'ಪುಷ್ಪ 2'ಗೆ ಅಲ್ಲು ಅರ್ಜುನ್ ಅತಿ ಹೆಚ್ಚು ಸಂಭಾವನೆ: ಪ್ರಭಾಸ್, ಅಲ್ಲು ಸರಿಸಮ!

ನಟ ಅಲ್ಲು ಅರ್ಜುನ್ ಅಭಿನಯದ 'ಪುಷ್ಪ' 2 ಸಿನಿಮಾ ಸೂಪರ್ ಹಿಟ್ ಲಿಸ್ಟ್ ಸೇರಿಕೊಂಡಿದೆ. ಪುಷ್ಪ ಸಿನಿಮಾ ಎಷ್ಟು ದೊಡ್ಡ ಯಶಸ್ಸು ಕಂಡಿದೆ ಎನ್ನುವುದನ್ನು ಪ್ರತ್ಯೇಕವಾಗಿ ಹೇಳುವ ಅವಶ್ಯಕತೆ ಇಲ್ಲ. ಯಾಕೆಂದರೆ ಅಷ್ಟರ ಮಟ್ಟಿಗೆ ದಾಖಲೆ ಬರೆದು ಬಿಟ್ಟಿದೆ 'ಪುಷ್ಪ'.

'ಪುಷ್ಪ' ಸಿನಿಮಾದ ಬಳಿಕ 'ಪುಷ್ಪ 2' ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟುಕೊಂಡಿದೆ. 'ಪುಷ್ಪ' ಚಿತ್ರದ ಅಂತ್ಯ 'ಪುಷ್ಪ 2'ಗೆ ಮುನ್ನುಡಿ ಬರೆದಿದೆ. ಹಾಗಾಗಿ 'ಪುಷ್ಪ 2' ಆರಂಭಕ್ಕೂ ಮುನ್ನವೇ ಎಲ್ಲಿಲ್ಲದ ನಿರೀಕ್ಷೆ ಸೃಷ್ಟಿಯಾಗಿದೆ. ಇನ್ನು ಚಿತ್ರ ಮುಂದಿನ ಅಪ್ಡೇಟ್‌ಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.

'ಪುಷ್ಪ 2' ಚಿತ್ರಕ್ಕೂ ಮುನ್ನ ನಟ ಅಲ್ಲು ಅರ್ಜುನ್ ಮತ್ತು ನಿರ್ದೇಶಕ ಸುಕುಮಾರ್ ಬಗ್ಗೆ ಹೊಸ ಮಾಹಿತಿಯೊಂದು ಹೊರ ಬಿದ್ದಿದೆ. ಈ ಚಿತ್ರದಲ್ಲಿ ನಟ ಅಲ್ಲು ಅರ್ಜುನ್ ಪುಷ್ಪ ರಾಜ್ ಆಗಿ ಘರ್ಜಿಸಲಿದ್ದಾರೆ. ಸದ್ಯ ಅಲ್ಲು ಅರ್ಜುನ್ 'ಪುಷ್ಪ 2' ಚಿತ್ರಕ್ಕಾಗಿ ಪಡೆದ ಸಂಭಾವನೆ ಎಷ್ಟು ಎನ್ನುವುದು ರಿವೀಲ್ ಆಗಿದೆ. ಮುಂದೆ ಓದಿ.

'ಪುಷ್ಪ 2' ಪ್ರೀ ರಿಲೀಸ್ ಬ್ಯುಸಿನೆಲ್!

'ಪುಷ್ಪ 2' ಪ್ರೀ ರಿಲೀಸ್ ಬ್ಯುಸಿನೆಲ್!

'ಪುಷ್ಪ' ಚಿತ್ರದ ಯಶಸ್ಸು 'ಪುಷ್ಪ 2' ಚಿತ್ರದ ಮಾರುಕಟ್ಟೆ ಬೆಲೆಯನ್ನು ಹೆಚ್ಚು ಮಾಡಿದೆ. ಹಾಗಾಗಿ 'ಪುಷ್ಪ 2' ರಿಲೀಸ್‌ಗೂ ಮುನ್ನ ಮಾಡುವ ಗಳಿಕೆ ಬಗ್ಗೆ ಚರ್ಚೆ ಆಗುತ್ತಿದೆ. ಕಡಿಮೆ ಎಂದರೂ 'ಪುಷ್ಪ 2' ಚಿತ್ರದ ಪ್ರೀ ರಿಲೀಸ್ ಬ್ಯುಸಿನೆಸ್ 700 ಕೋಟಿ ರೂ. ಆಗಲಿದೆ ಎನ್ನಲಾಗಿದೆ. ಹಾಗಾಗಿ ಚಿತ್ರದ ನಟ, ನಿರ್ದೇಶಕರ ಸಂಭಾವನೆ ಕೂಡ ದುಪ್ಪಟ್ಟಾಗಿದೆ.

ಅಲ್ಲು ಅರ್ಜುನ್ 'ಪುಷ್ಪ' ಸಂಭಾವನೆ 45 ಕೋಟಿ ರೂ.!

ಅಲ್ಲು ಅರ್ಜುನ್ 'ಪುಷ್ಪ' ಸಂಭಾವನೆ 45 ಕೋಟಿ ರೂ.!

ನಟ ಅಲ್ಲು ಅರ್ಜುನ್ ಸಿನಿಮಾ ವೃತ್ತಿ ಬದುಕಿನಲ್ಲಿ ಅತ್ಯಂತ ದೊಡ್ಡ ಬ್ರೇಕ್ ಕೊಟ್ಟ ಸಿನಿಮಾ ಅಂದರೆ ಅದು 'ಪುಷ್ಪ'. ಈ ಚಿತ್ರ ಅಲ್ಲು ಅರ್ಜುನ್ ನಟಿಸಿದ ಸಿನಿಮಾಗಳಲ್ಲಿ ಅತಿ ಹೆಚ್ಚು ಗಳಿಸಿದ ಸಿನಿಮಾ. ಈ ಚಿತ್ರಕ್ಕಾಗಿ ನಟ ಅಲ್ಲು ಅರ್ಜುನ್ ಹೆಚ್ಚಿನ ಸಂಭಾವನೆ ಪಡೆದಿರಲಿಲ್ಲ. ಮೊದಲು 45 ಕೋಟಿ ರೂ ಸಂಭಾವನೆ ಪಡೆದು, ನಂತರ ಸಿನಿಮಾದ ಲಾಭಾಂಶದಲ್ಲಿ ಪಾಲು ತೆಗೆದುಕೊಂಡಿದ್ದರು. ಆದರೆ 'ಪುಷ್ಪ 2' ಚಿತ್ರಕ್ಕೆ ಮೊದಲೇ ಹೆಚ್ಚಿನ ಸಂಭಾವನೆಯನ್ನು ಪಡೆದುಕೊಳ್ಳುತ್ತಿದ್ದಾರೆ.

₹ 100 ಕೋಟಿ ಆಯ್ತು ಅಲ್ಲು ಅರ್ಜುನ್ ಸಂಭಾವನೆ!

₹ 100 ಕೋಟಿ ಆಯ್ತು ಅಲ್ಲು ಅರ್ಜುನ್ ಸಂಭಾವನೆ!

'ಪುಷ್ಪ' ಮೊದಲ ಭಾಗದ ಯಶಸ್ಸು ಅಲ್ಲು ಅರ್ಜುನ್ ಸಂಭಾವನೆ ಹೆಚ್ಚು ಮಾಡುತ್ತದೆ ಎನ್ನುವುದು ಗೊತ್ತೇ ಇತ್ತು. ಅದರಂತೆಯೇ ನಟ ಅಲ್ಲು ಅರ್ಜುನ್ ಸಂಭಾವನೆ ಹೆಚ್ಚಾಗಿದೆ. 'ಪುಷ್ಪ 2' ಚಿತ್ರಕ್ಕಾಗಿ ನಟ ಅಲ್ಲು ಅರ್ಜುನ್ ಬರೋಬ್ಬರಿ 100 ಕೋಟಿ ರೂ. ಸಂಭಾವನೆ ಪಡೆದಿರುವುದಾಗಿ ವರದಿ ಆಗಿದೆ. ಈ ಮೂಲಕ ನಟ ಪ್ರಭಾಸ್‌ಗೆ ಸರಿ ಸಮನಾಗಿದ್ದಾರೆ ಅಲ್ಲು ಅರ್ಜುನ್. ಪ್ರಭಾಸ್ ಕೂಡ 100 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದು, ಈಗ ಇಬ್ಬರು ಒಂದೆ ತಕ್ಕಡಿಯಲ್ಲಿ ಇದ್ದಾರೆ.

ದುಪಟ್ಟು ಸುಕುಮಾರ್ ಸಂಭಾವನೆ!

ದುಪಟ್ಟು ಸುಕುಮಾರ್ ಸಂಭಾವನೆ!

'ಪುಷ್ಪ' ಸಿನಿಮಾದಲ್ಲಿ ನಟ ಅಲ್ಲು ಅರ್ಜುನ್ ಸಂಭಾವನೆ ಮಾತ್ರ ಹೆಚ್ಚಾಗಿಲ್ಲ. ಬದಲಿಗೆ ನಿರ್ದೇಶಕ ಸುಕುಮಾರ್ ಸಂಬಾವನೆ ಕೂಡ ಹೆಚ್ಚಾಗಿದೆ. ಸುಕುಮಾರ್ 'ಪುಷ್ಪ' ಚಿತ್ರಕ್ಕೆ 18 ಕೋಟಿ ರೂ. ಸಂಭಾವನೆ ಪಡೆದು, ಲಾಭಾಂಶದಲ್ಲಿ ಪಾಲು ಪಡೆದಿದ್ದರು. ಆದರೆ ಈಗ ಅವರ ಸಂಭಾವನೆಯೇ 65 ಕೋಟಿ ರೂ ಎನ್ನಲಾಗಿದೆ. ಈ ಮೂಲಕ ನಿರ್ದೇಶಕ ಸುಕುಮಾರ್ ತಮ್ಮ ವೃತ್ತಿ ಜೀವನದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿದ್ದಾರೆ.

'ಪುಷ್ಪ 2' ಕಥೆಯಲ್ಲಿ ಬದಲಾವಣೆ!

'ಪುಷ್ಪ 2' ಕಥೆಯಲ್ಲಿ ಬದಲಾವಣೆ!

'ಪುಷ್ಪ 2'ನಲ್ಲಿ ಚಿತ್ರದ ನಾಯಕನ ಬಗ್ಗ ಹೆಚ್ಚಿನ ಕಾಳಜಿವಹಿಸಲು ನಿರ್ದೇಶಕ ಸುಕುಮಾರ್ ಮುಂದಾಗಿದ್ದಾರೆ. ಈಗಾಗಲೇ 'ಪುಷ್ಪ 2' ಸಿನಿಮಾ ಕೆಲವು ಭಾಗದ ಚಿತ್ರೀಕರಣ ಕೂಡ ಮುಗಿದು ಹೋಗಿದೆ ಎನ್ನಲಾಗುತ್ತಿದೆ. ಆದರೆ ಅದರಲ್ಲಿ ಕೆಲವು ದೃಶ್ಯಗಳು ತೃಪ್ತಿ ನೀಡದ ಕಾರಣ, ಸ್ಕ್ರಿಪ್ಟ್‌ನಲ್ಲಿ ಒಂದಷ್ಟು ಬದಲಾವಣೆಗಳನ್ನು ಮಾಡುತ್ತಿದ್ದಾರೆ ಎನ್ನಲಾಗಿದೆ.

More from Filmibeat

English summary
Allu Arjun Hikes His Remuneration To 100 Crore For Pushpa 2, Sukumar Remunaration Is 65 Crore, Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X