'ಪುಷ್ಪ 2' ಬಜೆಟ್ 300 ಕೋಟಿಗೂ ಅಧಿಕ!

ನಟ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ನಟನೆಯ ಪುಷ್ಪ ಸಿನಿಮಾ ಮಹತ್ತರ ದಾಖಲೆ ಬರೆದಿದೆ. ಬಾಕ್ಸಾಫಿಸ್‌ನಲ್ಲೂ ಧೂಳೆಬ್ಬಿಸಿದ ಈ ಸಿನಿಮಾ ಸೂಪರ್ ಹಿಟ್ ಲಿಸ್ಟ್ ಸೇರಿಕೊಂಡಿದೆ. ಪುಷ್ಪ ಸಿನಿಮಾ ಬೆನ್ನಲ್ಲೇ ಪುಷ್ಪ 2 ಸಿನಿಮಾದ ಬಗ್ಗೆ ಕ್ರೇಜ್ ಶುರುವಾಯ್ತು.

ಪುಷ್ಪ 2 ಚಿತ್ರದ ಬಗ್ಗೆ ದಿನಕ್ಕೊಂದು ಮಾಹಿತಿ ಹರಿದಾಡುತ್ತಲೇ ಇದೆ. ಪುಷ್ಪ ಮೊದಲ ಭಾಗಕ್ಕೆ ಸಿಕ್ಕ ರೆಸ್ಪಾನ್ಸ್‌ನಿಂದಾಗಿ ನಿರ್ದೇಶಕ ಸುಕುಮಾರ್ ಭಾಗ ಎರಡನ್ನು ಬೇರೆ ಲೆವೆಲ್‌ನಲ್ಲಿ ಮಾಡಲು ಸಜ್ಜಾಗಿದ್ದಾರೆ. ಇರುವ ಪಾತ್ರಗಳ ಜೊತೆಗೆ ಮತ್ತಷ್ಟು ಹೊಸ ಪಾತ್ರಗಳನ್ನು ಸೇರಿಸಿಕೊಂಡಿದ್ದಾರಂತೆ.

ಇದೆಲ್ಲದರ ಜೊತೆಗೆ ಈಗ 'ಪುಷ್ಪ 2' ಚಿತ್ರದ ಬಂಡವಾಳದ ಬಗ್ಗೆ ಸುದ್ದಿ ಹರಿದಾಡುತ್ತಿದೆ. ಈ ಚಿತ್ರವನ್ನು ದೊಡ್ಡ ಮಟ್ಟದಲ್ಲಿ ಮಾಡುತ್ತಿರುವ ಕಾರಣಕ್ಕೆ, ಚಿತ್ರದ ಬಜೆಟ್ ಲೆಕ್ಕಾಚಾರ ಹೆಚ್ಚಾಗುತ್ತಿದೆ. ಈ ಬಗ್ಗೆ ಸದ್ಯ ಟಾಲಿವುಡ್‌ನಲ್ಲಿ ಹರಿದಾಡುತ್ತಿದೆ ಹೊಸ ಸುದ್ದಿ.

'ಪುಷ್ಪ 2' ಪ್ರೀ ಪ್ರೊಡಕ್ಷನ್‌ಗೆ ಒತ್ತು!

'ಪುಷ್ಪ 2' ಪ್ರೀ ಪ್ರೊಡಕ್ಷನ್‌ಗೆ ಒತ್ತು!

ಪುಷ್ಪ ಮೊದಲ ಭಾಗದ ಚಿತ್ರೀಕರಣದ ವೇಳೆಯೇ, 'ಪುಷ್ಪ 2'ಗೆ ಬೇಕಾದ ಕೆಲವು ಸನ್ನಿವೇಶಗಳನ್ನು ಚಿತ್ರೀಕರಿಸಲಾಗಿದೆ ಎನ್ನಲಾಗಿತ್ತು. ಆದರೆ ಪುಷ್ಪ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡ ಬಳಿಕ ಅದನ್ನು ಮತ್ತೆ ಬದಲಾಯಿಸಲು ನಿರ್ದೇಶಕ ಸುಕುಮಾರ್ ಮುಂದಾಗಿದ್ದಾರೆ ಎನ್ನಲಾಗಿದೆ. ಹಾಗಾಗಿ ಚಿತ್ರದ ಪ್ರೀ ಪ್ರೊಡಕ್ಷನ್‌ಗೆ ಹೆಚ್ಚಿನ ಒತ್ತು ನೋಡಲಾಗಿದ್ದು, 'ಪುಷ್ಪ 2' ಚಿತ್ರೀಕರಣವನ್ನೂ ಇನ್ನೂ ಕೂಡ ಸಿನಿಮಾ ತಂಡ ಶುರು ಮಾಡಿಲ್ಲ.

'ಪುಷ್ಪ 2' ಬಜೆಟ್ 350 ಕೋಟಿ!

'ಪುಷ್ಪ 2' ಬಜೆಟ್ 350 ಕೋಟಿ!

ಇನ್ನು ಪುಷ್ಪ 2 ಚಿತ್ರದ ಬಜೆಟ್ ಕೂಡ ಹೆಚ್ಚಾಗಿದೆ. ಚಿತ್ರದ ತಾಂತ್ರಿಕ ಬಳಗ ಮತ್ತು ಕಲಾವಿದರ ಬಳವೂ ಹೆಚ್ಚಾದ ಕಾರಣ ಬಜೆಟ್ ಕೂಡ ದುಪ್ಪಟ್ಟು ಆಗಿದೆ. ಸದ್ಯ ಮಾಹಿತಿಯ ಪ್ರಕಾರ ಪುಷ್ಪ 2 ಚಿತ್ರಕ್ಕೆ ಒಟ್ಟು 350 ಕೋಟಿ ರೂ. ಬಜೆಟ್ ಹಾಕಲಾಗುತ್ತಿದೆಯಂತೆ. ಹಾಗಾಗಿ ಈ ಬಾರಿ ಪುಷ್ಪ ರಾಜ್ ದೊಡ್ಡ ಪರದೆ ಮೇಲೆ ಕಮಾಲ್ ಮಾಡುವುದರಲ್ಲಿ ನೋ ಡೌಟ್.

100 ಕೋಟಿ ಪಡೆದ ಅಲ್ಲು ಅರ್ಜುನ್!

100 ಕೋಟಿ ಪಡೆದ ಅಲ್ಲು ಅರ್ಜುನ್!

ಇನ್ನು ಪುಷ್ಪ ಚಿತ್ರಕ್ಕೂ ಮೊದಲು ನಟ ಅಲ್ಲು ಅರ್ಜುನ್ ಸಂಭಾವನೆ ಕಡಿಮೆ ಇತ್ತು. ಪುಷ್ಪ ಚಿತ್ರಕ್ಕೆ ಅವರು 45 ಕೋಟಿ ರೂ. ಸಂಭಾವನೆ ಪಡೆದುಕೊಂಡಿದ್ದಾರೆ ಎನ್ನಲಾಗಿತ್ತು. ಆದರೆ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡ ಕಾರಣ, 'ಪುಷ್ಪ 2' ಚಿತ್ರಕ್ಕೆ ಅಲ್ಲು ಅರ್ಜುನ್ 100 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಇದರ ಜೊತೆಗೆ ನಿರ್ದೇಶಕ ಸುಕುಮಾರ್ ಸಂಭಾವನೆ ಕೂಡ ಹೆಚ್ಚಿದ್ದು, 40 ಕೋಟಿ ರೂ.ಗೂ ಅಧಿಕ ಸಂಭಾವನೆಯನ್ನು ಪಡೆದಿದ್ದಾರಂತೆ.

ವಿಜಯ್ ಸೇತುಪತಿ ಎಂಟ್ರಿ!

ವಿಜಯ್ ಸೇತುಪತಿ ಎಂಟ್ರಿ!

ಇನ್ನು ಚಿತ್ರದ ಪಾತ್ರವರ್ಗದಲ್ಲೂ ಸಾಕಷ್ಟು ಬದಲಾವಣೆಗಳು ನಡೆಯುತ್ತಿವೆ. ಹಾಗಾಗಿ ಪುಷ್ಪ ರಾಜ್ ಜೊತೆಗೆ ಕಾದಾಡಲು ಮತ್ತೊಬ್ಬ ವಿಲನ್ ಎಂಟ್ರಿ ಆಗಿದೆ. ನಟ ವಿಜಯ್ ಸೇತುಪತಿ ಪುಷ್ಪ 2 ಬಳಗ ಸೇರಿದ್ದಾರೆ. ಪುಷ್ಪ 2 ಚಿತ್ರಕ್ಕೆ ವಿಜಯ್ ಸೇತುಪತಿ ಪ್ರಮುಖ ವಿಲನ್ ಎನ್ನಲಾಗಿದೆ. ವಿಕ್ರಂ ಸಿನಿಮಾದಲ್ಲಿ ಆರ್ಭಟಿಸಿದ ವಿಜಯ್ ಈ ಚಿತ್ರದಲ್ಲಿ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದನ್ನು ನೋಡಬೇಕಿದೆ.

More from Filmibeat

English summary
Allu Arjun, Rashmika Mandanna Starrer Pushpa 2 Budget Is 350 Crore Rupees, Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X