For Quick Alerts
  ALLOW NOTIFICATIONS  
  For Daily Alerts

  Dhanush: ಪ್ಯಾನ್ ಇಂಡಿಯಾ ಚಿತ್ರಕ್ಕಾಗಿ ಒಂದಾದ ಧನುಷ್, ಅಲ್ಲು ಅರ್ಜುನ್?

  |

  ನಟ ಅಲ್ಲು ಅರ್ಜುನ್ ತೆಲುಗು ಚಿತ್ರರಂಗದ ಸ್ಟಾರ್ ನಟ, ಧನುಷ್ ತಮಿಳಿನ ಸ್ಟಾರ್ ನಟ. ಈ ಇಬ್ಬರು ನಟರು ಸೌತ್ ಚಿತ್ರತಂಗದಲ್ಲಿ ಭಾರಿ ಬೇಡಿಕೆ ಇರುವ ನಟರು. ಇವರು ಒಂದು ಸಿನಿಮಾ ಮಾಡುತ್ತಾ ಇದ್ದಾರೆ ಅಂದರೆ ಸಾಕು, ಇದ್ದಕ್ಕಿದ್ದ ಹಾಗೆ ಆ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಾಗುತ್ತದೆ.

  ಈ ಇಬ್ಬರು ಸ್ಟಾರ್ ನಟರ ಬಹುತೇಕ ಚಿತ್ರಗಳು ಸೂಪರ್ ಹಿಟ್ ಲಿಸ್ಟ್ ಸೇರಿಕೊಂಡಿವೆ. ನಟ ಧನುಷ್ ಅಭಿನಯಕ್ಕೆ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಇನ್ನು ಅಲ್ಲು ಅರ್ಜುನ್ ಬಾಕ್ಸಾಫಿಸ್ ಲೂಟಿ ಮಾಡುವ ಮಾಸ್ ಹೀರೋ. ಈ ಇಬ್ಬರು ನಟರು ಒಂದೇ ಚಿತ್ರದಲ್ಲಿ ಇದ್ದರೆ ಹೇಗಿರಬಹುದು ಎಂದು ಯೋಚಿಸಿದರೆ ವಾವ್ ಎನಿಸುತ್ತದೆ. ಅದರೆ ಇದು ಊಹೆಯಲ್ಲ, ಹೀಗೊಂದು ಸುದ್ದಿ ಟಾಲಿವುಡ್‌ನಲ್ಲಿ ಹರಿದಾಡುತ್ತಾ ಇದೆ.

  Aishwaryaa Rajinikanth |ಐಶ್ವರ್ಯಾ ಪಕ್ಕದಲ್ಲಿದ್ದ ಧನುಷ್ ಹೆಸರು ತೆಗೆದ ರಜನಿ ಪುತ್ರಿ!Aishwaryaa Rajinikanth |ಐಶ್ವರ್ಯಾ ಪಕ್ಕದಲ್ಲಿದ್ದ ಧನುಷ್ ಹೆಸರು ತೆಗೆದ ರಜನಿ ಪುತ್ರಿ!

  ನಟ ಧನುಷ್ ಮತ್ತು ಅಲ್ಲು ಅರ್ಜುನ್ ಇಬ್ಬರೂ ಕೂಡ ಒಂದೇ ಚಿತ್ರದಲ್ಲಿ ಅಭಿನಯಿಸಲಿದ್ದಾರಂತೆ. ಇದು ಪ್ಯಾನ್ ಇಂಡಿಯಾ ಸಿನಿಮಾ ಆಗಿರಲಿದೆ. ಈ ಚಿತ್ರ 'RRR' ಮಾದರಿಯಲ್ಲಿ ದೊಡ್ಡ ಮಟ್ಟದಲ್ಲಿ ತಯಾರಾಗಲಿದೆ. ಹೀಗೊಂದು ಸುದ್ದಿ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಸಂಚಲನ ಮೂಡಿಸಿದೆ. ಇವರ ಕಾಂಬಿನೇಷನ್ ಸಿನಿಮಾವನ್ನು ಮಾಡಲು ಈಗಾಗಲೆ ನಿರ್ದೇಶಕ ಕೂಡ ಸಿದ್ದವಾಗಿದ್ದಾರೆ.

  ತೆಲುಗಿನ ಖ್ಯಾತ ನಿರ್ದೇಶಕ ಕೊರಟಾಲ ಶಿವ, ಅಲ್ಲು ಅರ್ಜುನ್ ಮತ್ತು ಧನುಷ್ ಕಾಂಬಿನೇಷನ್‌ನ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಹಲವು ಹಿಟ್ ಚಿತ್ರಗಳನ್ನು ಕೊಟ್ಟ ಖ್ಯಾತಿ ಕೊರಟಾಲ ಶಿವ ಅವರಿಗೆ ಇದೆ. ಆದರೆ ಈ ವಿಚಾರ ಅಧಿಕೃತ ಆಗಿಲ್ಲ. ಇಬ್ಬರು ನಟರ ಅಭಿಮಾನಿ ಬಳಗ ಮಾತ್ರ ಇವರು ಒಟ್ಟಿಗೆ ಸಿನಿಮಾ ಮಾಡಲಿ, ಈ ಸುದ್ದಿ ನಿಜ ಆಗಲಿ ಎಂದು ಹಾತೊರೆಯುತ್ತಿದ್ದಾರೆ.

  Allu Arjun And Dhanush Is Comming Together For New Pan India Movie

  ನಟ ಅಲ್ಲು ಅರ್ಜುನ್ ಸದ್ಯ 'ಪುಷ್ಪ 2' ಚಿತ್ರದಲ್ಲಿ ಬ್ಯುಸಿ ಇದ್ದಾರೆ. ಚಿತ್ರದ ಪ್ರೀ ಪ್ರೊಡಕ್ಷನ್ ಕೆಲಸಗಳು ಶುರುವಾಗಿದ್ದು, ಶೀಘ್ರದಲ್ಲೇ ಚಿತ್ರದ ಶೂಟಿಂಗ್ ಶುರುವಾಗಲಿದೆ. ಧನುಷ್ ಕೂಡ ಸಾಲು, ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಅವರು 'ವಾತಿ' ಚಿತ್ರದ ಶೂಟಿಂಗ್‌ನಲ್ಲಿ ನಿರತವಾಗಿದ್ದಾರೆ. ನಿರ್ದೇಶಕ ಕೊರಟಾಲ ಶಿವ ಆರ್ಚಾರ್ಯ ಚಿತ್ರದ ರಿಲೀಸ್‌ಗಾಗಿ ಕಾಯುತ್ತಾ ಇದ್ದಾರೆ.

  English summary
  Allu Arjun And Dhanush Is Comming Together For New Pan India Movie
  Thursday, March 31, 2022, 15:11
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X