ಅತ್ತೆ ಜಯಾ ಬಚ್ಚನ್ ಜೊತೆಗೆ ಐಶ್ವರ್ಯಾ ರೈ ಸಂಬಂಧ ಹಳಸಿದೆಯೇ?: ಅದಕ್ಕೆ ಸಾಕ್ಷಿ ಈ ಫೋಟೋ!?
ಸೂಪರ್‌ಸ್ಟಾರ್ ಅಮಿತಾಬ್ ಬಚ್ಚನ್ ಅವರು ಅಕ್ಟೋಬರ್ 11 ರ ಬುಧವಾರ ತಮ್ಮ 81 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಇಡೀ ಚಿತ್ರರಂಗ ಸೇರಿದಂತೆ ಕುಟುಂಬಸ್ಥರು ಶುಭಾಶಯಗಳನ್ನು ಹಂಚಿಕೊಂಡಿದ್ದಾರೆ. ಮನೆಯಲ್ಲೂ ಹಬ್ಬದ ಸಂಭ್ರಮವಿತ್ತು. ಮಕ್ಕಳು, ಮೊಮ್ಮಕ್ಕಳು, ಸೊಸೆ ಅಮಿತಾಬ್‌ಗೆ ಶುಭ ಹಾರೈಸಿದ್ದಾರೆ.
ಇವೆಲ್ಲದರ ನಡುವೆ ಸಾಮಾಜಿಕ ಜಾಲತಾಣದಲ್ಲಿ ಒಮದು ವಿಷಯ ವೈರಲ್ ಆಗಿದೆ. ಅದು ನಟಿ ಐಶ್ವರ್ಯಾ ರೈ ಅವರು ತಮ್ಮ ಮಾವ ಅಮಿತಾಭ್ ಬಚ್ಚನ್ ಅವರ ಹುಟ್ಟುಹಬ್ಬದ ನಂತರ ಒಂದು ದಿನದ ನಂತರ ತಮ್ಮ ಮಗಳು ಆರಾಧ್ಯ ಬಚ್ಚನ್ ಅವರೊಂದಿಗಿನ ಫೋಟೋ ಹಂಚಿಕೊಂಡಿರುವುದು. ಹಾಗಾದರೇ ಈ ಫೋಟೋ ಚರ್ಚೆಗೆ ಕಾರಣವಾಗಿದ್ದು ಏಕೆ ಅಂತಿರಾ ಮುಂದೆ ಓದಿ.

ಕ್ರಾಪ್ ಮಾಡೊದ ಚಿತ್ರ ಹಂಚಿಕೊಂಡ ಐಶು!
ಬುಧವಾರ, ಅಮಿತಾಬ್ ಬಚ್ಚನ್ ಅವರ ಮೊಮ್ಮಗಳು ನವ್ಯಾ ನವೇಲಿ ನಂದಾ ಅವರು ತಮ್ಮ ಸಹೋದರ ಅಗಸ್ತ್ಯ ನಂದಾ ಮತ್ತು ಅಜ್ಜಿ ಜಯಾ ಬಚ್ಚನ್ ಮತ್ತು ಆರಾಧ್ಯ ಬಚ್ಚನ್ ಇರುವ ಚಿತ್ರವನ್ನು ಪೋಸ್ಟ್ ಮಾಡಿ, ಅಜ್ಜನಿಗೆ ಬರ್ತ್‌ಡೇ ವಿಶ್ ಮಾಡಿದ್ದರು. ಇದೇ ಫೋಟೋವನ್ನು ನಟಿ ಐಶ್ವರ್ಯಾ ರೈ ಕ್ರಾಪ್ ಮಾಡಿ ಹಂಚಿಕೊಂಡಿದ್ದಾರೆ.
ಗುರುವಾರ ಇನ್‌ಸ್ಟಾಗ್ರಾಮ್‌ನಲ್ಲಿ ಐಶ್ವರ್ಯಾ ರೈ ಅವರು ಅಮಿತಾಬ್ ಬಚ್ಚನ್ ಮತ್ತು ಆರಾಧ್ಯ ಅವರು ಮಾತ್ರ ಕಾಣುವಂತೆ ಫೋಟೋವನ್ನು ಕ್ರಾಪ್ ಮಾಡಿದ ಕ್ಲೋಸ್‌ಅಪ್ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಫೋಟೋದಲ್ಲಿ ಆರಾಧ್ಯ ಬಚ್ಚನ್ ತನ್ನ ಅಜ್ಜ ಅಮಿತಾಭ್ ಅವರನ್ನು ತಬ್ಬಿಕೊಂಡಿದ್ದಾರೆ.

ಒರಿಜಿನಲ್ ಫೋಟೋದಲ್ಲಿ ನವ್ಯಾ ನವೇಲಿ ನಂದಾ, ಜಯಾ ಬಚ್ಚನ್, ಆರಾಧ್ಯ ಬಚ್ಚನ್ ಮತ್ತು ಅಗಸ್ತ್ಯ ನಂದಾ ಕೂಡ ಇದ್ದರು. ಆದರೆ, ಅವರನ್ನೆಲ್ಲಾ ಐಶ್ವರ್ಯಾ ಕ್ರಾಪ್ ಮಾಡಿಬಿಟ್ಟಿದ್ದಾರೆ. ಜಯಾ ಬಚ್ಚನ್, ನವ್ಯಾ ನಂದಾ ಮತ್ತು ಅಗಸ್ತ್ಯ ನಂದಾ ಮೂವರನ್ನು ಫೋಟೋದಿಂದ ಹೊರಗಿಟ್ಟಿರುವುದು ಮತ್ತೆ ಅತ್ತೆ - ಸೊಸೆಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ಎತ್ತಿ ತೋರಿಸುತ್ತಿದೆ.
ಐಶ್ವರ್ಯಾ ರೈ ಫೋಟೋಗೆ ನೆಟ್ಟಿಜನ್‌ಗಳ ಪ್ರತಿಕ್ರಿಯೆ
ಫೋಟೋ ವೈರಲ್ ಆಗುತ್ತಿದ್ದಂತೆ ನೆಟ್ಟಿಜನ್‌ಗಳು ಪ್ರತಿಕ್ರಿಯೆ ನೀಡಿದ್ದಾರೆ. ನವ್ಯಾ ನವೇಲಿ ನಂದಾ ಮತ್ತು ಅವರ ತಾಯಿ ಶ್ವೇತಾ ತಮ್ಮ ಪ್ಯಾರಿಸ್ ಫ್ಯಾಶನ್ ವೀಕ್ ಪೋಸ್ಟ್‌ನಲ್ಲಿ ನಟಿಯನ್ನು ಟ್ಯಾಗ್ ಮಾಡದೇ ಇದಿದ್ದಕ್ಕೆ ಐಶ್ವರ್ಯಾ ಅವರ ಸ್ಪಷ್ಟ ಪ್ರತಿಕ್ರಿಯೆ ಇದು ಎಂದು ಕೆಲವರು ಹೇಳಿದ್ದಾರೆ. ಆದರೆ, ಮತ್ತೆ ಕೆಲವರು ಅತ್ತೆ- ಸೊಸೆ ನಡುವೆ ಮತ್ತೆ ಮನಸ್ತಾಪ ಬಂದಿದೆ ಎಂದು ಹೇಳುತ್ತಿದ್ದಾರೆ.
ಈ ಹಿಂದೆಯೂ ಸೊಸೆ ಮತ್ತು ಅತ್ತೆ ನಡುವಿನ ಮನಸ್ತಾಪದ ವದಂತಿಗಳು ಬೆಳಕಿಗೆ ಬಂದಿದ್ದವು. ರಣಬೀರ್ ಕಪೂರ್ ಜೊತೆಗಿನ ಯೇ ದಿಲ್ ಹೈ ಮುಷ್ಕಿಲ್ ಸಿನಿಮಾ ವೇಳೆ ಇದು ಬೆಳಕಿಗೆ ಬಂದಿತ್ತು. ಸಿನಿಮಾದಲ್ಲಿನ ಐಶ್ವರ್ಯಾ ಪಾತ್ರದ ಬಗ್ಗೆ ಹೆಚ್ಚು ಚರ್ಚೆ ಮಾಡಲಾಗಿತ್ತು. ಬಳಿಕ ಇದು ಹೆಚ್ಚಾಗುತ್ತಲೆ ಹೋಗಿದೆ ಎನ್ನುವ ಊಹಾಪೋಹಗಳು ಹರಿದಾಡುತ್ತಿವೆ.
ಅಮಿತಾಬ್ ಅವರ ಪುತ್ರ ಅಭಿಷೇಕ್ ಬಚ್ಚನ್ ಕೂಡ ತಮ್ಮ ತಂದೆಗೆ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಅಭಿಷೇಕ್ ತನ್ನ ತಂದೆಯೊಂದಿಗಿನ ಚಿತ್ರವನ್ನು ಹಂಚಿಕೊಂಡಿದ್ದಾರೆ.
ಅಮಿತಾಬ್ ಬಚ್ಚನ್ ಸಿನಿಮಾಗಳು
ಅಮಿತಾಭ್ 1969 ರಲ್ಲಿ ಸಾತ್ ಹಿಂದೂಸ್ತಾನಿ ಸಿನಿಮಾದೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು. ನಂತರ ಅವರು ಹೃಷಿಕೇಶ್ ಮುಖರ್ಜಿಯವರ ಆನಂದ್ (1971) ನಲ್ಲಿ ಡಾ ಭಾಸ್ಕರ್ ಬ್ಯಾನರ್ಜಿಯಾಗಿ ಕಾಣಿಸಿಕೊಂಡಿದ್ದರು. ಇದಕ್ಕಾಗಿ ಅವರು ಅತ್ಯುತ್ತಮ ಪೋಷಕ ನಟನಿಗಾಗಿ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಗೆದ್ದರು. ಪ್ರಕಾಶ್ ಮೆಹ್ರಾ ಅವರ ಜಂಜೀರ್ (1973) ಅವರನ್ನು ಸ್ಟಾರ್ ಮಾಡಿತು.


Click it and Unblock the Notifications