twitter
    For Quick Alerts
    ALLOW NOTIFICATIONS  
    For Daily Alerts

    ರಾಮ್ ಲೀಲಾಕ್ಕೆ ನಿಷೇಧ ಹೇರುವುದು ಎಷ್ಟು ಸರಿ?

    By ಜೇಮ್ಸ್ ಮಾರ್ಟಿನ್
    |

    ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ ಬಹುನಿರೀಕ್ಷಿತ ಪ್ರಣಯ ಚಿತ್ರ ರಾಮ್ ಲೀಲಾ ಚಿತ್ರ 'ಗೋಲಿಯೋಂಕಿ ರಾಸಲೀಲಾ ರಾಮ್-ಲೀಲಾ' ಎಂದು ಹೆಸರು ಬದಲಾಯಿಸಿಕೊಂಡ ಮೇಲೂ ಲಕ್ ಬದಲಾಗಿಲ್ಲ. ಸಂಪ್ರದಾಯವಾಗಿ ಪ್ರತಿಭಟನಾಕಾರರ ಭೀತಿ ನಡುವೆ ಪ್ರದರ್ಶನ ಕಾಣುತ್ತಿದ್ದ ರಾಮ್ ಲೀಲಾ ಚಿತ್ರ ಇಂದು ಉತ್ತರಪ್ರದೇಶದಲ್ಲಿ ಪ್ರದರ್ಶನ ಕಾಣುತ್ತಿಲ್ಲ. ಅಲಹಾಬಾದಿನ ಹೈಕೋರ್ಟಿನ ಲಕ್ನೋ ಬೆಂಚ್ ಚಿತ್ರ ಪ್ರದರ್ಶನಕ್ಕೆ ನಿಷೇಧ ಹೇರಿದೆ.

    ನ್ಯಾಯಾಮೂರ್ತಿಗಳಾದ ದೇವಿ ಪ್ರಸಾದ್ ಸಿಂಗ್ ಮತ್ತು ಅಶೋಕ್ ಪಾಲ್ ಸಿಂಗ್ ಅವರನ್ನೊಳಗೊಂಡ ಪೀಠ ಈ ಆದೇಶ ಹೊರಡಿಸಿದೆ. ಬನ್ಸಾಲಿ ಅವರ ಚಿತ್ರಕ್ಕೆ ನಿಷೇಧ ಹೇರುವಂತೆ ಮಾರ್ಯಾದಾ ಪುರುಶೋತ್ತಮ್ ಭಗವಾನ್ ರಾಮಲೀಲಾ ಸಮಿತಿ ಕೋರಿ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿತ್ತು.

    ಅರ್ಜಿ ವಿಚಾರಣೆ ನಡೆಸಿದ ಪೀಠ, ಚಿತ್ರಕ್ಕೆ ನಿಷೇಧವೇರಿದೆ. ಬನ್ಸಾಲಿ ಅವರ ಚಿತ್ರ ಧಾರ್ಮಿಕ ಮನೋಭಾವನೆಗಳಿಗೆ ಧಕ್ಕೆ ತರುವಂತದ್ದಾಗಿದೆ. ಇದು ದೇವ ರಾಮ ಲೀಲಾ ಚರಿತ್ರೆಗೆ ಅಪಾರ್ಥ ತರಲಿದೆ. ಆದ್ದರಿಂದ ಈ ಚಿತ್ರ ಪ್ರದರ್ಶನಕ್ಕೆ ಅನುಮತಿ ನೀಡಬಾರದು ಎಂದು ಸಮಿತಿ ಒತ್ತಾಯಿಸಿತ್ತು.

    ವಿವಾದಗಳನ್ನು ಮೈಮೇಲೆ ಹೊತ್ತು ತಿರುಗಿದ ಬನ್ಸಾಲಿ ಚಿತ್ರದ ಗೆಲುವಿನ ನಡುವೆ ಮತ್ತೊಮ್ಮೆ ಕೋರ್ಟ್ ಕಚೇರಿ ಅಲೆಯಬೇಕಾಗುತ್ತದೆ. ಭಾರತೀಯ ಮಾರುಕಟ್ಟೆಯಲ್ಲಿ ಮೊದಲ ವಾರದಲ್ಲಿ ಚಿತ್ರ ಭರ್ಜರಿ ಗಳಿಕೆ ಮಾಡಿದೆ. ಚಿತ್ರ ಬಿಡುಗಡೆಯಾದ ಮೊದಲ ಮೂರು ದಿನಗಳಲ್ಲೇ 50 ಕೋಟಿ ರು ಗಳಿಸಿದೆ. 2013ರ ಹೆಚ್ಚು ಗಳಿಕೆ ಮಾಡಿದ ಬಾಲಿವುಡ್ ಚಿತ್ರಗಳ ಪೈಕಿ ಗಲಿಯೋಂಕಿ ರಾಸ್ ಲೀಲಾ ರಾಮ್ ಲೀಲಾ ಟಾಪ್ 5 ರೊಳಗೆ ಸ್ಥಾನ ಪಡೆದ ವರದಿ ಇಲ್ಲಿದೆ ಓದಿ...

    ಈ ಚಿತ್ರದ ಪರ ವಿರೋಧ ಚರ್ಚೆಗಳು ಚಿತ್ರದ ವಿವಾದದ ಬಗ್ಗೆ ಜ್ಞಾನಪೀಠ ಪ್ರಶಸ್ತಿ ವಿಜೇತ ಕನ್ನಡ ಸಾಹಿತಿ ಗಿರೀಶ್ ಕಾರ್ನಾಡ್ ಹೇಳಿದ್ದೇನು ಮುಂದೆ ನಿರೀಕ್ಷಿಸಿ

    ಈ ಚಿತ್ರದ ಪರ ವಿರೋಧ ಚರ್ಚೆಗಳು ಚಿತ್ರದ

    ಈ ಚಿತ್ರದ ಪರ ವಿರೋಧ ಚರ್ಚೆಗಳು ಚಿತ್ರದ

    ವಿವಾದದ ಬಗ್ಗೆ ಜ್ಞಾನಪೀಠ ಪ್ರಶಸ್ತಿ ವಿಜೇತ ಕನ್ನಡ ಸಾಹಿತಿ ಗಿರೀಶ್ ಕಾರ್ನಾಡ್ ಹೇಳಿದ್ದೇನು ಮುಂದೆ ಓದಿ

    ಅರ್ಜಿದಾರರ ದೂರು

    ಅರ್ಜಿದಾರರ ದೂರು

    ಪ್ರತಿವರ್ಷ ರಾಮ ಲೀಲಾ ಆಯೋಜಿಸುತ್ತಾ ಬಂದಿರುವ ಭಗವಾನ್ ರಾಮಲೀಲಾ ಸಮಿತಿ ತನ್ನ ಅರ್ಜಿಯಲ್ಲಿ ರಾಸಲೀಲಾ ಪದ ಬಳಕೆಗೂ ನಿಷೇಧ ಹೇರುವಂತೆ ಮನವಿ ಮಾಡಿದೆ. ರಾಸಲೀಲಾ ಎಂಬುದು ಶ್ರೀಕೃಷ್ಣನ ಪ್ರಣಯ ನೃತ್ಯದ ಭಾಗ ಎಂದು ವಾದಿಸಿದೆ.

    ಅಲ್ಲದೆ, ರಾಮ ಲೀಲಾಕ್ಕೆ ಯುನೆಸ್ಕೋ

    ಅಲ್ಲದೆ, ರಾಮ ಲೀಲಾಕ್ಕೆ ಯುನೆಸ್ಕೋ

    ಮಾನ್ಯತೆ ಕೂಡಾ ಸಿಕ್ಕಿದೆ. ಶ್ರೀರಾಮ ದೇವರ ಲೀಲೆಗಳನ್ನು ರೂಪಕದ ಮೂಲಕ ಹೇಳುವ ಕಲೆಗೆ ಭಾರತೀಯ ಪರಂಪರೆ ಟ್ಯಾಗ್ ಸಿಕ್ಕಿದೆ. ಧಾರ್ಮಿಕ ಭಾವನೆಗೆ ಧಕ್ಕೆ ತರದಂತೆ ರಾಮ್ ಲೀಲಾ ಪದ ಬಳಸುವುದು ಸರಿಯಿಅಲ್ಲ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

    ಬಂಧನದಿಂದ ಬಚಾವ್

    ಬಂಧನದಿಂದ ಬಚಾವ್

    ನಿರ್ದೇಶಕ, ನಿರ್ಮಾಪಕ ಸಂಜಯ್ ಲೀಲಾ ಬನ್ಸಾಲಿ, ನಟಿ ದೀಪಿಕಾ ಪಡುಕೋಣೆ ಮತ್ತು ನಟ ರಣ್ವೀರ್ ಸಿಂಗ್ ಬಂಧನಕ್ಕೆ ವಾರಂಟ್ ಹೊರಡಿಸಲಾಗಿತ್ತು. ಆದರೆ, ವಾರಂಟಿಗೆ ಪಂಜಾಬ್ ಮತ್ತು ಹರ್ಯಾಣ ಉಚ್ಚ ನ್ಯಾಯಾಲಯ ಬ್ರೇಕ್ ಹಾಕಿತ್ತು. ವಿಶ್ವದಾದ್ಯಂತ ರಾಮ್ ಲೀಲಾ ಚಿತ್ರದ ವಿವಾದತ್ಮಕ ಸನ್ನಿವೇಶ, ಸಾರ್ವಜನಿಕ ಭಾವನೆಗೆ ಧಕ್ಕೆ ತಂದಿರುವ ಆರೋಪದಡಿಯಲ್ಲಿ ಈ ಮೂವರ ವಿರುದ್ದ ಜಲಂಧರ್ ಪೊಲೀಸರು ಎಫ್ಐಆರ್ ದಾಖಲಿಸಿದ್ದರು.

    ನಿಷೇಧಕ್ಕೆ ಆಗ್ರಹ

    ನಿಷೇಧಕ್ಕೆ ಆಗ್ರಹ

    ಚಿತ್ರ ಬಿಡುಗಡೆಗೆ ರಜಪೂತ ಸಮುದಾಯ ಭಾರಿ ಪ್ರತಿರೋಧ ಒಡ್ಡಿತ್ತು. ಗುಜರಾತಿನಲ್ಲಿ ಚಿತ್ರ ನಿಷೇಧಕ್ಕೆ ಆಗ್ರಹಿಸಿದ್ದರು. ರಜಪೂತರ ಸಂಪ್ರದಾಯ, ಧಾರ್ಮಿಕ ವಿಧಿ ವಿಧಾನಗಳಿಗೆ ಅವಹೇಳನ ಮಾಡಲಾಗಿದೆ. ಮಹಿಳೆಯರನ್ನು ಗೌರವಿಸುವ ನಮ್ಮ ನಂಬಿಕೆಗಳಿಗೆ ಚ್ಯುತಿ ಬರುವಂತೆ ಚಿತ್ರದಲ್ಲಿ ಮಹಿಳೆಯರನ್ನು ತೋರಿಸಲಾಗಿದೆ ಎಂದು ಪ್ರತಿಭಟಿಸಿದ್ದರು.

    ದೆಹಲಿ ಕೋರ್ಟ್

    ದೆಹಲಿ ಕೋರ್ಟ್

    ದೆಹಲಿ ಕೋರ್ಟ್ ಚಿತ್ರ ಬಿಡುಗಡೆಗೆ ತಡೆ ನೀಡಿ, ಹಿಂದೂ ಸಮುದಾಯ, ಪ್ರಭು ಸಮಾಜ್ ಧಾರ್ಮಿಕ್ ಲೀಲಾ ಕಮಿಟಿಯ ಸದಸ್ಯರನ್ನೊಳಗೊಂಡ ತಂಡ ರಚಿಸಿ ಅದರ ಶಿಫಾರಸಿನಂತೆ ಮುಂದಿನ ತೀರ್ಪು ನೀಡುವುದಾಗಿ ಹೇಳಿತ್ತು. ತದನಂತರ ಚಿತ್ರದ ಶೀರ್ಷಿಕೆಯನ್ನು 'ಗಲಿಯೋಂಕಿ ರಾಸಲೀಲಾ' ಎಂದು ಬನ್ಸಾಲಿ ಬದಲಿಸದ ಮೇಲೆ ಚಿತ್ರ ಬಿಡುಗಡೆಗೆ ಕೋರ್ಟ್ ಅನುಮತಿ ನೀಡಿದೆ.

    ಈಡಿಯಟ್ಸ್ ಎಂದ ಕಾರ್ನಾಡ್

    ಈಡಿಯಟ್ಸ್ ಎಂದ ಕಾರ್ನಾಡ್

    ಷೇಕ್ಸ್ ಪಿಯರ್ ಕೃತಿ ರೋಮಿಯೋ ಜ್ಯೂಲಿಯಟ್ ಕಥೆ ಆಧಾರಿಸಿದ ರಾಮ್ ಲೀಲಾ ಚಿತ್ರದ ಎದ್ದಿರುವ ವಿವಾದ ಹಾಗೂ ನಡೆದಿರುವ ಪ್ರತಿಭಟನೆ ನಿಷೇಧವನ್ನು ಖಂಡಿಸಿರುವ ಜ್ಞಾನಪೀಠ ಪ್ರಶಸ್ತಿ ವಿಜೇತ ಗಿರೀಶ್ ಕಾರ್ನಾಡ್ ಅವರು 'ಇದು ಅನಗತ್ಯ, ನಿಷೇಧ ದುಃಖ ತರಿಸುತ್ತದೆ.ಕ್ರಿಯಾಶೀಲತೆ ಬೆಲೆ ಕೊಡದೆ ಪ್ರತಿಭಟನೆಗೂ ಮುಂದಾಗುವವರು ಈಡಿಯಟ್ ಗಳು ಎಂದಿದ್ದಾರೆ.

    ಕೋರ್ಟ್ ಕೂಡಾ ಕಲಾ ಪ್ರಕಾರದ ಬಗ್ಗೆ ಬೆಲೆ ಕೊಡಬೇಕಾಗುತ್ತದೆ.ಸಿನಿಮಾಗಳಿಂದ ಧಾರ್ಮಿಕ ಭಾವನೆ ಬಿಂಬಿಸಲು, ಕೆರಳಿಸಲು ಬರುವುದಿಲ್ಲ. ಇದು ಕಾಲ್ಪನಿಕ ಕಥೆ ಎಂದು ಕಾರ್ನಾಡ್ ಹೇಳಿದ್ದಾರೆ.

    English summary
    The Lucknow bench of Allahabad High Court Thursday banned the screening of "Goliyon ki Rasleela Ram-Leela" in Uttar Pradesh. The court has, however, allowed the producer and director to run the film without using 'Ram-Leela' and 'Raasleela' in the title. 
    Friday, November 22, 2013, 11:15
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X