ಪುಷ್ಪ ಬಿಡುಗಡೆಗೂ ಮೊದಲೇ ಅಲ್ಲು ಅರ್ಜುನ್ ಕೊಡ್ತಾರೆ ಸರ್ಪ್ರೈಸ್?

ದಕ್ಷಿಣ ಚಿತ್ರರಂಗದಲ್ಲಿ ಬಾಕ್ಸ್ ಆಫೀಸ್‌ ಕಿಂಗ್ ಎನಿಸಿಕೊಂಡಿರುವ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಈಗ ಬಾಲಿವುಡ್‌ ಪ್ರವೇಶಿಸಲು ಸಿದ್ಧತೆ ನಡೆಯುತ್ತಿದೆ ಎಂಬ ಸುದ್ದಿ ಚರ್ಚೆಗೆ ಬಂದಿದೆ.

ಈ ಮುಂಚೆಯೇ ಅಲ್ಲು ಅರ್ಜುನ್ ಹಿಂದಿ ಚಿತ್ರರಂಗ ಎಂಟ್ರಿ ಕುರಿತು ಹಲವು ಸಲ ಚರ್ಚೆ ನಡೆದಿತ್ತು. ಆದರೆ ಅದ್ಯಾವುದು ಅಧಿಕೃತವಾಗಿಲ್ಲ. ಈಗ ಮತ್ತೊಮ್ಮೆ ಐಕಾನ್ ಸ್ಟಾರ್ ಹಿಂದಿ ಸಿನಿಮಾದ ಬಗ್ಗೆ ಸುದ್ದಿ ಕೇಳಿ ಬರ್ತಿದೆ.

ಅಲ್ಲು ಅರ್ಜುನ್ ಬಿಟೌನ್ ಪ್ರವೇಶಿಲು ತಯಾರಿ ನಡೆಸಿದ್ದು, ಹಲವು ನಿರ್ದೇಶಕರು ಕಥೆ ಹೇಳಿದ್ದಾರೆ. ಬಹಳ ಕಥೆಗಳನ್ನು ಕೇಳಿರುವ ತೆಲುಗು ನಟ ಇನ್ನು ಯಾವ ಡೈರೆಕ್ಟರ್‌ಗೂ ಒಪ್ಪಿಗೆ ಕೊಟ್ಟಿಲ್ಲ ಎಂಬ ವಿಚಾರ ವರದಿಯಾಗಿದೆ.

Allu Arjun Ready to Enter Bollywood before Pushpa Release?

ಎಲ್ಲಾ ಅಂದುಕೊಂಡಂತೆ ಆದರೆ ಸದ್ಯದಲ್ಲೇ ಹಿಂದಿ ಸಿನಿಮಾದ ಬಗ್ಗೆ ಅಲ್ಲು ಅರ್ಜುನ್ ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.

ಸುಕುಮಾರ್ ನಿರ್ದೇಶನದಲ್ಲಿ 'ಪುಷ್ಪ' ಸಿನಿಮಾದಲ್ಲಿ ಅಲ್ಲು ಅರ್ಜುನ್ ನಟಿಸಿದ್ದಾರೆ. ಪ್ಯಾನ್ ಇಂಡಿಯಾದ ಭಾಷೆಗಳಲ್ಲಿ ಚಿತ್ರ ತೆರೆಕಾಣಲಿದ್ದು, ಹಿಂದಿಯಲ್ಲಿ ಡಬ್ ವರ್ಷನ್ ಏಕಕಾಲಕ್ಕೆ ಬರಲಿದೆ. ಅದಕ್ಕೂ ಮುಂಚೆ ಹಿಂದಿ ಚಿತ್ರದ ಬಗ್ಗೆ ಸರ್ಪ್ರೈಸ್ ಹೊರಬೀಳುವ ಸಾಧ್ಯತೆ ಇದೆ.

ಪುಷ್ಪ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ, ಜಗಪತಿ ಬಾಬು, ಫಾಹದ್ ಫಾಸಿಲ್ ಸೇರಿದಂತೆ ಹಲವರು ನಟಿಸಿದ್ದಾರೆ. ತೆಲುಗು, ತಮಿಳು, ಕನ್ನಡ, ಮಲಯಾಳಂ ಹಾಗೂ ಹಿಂದಿಯಲ್ಲಿ ಆಗಸ್ಟ್ 13 ರಂದು ರಿಲೀಸ್ ಆಗಲಿದೆ. ಮೈತ್ರಿ ಮೂವಿ ಮೇಕರ್ಸ್ ಈ ಚಿತ್ರ ನಿರ್ಮಿಸಿದ್ದಾರೆ. ಪ್ರಸ್ತುತ, ದೇಶದಲ್ಲಿ ಕೋವಿಡ್ ಪರಿಸ್ಥಿತಿ ಗಮನಿಸಿದರೆ ಚಿತ್ರ ಮುಂದೂಡಿಕೆಯಾಗಬಹುದು.

More from Filmibeat

English summary
Allu Arjun set to ready for Bollywood debut movie before Pushpa release?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X