ನಾರ್ಥ್- ಸೌತ್ ಮೆಗಾ ಮಲ್ಟಿಸ್ಟಾರರ್ 'ವಾರ್- 2': ಹೃತಿಕ್ ಎದುರು ಗುದ್ದಾಡೋಕೆ ತಾರಕ್ ಸಂಭಾವನೆ ಎಷ್ಟು?

ಯಶ್ ರಾಜ್‌ ಫಿಲ್ಮ್ಸ್ ಕ್ಯಾಂಪ್‌ನಿಂದ ಬ್ಯಾಕ್‌ ಟು ಬ್ಯಾಕ್ ಬ್ರೇಕಿಂಗ್ ನ್ಯೂಸ್‌ ಬರ್ತಿದೆ. ಹೃತಿಕ್ ರೋಷನ್ ಹಾಗೂ ಜ್ಯೂ. ಎನ್‌ಟಿಆರ್ ಕಾಂಬಿನೇಷನ್‌ನಲ್ಲಿ 'ವಾರ್- 2' ಬಹುತೇಕ ಪಕ್ಕಾ ಆಗಿದೆ. ಇದರ ಬೆನ್ನಲ್ಲೇ 'ಟೈಗರ್ Vs ಪಠಾಣ್' ಸಿನಿಮಾ ಬಗ್ಗೆ ಕೂಡ ಈಗ ಸುಳಿವು ಸಿಕ್ಕಿದೆ. ಇದೆಲ್ಲದರ ನಡುವೆ 'ವಾರ್- 2' ಚಿತ್ರಕ್ಕೆ ತಾರಕ್ ಸಂಭಾವನೆ ಎಷ್ಟು ಅನ್ನೋದು ಭಾರೀ ಚರ್ಚೆ ಹುಟ್ಟಾಕ್ಕಿದೆ.

ಪ್ಯಾನ್ ಇಂಡಿಯಾ ಸಿನಿಮಾಗಳ ಜಮಾನದಲ್ಲಿ ಸೌತ್ ಸ್ಟಾರ್ಸ್ ಬಾಲಿವುಡ್ ಸಿನಿಮಾಗಳಲ್ಲಿ ನಟಿಸೋದು, ಬಾಲಿವುಡ್ ಸ್ಟಾರ್ಸ್ ಸೌತ್ ಹೀರೊಗಳ ಜೊತೆ ಕಾಣಿಸಿಕೊಳ್ಳೋದು ಕಾಮನ್ ಆಗಿಬಿಟ್ಟಿದೆ. ಆದರೆ ಬಾಲಿವುಡ್‌ನ ಸೂಪರ್ ಹಿಟ್ ಸಿನಿಮಾ ಸೀಕ್ವೆಲ್‌ನಲ್ಲಿ ತೆಲುಗು ನಟಿಸ್ತಿರೋದು ಇದೇ ಮೊದಲು. ತಾರಕ್ ಅಷ್ಟು ಸುಲಭವಾಗಿ ಯಾವುದೇ ಸಿನಿಮಾ ಒಪ್ಪಿಕೊಳ್ಳುವುದಿಲ್ಲ. ಆದರೆ 'ವಾರ್- 2' ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಅನ್ನೋದು ಅಚ್ಚರಿ ಮೂಡಿಸಿದೆ. ಸದ್ಯ NTR30 ಸಿನಿಮಾ ಚಿತ್ರೀಕರಣ ಶುರುವಾಗಿದ್ದು ಆ ನಂತರ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಜ್ಯೂ. ಎನ್‌ಟಿಆರ್ ನಟಿಸಲಿದ್ದಾರೆ.

After RRRs Massive Success, Jr NTR Demanding Whopping Remuneration for War-2

YRF ಸ್ಪೈ ಯೂನಿವರ್ಸ್‌ನಲ್ಲಿ ಯಶ್ ರಾಜ್‌ ಸಂಸ್ಥೆ ಒಂದಕ್ಕಿಂತ ಒಂದು ವಿಭಿನ್ನ ಸಿನಿಮಾಗಳನ್ನು ಮಾಡ್ತಿದೆ. ಇದೀಗ ತಮ್ಮದೇ ಸಿನಿ ಪ್ರಪಂಚದ ಬೇರೆ ಸಿನಿಮಾ ಕಥೆಗಳಲ್ಲಿನ ಪಾತ್ರಗಳನ್ನು ಒಂದು ಕಡೆ ಸೇರಿಸುವ ಪ್ರಯತ್ನ ನಡೀತಿದೆ. ಈಗಾಗಲೇ 'ಪಠಾಣ್' ಚಿತ್ರದಲ್ಲಿ 'ಟೈಗರ್' ಸಲ್ಲು ಗೆಸ್ಟ್ ಅಪಿಯರೆನ್ಸ್ ಮಾಡಿದ್ದಾಗಿದೆ. ಇದನ್ನು ಮತ್ತಷ್ಟು ದೊಡ್ಡಮಟ್ಟಕ್ಕೆ ಕೊಂಡೊಯ್ದು ಪ್ರೇಕ್ಷಕರಿಗೆ ಥ್ರಿಲ್ ಕೊಡುವ ಕೆಲಸ ಶುರುವಾಗಿದೆ. YRF ಸ್ಪೈ ಯೂನಿವರ್ಸ್‌ನಲ್ಲಿ ಈಗ 'ವಾರ್- 2' ಸಿನಿಮಾ ಕೂಡ ಬರ್ತಿದೆ. ಈ ಬಾರಿ ತೆಲುಗು ನಟ ಜ್ಯೂ. ಎನ್‌ಟಿಆರ್ ಈ ತಂಡಕ್ಕೆ ಸೇರಿಕೊಳ್ಳಲಿದ್ದಾರೆ.

ಅಯಾನ್ ಮುಖರ್ಜಿ 'ವಾರ್- 2' ಸಿನಿಮಾ ನಿರ್ದೇಶನ ಮಾಡ್ತಾರೆ ಎನ್ನಲಾಗ್ತಿದೆ. ಸಿದ್ಧಾರ್ಥ್ ಆನಂದ್ ನಿರ್ದೇಶನದಲ್ಲಿ 4 ವರ್ಷಗಳ ಹಿಂದೆ ಬಂದಿದ್ದ 'ವಾರ್' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. 170 ಕೋಟಿ ರೂ. ಬಜೆಟ್ ಸಿನಿಮಾ ಬರೋಬ್ಬರಿ 450 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಹೃತಿಕ್ ಜೊತೆಗೆ ಟೈಗರ್ ಶ್ರಾಫ್ ಅಬ್ಬರಿಸಿದ್ದರು. ಇದೀಗ ಈ ಸರಣಿಯ ಮುಂದಿನ ಚಿತ್ರದಲ್ಲಿ ಹೃತಿಕ್ ಹಾಗೂ ತಾರಕ್ ಜೊತೆಯಾಗಲಿದ್ದಾರೆ. ಚಿತ್ರದಲ್ಲಿ ಟಾಲಿವುಡ್ ಯಂಗ್ ಟೈಗರ್ ನೆಗೆಟಿವ್ ಶೇಡ್ ರೋಲ್‌ನಲ್ಲಿ ನಟಿಸ್ತಾರೆ ಎನ್ನುವ ಮಾತುಗಳು ಕೇಳಿಬರ್ತಿದೆ.

After RRRs Massive Success, Jr NTR Demanding Whopping Remuneration for War-2

'ವಾರ್‌-2' ಚಿತ್ರಕ್ಕಾಗಿ ಹೃತಿಕ್- ತಾರಕ್ ಇಬ್ಬರು ಭಾರೀ ಮೊತ್ತದ ಸಂಭಾವನೆ ಪಡೆಯುತ್ತಾರೆ ಎನ್ನಲಾಗ್ತಿದೆ. ಈ ಬಗ್ಗೆ ಸ್ವಯಂ ಘೋಷಿತ ಓವರ್‌ಸೀಸ್ ಸೆನ್ಸಾರ್ ಬೋರ್ಡ್ ಸದಸ್ಯ ಉಮೈರ್ ಸಂಧು ಮಾಡಿರುವ ಟ್ವೀಟ್ ವೈರಲ್ ಆಗಿದೆ. ಈ ಮೆಗಾ ಮಲ್ಟಿಸ್ಟಾರರ್ ಚಿತ್ರಕ್ಕಾಗಿ ಹೃತಿಕ್ 100 ಕೋಟಿ ರೂ. ಸಂಭಾವನೆ ಹಾಗೂ ಜ್ಯೂ. ಎನ್‌ಟಿಆರ್ 75 ಕೋಟಿ ರೂ. ಸಂಭಾವನೆ ಪಡೀತ್ತಿದ್ದಾರೆ ಎಂದು ಆತ ಟ್ವೀಟ್ ಮಾಡಿದ್ದಾನೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಈ ಚಿತ್ರಕ್ಕಾಗಿ ಯಂಗ್ ಟೈಗರ್ 20ರಿಂದ 30 ಕೋಟಿ ಸಂಭಾವನೆ ಪಡೆಯುತ್ತಾರೆ ಎನ್ನುವ ಚರ್ಚೆ ನಡೀತಿದೆ.

'ಟೈಗರ್ Vs ಪಠಾಣ್' ಹಾಗೂ 'ವಾರ್‌- 2' ಸಿನಿಮಾಗಳನ್ನು ಒಟ್ಟೊಟ್ಟಿಗೆ ಶೂಟಿಂಗ್ ಮಾಡುವ ಪ್ರಯತ್ನ ನಡೀತಿದೆಯಂತೆ. ಇದೇ ಕಾರಣಕ್ಕೆ 'ವಾರ್' ಸಿನಿಮಾ ಕಟ್ಟಿಕೊಟ್ಟಿದ್ದ ಸಿದ್ಧಾರ್ಥ್‌ ಆನಂದ್ ಬದಲು ಸೀಕ್ವೆಲ್‌ ಅನ್ನು ಅಯಾನ್ ಮುಖರ್ಜಿ ನಿರ್ದೇಶನ ಮಾಡುವ ಸುಳಿವು ಸಿಕ್ಕಿದೆ. 'ಬ್ರಹ್ಮಾಸ್ತ್ರ' ಸರಣಿಯ ಸಿನಿಮಾಗಳ ರಿಲೀಸ್ ಡೇಟ್ ಘೋಷಿಸಿರುವ ಅಯಾನ್ ದೀರ್ಘಾವಧಿಯ ಸಮಯಾವಕಾಶ ಕೇಳಿದ್ದಾರೆ. 'ಬ್ರಹ್ಮಾಸ್ತ್ರ' -2 ಶುರು ಮಾಡುವುದಕ್ಕು ಮುನ್ನ 'ವಾರ್‌- 2' ಸಿನಿಮಾ ಮುಗಿಸುವ ಲೆಕ್ಕಾಚಾರ ನಡೀತಿದೆ.

ಜ್ಯೂ. ಎನ್‌ಟಿಆರ್ ಬಾಲಿವುಡ್ ಎಂಟ್ರಿ ಬಗ್ಗೆ ಅಭಿಮಾನಿಗಳು ಖುಷಿಯಾಗಿದ್ದಾರೆ. ಇಂಟೆನ್ಸ್ ಆಕ್ಷನ್ ತಾರಕ್ ಬಾಲಿವುಡ್ ಸೂಪರ್ ಸ್ಟಾರ್ ಹೃತಿಕ್ ಎದುರು ಅಬ್ಬರೋದನ್ನು ನೋಡೋಕೆ ಕಾತರಾಗಿದ್ದಾರೆ. ಇನ್ನು ಯಂಗ್ ಟೈಗರ್ ನೆಗೆಟಿವ್ ಶೇಡ್ ರೋಲ್ ಮಾಡ್ತಾರೆ ಎನ್ನುವುದು ಮತ್ತಷ್ಟು ಕುತೂಹಲ ಕೆರಳಿಸಿದೆ. ಇದೆಲ್ಲದರ ಮಧ್ಯೆ ಬಾಲಿವುಡ್‌ನ ನಂಬರ್ ವನ್ ಡ್ಯಾನ್ಸರ್ ಹೃತಿಕ್ ಹಾಗೂ ಟಾಲಿವುಡ್ ನಂಬರ್ ವನ್ ಡ್ಯಾನ್ಸರ್ ತಾರಕ್ ಡ್ಯಾನ್ಸ್ ಜುಗಲ್‌ಬಂದಿ ನೋಡೋಕೆ ಕಾಯ್ತಿದ್ದಾರೆ.

More from Filmibeat

English summary
After RRR's Massive Success, Jr NTR Demanding Whopping Remuneration for War-2. The film Will Be Directed By Ayan Mukerji. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X