»   » 'ಅಶ್ವತ್ಥ ' ವೃಕ್ಷದ ಕೆಳಗೆ...

'ಅಶ್ವತ್ಥ ' ವೃಕ್ಷದ ಕೆಳಗೆ...

Subscribe to Filmibeat Kannada

ಬೆಂಗಳೂರು : ಅಮೆರಿಕಾದಲ್ಲೊಂದು ಅಸೋಸಿಯೋಷನ್‌ ಆಫ್‌ ಕನ್ನಡ ಕೂಟಾಸ್‌ ಆಫ್‌ ಅಮೆರಿಕಾ (AKKA) ಎಂಬ ಸಂಸ್ಥೆ ಇದೆ ಎಂಬುದು ಕರ್ನಾಟಕದಲ್ಲಿ ಅನೇಕರಿಗೆ ತಿಳಿದಿರಲಿಲ್ಲ . ಆದರೆ, ಇವತ್ತು ರಾಜ್ಯದಲ್ಲಿ ಈ ಹೆಸರು ಜನಜನಿತ. ಇದ್ದಕ್ಕಿದ್ದಂತೆ ಈ ಅಕ್ಕನ ಹೆಸರು ಕರ್ನಾಟಕದ ಮಾಧ್ಯಮಗಳಲ್ಲಿ ಸುದ್ದಿಮಾಡಿದ್ದಕ್ಕೆ ಕಾರಣಗಳೇನು ಎನ್ನುವುದೂ ನಿಮಗೆ ಗೊತ್ತಿರಬಹುದು. ಇಡೀ ಪ್ರಕರಣದ ಒಳಹೊಕ್ಕು ನೋಡುವ ಮುನ್ನ ಎರಡು ಮಾತು.

ಕರ್ನಾಟಕದ ಮನೆಯನ್ನು ತೊರೆದು ಮಾರುದ್ದ ಹೋದ ನಮ್ಮ ಅಣ್ಣತಮ್ಮಂದಿರು , ಅಕ್ಕತಂಗಿಯರು ಅಮೆರಿಕದ ನಾನಾ ಪ್ರಾಂತ್ಯಗಳಲ್ಲಿ ಕನ್ನಡ ಕೂಟಗಳನ್ನು ಕಟ್ಟಿಕೊಂಡಿದ್ದಾರೆ. ಇಂಥ ಎಲ್ಲ ಕೂಟಗಳ ಮಾತೃ ಸಂಸ್ಥೆ AKKA. ನಮ್ಮವರು, ಅವರು ರಾಜ್ಯದ ಯಾವುದೇ ಜಿಲ್ಲೆಗೆ ಸೇರಿದವರಾಗಲಿ, ಅಮೆರಿಕಾಗೆ ಹೋದಮೇಲೆ ನಾವೆಲ್ಲ ಒಂದು ಎನ್ನುವ ಭಾವನೆಯನ್ನು ಮತ್ತೆ ಮೂಡಿಸಿಕೊಳ್ಳಲು ಕಟ್ಟಿಕೊಂಡ ಗೂಡು AKKA. ಈ ಸಂಸ್ಥೆಯ ಕೇಂದ್ರ ಕಚೇರಿ ವಾಷಿಂಗ್‌ಟನ್‌ ನಗರದಲ್ಲಿದೆ. ಹ್ಯೂಸ್ಟನ್‌ ನಗರದಲ್ಲಿ ಸೆಪ್ಟೆಂಬರ್‌ನಲ್ಲಿ ನಡೆದ ಸಹಸ್ರಮಾನ ವಿಶ್ವಕನ್ನಡ ಸಮ್ಮೇಳನವನ್ನು ವ್ಯವಸ್ಥೆ ಮಾಡಿದ್ದು ಈ ಸಂಸ್ಥೆಯೇ.

ತುಂಬ ಅಚ್ಚುಕಟ್ಟಾಗಿ, ಅರ್ಥಪೂರ್ಣವಾಗಿ ನಡೆದ ಈ ಕನ್ನಡ ಸಮ್ಮೇಳನಕ್ಕೆ ಕರ್ನಾಟಕದಿಂದ ಅನೇಕರು ಪ್ರತಿನಿಧಿಗಳಾಗಿ, ಆಹ್ವಾನಿತರಾಗಿ ಅಮೆರಿಕಾಗೆ ಹೋಗಿಬಂದರು. ಜ್ಞಾನಪೀಠ ಪ್ರಶಸ್ತಿ ವಿಜೇತ ಯು. ಆರ್‌. ಅನಂತಮೂರ್ತಿ ಸಮ್ಮೇಳನವನ್ನು ಉದ್ಘಾಟಿಸಿದ್ದರು. ಆ ಸಮ್ಮೇಳನದ ವರದಿಗಳನ್ನು ಕನ್ನಡ. ಇಂಡಿಯಾಇನ್‌ಫೊ ಪ್ರಕಟಿಸಿತ್ತು. ಅಂಥದೊಂದು ಸಮ್ಮೇಳನದ ಮೂಲಕ ಕರ್ನಾಟಕದಲ್ಲಿ ಸುದ್ದಿಮಾಡದ ಅಕ್ಕ ಇವತ್ತು ಜುಜೂಬಿ 4500 ಡಾಲರ್‌ ಚೆಕ್‌ನ ನೆಪದಲ್ಲಿ ಕರ್ನಾಟಕ ಎಲ್ಲ ಜನತೆಯ ನಾಲಗೆಗೆ ಬಿದ್ದಿದೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada