ ಆಫ್ ಹಿಂದೂಸ್ತಾನ್ ಸಿನಿಮಾದಲ್ಲಿ ಫಾತಿಮಾ ಸನಾ ಶೇಕ್ ನಟಿಸಿದ್ದರು. ಈಗ ಕೂಡ ಆಮಿರ್ ಈಕೆಯೊಂದಿಗೆ 3ನೇ ಮದುವೆ ಆಗುತ್ತಿದ್ದಾರೆ ಎಂದು ಗುಲ್ಲೆದ್ದಿದೆ. ಅಲ್ಲದೆ ಈಕೆಯಿಂದಲೇ ಆಮಿರ್ ಹಾಗೂ ಕಿರಣ್ ರಾವ್ ವಿಚ್ಛೇದನ ನಡೆದಿದೆ ಎಂದು ದೂರಲಾಗುತ್ತಿದೆ.

ಮದುವೆ ಬಗ್ಗೆ ಏನಂತಾರೆ ಆಮಿರ್ ?
ವಿಚ್ಛೇದನದ ಬಳಿಕ ಆಮಿರ್ ಹಾಗೂ ಫಾತಿಮಾ ಸನಾ ಶೇಕ್ ಮದುವೆ ಆಗುತ್ತಾರೆ ಎನ್ನಲಾಗಿತ್ತು. ಹೆವಿ ಟ್ರೋಲ್ ಆದರೂ, ಇಬ್ಬರೂ ಮದುವೆ ಬಗ್ಗೆ ಬಾಯಿ ಬಿಟ್ಟಿರಲಿಲ್ಲ. ತನ್ನ ಸಂಬಂಧದ ಬಗ್ಗೆ ಮಾತಾಡಿರಲಿಲ್ಲ. ಬಾಲಿವುಡ್ನ ಮತ್ತೊಂದು ಮೂಲಗಳ ಪ್ರಕಾರ, ಆಮಿರ್ ಖಾನ್ರನ್ನು ಫಾತಿಮಾ ಸನಾ ಶೇಕ್ ತನ್ನ ಗುರುಗಳು ಎಂದು ಭಾವಿಸಿದ್ದಾರೆ. ಹೀಗಾಗಿ ಇಬ್ಬರ ನಡುವೆ ಯಾವುದೇ ಸಂಬಂಧವಿಲ್ಲವೆಂದು ಹೇಳುತ್ತಿದೆ. ಅಸಲಿಗೆ ಇದು ಕೇವಲ ಗಾಳಿ ಸುದ್ದಿ ಅಷ್ಟೆನೋ, ಇಲ್ಲಾ ನಿಜಕ್ಕೂ ಮದುವೆ ಆಗುತ್ತಾರೋ ಅನ್ನುವುದು ಕೆಲವೇ ತಿಂಗಳುಗಳಲ್ಲಿ ಗೊತ್ತಾಗಲಿದೆ.