twitter
    For Quick Alerts
    ALLOW NOTIFICATIONS  
    For Daily Alerts

    ಅರ್ಧ ಸಿನ್ಮಾ ತೋರ್ಸಿ ಪೂರ್ಣ ದುಡ್ಡು ಕಿತ್ಗಂಡ್ರಲ್ಲ, ನ್ಯಾಯ್ವೇ?

    By ಮಪ
    |

    ಥತ್ತೇರಿಕೆ... ಈ ಬಾಹುಬಲಿ ಸಿನಿಮಾ ಅದೆಷ್ಟಾರೂ ದುಡ್ಡು ಮಾಡ್ಕಳ್ಲಿ, ನಮ್ಮ ದುಡ್ಡು ನಮಗೆ ವಾಪಸ್ ಕೊಡ್ರಪ್ಪಾ, ಪೂರ್ಣ ಬ್ಯಾಡಾ.. ಅರ್ಧ ಕೊಡಿ ಸಾಕು , ಎಂದು ನಾಗರಾಜ ಬಡಬಡಿಸುತ್ತಲೇ ಮನೆ ಬಾಗಿಲು ತಟ್ಟುತ್ತಿದ್ದ.

    ಏನಪ್ಪಾ ಇಸ್ಯಾ? ಅಂಥ ಕೇಳಿದಾಗ ಅವನ ವಾದದ ಸರಣಿ ಬಿಚ್ಚಿಟ್ಟ. ನೋಡಿ ಸ್ವಾಮಿ ನಾವು ಪೂರ್ಣ ದುಡ್ಡು ಕೊಟ್ಟೇ ಸಿನಿಮಾಕ್ಕೆ ಹೋಗಿದೇವಾ, ಇವರು ಅರ್ಥ ಸಿನಿಮಾ ತೋರಿಸಿ ಮುಂದಿನ ವರ್ಸಾ ಬನ್ನಿ ಅಂದ್ರೆ ಎಂಗೆ? ನಾವೇನು ಇನ್ನೆರಡು ಗಂಟೆ ತೋರಿಸಿದ್ರೇ ಬ್ಯಾಡಾ ಅಂತಿದ್ವಾ? ನಾನೇಳದು ಇಷ್ಟೆ, ಅರ್ಧ ಸಿನಿಮಾ ತೋರಿಸಿದ್ದೀರಾ, ಅಂದ ಮೇಲೆ ಅರ್ಧ ದುಡ್ಡು ತಕಳಿ,,, ಇದು ನ್ಯಾಯ ಅಲ್ವ್ರಾ???[ಬಾಹುಬಲಿ ವಿಮರ್ಶೆ : ಓಕೆ, ಆದರೆ ಅಂಥ ನಿರೀಕ್ಷೆ ಬೇಡ]

    After watching Baahubali , what happened?

    ಇವರು ಟಿಕೇಟ್ ಕೊಡಬೇಕಿದ್ರೇ ಹೇಳ್ಬೇಕು, ನೋಡು ತಮ್ಮಾ ಒಳಗೆ ಅರ್ಧ ಸಿನಿಮಾ ಮಾತ್ರ ತೋರಿಸ್ತಿವಿ, ಇನ್ನರ್ಧ ಮುಂದಿನ ವರ್ಸಾ ಅಂತ. ಬೇಕಾದವರು ಒಳಗೆ ಹೋತಾರೆ, ಬ್ಯಾಡಾ ಅಂದವರು ಮನಿಗೆ ಹೋತಾರೆ... ಇದು ಆಗಕ್ಕಿಲ್ಲ ಅಂದ್ರೆ ಬ್ಯಾನರ್ ನಾಗೆ ಹಾಕ್ಬೇಕು, ಬಾಹುಬಲಿ ಮೊದಲನೇ ಭಾಗ. ಇನ್ನರ್ಧ ಮುಂದಿನ ವರ್ಷ ಅಂತೆ, ಜನರಿಗೆ ಯ್ಯಾಕೆ ಕಿವಿ ಮೇಲೆ ಹೂ ಇಡಾ ಕೆಲಸಾ ಮಾಡ್ಬೇಕು?

    ಇದನ್ನಾ ಕೇಳಿದ್ದಕ್ಕೆ ನಾವು ಪೋಸ್ಟರ್ ನಲ್ಲೇ ಇದು ಆರಂಭ(ದಿ ಬಿಗಿನಿಂಗ್) ಅಂಥ ಹಾಕಿದ್ದೇವೆ ಅಂಥ ಥಿಯೆಟ್ರಿನವರು ನನ್ನತ್ತರ ವಾದ ಮಾಡದ್ರು. ಅಲ್ಲಾ, ನನಗೆ ಏನು ಗೊತ್ತಾಗ್ಬೇಕು, ಅದೇನೋ ಟ್ಯಾಗ್ ಲೈನ್ ಅಂದುಕಂಡ್ವಿ, ಹಿಂದೆ ಮುಂಗಾರು ಮಳೆ ಬಂದಾಗ ಕೆಳಗೆ ಹನಿ ಹನಿ ಪ್ರೇಮ್ ಕಹಾನಿ ಅಂಥ ಬರಕ್ಕಂಡು ಪೂರ್ಣ ಸಿನಿಮಾ ತೋರಿಸಿದ್ರಲ್ಲಾ, ಇದು ಅಂಗೆಯಾ ಅಂದ್ಕಂಡ್ವಪ್ಪಾ.

    ಮೇಲಿಂದು ಮಾತ್ರ ತೋರ್ಸಿದ್ರು, ಕೆಳಗಿಂದು ತೋರಿಸಿದ್ರು, ಉಳಿದಿದ್ರ ಕತೆ? ಅದಿರ್ಲಿ ಬಾಹುಬಲಿ ಸಿನಿಮಾದಲ್ಲಿ ಸಾಯ್ತಾನೆ, ಕೊಂದವ ಯಾಕೆ ಕೊಂದೆ ಅಂಥ ಹೇಳಾಕಿಲ್ಲ, ಜನರಿಗೂ ಅದನ್ನ ತೋರಿಸಿಲ್ಲ. ಇವ ಯಾಕೆ ಸಾಯ್ತಾನೆ ಅನ್ನದನ್ನ ನೋಡೋಕೆ ಮುಂದಿನ ವರ್ಷದ ತನ್ಕಾ ನಾವ್ ಕಾಯ್ಬೇಕಂತೆ! ಇದು ಯಾವ ನ್ಯಾಯ ಶಿವಾ..

    ಕನ್ನಡದ್ದು ಒಂದು ಒಳ್ಳೆ ಸಿನಿಮಾ ಬಂದೈತೆ ಅದೇನೋ ರಂಗಿತರಂಗ ಅಂತೆ, ಸಾಯಿಕುಮಾರ್ ಬ್ಯಾರೆ ಮಾಡವ್ರಂತೆ, ಅದನ್ನಾ ನೋಬ್ಬೇಕು ಅಂದ್ಕಂಡಿದ್ದೆ, ನಾಳೆ ನೋಡನ ಅಂಥ ಇರಬೇಕಿದ್ರೆ ಥಿಯೇಟ್ರಿಂದಾನೇ ಕಿತ್ತಾಗ್ಬುಟ್ರು. ಅಲ್ಲಿಗೆ ಬಂದಿದ್ದು ಬಾಹುಬಲಿ. ಅಂತೂ ನುಗ್ಗಾಟ ಮಾಡಿ ಒಂದು ಟಿಕೀಟ್ ಪಡ್ಕಂಡು ಸಿನಿಮಾಕ್ಕೆ ಹೋದ್ರೆ ಅರ್ಧ ತೋರಿಸಿ ಮುಂದಿನ ವರ್ಸಾ ಬನ್ನಿ ಅಂಥಾರಲ್ಲ.[ಚಿತ್ರ ವಿಮರ್ಶೆ : 'ರಂಗಿತರಂಗ' ಬಲು ರೋಚಕ]

    ಮುಂದಿನ ವರ್ಸಾ ಪಾರ್ಟ್ 2 ಬಿಡ್ತಾರಂತೆ, ಆವಾಗ್ಲೂ ಪೂರ್ಣ ದುಡ್ಡೇ ಕೋಡಬೇಕಾ, ಈವಾಗ ಕೊಟ್ಟಿದ್ರಲ್ಲೇ ತೋರಿಸ್ತಾರಾ? ಅಲ್ಲಿವರೆಗೆ ಏನೇನಾಗಿರ್ತದೋ? ನಾ ಥಿಯೇಟರಿಗೆ ಹೋಗಿ ದುಡ್ಡು ಕೇಳವನೆಯಾ? ಎಂದು ಕೂಗಾಡುತ್ತಲೇ ಇದ್ದ.

    ಕೊನೆ ಶೋ ಮುಗಿಸಿ ಮನೆಗೆ ಬಂದಿದ್ದ ಆತನ ದೇಹದೊಳಗೆ ಇದ್ದ 'ಪರಮಾತ್ಮ' ಇಷ್ಟೆಲ್ಲಾ ಮಾತಾಡಿಸಿದ್ದ. ಆದ್ರೂ ಏನೇ ಹೇಳಿ ನಾಗರಾಜನ ವಾದದಲ್ಲೂ ಒಂಥರಾ ಅರ್ಥ ಇದೆ ಅಲ್ವೇ?

    English summary
    Multilingual movie Baahubali is appreciated by movie lovers all over the world. Though it has made huge profit, why are theatre owners are taking full money for half movie? A staunch movie lover who has seen Baahubali - the beginning is asking. A satire by a Kannadiga.
    Thursday, July 16, 2015, 18:57
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X