»   » ಈ ಕೀರ್ತಿ ನಿಸ್ಸಂದೇಹವಾಗಿ ಗಾಯಕ - ನಿರ್ದೇಶಕ ಸಿ. ಅಶ್ವತ್ಥ್‌ ಅವರಿಗೆ ಸಲ್ಲಬೇಕು !!

ಈ ಕೀರ್ತಿ ನಿಸ್ಸಂದೇಹವಾಗಿ ಗಾಯಕ - ನಿರ್ದೇಶಕ ಸಿ. ಅಶ್ವತ್ಥ್‌ ಅವರಿಗೆ ಸಲ್ಲಬೇಕು !!

Posted By:
Subscribe to Filmibeat Kannada

ಸಲ್ಲಬೇಕು ಮಾತ್ರವಲ್ಲ , ಸಂದಿದೆ. ಅಕ್ಕ ಎನ್ನುವ ಒಂದು ಸಂಸ್ಥೆ ಅಮೆರಿಕದಲ್ಲಿದೆಯೆಂದೂ, ಅದು 4500 ಡಾಲರ್‌ ಚೆಕ್‌ ನೀಡಿ ಆಮೇಲೆ ಸ್ಟಾಪ್‌ ಪೇಮೆಂಟ್‌ ಆದೇಶ ಕೊಟ್ಟಿತು ಎಂತಲೂ ಅನೇಕರಿಗೆ ಗೊತ್ತಾದದ್ದು ಅಶ್ವಥ್‌ ಕನಲಿದ ವಾರ್ತೆ ಬಂದ ನಂತರವೇ. ಅವರು ಹೊಸ ಸಹಸ್ರಮಾನದ ವಿಶ್ವ ಕನ್ನಡ ಸಮ್ಮೇಳನ -2000ನ ಅಂಗವಾಗಿದ್ದ ಮನುಜ ಮತ - ವಿಶ್ವ ಪಥ ಯೋಜನೆಯಡಿಯಲ್ಲಿ 120 ಮಂದಿ ಗಾಯಕ - ಗಾಯಕಿಯರಿಗೆ 3 ತಿಂಗಳುಗಳ ಕಾಲ ತರಬೇತಿ ನೀಡಲು ಅಮೆರಿಕಾಗೆ ಹೋಗಿಬಂದವರು. ಬಂದ ನಂತರ ಅವರಿಗೆ ಕೊಡಮಾಡಲಾಗಿದ್ದ ಚೆಕ್‌ ಬೌನ್ಸ್‌ ಆಗಿದ್ದನ್ನು ಕೇಳುತ್ತಲೇ ಕೆಂಡಾಮಂಡಲವಾದವರು. ಈ ವಿವಾದ ವೃತ್ತ ಪತ್ರಿಕೆಗಳು ಹಾಗೂ ಇಂಟರ್‌ನೆಟ್‌ ಕನ್ನಡ ಮಾಧ್ಯಮಗಳ ವಿಶ್ವಾದ್ಯಂತ ಇರುವ ಕನ್ನಡಿಗರನ್ನು ತಲುಪಿತು. ಆಗಲೇ ಕರ್ನಾಟಕದ ಬಹು ಜನರಿಗೆ ಅಕ್ಕಾ ಎಂಬ ಸಂಸ್ಥೆ ಅಮೆರಿಕದಲ್ಲಿದೆ ಎಂದು ತಿಳಿದದ್ದು. ಏನಕೇನ ಪ್ರಕಾರೇಣ ಪ್ರಸಿದ್ಧ ಪುರುಷೋ ಭವ ಎಂಬ ಸಂಸ್ಕೃತದ ಮಾತಿನಂತೆ ಅಕ್ಕಾ ಮತ್ತು ಅಶ್ವತ್ಥ್‌ ಈಗ ಕನ್ನಡಿಗರಿಗೆಲ್ಲ ರಿಗೆ ಸುಪರಿಚಿತರಾದರು. ಒನ್ಸ್‌ ಎಗೇನ್‌ ಥ್ಯಾಂಕ್ಸ್‌ ಟು ಅಶ್ವಥ್‌. ಅಶ್ವತ್‌ ಅವರು ಚೆಕ್‌ ಬೌನ್ಸ್‌ ಪ್ರಕರಣವನ್ನು ಮಾಧ್ಯಮದ ಬಳಿಗೆ ಒಯ್ದದ್ದು ಅಕ್ಕಾ ಬಳಗಕ್ಕೆ ನುಂಗಲಾರದ ತುತ್ತಾಯಿತು. ಈ ಬಗ್ಗೆ ಸ್ಪಷ್ಟೀಕರಣವೂ ಬಂತು. ಬೆಂಗಳೂರಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಾಂದೂ ನಡೆಯಿತು. ನಾಡಿನ ಎಲ್ಲ ಪತ್ರಿಕೆಗಳಲ್ಲೂ ಅಕ್ಕಾ ಬಗ್ಗೆ ಪ್ರಚಾರವಾಯ್ತು. ಇವಿಷ್ಟೂ ಪ್ರಕರಣದ ತಿರುಳು.

ಈ ಘಟನೆಯಿಂದಾಗಿ ಸಿ. ಅಶ್ವತ್ಥ್‌ ಅಕ್ಕಾಗೆ ಪ್ರಚಾರ ನೀಡಿದರೋ ಅಥವಾ ಅಕ್ಕಾ ಹೆಸರಿಗೆ ಮಸಿಬಳಿದರೋ ಅಥವಾ ವಂಚಿಸುವ ಉದ್ದೇಶ ಯಾರಿಗೂ ಇಲ್ಲದಿದ್ದರೂ by conspiracy of circumstances ಈ ಅಹಿತಕರ ಘಟನೆ ನಡೆದುಹೋಯಿತೋ ಅಥವಾ ಎಲ್ಲವೂ ಏಕಕಾಲಕ್ಕೆ ಸಂಭವಿಸಿತೋ ?

ಅಲ್ಲಿಗೆ, ಉದಯವಾಯಿತು ನಮ್ಮ ಚೆಲುವ ಕನ್ನಡನಾಡು, ಬದುಕು ಬಲುಹಿನ ನಿಧಿಯು, ಸದಭಿಮಾನದ ಗೂಡು !!

ಮನುಜಮತ - ವಿಶ್ವಪಥ : ಈಗ ಅಕ್ಕಾ ನೀಡಿದ ಚೆಕ್‌ ವಿವಾದ ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣವಾದ ಮೇಲೆ, ತಾವು ಇನ್ನು ಈ ಜನ್ಮದಲ್ಲಿ ಮತ್ತೆಂದೂ ಅಮೆರಿಕಾಕ್ಕೆ ಹೋಗುವುದೇ ಇಲ್ಲ ಎಂದು ಸಿ. ಅಶ್ವತ್ಥ್‌ ಹೇಳಿಕೆಯನ್ನೂ ನೀಡಿದರು. ಅವರು ಅಂಥದೊಂದು ನಿರ್ಧಾರ ಕೈಗೊಂಡರೆ ಅದನ್ನು ನಾವು ತೀರ ವೈಯಕ್ತಿಕ ಪ್ರಶ್ನೆಯೆಂದು ತಳ್ಳಿಹಾಕಿಬಿಡಬಹುದು. ಆದರೆ ಉಭಯ ರಾಷ್ಟ್ರಗಳಲ್ಲಿ ನೆಲೆಸಿರುವ ಕನ್ನಡಿಗರ ಭಾವನಾತ್ಮಕ, ವ್ಯಾವಹಾರಿಕ ಬಾಂಧವ್ಯದ ಭವಿಷ್ಯವೇನು ? ಎನ್ನುವುದು ನಮ್ಮ ಪ್ರಶ್ನೆ. ಇದೊಂದು ಅಹಿತಕರ ಘಟನೆ ಎಂದು ನಾವೆಲ್ಲರೂ ಮರೆತು ಮನುಜಮತ - ವಿಶ್ವಪಥದತ್ತ ಮುಖಮಾಡಬೇಕು. ಈ ಮಧ್ಯೆ ಅಶ್ವತ್ಥ್‌ ಅವರಿಗೆ ಹಣ ಸಂದಾಯವಾಗಬೇಕು ಎನ್ನುವುದನ್ನು ನಾವು ಮರೆಯಬಾರದು - ಶಿಷುನಾಳಾಧೀಶನ ಆಣೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada