ಚಿರಂಜೀವಿ ಜೋಡಿಯಾಗಿ ಐಶ್ವರ್ಯಾ ರೈ? ಕನ್ನಡ ಚಿತ್ರ ನಿರ್ಮಾಣ ಸಂಸ್ಥೆ ಬಂಡವಾಳ

ಬಾಲಿವುಡ್ ಬ್ಯೂಟಿ ಐಶ್ವರ್ಯ ರೈ ಇತ್ತೀಚೆಗೆ ಸಿನಿಮಾಗಳಲ್ಲಿ ನಟಿಸುವುದು ಕಮ್ಮಿ ಆಗಿದೆ. 'ಪೊನ್ನಿಯಿನ್ ಸೆಲ್ವನ್' ಸರಣಿ ಸಿನಿಮಾಗಳ ಬಳಿಕ ಯಾವುದೇ ಹೊಸ ಸಿನಿಮಾ ಒಪ್ಪಿಕೊಂಡಿಲ್ಲ. ಆದರೆ ಇದೀಗ ತೆಲುಗು ಚಿತ್ರದಲ್ಲಿ ಐಶ್ ನಟಿಸೋ ಬಗ್ಗೆ ಗುಸುಗುಸು ಶುರುವಾಗಿದೆ. ಮೆಗಾಸ್ಟಾರ್ ಚಿರಂಜೀವಿ ಜೋಡಿಯಾಗಿ ಮಾಜಿ ವಿಶ್ವ ಸುಂದರಿ ನಟಿಸುತ್ತಾರೆ ಎನ್ನಲಾಗ್ತಿದೆ.

ಚಿರಂಜೀವಿ ನಟನೆಯ 'ಮನ ಶಂಕರವರಪ್ರಸಾದ್ ಗಾರು' ಸಿನಿಮಾ ಮುಂದಿನ ವಾರ ತೆರೆಗೆ ಬರಲಿದೆ. ಸಂಕ್ರಾಂತಿ ಸಂಭ್ರಮದಲ್ಲಿ ಸಿನಿಮಾ ಬಿಡುಗಡೆ ಆಗ್ತಿದೆ. ಆ ಬಳಿಕ ಚಿರು ನಟನೆಯ 'ವಿಶ್ವಂಭರ' ಸಿನಿಮಾ ಪ್ರೇಕ್ಷಕರ ಮುಂದೆ ಬರಬೇಕಿದೆ. ಇನ್ನು ತಮ್ಮ 158ನೇ ಚಿತ್ರವನ್ನು ಚಿರಂಜೀವಿ ಘೋಷಿಸಿದ್ದಾರೆ. ಇದೇ ಚಿತ್ರದಲ್ಲಿ ಐಶ್ವರ್ಯ ರೈ ನಟಿಸುತ್ತಾರೆ ಎನ್ನುವ ಚರ್ಚೆ ಶುರುವಾಗಿದೆ. ಅದೇ ನಿಜವಾದರೆ ಅಭಿಮಾನಿಗಳಿಗೆ ಹಬ್ಬವೇ ಸರಿ.

Aishwarya Rai to Romance Chiranjeevi in Mega 158 Buzz Grows Around Big Telugu Comeback

ಮದುವೆ ಬಳಿಕ ಐಶ್ವರ್ಯ ರೈ ಸಿನಿಮಾಗಳಲ್ಲಿ ನಟಿಸುವುದು ಕಮ್ಮಿ ಮಾಡಿದ್ದರು. ಮಗಳ ಲಾಲನೆ ಪಾಲನೆಯಲ್ಲಿ ಹೆಚ್ಚಿನ ಸಮಯ ಕಳೆದರು. ಆಗೊಮ್ಮೆ ಈಗೊಮ್ಮೆ ಬಣ್ಣ ಹಚ್ಚಿ ನಟಿಸಿದ್ದು ಇದೆ. ಕೆಲ ಫ್ಯಾಷನ್ ಶೋಗಳಲ್ಲಿ ಹೆಜ್ಜೆ ಹಾಕಿದ್ದರು. ಇನ್ನುಳಿದಂತೆ ಸಿನಿಮಾಗಳಲ್ಲಿ ಹೆಚ್ಚಿನ ಆಸಕ್ತಿ ತೋರಿಸುತ್ತಿಲ್ಲ. ಮಣಿರತ್ನಂ ನಿರ್ದೇಶನದ 'ಪೊನ್ನಿಯಿನ್ ಸೆಲ್ವನ್' ಚಿತ್ರದ ಒಳ್ಳೆ ಪಾತ್ರಕ್ಕೆ ಬಣ್ಣ ಹಚ್ಚಿದ್ದರು. ಬಳಿಕ 3 ವರ್ಷಗಳಲ್ಲಿ ಯಾವುದೇ ಸಿನಿಮಾ ಒಪ್ಪಿಕೊಳ್ಳಲಿಲ್ಲ.

ಮೆಗಾ 158 ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ನಿರ್ಮಾಣ ಮಾಡುತ್ತಿದೆ. ಬಾಬಿ ಕೊಲ್ಲಿ ಆಕ್ಷನ್ ಕಟ್ ಹೇಳಲಿದ್ದಾರೆ. ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣವಾಗಲಿದ್ದು ಎ. ಆರ್ ರಹಮಾನ್ ಸಂಗೀತ ಸಂಯೋಜನೆ ಮಾಡುವ ಸಾಧ್ಯತೆಯಿದೆ. ಮೋಹನ್ ಲಾಲ್ ಕೂಡ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚುತ್ತಾರೆ ಎನ್ನುವ ಊಹಾಪೋಹ ಶುರುವಾಗಿದೆ. ಐಶ್ವರ್ಯ ರೈ ನಾಯಕಿಯಾಗಿ ನಟಿಸುತ್ತಾರಾ? ಅಥವಾ ಅತಿಥಿ ಪಾತ್ರದಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಾರಾ? ಕಾದು ನೋಡಬೇಕಿದೆ.

Aishwarya Rai to Romance Chiranjeevi in Mega 158 Buzz Grows Around Big Telugu Comeback

ಚಿರು ಹಾಗೂ ಐಶ್ ಒಟ್ಟಿಗೆ ನಟಿಸೋ ಸುದ್ದಿ ಇಂದು ನಿನ್ನೆಯದಲ್ಲ. ಈ ಹಿಂದೆ ಕೂಡ ಸಾಕಷ್ಟು ಬಾರಿ ಈ ಬಗ್ಗೆ ಗುಸುಗುಸು ಕೇಳಿಬಂದಿತ್ತು. 'ಆಚಾರ್ಯ' ಚಿತ್ರದಲ್ಲಿ ಚಿರು ಜೊತೆ ಐಶ್ ನಟಿಸುತ್ತಾರೆ ಎಂದು ಗುಲ್ಲಾಗಿತ್ತು. ಆ ಸುದ್ದಿ ನಿಜವಾಗಲಿಲ್ಲ. ಬಳಿಕ 'ವಿಶ್ವಂಭರ' ಚಿತ್ರಕ್ಕೆ ಐಶ್ವರ್ಯ ನಾಯಕಿ ಎನ್ನಲಾಗಿತ್ತು. ಅದು ಸುದ್ದಿ ಕೂಡ ಸುಳ್ಳಾಗಿತ್ತು. ಇದೀಗ ಮೆಗಾ 158 ಚಿತ್ರಕ್ಕೆ ಐಶ್ ನಾಯಕಿ ಎನ್ನುವ ಚರ್ಚೆ ಶುರುವಾಗಿದೆ.

ಅಮಿತಾಬ್ ಕುಟುಂಬದ ಜೊತೆ ಚಿರಂಜೀವಿಗೆ ಆತ್ಮೀಯ ಒಡನಾಟವಿದೆ. ಒಂದೊಳ್ಳೆ ಕಥೆ, ಐಶ್ವರ್ಯಾ ರೈಗೆ ಒಪ್ಪುವಂತಹ ಪಾತ್ರ ಇದ್ದರೆ ಆಕೆ ನಟಿಸೋಕೆ ಆಸಕ್ತಿ ತೋರಿಸಬಹುದು. ಆಕೆಯನ್ನು ಮೆಚ್ಚಿಸುವಂತಹ ಪಾತ್ರವನ್ನು ನಿರ್ದೇಶಕ ಬಾಬಿ ಸಿದ್ಧಪಡಿಸಿದ್ದಾರಾ ಎನ್ನುವುದು ಇಲ್ಲಿ ಮುಖ್ಯವಾಗುತ್ತದೆ. ಚಿರು ಜೋಡಿಯಾಗಿ ಐಶ್ವರ್ಯಾ ರೈ ನಟಿಸಿದರೆ ಸಿನಿಮಾ ಬಗ್ಗೆ ಕ್ರೇಜ್ ಹೆಚ್ಚುವುದರಲ್ಲಿ ಅನುಮಾನವಿಲ್ಲ.

ಇತ್ತೀಚೆಗೆ ನಟ ಚಿರಂಜೀವಿ ಮೊಣಕಾಲು ಶಸ್ತ್ರಚಿಕಿತ್ಸೆ ನಡೆದಿದೆ ಎನ್ನಲಾಗ್ತಿದೆ. ಆದರೂ 'ಮನ ಶಂಕರವರಪ್ರಸಾದ್ ಗಾರು' ಚಿತ್ರದ ಪೋಸ್ಟ್ ಪ್ರೊಡಕ್ಷನ್ ಹಾಗೂ ಪ್ರಮೋಷನ್ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಬಗ್ಗೆ ಚಿರು ಮಗಳು ಸುಶ್ಮಿತಾ ಪ್ರತಿಕ್ರಿಯಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಮೌನ ಮುರಿದಿದ್ದಾರೆ. "ಈ ಪ್ರಶ್ನೆಗೆ ಹೇಗೆ ಉತ್ತರಿಸಬೇಕೊ ಗೊತ್ತಿಲ್ಲ.. ಸದ್ಯಕ್ಕೆ ಏನು ಕಾಮೆಂಟ್ ಮಾಡಲು ಬಯಸುವುದಿಲ್ಲ" ಎಂದು ಸುಶ್ಮಿತಾ ಹೇಳಿದ್ದಾರೆ.

ಸರ್ಜರಿ ಕಾರಣದಿಂದಲೇ ಚಿರಂಜೀವಿ ಚಿತ್ರದ ಪ್ರಚಾರದಿಂದ ದೂರ ಉಳಿದಿದ್ದಾರೆ ಎನ್ನುವ ಪ್ರಶ್ನೆಗೆ ಸುಶ್ಮಿತಾ ಸ್ಪಷ್ಟನೆ ನೀಡಿದ್ದಾರೆ. ಅಪ್ಪ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ವಿಡಿಯೋ ಕಾಲ್ ಮೂಲಕ ವಿದೇಶಗಳಲ್ಲಿ ಇರುವ ಅಭಿಮಾನಿಗಳ ಜೊತೆ ಮಾತನಾಡಿದ್ದಾರೆ. ಶೀಘ್ರದಲ್ಲೇ ಚಿತ್ರದ ಪ್ರೀ ರಿಲೀಸ್ ಈವೆಂಟ್‌ನಲ್ಲಿ ಭಾಗಿ ಆಗುತ್ತಾರೆ ಎಂದು ಮಾಹಿತಿ ನೀಡಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X