ಮತ್ತೆ ಜೂ ಎನ್‌ಟಿಆರ್ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ ಆಲಿಯಾ!

ಬಾಲಿವುಡ್ ಬೆಡಗಿ ಆಲಿಯಾ ಭಟ್ 'ಆರ್‌ಆರ್‌ಆರ್‌' ಸಿನಿಮಾ ಮೂಲಕ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. 'ಆರ್‌ಆರ್‌ಆರ್‌' ಸಿನಿಮಾದಲ್ಲಿ ಆಲಿಯಾ ಕೆಲವು ನಿಮಿಷಗಳಷ್ಟೆ ಕಾಣಿಸಿಕೊಳ್ಳಲಿದ್ದಾರೆ ಆದರೆ ಅದಕ್ಕಾಗಿ ಭಾರಿ ಸಂಭಾವನೆಯನ್ನೇ ಈ ನಟಿ ಪಡೆದಿದ್ದಾರೆ.

Recommended Video

ಜೂನಿಯರ್ ಎನ್‌ಟಿಆರ್‌ಗೆ ಕಾಲೆಳೆದ ಆಲಿಯಾ ಭಟ್

ಮೊದಲ ತೆಲುಗು ಸಿನಿಮಾ ಬಿಡುಗಡೆ ಆಗುವ ಮುನ್ನವೇ ಆಲಿಯಾ ಭಟ್‌ಗೆ ಮತ್ತೊಂದು ತೆಲುಗು ಸಿನಿಮಾದ ಆಫರ್ ಬಂದಿದೆ. ಅದೂ ತಮ್ಮ ಮೆಚ್ಚಿನ ನಟನೊಟ್ಟಿಗೆ!

'ಆರ್‌ಆರ್‌ಆರ್‌' ನಲ್ಲಿ ಕೋಮರಂ ಭೀಮ್ ಪಾತ್ರದಲ್ಲಿ ನಟಿಸಿರುವ ನಟ ಜೂ ಎನ್‌ಟಿಆರ್ ಅವರ ಮುಂದಿನ ಸಿನಿಮಾದಲ್ಲಿ ಆಲಿಯಾ ಭಟ್ ನಾಯಕಿ. ಈಗಾಗಲೇ ಈ ಬಗ್ಗೆ ಚರ್ಚೆ ಮುಗಿದಿದ್ದು ಆಲಿಯಾ ಸಹ ಜೂ ಎನ್‌ಟಿಆರ್ ಒಟ್ಟಿಗೆ ನಟಿಸಲು ಖುಷಿಯಿಂದ ಒಪ್ಪಿಕೊಂಡಿದ್ದಾರೆ.

ಜೂ ಎನ್‌ಟಿಆರ್ ಜೊತೆಗೆ ಆಲಿಯಾ ನಟನೆ

ಜೂ ಎನ್‌ಟಿಆರ್ ಜೊತೆಗೆ ಆಲಿಯಾ ನಟನೆ

ಜೂ ಎನ್‌ಟಿಆರ್ ನಟನೆಯ 30ನೇ ಸಿನಿಮಾ ಕೆಲವೇ ದಿನಗಳಲ್ಲಿ ಸೆಟ್ಟೇರಲಿದೆ. ಇನ್ನೂ ಹೆಸರಿಡದ ಈ ಸಿನಿಮಾವನ್ನು ಕೊರಟಾಲ ಶಿವ ನಿರ್ದೇಶನ ಮಾಡಲಿದ್ದಾರೆ. ಇದೊಂದು ಪ್ಯಾನ್ ಇಂಡಿಯಾ ಸಿನಿಮಾ ಆಗಿರಲಿದ್ದು, ಸಿನಿಮಾಕ್ಕೆ ಆಲಿಯಾ ಭಟ್ ಅನ್ನು ನಾಯಕಿಯನ್ನಾಗಿ ಕರೆತರಲಾಗಿದೆ. 'ಆರ್‌ಆರ್‌ಆರ್‌' ನಲ್ಲಿ ಸಂಪ್ರದಾಯಸ್ಥ 'ಸೀತಾ' ಪಾತ್ರದಲ್ಲಿ ನಟಿಸಿದ್ದ ಆಲಿಯಾ ಮುಂದಿನ ತೆಲುಗು ಸಿನಿಮಾದಲ್ಲಿ ಗ್ಲಾಮರಸ್ ಪಾತ್ರದಲ್ಲಿ ನಟಿಸಲಿದ್ದಾರೆ. 'ಜೂ ಎನ್‌ಟಿಆರ್ ನನ್ನ ಅತ್ಯುತ್ತಮ ನಟರಲ್ಲಿ ಒಬ್ಬರು, ಅವರೊಟ್ಟಿಗೆ ನಾನು ಬಹಳ ಕಂಫರ್ಟ್‌ ಫೀಲ್ ಮಾಡುತ್ತೇನೆ' ಎಂದು ಆಲಿಯಾ ಸಂದರ್ಶನವೊಂದರಲ್ಲಿ ಹೇಳಿದ್ದರು. ಅಂತೆಯೇ ಈಗ ಆಲಿಯಾ ತಮ್ಮ ಮೆಚ್ಚಿನ ನಟನೊಟ್ಟಿಗೆ ನಟಿಸುವ ಅವಕಾಶ ಪಡೆದುಕೊಂಡಿದ್ದಾರೆ.

ಅನಿರುದ್ ರವಿಚಂದ್ರನ್ ಸಂಗೀತ

ಅನಿರುದ್ ರವಿಚಂದ್ರನ್ ಸಂಗೀತ

ಜೂ ಎನ್‌ಟಿಆರ್ ನಟನೆಯ 30ನೇ ಸಿನಿಮಾಕ್ಕೆ ತಮಿಳಿನ ಅನಿರುದ್ ರವಿಚಂದ್ರನ್ ಸಂಗೀತ ನೀಡಲಿದ್ದಾರೆ. ಸಿನಿಮಾವನ್ನು ಎನ್‌ಟಿಆರ್ ಆರ್ಟ್ಸ್, ಯುವಸುಧಾ ಆರ್ಟ್ಸ್‌ ನಿರ್ಮಾಣ ಸಂಸ್ಥೆಗಳು ಜಂಟಿಯಾಗಿ ಪ್ರೆಸೆಂಟ್ ಮಾಡುತ್ತಿವೆ. ಕೊರೊನಾ ಮೂರನೆ ಅಲೆಯ ಅಬ್ಬರ ಕಡಿಮೆ ಆದಕೂಡಲೇ ಚಿತ್ರೀಕರಣ ಪ್ರಾರಂಭವಾಗಲಿದೆ. ಈ ಸಿನಿಮಾವು ಆಕ್ಷನ್ ಥ್ರಿಲ್ಲರ್ ಆಗಿರಲಿದೆ ಎನ್ನಲಾಗುತ್ತಿದೆ. ಸಿನಿಮಾದ ವಿಶೇಷ ಪಾತ್ರದಲ್ಲಿ ಸಮಂತಾ ಸಹ ಇರಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಆಲಿಯಾ ಅದ್ಭುತವಾಗಿ ನಟಿಸಿದ್ದಾರೆ: ವಿಜಯೇಂದ್ರ ಪ್ರಸಾದ್

ಆಲಿಯಾ ಅದ್ಭುತವಾಗಿ ನಟಿಸಿದ್ದಾರೆ: ವಿಜಯೇಂದ್ರ ಪ್ರಸಾದ್

'ಆರ್‌ಆರ್‌ಆರ್‌' ಸಿನಿಮಾದಲ್ಲಿ ಜೂ ಎನ್‌ಟಿಆರ್ ಹಾಗೂ ಆಲಿಯಾ ಭಟ್ ಒಟ್ಟಿಗೆ ನಟಿಸಿದ್ದಾರೆ. ಆದರೆ ಇವರು ನಾಯಕ-ನಾಯಕಿ ಅಲ್ಲ. ಬದಲಿಗೆ ಈ ಸಿನಿಮಾದಲ್ಲಿ ಆಲಿಯಾ ಭಟ್ ನಟ ರಾಮ್ ಚರಣ್ ತೇಜ್‌ಗೆ ನಾಯಕಿ ಎನ್ನಲಾಗುತ್ತಿದೆ. ಸಿನಿಮಾದಲ್ಲಿ ಕೆಲವೇ ನಿಮಿಷಗಳಷ್ಟೆ ಆಲಿಯಾ ಭಟ್ ತೆರೆಯ ಮೇಲಿರುತ್ತಾರೆ ಆದರೆ ಅವರಿರುವ ದೃಶ್ಯಗಳು ಪ್ರೇಕ್ಷಕನನ್ನು ಭಾವುಕಗೊಳಿಸುತ್ತವೆ. ಆಲಿಯಾ ಭಟ್ ಸೀತಾ ಪಾತ್ರದಲ್ಲಿ ಅತ್ಯದ್ಭುತವಾಗಿ ನಟಿಸಿದ್ದಾರೆ ಎಂದು 'ಆರ್‌ಆರ್‌ಆರ್‌' ಸಿನಿಮಾಕ್ಕೆ ಕತೆ ಬರೆದಿರುವ ರಾಜಮೌಳಿಯ ತಂದೆ ವಿಜಯೇಂದ್ರ ಪ್ರಸಾದ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಬಹಳ ಬ್ಯುಸಿಯಾಗಿದ್ದಾರೆ ಆಲಿಯಾ ಭಟ್

ಬಹಳ ಬ್ಯುಸಿಯಾಗಿದ್ದಾರೆ ಆಲಿಯಾ ಭಟ್

ಆಲಿಯಾ ಭಟ್ ಬಾಲಿವುಡ್‌ನಲ್ಲಿ ಬಹಳ ಬ್ಯುಸಿಯಾಗಿದ್ದಾರೆ. ಅವರು ನಟಿಸಿರುವ 'ಗಂಗೂಬಾಯಿ ಕಾತ್ಯಾವಾಡಿ' ಸಿನಿಮಾ ಇನ್ನೇನು ಬಿಡುಗಡೆ ಆಗಬೇಕಿದೆ. ಬಾಯ್‌ಫ್ರೆಂಡ್ ರಣಬೀರ್ ಕಪೂರ್ ಜೊತೆ ನಟಿಸಿರುವ 'ಬ್ರಹ್ಮಾಸ್ತ್ರ' ಸಹ ಬಿಡುಗಡೆಗೆ ರೆಡಿಯಾಗಿದೆ. ಪ್ರಿಯಾಂಕಾ ಚೋಪ್ರಾ ಜೊತೆಗೆ 'ಜೀ ಲೆ ಝರಾ' ಸಿನಿಮಾದಲ್ಲಿ ಆಲಿಯಾ ನಟಿಸುತ್ತಿದ್ದಾರೆ. ಕರಣ್ ನಿರ್ದೇಶನದ 'ರಾಖಿ ಔರ್ ರಾಣಿ ಕಿ ಪ್ರೇಮ್ ಕಹಾನಿ', ಸಲ್ಮಾನ್ ಖಾನ್ ಜೊತೆಗೆ 'ಇನ್‌ಶಾ ಅಲ್ಲಾಹ್', ಕರಣ್ ಜೋಹರ್ ನಿರ್ದೇಶನದ 'ತಕ್ತ್' ಮತ್ತು 'ಆಶಿಖಿ 3' ಸಿನಿಮಾದಲ್ಲಿ ಆಲಿಯಾ ನಟಿಸಲಿದ್ದಾರೆ.

More from Filmibeat

English summary
Actress Alia Bhatt to act with Jr NTR in his 30th movie. Alia already acted in RRR with Jr NTR. This will be her second Telugu movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X