ಮತ್ತೊಮ್ಮೆ ಅದೇ ನಟಿಯ ಆಯ್ಕೆ ಮಾಡಿದ ರಾಜಮೌಳಿ: ಮಹೇಶ್ ಬಾಬು ಜೊತೆಗೆ ಬಾಲಿವುಡ್ ಚೆಲುವೆ

'RRR' ಸಿನಿಮಾ ಮೂಲಕ ಭಾರಿ ದೊಡ್ಡ ಹಿಟ್ ನೀಡಿರುವ ನಟ ರಾಜಮೌಳಿ, ಇದೀಗ ತಮ್ಮ ಹೊಸ ಸಿನಿಮಾಕ್ಕೆ ತಯಾರಾಗುತ್ತಿದ್ದಾರೆ.

ರಾಜಮೌಳಿಯ ಹೊಸ ಸಿನಿಮಾಕ್ಕೆ ಮಹೇಶ್ ಬಾಬು ನಾಯಕರಾಗಿದ್ದು, ಸಿನಿಮಾದ ಪ್ರೀ ಪ್ರೊಡಕ್ಷನ್ ಕಾರ್ಯಗಳು ಈಗಾಗಲೇ ಚಾಲ್ತಿಯಲ್ಲಿವೆ. ನಿರ್ದೇಶಕ ರಾಜಮೌಳಿ ವಿದೇಶಗಳಿಗೆ ತೆರಳಿ ಅಲ್ಲಿನ ಸ್ಟುಡಿಯೋಗಳು, ಮಿನಿಯೇಚರ್ ನಿರ್ಮಾಣ ಸಂಸ್ಥೆಗಳೊಟ್ಟಿಗೆ ಒಂದು ಸುತ್ತಿನ ಮೀಟಿಂಗ್‌ ಮಾಡಿ ಬಂದಿದ್ದಾರೆ.

ಟ್ರಾವೆಲ್ ಅಡ್ವೇಂಚರ್ ಮಾದರಿಯ ಸಿನಿಮಾ ಇದಾಗಿದ್ದು, ಸಿನಿಮಾಕ್ಕಾಗಿ ಲೊಕೇಶನ್ ಹುಡುಕಾಟದಲ್ಲಿ ಪ್ರಸ್ತುತ ರಾಜಮೌಳಿ ಬ್ಯುಸಿಯಾಗಿದ್ದಾರೆ. ಜೊತೆಗೆ ಪಾತ್ರಗಳಿಗಾಗಿ ನಟರ ಆಯ್ಕೆಯೂ ಜೊತೆಯಲ್ಲಿಯೇ ಸಾಗಿದೆ. ಸಿನಿಮಾದ ಬಗ್ಗೆ ಹೊರಬಿದ್ದಿರುವ ಹೊಸ ವಿಷಯವೆಂದರೆ ಸಿನಿಮಾಕ್ಕೆ ನಾಯಕಿಯ ಆಯ್ಕೆ ಆಗಿದೆಯಂತೆ!

ಮಹೇಶ್ ಬಾಬು-ರಾಜಮೌಳಿ ಸಿನಿಮಾಕ್ಕೆ ನಾಯಕಿ ಆಯ್ಕೆ

ಮಹೇಶ್ ಬಾಬು-ರಾಜಮೌಳಿ ಸಿನಿಮಾಕ್ಕೆ ನಾಯಕಿ ಆಯ್ಕೆ

ಮಹೇಶ್ ಬಾಬು-ರಾಜಮೌಳಿ ಸಿನಿಮಾಕ್ಕೆ ನಾಯಕಿಯ ಆಯ್ಕೆ ಆಗಿದ್ದು, ರಾಜಮೌಳಿ ತಮ್ಮ ಈ ಹಿಂದಿನ ಸಿನಿಮಾದ ನಾಯಕಿಯನ್ನೇ ತಮ್ಮ ಹೊಸ ಸಿನಿಮಾದಲ್ಲಿಯೂ ಮುಂದುವರೆಸಿದ್ದಾರೆ ಎನ್ನಲಾಗುತ್ತಿದೆ. ಹೌದು, ರಾಜಮೌಳಿಯ ಈ ಹಿಂದಿನ ಸಿನಿಮಾ 'RRR'ನಲ್ಲಿ ಆಲಿಯಾ ನಟಿಸಿದ್ದ ಆಲಿಯಾ ಭಟ್ ಅವರೇ ರಾಜಮೌಳಿಯ ಹೊಸ ಸಿನಿಮಾಕ್ಕೂ ನಾಯಕಿಯಾಗಿ ಆಯ್ಕೆ ಆಗಿದ್ದಾರೆ.

'RRR' ಸಿನಿಮಾದಿಂದ ಆಲಿಯಾಗೆ ನಿರಾಸೆ

'RRR' ಸಿನಿಮಾದಿಂದ ಆಲಿಯಾಗೆ ನಿರಾಸೆ

'RRR' ಸಿನಿಮಾದಲ್ಲಿ ಆಲಿಯಾ ಭಟ್ ನಾಯಕಿಯಾಗಿದ್ದರೂ ಸಹ ಅವರ ಪಾತ್ರಕ್ಕೆ ಹೆಚ್ಚು ಪ್ರಾಮುಖ್ಯತೆ ಇರಲಿಲ್ಲ. ಅವರ ನಾಯಕಿ ಪಾತ್ರ ಅತಿಥಿ ಪಾತ್ರಕ್ಕಿಂತಲೂ ಚಿಕ್ಕದಾಗಿತ್ತು. ಅಲ್ಲದೆ, ಆಲಿಯಾ ಭಟ್ ನಟನೆಯ ಹಲವು ದೃಶ್ಯಗಳನ್ನು ಫೈನಲ್ ಕಟ್‌ನಲ್ಲಿ ರಾಜಮೌಳಿ ತೆಗೆದು ಹಾಕಿದ್ದರು ಎನ್ನಲಾಗಿತ್ತು. ಇದು ಆಲಿಯಾ ಭಟ್ ಅಭಿಮಾನಿಗಳಿಗೆ ಹಾಗೂ ಸ್ವತಃ ಆಲಿಯಾ ಭಟ್‌ಗೆ ಬೇಸರ ಮೂಡಿಸಿತ್ತು. ಇದೇ ಕಾರಣಕ್ಕೆ ತಮ್ಮ ಇನ್‌ಸ್ಟಾಗ್ರಾಂನಿಂದ 'RRR' ಸಿನಿಮಾದ ಎಲ್ಲ ಪೋಸ್ಟ್‌ಗಳನ್ನು ಡಿಲೀಟ್ ಮಾಡಿದ್ದರು. ಆದರೆ ಇದೀಗ ರಾಜಮೌಳಿ ಮತ್ತೆ ಆಲಿಯಾ ಭಟ್‌ಗೆ ತಮ್ಮ ಸಿನಿಮಾದಲ್ಲಿ ಅವಕಾಶ ನೀಡಿದ್ದಾರೆ.

ಮಗುವಿನ ನಿರೀಕ್ಷೆಯಲ್ಲಿ ಆಲಿಯಾ ಭಟ್

ಮಗುವಿನ ನಿರೀಕ್ಷೆಯಲ್ಲಿ ಆಲಿಯಾ ಭಟ್

ಆಲಿಯಾ ಭಟ್ ಪ್ರಸ್ತುತ ಗರ್ಭಿಣಿ ಆಗಿದ್ದು, ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಆದರೆ ಆಲಿಯಾ ತಾಯಿಯಾದ ಬಳಿಕ ಮಹೇಶ್ ಬಾಬು-ರಾಜಮೌಳಿ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಲಿದೆ. ಆಲಿಯಾ ಭಟ್ ನಟನೆಯ 'ಬ್ರಹ್ಮಾಸ್ತ್ರ' ಸಿನಿಮಾ ಕಳೆದ ವಾರವಷ್ಟೆ ಬಿಡುಗಡೆ ಆಗಿದ್ದು, ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿದೆ. ಆದರೆ ಆ ಸಿನಿಮಾದಲ್ಲೂ ಸಹ ಆಲಿಯಾ ಬಟ್‌ರ ಪಾತ್ರಕ್ಕೆ ಹೆಚ್ಚಿನ ಅವಕಾಶ ಇರಲಿಲ್ಲ. ಇದು ಮತ್ತೆ ಆಲಿಯಾರ ಅಭಿಮಾನಿಗಳಿಗೆ ನಿರಾಸೆ ತಂದಿದೆ.

ಮುಂದಿನ ವರ್ಷ ಚಿತ್ರೀಕರಣ ಪ್ರಾರಂಭ

ಮುಂದಿನ ವರ್ಷ ಚಿತ್ರೀಕರಣ ಪ್ರಾರಂಭ

ಮಹೇಶ್ ಬಾಬು-ರಾಜಮೌಳಿ ಸಿನಿಮಾದ ಚಿತ್ರೀಕರಣ ಮುಂದಿನ ವರ್ಷ ಏಪ್ರಿಲ್ ವೇಳೆಗೆ ಪ್ರಾರಂಭವಾಗುವ ನಿರೀಕ್ಷೆ ಇದೆ. ಕೆಲವು ದಿನಗಳ ಹಿಂದೆ ತಮ್ಮ ಹೊಸ ಸಿನಿಮಾದ ಕತೆಯ ಬಗ್ಗೆ ಮಾತನಾಡಿರುವ ರಾಜಮೌಳಿ ಇದೊಂದು ಜೇಮ್ಸ್ ಬಾಂಡ್ ಮಾದರಿಯ ಸಿನಿಮಾ, ವಿವಿಧ ದೇಶಗಳಲ್ಲಿ ಸಿನಿಮಾದ ಚಿತ್ರೀಕರಣ ನಡೆಯಲಿದೆ ಎಂದಿದ್ದರು. ಇನ್ನು ಮಹೇಶ್ ಬಾಬು ಇತ್ತೀಚೆಗಷ್ಟೆ ತಮ್ಮ ಹೊಸ ಸಿನಿಮಾದ ಚಿತ್ರೀಕರಣ ಪ್ರಾರಂಭಿಸಿದ್ದು, ಆ ಸಿನಿಮಾವನ್ನು ತ್ರಿವಿಕ್ರಮ್ ನಿರ್ದೇಶಿಸುತ್ತಿದ್ದಾರೆ. ಈ ಹಿಂದೆ ತ್ರಿವಿಕ್ರಮ್ ನಿರ್ದೇಶನದ 'ಅತಡು' ಸಿನಿಮಾದಲ್ಲಿ ಮಹೇಶ್ ಬಾಬು ನಟಿಸಿದ್ದರು. ಆ ಸಿನಿಮಾ ಸೂಪರ್ ಹಿಟ್ ಆಗಿತ್ತು.

More from Filmibeat

English summary
Actress Alia Bhatt selected as heroine for Rajamouli and Mahesh Babu's next movie. Alia Bhatt is expecting baby now. After that shooting will begin.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X