'RRR' ಬಳಿಕ ಮತ್ತೆ ರಾಮ್ ಚರಣ್ ಜೊತೆ ಅಲಿಯಾ ರೊಮ್ಯಾನ್ಸ್: ಯಾವ ಸಿನಿಮಾ?

ಬಾಲಿವುಡ್ ನ ಖ್ಯಾತ ನಟಿ ಅಲಿಯಾ ಭಟ್ ಆರ್ ಆರ್ ಆರ್ ಸಿನಿಮಾ ಮೂಲಕ ತೆಲುಗು ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಖ್ಯಾತ ನಿರ್ದೇಶಕ ರಾಜಮೌಳಿ ನಿರ್ದೇಶನದ ಚಿತ್ರದಲ್ಲಿ ಬಾಲಿವುಡ್ ಸುಂದರಿ ರಾಮ್ ಚರಣ್ ಗೆ ಜೋಡಿಯಾಗಿ ನಟಿಸುತ್ತಿದ್ದಾರೆ.

ಈ ಸಿನಿಮಾ ಬಳಿಕ ಅಲಿಯಾ ಮತ್ತೆ ರಾಮ್ ಚರಣ್ ಜೊತೆ ನಟಿಸಲಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಅಂದಹಾಗೆ ಅಲಿಯಾ ಮತ್ತೆ ದಕ್ಷಿಣದ ಕಡೆ ಮುಖ ಮಾಡುತ್ತಿರುವುದು ಶಂಕರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಪ್ಯಾನ್ ಇಂಡಿಯಾ 3ಡಿ ಚಿತ್ರಕ್ಕಾಗಿ. ಈಗಾಗಲೇ ಪ್ಯಾನ್ ಇಂಡಿಯಾ ಚಿತ್ರದ ಬಗ್ಗೆ ಸಾಕಷ್ಟು ಸುದ್ದಿ ಹರಿದಾಡುತ್ತಿದೆ. ದಕ್ಷಿಣ ಭಾರತದ ನಿರೀಕ್ಷೆಯ ಸಿನಿಮಾಗಳಲ್ಲಿ ಒಂದಾಗಿರುವ ಈ ಚಿತ್ರಕ್ಕೆ ನಾಯಕಿ ಯಾರು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ. ಈ ಕುತೂಹಲಕ್ಕೆ ತೆರೆಬೀಳುವ ಸಮಯ ಹತ್ತಿರ ಬಂದಿದೆ. ಮುಂದೆ ಓದಿ..

ಶಂಕರ್ ನಿರ್ದೇಶನದ ಚಿತ್ರದಲ್ಲಿ ಅಲಿಯಾ ಭಟ್?

ಶಂಕರ್ ನಿರ್ದೇಶನದ ಚಿತ್ರದಲ್ಲಿ ಅಲಿಯಾ ಭಟ್?

ತಮಿಳಿನ ಖ್ಯಾತ ನಿರ್ದೇಶಕ ಶಂಕರ್ ಟಾಲಿವುಡ್ ಸ್ಟಾರ್ ರಾಮ್ ಚರಣ್ ಗೆ ಮೊದಲ ಬಾರಿಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇಬ್ಬರ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಬಿಗ್ ಬಜೆಟ್ ಚಿತ್ರಕ್ಕೆ ಬಾಲಿವುಡ್ ನಟಿ ಅಲಿಯಾ ಭಟ್ ನಾಯಕಿಯಾಗಿ ಎಂಟ್ರಿ ಕೊಡುವ ಸಾಧ್ಯತೆ ಇದೆ. ಈಗಾಗಲೇ ನಾಯಕಿ ಸ್ಥಾನಕ್ಕೆ ಸಾಕಷ್ಟು ನಟಿಯರ ಹೆಸರು ಕೇಳಿಬರುತ್ತಿತ್ತು. ಆದರೀಗ ಅಲಿಯಾ ರಾಮ್ ಚರಣ್ ಗೆ ಜೋಡಿಯಾಗುವುದು ಬಹುತೇಕ ಖಚಿತವಾಗಿದೆ.

ಅಲಿಯಾ ನಾಯಕಿ ಆಗಲಿ ಎಂದ ಶಂಕರ್

ಅಲಿಯಾ ನಾಯಕಿ ಆಗಲಿ ಎಂದ ಶಂಕರ್

ಅಲಿಯಾ ಭಟ್ ನಾಯಕಿಯಾಗಬೇಕು ಎನ್ನುವುದು ನಿರ್ದೇಶಕ ಶಂಕರ್ ಅವರ ಬಯಕೆಯಂತೆ. ಹಾಗಾಗಿ ಶಂಕರ್ ಆಸೆಯ ಪ್ರಕಾರ ನಿರ್ಮಾಪಕರು ಅಲಿಯಾ ಅವರನ್ನು ಸಂಪರ್ಕಿಸಿ ಮಾತುಕತೆ ನಡೆಸುತ್ತಿದ್ದಾರಂತೆ. ಆದರೆ ಅಲಿಯಾ ಕಡೆಯಿಂದ ಇನ್ನು ಗ್ರೀನ್ ಸಿಗ್ನಲ್ ಸಿಕ್ಕಿಲ್ಲ ಎನ್ನುವ ಮಾಹಿತಿ ತಿಳಿದುಬಂದಿದೆ. ಒಂದು ವೇಳೆ ಅಲಿಯಾ ಒಪ್ಪಿಕೊಂಡರೆ ಎರಡನೇ ಬಾರಿ ರಾಮ್ ಚರಣ್ ಜೊತೆ ರೊಮ್ಯಾನ್ಸ್ ಮಾಡಲಿದ್ದಾರೆ.

ಸಾಲು ಸಾಲು ಸಿನಿಮಾಗಳಲ್ಲಿ ಅಲಿಯಾ ಬ್ಯುಸಿ

ಸಾಲು ಸಾಲು ಸಿನಿಮಾಗಳಲ್ಲಿ ಅಲಿಯಾ ಬ್ಯುಸಿ

ಅಲಿಯಾ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಆರ್ ಆರ್ ಆರ್ ಸಿನಿಮಾ ಸೇರಿದಂತೆ ಅಲಿಯಾ ಬಳಿ ಕೈತುಂಬ ಸಿನಿಮಾಗಳಿವೆ. ಬಹುನಿರೀಕ್ಷೆಯ ಗಂಗೂಬಾಯಿ ಕಾಠೀಯವಾಡಿ ಸಿನಿಮಾ ಚಿತ್ರೀಕರಣ ಕೂಡ ಇನ್ನು ಸಂಪೂರ್ಣವಾಗಿಲ್ಲ. ಎಲ್ಲಾ ಸಿನಿಮಾಗಳ ನಡುವೆ ಶಂಕರ್ ನಿರ್ದೇಶನದ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಾರಾ ಎನ್ನುವ ಅನುಮಾನ ಮೂಡಿಸಿದೆ.

ಇಂಡಿಯನ್-2 ಸಿನಿಮಾ ವಿವಾದದಲ್ಲಿ ಶಂಕರ್

ಇಂಡಿಯನ್-2 ಸಿನಿಮಾ ವಿವಾದದಲ್ಲಿ ಶಂಕರ್

ನಿರ್ದೇಶಕ ಶಂಕರ್ ಕೂಡ ಇಂಡಿಯನ್-2 ಸಿನಿಮಾ ಮುಗಿಸಬೇಕಿದೆ. ಕಮಲ್ ಹಾಸನ್ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ಇಂಡಿಯನ್ ಚಿತ್ರ ಸದ್ಯಕ್ಕೆ ಸ್ಥಗಿತಗೊಂಡಿದೆ. ವಿವಾದದಲ್ಲಿ ಸಿಲುಕಿರುವ ಇಂಡಿಯನ್-2 ಸಿನಿಮಾವನ್ನು ಯಾವಾಗ ಮುಗಿಸುತ್ತಾರೆ ಎನ್ನುವುದು ಸದ್ಯದ ಕುತೂಹಲ. ಈ ಸಿನಿಮಾ ಮುಗಿದ ಬಳಿಕ ಶಂಕರ್ ಪ್ಯಾನ್ ಇಂಡಿಯಾ ಸಿನಿಮಾ ಕೈಗೆತ್ತಿಕೊಳ್ಳಲಿದ್ದಾರೆ. ಈ ಸಿನಿಮಾ ಬಳಿಕ ಅನ್ನಿಯನ್ ಸಿನಿಮಾವನ್ನು ಬಾಲಿವುಡ್ ಗೆ ನಿರ್ದೇಶನ ಮಾಡಲಿದ್ದಾರೆ.

More from Filmibeat

English summary
Bollywood Actress Alia Bhatt likely to romance with Ram Charan in Shankar's next Pan India movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X