»   » ಡಿಂಪಲ್ ಕ್ವೀನ್ ರಚಿತಾ ರಾಮ್ ಕಂಡು ಬೌಲ್ಡ್ ಆದ ಅಲ್ಲು ಅರ್ಜುನ್..!

ಡಿಂಪಲ್ ಕ್ವೀನ್ ರಚಿತಾ ರಾಮ್ ಕಂಡು ಬೌಲ್ಡ್ ಆದ ಅಲ್ಲು ಅರ್ಜುನ್..!

Posted By:
Subscribe to Filmibeat Kannada

ಡಿಂಪಲ್ ಕ್ವೀನ್ ರಚಿತಾ ರಾಮ್ ಕನ್ನಡದ ಸ್ಟಾರ್ ನಟಿ. ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಈ ನಟಿ ಕಂಡು ಈಗ ಪರಭಾಷೆಯ ಸ್ಟಾರ್ ಗಳು ಸಹ ಫಿದಾ ಆಗಿದ್ದಾರೆ.

ಹೊಸ ಸಾಹಸ ಮಾಡುತ್ತಿರುವ ಕನ್ನಡದ ಯುವ ನಟಿಯರು

ಟಾಲಿವುಡ್ ನ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಇತ್ತೀಚಿಗಷ್ಟೆ ರಚಿತಾ ರಾಮ್ ಅವರಿಗೆ ಕ್ಲೀನ್ ಬೌಲ್ಡ್ ಆಗಿದ್ದಾರೆ. ಇದರ ಜೊತೆ ಜೊತೆಗೆ ರಚಿತಾ ರಾಮ್ ತೆಲುಗು ಸಿನಿಮಾದಲ್ಲಿ ನಟಿಸುತ್ತಾರೆ ಎಂಬ ಸುದ್ದಿ ಹೆಚ್ಚಾಗಿದೆ. ಸದ್ಯ ಹೊಸ ಫೋಟೋಶೂಟ್ ಒಂದನ್ನು ಮಾಡಿಸಿರುವ ರಚಿತಾ ಪರಭಾಷೆಯಲ್ಲಿ ನಟಿಸುವ ಬಗ್ಗೆ ಮಾತನಾಡಿದ್ದಾರೆ. ಮುಂದೆ ಓದಿ...

ಸೈಮಾ ಪ್ರಶಸ್ತಿ ಕಾರ್ಯಕ್ರಮ

ಇತ್ತೀಚಿಗಷ್ಟೆ ನಡೆದ ಸೈಮಾ ಪ್ರಶಸ್ತಿ ಕಾರ್ಯಕ್ರಮದಲ್ಲಿ ರಚಿತಾ ರಾಮ್ ವೇದಿಕೆ ಮೇಲೆ ಒಂದು ಸೂಪರ್ ಪರ್ಫಾರ್ಮೆನ್ಸ್ ನೀಡಿದ್ದರು. ಅದನ್ನು ನೋಡಿ ಅಲ್ಲು ಅರ್ಜುನ್ ಬಹಳ ಮೆಚ್ಚಿಕೊಂಡಿದ್ದಾರೆ.

ಅಲ್ಲು ಅರ್ಜುನ್ ಮೆಚ್ಚುಗೆ

ರಚಿತಾ ರಾಮ್ ಡ್ಯಾನ್ಸ್ ನೋಡಿದ ಅಲ್ಲು ಅರ್ಜುನ್ 'ತುಂಬ ಚೆನ್ನಾಗಿ ಡ್ಯಾನ್ಸ್ ಮಾಡಿದ್ದೀರಿ' ಅಂತ ಮೆಚ್ಚುಗೆ ಸೂಚಿಸಿದರಂತೆ. ಈ ಬಳಿಕ ಸ್ಟಾರ್ ನಟರ ಮ್ಯಾನೇಜರ್ ಗಳು ರಚಿತಾ ಅವರನ್ನು ಸಂಪರ್ಕ ಮಾಡಿದ್ದಾರಂತೆ.

ಗುಳಿಕೆನ್ನೆ ಚೆಲುವೆಗೆ ಅದೃಷ್ಟ ಮತ್ತೆ ಕೈ ಕೊಟ್ಟಿದೆ.!

ಫೋಟೋ ಶೂಟ್

ರಚಿತಾ ರಾಮ್ ಲೇಟೆಸ್ಟ್ ಆಗಿ ಒಂದು ಹೊಸ ಫೋಟೋ ಶೂಟ್ ಮಾಡಿಸಿದ್ದಾರೆ. ಇದು ಟಾಲಿವುಡ್ ಗೆ ಪ್ರವೇಶ ಕೋಡುವುದಕ್ಕೆ ತಯಾರಿ ಆಗಿದೆ ಅಂತ ಹೇಳಲಾಗುತ್ತಿದೆ.

ರಚಿತಾ ಏನಂತಾರೆ..?

ನಾನು ತೆಲುಗು ಸಿನಿಮಾದಲ್ಲಿ ನಟಿಸುವುದಕ್ಕೆ ಆಸಕ್ತಿ ತೋರಿದ್ದು ನಿಜ. ಈಗಾಗಲೇ ಅಲ್ಲಿನ ಕೆಲ ನಿರ್ಮಾಣ ಸಂಸ್ಥೆಗಳ ಜೊತೆ ಮಾತುಕತೆ ನಡೆದಿದೆ. ಒಂದು ಕಥೆಯನ್ನು ಕೇಳಿದ್ದೇನೆ. ಎಲ್ಲ ಫೈನಲ್ ಆದ ಬಳಿಕ ಹೆಚ್ಚಿನ ಮಾಹಿತಿ ಹೇಳುತ್ತೇನೆ ಅಂತಾರೆ ರಚಿತಾ.

ವಿದೇಶದಲ್ಲಿ ಧ್ರುವ ಸರ್ಜಾ, ರಚಿತಾ ರಾಮ್ 'ಭರ್ಜರಿ' ಡ್ಯಾನ್ಸ್

ಉಪ್ಪಿ ಜೊತೆ ಸಿನಿಮಾ

ಸದ್ಯ ರಚಿತಾ ರಾಮ್ 'ಭರ್ಜರಿ' ಸಿನಿಮಾ ಚಿತ್ರೀಕರಣ ಕೊನೆಯ ಹಂತದಲ್ಲಿದೆ. ಜೊತೆಗೆ 'ಉಪ್ಪಿ ರುಪ್ಪಿ' ಚಿತ್ರ ಅವರ ಕೈನಲ್ಲಿದ್ದು, ಉಪೇಂದ್ರ ಜೊತೆ ಮೊದಲ ಬಾರಿ ರಚಿತಾ ನಟಿಸುತ್ತಿದ್ದಾರೆ.

English summary
Allu Arjun Likes Rachita Ram's Dance Performance In SIIMA Awards.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada