ಕನ್ನಡಿಗನಾಗಿ ತೆರೆಯ ಮೇಲೆ ಮಿಂಚಲಿದ್ದಾರೆ ನಟ ಅಕ್ಷಯ್ ಕುಮಾರ್!

ನಟ ಅಕ್ಷಯ್ ಕುಮಾರ್‌ಗೆ ಸಿನಿಮಾ ಮಾಡುವುದು ನೀರು ಕುಡಿದಷ್ಟು ಸಲೀಸು. ಈ ಸಮಯದಲ್ಲೂ ವರ್ಷಕ್ಕೆ ಹತ್ತರಿಂದ ಹನ್ನೆರಡು ಸಿನಿಮಾಗಳಿಗೆ ಸಹಿ ಮಾಡುತ್ತಾರೆ ಅಕ್ಷಯ್. ವರ್ಷಕ್ಕೆ ಕನಿಷ್ಟ ಆರೇಳು ಸಿನಿಮಾಗಳು ಬಿಡುಗಡೆ ಆಗುತ್ತವೆ.

ದೊಡ್ಡ ಸಂಖ್ಯೆಯ ಸಿನಿಮಾ ಮಾಡಿದರೂ ಸಹ ವಿಭಿನ್ನ ಕತೆ, ಸಿನಿಮಾದಿಂದ ಸಿನಿಮಾಕ್ಕೆ ಭಿನ್ನ ಪಾತ್ರ ಇರುವಂತೆ ಗಮನ ವಹಿಸುವ ಅಕ್ಷಯ್, ಸಿನಿಮಾದ ಗುಣಮಟ್ಟದ ಬಗ್ಗೆಯೂ ರಾಜಿ ಆಗುವುದಿಲ್ಲ. ಅಕ್ಷಯ್ ಕುಮಾರ್ ಸಿನಿಮಾಗಳು ಪ್ರೇಕ್ಷಕರಿಗೆ ನಿರಾಸೆ ಮಾಡುವುದು ಕಡಿಮೆ.

ಇದೀಗ 2022ರ ಆರಂಭದಲ್ಲಿದ್ದೇವೆ. ಈಗಲೇ ಅಕ್ಷಯ್‌ ಕುಮಾರ್ ನಟನೆಯ ಮೂರು ಸಿನಿಮಾಗಳು ಬಿಡುಗಡೆಗೆ ತಯಾರಾಗಿವೆ. ನಾಲ್ಕು ಸಿನಿಮಾಗಳ ಚಿತ್ರೀಕರಣ ಚಾಲ್ತಿಯಲ್ಲಿದೆ. ಇದೀಗ ಅಕ್ಷಯ್ ಕುಮಾರ್ ಹೊಸ ಸಿನಿಮಾ ಒಂದರಲ್ಲಿ ನಟಿಸುತ್ತಿದ್ದು, ಈ ಸಿನಿಮಾದಲ್ಲಿ ಅಕ್ಷಯ್ ಕುಮಾರ್, ಕನ್ನಡಿಗನ ಪಾತ್ರದಲ್ಲಿ ನಟಿಸುತ್ತಿರುವುದು ವಿಶೇಷ!

2020ರ ನವೆಂಬರ್‌ನಲ್ಲಿ ಬಿಡುಗಡೆ ಆಗಿದ್ದ ತಮಿಳು ಸಿನಿಮಾ 'ಸೂರರೈ ಪೊಟ್ರು' ಈಗ ಹಿಂದಿಗೆ ರೀಮೇಕ್ ಆಗುತ್ತಿದ್ದು, ತಮಿಳಿನಲ್ಲಿ ಸೂರ್ಯ ನಟಿಸಿದ್ದ ಪಾತ್ರದಲ್ಲಿ ಪಾತ್ರದಲ್ಲಿ ಅಕ್ಷಯ್ ಕುಮಾರ್ ನಟಿಸಲಿದ್ದಾರೆ ಎನ್ನಲಾಗುತ್ತಿದೆ. 'ಸೂರರೈ ಪೊಟ್ರು' ಸಿನಿಮಾವು ಕನ್ನಡಿಗ ಕ್ಯಾಪ್ಟನ್ ಗೋಪಿನಾಥ್ ಜೀವನದ ಕತೆಯನ್ನು ಹೊಂದಿತ್ತು. ಸೂರ್ಯ, ಗೋಪಿನಾಥ್ ಪಾತ್ರದಲ್ಲಿ ನಟಿಸಿದ್ದರು. ಈಗ ಅಕ್ಷಯ್ ಕುಮಾರ್ ಗೋಪಿನಾಥ್ ಪಾತ್ರದಲ್ಲಿ ನಟಿಸಲಿದ್ದಾರೆ.

ಹಾಸನದ ಕ್ಯಾಪ್ಟನ್ ಗೋಪಿನಾಥ್

ಹಾಸನದ ಕ್ಯಾಪ್ಟನ್ ಗೋಪಿನಾಥ್

ಕರ್ನಾಟಕದ ಹಾಸನದವರಾದ ಕ್ಯಾಪ್ಟನ್ ಗೋಪಿನಾಥ್ ಕಡಿಮೆ ಬೆಲೆಯ ವಿಮಾನ ಯಾನ ಸಂಸ್ಥೆ ಡೆಕ್ಕನ್ ಏವಿಯೇಷನ್ ಪ್ರಾರಂಭ ಮಾಡಿದ್ದರು. 'ಸಿಂಪ್ಲಿ ಫ್ಲೈ' ಹಾಗೂ 'ಯು ಕೆನಾಟ್ ಮಿಸ್‌ ದಿ ಫ್ಲೈಟ್' ಪುಸ್ತಕಗಳನ್ನು ಗೋಪಿನಾಥ್ ಬರೆದಿದ್ದಾರೆ. ಇದರಲ್ಲಿ 'ಸಿಂಪ್ಲಿ ಫ್ಲೈ' ಪುಸ್ತಕದಿಂದ ಪ್ರೇರಣೆ ಪಡೆದು 'ಸೂರರೈ ಪೊಟ್ರು' ಸಿನಿಮಾ ನಿರ್ಮಾಣ ಮಾಡಲಾಗಿತ್ತು. ಸಿನಿಮಾವನ್ನು ಸುಧಾ ಕೊಂಗರ ನಿರ್ದೇಶನ ಮಾಡಿದ್ದಾರೆ. ಸಿನಿಮಾದ ನಿರ್ಮಾಣವನ್ನು ಸೂರ್ಯ ಅವರೇ ಮಾಡಿದ್ದರು.

ಹಿಂದಿಗೆ ರೀಮೇಕ್ ನಿರ್ದೇಶಿಸಲಿರುವ ಸುಧಾ ಕೊಂಗರಾ

ಹಿಂದಿಗೆ ರೀಮೇಕ್ ನಿರ್ದೇಶಿಸಲಿರುವ ಸುಧಾ ಕೊಂಗರಾ

ಇದೀಗ 'ಸೂರರೈ ಪೊಟ್ರು' ಸಿನಿಮಾವನ್ನು ಹಿಂದಿಗೆ ಸುಧಾ ಕೊಂಗರಾ ಅವರೇ ರೀಮೇಕ್ ಮಾಡುತ್ತಿದ್ದಾರೆ. ಕೆಲವು ದಿನಗಳ ಹಿಂದಷ್ಟೆ ಮಾತನಾಡಿದ್ದ ಸುಧಾ ಕೊಂಗರ, ಸಿನಿಮಾದ ಹಿಂದಿ ವರ್ಷನ್‌ನ ಚಿತ್ರಕತೆಯ ಬಹುತೇಕ ಭಾಗ ಮುಗಿದಿದೆ ಮುಖ್ಯ ಪಾತ್ರದಲ್ಲಿ ಯಾರು ನಟಿಸಬೇಕು ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದಿದ್ದರು. ಇದೀಗ ಅಕ್ಷಯ್ ಕುಮಾರ್ ಅವರು ಮುಖ್ಯ ಪಾತ್ರಕ್ಕೆ ಆಯ್ಕೆ ಆಗಿದ್ದಾರೆ.

ಸಿನಿಮಾದ ಆಕ್ಷೇಪಣೆಯೂ ಎದ್ದಿತ್ತು

ಸಿನಿಮಾದ ಆಕ್ಷೇಪಣೆಯೂ ಎದ್ದಿತ್ತು

'ಸೂರರೈ ಪೊಟ್ರು' ಸಿನಿಮಾ ಬಿಡುಗಡೆ ಆದಾಗ ಹಲವರು ಸಿನಿಮಾವನ್ನು ಬಹುವಾಗಿ ಮೆಚ್ಚಿಕೊಂಡಿದ್ದರು. ಆದರೆ ಸಿನಿಮಾವು ಗೋಪಿನಾಥ್‌ರ ನಿಜ ಜೀವನಕ್ಕೆ ಹೆಚ್ಚು ಹತ್ತಿರವಾಗಿಲ್ಲವೆಂದು ಆಕ್ಷೇಪಣೆಯನ್ನೂ ಎತ್ತಿದ್ದರು. ಸಿನಿಮಾದಲ್ಲಿ ಗೋಪಿನಾಥ್‌ರ ನಿಜ ಜೀವನದ ಕತೆಯನ್ನು ಸಾಕಷ್ಟು ತಿರುಚಲಾಗಿದೆ ಎಂಬ ಆರೋಪವೂ ಕೇಳಿ ಬಂದಿತ್ತು. ಈ ಬಗ್ಗೆ ಮಾತನಾಡಿದ್ದ ಗೋಪಿನಾಥ್, 'ಸೂರರೈ ಪೊಟ್ರು' ಸಿನಿಮಾವು ನನ್ನ 'ಸಿಂಪ್ಲಿ ಫ್ಲೈ' ಪುಸ್ತಕದ ಕತೆಯಿಂದ ಪ್ರೇರಣೆ ಪಡೆದ ಸಿನಿಮಾವೇ ಹೊರತು, ನನ್ನ ಜೀವನದ ಯಥಾವತ್ತು ಸಿನಿಮಾ ಅಲ್ಲ ಎಂದಿದ್ದರು.

ಹಲವು ಸಿನಿಮಾಗಳಲ್ಲಿ ಅಕ್ಷಯ್ ಕುಮಾರ್ ಬ್ಯುಸಿ

ಹಲವು ಸಿನಿಮಾಗಳಲ್ಲಿ ಅಕ್ಷಯ್ ಕುಮಾರ್ ಬ್ಯುಸಿ

ಇನ್ನು ನಟ ಅಕ್ಷಯ್ ಕುಮಾರ್ ನಟನೆಯ 'ಬಚ್ಚನ್ ಪಾಂಡೆ', 'ಪೃಥ್ವಿರಾಜ್', 'ರಾಮ್ ಸೇತು' ಸಿನಿಮಾಗಳು ಬಿಡುಗಡೆಗೆ ತಯಾರಾಗಿವೆ. 'ಸೆಲ್ಫಿ', 'ಗೋರ್ಖಾ', 'ರಕ್ಷಾ ಬಂಧನ್', 'ಓಎಂಜಿ 2', 'ಮಿಷನ್ ಸಿಂಡ್ರೆಲಾ' ಸಿನಿಮಾಗಳ ಚಿತ್ರೀಕರಣ ಚಾಲ್ತಿಯಲ್ಲಿದೆ. ಇದರಲ್ಲಿ 'ಸೆಲ್ಫಿ' ಸಿನಿಮಾವು ಮಲಯಾಳಂನ 'ಡ್ರೈವಿಂಗ್ ಲೈಸೆನ್ಸ್' ಸಿನಿಮಾದ ರೀಮೇಕ್ ಆಗಿದ್ದು ಸಿನಿಮಾದಲ್ಲಿ ಇಮ್ರಾನ್ ಹಶ್ಮಿ ಸಹ ನಟಿಸುತ್ತಿದ್ದಾರೆ. ಇವುಗಳ ಜೊತೆಗೆ ಈಗ 'ಸೂರರೈ ಪೊಟ್ರು' ರೀಮೇಕ್‌ನಲ್ಲಿಯೂ ಅಕ್ಷಯ್ ಕುಮಾರ್ ನಟಿಸಲಿದ್ದಾರೆ.

More from Filmibeat

English summary
Akshay Kumar acting in Tamil movie Soorarai Pottru Hindi remake. Movie Soorarai Pottru is based on Karnataka's Captain Gopinath.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X