»   » ಐಶ್ವರ್ಯಾ ರೈ ಹಾಟ್ ಚುಂಬನ ಫೋಟೋ ಲೀಕ್

ಐಶ್ವರ್ಯಾ ರೈ ಹಾಟ್ ಚುಂಬನ ಫೋಟೋ ಲೀಕ್

By: ರವಿಕಿಶೋರ್
Subscribe to Filmibeat Kannada

ಇದು ಮತ್ತೊಂದು ಬಾಲಿವುಡ್ ಚುಂಬನ ಸುದ್ದಿ. ಈ ಹಿಂದೊಮ್ಮೆ ಸಾರ್ವಜನಿಕ ಸಭೆಯೊಂದರಲ್ಲಿ ಬಾಲಿವುಡ್ ನಟಿ ಶಿಲ್ಪಾಶೆಟ್ಟಿಯನ್ನು ಬರಸೆಳೆದು ಹಾಲಿವುಡ್ ನಟ ರಿಚರ್ಡ್ ಗೇರ್ ಟಾಪ್ ಗೇರ್ ನಲ್ಲಿ ಚುಂಬಿಸಿದ್ದ. ಈಗ ಒಂದು ಮಗುವಿನ ತಾಯಿಯೂ ಆಗಿರುವ ಐಶ್ವರ್ಯಾ ರೈ ಅವರಿಗೂ ಅದೇ ರೀತಿಯ ಪ್ರಸಂಗ ಎದುರಾಗಿದೆ.

ಎಷ್ಟೋ ಮಂದಿ ಅಭಿಮಾನಿಗಳು ಜೀವನದಲ್ಲಿ ಒಮ್ಮೆಯಾದರೂ ಐಶ್ವರ್ಯಾ ರೈ ಅವರನ್ನು ಚುಂಬಿಸಬೇಕು ಎಂದು ಕನಸು ಕಾಣುತ್ತಿರುತ್ತಾರೆ. ಅವರ ಕನಸು ಫೋಟೋಗಳಿಗೆ ಚುಂಬಿಸುವ ಮೂಲಕವಷ್ಟೇ ನನಸಾಗಲಷ್ಟೇ ಸಾಧ್ಯ! ಈಗ ಐಶ್ವರ್ಯಾ ರೈ ಅವರನ್ನು ಚುಂಬಿಸಿರುವ ಫೋಟೋ ಒಂದು ಸಾಮಾಜಿಕ ಸಂಪರ್ಕ ತಾಣಗಳಲ್ಲಿ ಭಾರಿ ಗುಲ್ಲೆಬ್ಬಿಸುತ್ತಿದೆ.


ಈತ ಬೇರಾರು ಅಲ್ಲ ಹಾಲಿವುಡ್ ನಿರ್ದೇಶಕ ಜಿಮ್ ಸಂಜೀರೋ. ಐಶ್ವರ್ಯಾ ರೈ ರಾಯಭಾರಿ ಆಗಿರುವ L'Oreal ಬ್ರ್ಯಾಂಡ್ ಜಾಹೀರಾತಿನ ನಿರ್ದೇಶಕ. ಈ ಜಾಹೀರಾತು ಸಂದರ್ಭದಲ್ಲಿ ಐಶ್ವರ್ಯಾ ರೈ ಅವರನ್ನು ಜಿಮ್ ಚುಂಬಿಸಿದ್ದಾನೆ. ಈ ಫೋಟೋವನ್ನು ಸ್ವತಃ ಐಶ್ವರ್ಯಾ ರೈ ತಮ್ಮ ಮೈಕ್ರೋ ಬ್ಲಾಗಿಂಗ್ ಸೈಟ್ ಮೂಲಕ ಬಿಡುಗಡೆ ಮಾಡಿದ್ದಾರೆ.

ಈ ಫೋಟೋ ನೋಡಿದ ಆಕೆಯ ಅಭಿಮಾನಿಗಳು ವಿಲಿವಿಲಿ ಎಂದು ಒದ್ದಾಡುವಂತಾಗಿದೆ. ಸದ್ಯಕ್ಕೆ ಐಶ್ವರ್ಯಾ ರೈ ಅವರ ಮುಂದಿನ ಬಾಲಿವುಡ್ ಚಿತ್ರ ಯಾವುದು ಎಂಬ ಬಗ್ಗೆ ನಿಖರವಾದ ಮಾಹಿತಿ ಇಲ್ಲ. ಸಂಜಯ್ ಲೀಲಾ ಭನ್ಸಾಲಿ ಅವರ 'ರಾಮ್ ಲೀಲಾ' ಚಿತ್ರದಲ್ಲಿ ಐಟಂ ಸಾಂಗ್ ಮೂಲಕ ಎರಡನೇ ಇನ್ನಿಂಗ್ಸ್ ಆರಂಭಿಸುತ್ತಿದ್ದಾರೆ ಎಂಬ ಮಾಹಿತಿ ಮಾತ್ರ ಬಾಲಿವುಡ್ ವಲಯದಲ್ಲಿ ಭಾರಿ ಸದ್ದು ಮಾಡುತ್ತಿದೆ.

ಈ ಸಂಬಂಧ ಸಂಜಯ್ ಲೀಲಾ ಭನ್ಸಾಲಿ ಅವರು ಮಾತನಾಡುತ್ತಾ, ತಮ್ಮ ಚಿತ್ರದಲ್ಲಿ ಐಶ್ವರ್ಯಾ ರೈ ಅವರು ಯಾವುದೇ ಪಾತ್ರ, ಐಟಂ ಹಾಡು ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೂ ಐಶೂ ಅಭಿಮಾನಿಗಳು ಮಾತ್ರ ನಂಬುತ್ತಿಲ್ಲ.

English summary
The Bollywood star posted a cute Facebook pic on Tuesday which showed her getting kissed on the cheek by director Jim Sonzero while on set for her new L’Oreal commercial. There are a few million people who would love a chance to kiss Aishwarya Rai .. and one lucky guy made a lot of Ash fans jealous by doing it. 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada