ಸಕ್ಸಸ್ ಕಾಪಾಡಿಕೊಳ್ಳಲು ಅಲ್ಲು ಅರ್ಜುನ್ ಜೋತಿಷ್ಯ ಮೊರೆ: ವಿಶೇಷ ಹೋಮ, ಪೂಜೆ!
ಸಿನಿಮಾ ತಾರೆಯರು ಜೋತಿಷ್ಯ, ಭವಿಷ್ಯವನ್ನು ಹೆಚ್ಚಾಗಿ ನಂಬುತ್ತಾರೆ ಎನ್ನುವ ಮಾತಿದೆ. ಸಿನಿಮಾ ಟೈಟಲ್, ಸಿನಿಮಾದಲ್ಲಿ ಇರಬೇಕಾದ ಥೀಮ್ ಕಲರ್, ಕಾಸ್ಟ್ಯೂಮ್ ಬಣ್ಣ ಎಲ್ಲಾದಕ್ಕೂ ಒಂದೊಂದು ನಂಬಿಕೆ ಚಿತ್ರರಂಗದ ಮಂದಿಗೆ ಇರುತ್ತೆ. ಹಾಗಾಗಿ ಸಿನಿಮಾದವರು ಯಾವುದೇ ಕೆಲಸಗಳನ್ನು ಆರಂಭಿಸುವ ಮುನ್ನ ಭವಿಷ್ಯ ಕೇಳುತ್ತಾರೆ ಎನ್ನುವ ಸುದ್ದಿಗಳು ಆಗಾಗ ಹರಿದಾಡುತ್ತಾ ಇರುತ್ತವೆ.
ಈ ಹಿಂದೆ ಪ್ರಭಾಸ್ ವಿಚಾರದಲ್ಲಿ ಈ ಜೋತಿಷ್ಯದ ಬಗ್ಗೆ ಸುದ್ದಿಗಳು ಹರಿದಾಡಿದ್ದವು. ಈಗ ಇದೇ ವಿಚಾರಕ್ಕೆ ನಟ ಅಲ್ಲು ಅರ್ಜುನ್ ಕೂಡ ಸುದ್ದಿಯಲ್ಲಿ ಇದ್ದಾರೆ. ಅಲ್ಲು ಅರ್ಜುನ್ ಪುಷ್ಪ ಯಶಸ್ಸಿನ ಬಳಿಕ ಜೋತಿಷ್ಯ ಕೇಳಿದ್ದಾರಂತೆ. ಟಾಲಿವುಡ್‌ನಲ್ಲಿ ಇದೇ ಸುದ್ದಿ ಹರಿದಾಡುತ್ತಿದೆ.
ಪುಷ್ಪ ಚಿತ್ರ ನಟ ಅಲ್ಲು ಅರ್ಜುನ್ ಸಿನಿಮಾ ಬದುಕಿನ ಯಶಸ್ಸಿನ ಪಯಣವನ್ನು ಉತ್ತುಂಗಕ್ಕೆ ಏರುವಂತೆ ಮಾಡಿದೆ. ಹಾಗಾಗಿ ಇನ್ನು ಮುಂದೆ ಅಲ್ಲು ಅರ್ಜುನ್ ಏನೇ ಮಾಡಿದರು ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತೆ. ಹಾಗಾಗಿಯೇ ಭವಿಷ್ಯ ಕೇಳಿ ಪೂಜೆ ಮಾಡಲು ನಿರ್ಧರಿಸಿದ್ದಾರಂತೆ.

ವಿಶೇಷ ಪೂಜೆ, ಹೋಮ ಮಾಡಲು ಅಲ್ಲು ಅರ್ಜುನ್ ತಯಾರಿ!
ನಟ ಅಲ್ಲು ಅರ್ಜುನ್ ಸದ್ಯ ಜೋತಿಷ್ಯದ ಮೊರೆ ಹೋಗಿದ್ದಾರಂತೆ. ಜೋತಿಷ್ಯದಲ್ಲಿ ಭವಿಷ್ಯ ಕೇಳಿ ವಿಶೇಷ ಪೂಜೆಗೆ ಅಲ್ಲು ಅರ್ಜುನ್ ಮುಂದಾಗಿದ್ದಾರಂತೆ. ಜೋತಿಷಿ ಅಲ್ಲು ಅರ್ಜುನ್ ಅವರಿಗೆ ಪೂಜೆ ಮತ್ತು ಹೋಮ ಮಾಡಲು ಸೂಚಿಸಿದ್ದಾರಂತೆ. ಹಾಗಾಗಿ ಅಲ್ಲು ಅರ್ಜುನ್ ಪೂಜೆ ಮಾಡಲು ಮುಂದಾಗಿದ್ದಾರಂತೆ. ತಮ್ಮ ಫಾರ್ಮ್ ಹೌಸ್‌ನಲ್ಲಿ ಅಲ್ಲು ಅರ್ಜುನ್ ಸದ್ಯದಲ್ಲಿಯೇ ಹೋಮ ಮಾಡಲಿದ್ದಾರಂತೆ.

ಯಶಸ್ಸು ಕಾಪಾಡಿಕೊಳ್ಳಲು ಅಲ್ಲು ಅರ್ಜುನ್ ಹೋಮ!
ಅಷ್ಟಕ್ಕೂ ನಟ ಅಲ್ಲು ಅರ್ಜುನ್ ಈಗ ಜ್ಯೋತಿಷಿ ಮೊರೆ ಹೋಗಲು ಕಾರಣ ಏನು ಎನ್ನುವ ಪ್ರಶ್ನೆ ಮೂಡಬಹುದು. ಅದಕ್ಕೆ ಕಾರಣ ಅಲ್ಲು ಅರ್ಜುನ್ ಯಶಸ್ಸು. ಹೌದು ಪುಷ್ಪ ಸಿನಿಮಾದ ಬಳಿಕ ನಟ ಅಲ್ಲು ಅರ್ಜುನ್ ಸಕ್ಸಸ್ ರೇಟ್ ಹೆಚ್ಚಾಗಿದೆ. ಅವರ ಗ್ರಾಫ್ ಮೇಲೇರಿದೆ. ದೇಶದ ಪ್ರಧಾನಿ ಕೂಡ ಪುಷ್ಪ ಚಿತ್ರದ ಯಶಸ್ಸಿಗಾಗಿ ಅಲ್ಲು ಅರ್ಜುನ್ ಗೆ ಪ್ರಶಂಸೆ ನೀಡಿದ್ದಾರೆ. ಹಾಗಾಗಿ ಅಲ್ಲು ಅರ್ಜುನ್ ಸದ್ಯ ಇರುವ ಸ್ಥಾನದಿಂದ ಕೆಳಗೆ ಇಳಿಯದೇ ಇರಲು, ವಿಶೇಷ ಪೂಜೆ, ಹೋಮ ಮಾಡುವಂತೆ ಜೋತಿಷಿ ಸಲಹೆ ನೀಡಿದ್ದಾರೆ.

ಯಶಸ್ಸು ಕಾಪಾಡಿಕೊಳ್ಳುವುದು ಅಲ್ಲು ಅರ್ಜುನ್ ಗೆ ಅತಿ ಮುಖ್ಯ!
ಸದ್ಯ ನಟ ಅಲ್ಲು ಅರ್ಜುನ್ ಸದ್ಯ ಪುಷ್ಪ ಚಿತ್ರದ ಯಶಸ್ಸಿನಲ್ಲಿ ತೇಲಾಡುತ್ತಾ ಇದ್ದಾರೆ. ಈಗ ಅಲ್ಲು ಅರ್ಜುನ್ ಪ್ಯಾನ್ ಇಂಡಿಯಾ ನಟನಾಗಿ ಹೊರಹೊಮ್ಮಿದ್ದಾರೆ. ಇನ್ನು ಅಲ್ಲು ಅರ್ಜುನ್ ಮುಂದಿನ ಸಿನಿಮಾದ ಮೇಲೆ ನಿರೀಕ್ಷೆಗಳು ಹೆಚ್ಚಾಗಿವೆ. ಹಾಗಾಗಿ ಅವರ ಮುಂದಿನ ಸಿನಿಮಾ ಪುಷ್ಪ ರೇಂಜಿಗೆ ಅಥವಾ, ಪುಷ್ಪ ಚಿತ್ರವನ್ನು ಮೀರಿಸುವ ಯಶಸ್ಸು ಪಡೆಯುವ ಅನಿವಾರ್ಯತೆ ಎದುರಾಗಿದೆ. ಪುಷ್ಪ ಚಿತ್ರದ ಯಶಸ್ಸು ಅಲ್ಲು ಅರ್ಜುನ್ ಗೆ ಮತ್ತಷ್ಟು ಹೊಸ ಜವಾಬ್ದಾರಿಗಳನ್ನು ತಂದು ಕೊಟ್ಟಿದೆ.

ಪುಷ್ಪ 2 ಚಿತ್ರಕ್ಕೆ ಸಜ್ಜಾಗುತ್ತಿರುವ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ!
ಅಲ್ಲು ಅರ್ಜುನ್ ಮುಂದಿನ ಸಿನಿಮಾ ಪುಷ್ಪ 2. ಇದು ಪುಷ್ಪ ಚಿತ್ರದ ಸೀಕ್ವೆಲ್. ಪುಷ್ಪ ಮೊದಲ ಭಾಗದ ಮುಂದುವರೆದ ಭಾಗ. ಹಾಗಾಗಿ ಈ ಚಿತ್ರದ ನಿರೀಕ್ಷೆಗಳು ಹೆಚ್ಚಾಗಿವೆ. ಹಾಗಾಗಿ ಸಿನಿಮಾ ತಂಡ ಹೆಚ್ಚಿನ ಮುತುವರ್ಜಿ ವಹಿಸಿ ಸಿನಿಮಾ ಕಥೆಯನ್ನು ರೂಪಿಸುತ್ತಿದೆ. ಈ ಚಿತ್ರದಲ್ಲಿ ನಟ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಇಬ್ಬರೂ ಇರಲಿದ್ದಾರೆ. ಜೊತೆಗೆ ಮತ್ತಷ್ಟು ಕಲಾವಿದರೂ ಕೂಡ ಈ ಚಿತ್ರ ತಂಡವನ್ನು ಸೇರಿಕೊಳ್ಳಲಿದ್ದಾರೆ.


Click it and Unblock the Notifications











