100 ಕೋಟಿ ಆಯ್ತು ಅಲ್ಲು ಅರ್ಜುನ್ ಸಂಭಾವನೆ!

ಸಿನಿಮಾ ತಾರೆಯರಿಗೆ ಅದೃಷ್ಟ ಕೈ ಹಿಡಿತು ಅಂದರೆ ಸಾಕು, ಕೋಟಿ, ಕೋಟಿ ಹಣ ಅವರನ್ನು ಹುಡುಕಿಕೊಂಡು ಬರುತ್ತದೆ. ಅದರಲ್ಲೂ ಸ್ಟಾರ್ ನಟರ ಚಿತ್ರಗಳು ಹಿಟ್ ಆದರೆ ಒಂದು ಚಿತ್ರದಿಂದ ಮತ್ತೊಂದು ಚಿತ್ರಕ್ಕೆ ಅವರ ಸಂಭಾವನೆ ಹೆಚ್ಚಾಗುತ್ತಲೇ ಇರುತ್ತದೆ. ಈಗ ತೆಲುಗಿನ ಬಹುತೇಕ ನಟರು 100 ಕೋಟಿ ಸಂಭಾವನೆಯ ಗಡಿ ಮುಟ್ಟಿದ್ದಾರೆ.

100 ಕೋಟಿ ಸಂಭಾವನೆ ಪಡೆಯುವ ನಟರ ಸಾಲಿಗೆ ಈಗ ಅಲ್ಲು ಅರ್ಜುನ್ ಕೂಡ ಸೇರಿಕೊಂಡಿದ್ದಾರೆ. ಟಾಲಿವುಡ್‌ನಲ್ಲಿ ಈಗ ಅದೇ ಬಿಸಿ, ಬಿಸಿ ಚರ್ಚೆ. ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ 'ಪುಷ್ಪಾ 2' ಚಿತ್ರಕ್ಕೆ ಸಂಬಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಅಲ್ಲು ಅರ್ಜುನ್ 100 ಕೋಟಿ ರೂ. ಸಂಭಾವನೆಗೆ ಬೇಡಿಕೆ ಇಟ್ಟಿದ್ದಾರಂತೆ. ಚಿತ್ರದ ನಿರ್ಮಾಪಕರು ಬನ್ನಿಗೆ ಹೆಚ್ಚುವರಿ ಮೊತ್ತವನ್ನು ನೀಡುವಲ್ಲಿ ಹಿಂಜರಿದಿಲ್ಲ ಎಂದು ವರದಿಗಳು ಹೇಳುತ್ತಿವೆ.

'ಪುಷ್ಪಾ: ದಿ ರೈಸ್' ಚಿತ್ರಕ್ಕಾಗಿ, ಅಲ್ಲು ಅರ್ಜುನ್ 50 ಕೋಟಿ ರೂಪಾಯಿಗಳನ್ನು ಸಂಭಾವನ್ನು ಪಡೆದುಕೊಂಡಿದ್ದರು. ಈಗ ಅವರು ತಮ್ಮ ಸಂಭಾವನೆಯನ್ನು ದುಪ್ಪಟ್ಟು ಮಾಡಿಕೊಂಡಿದ್ದಾರೆ. ಏಕಾಏಕಿ ಅಲ್ಲು ಅರ್ಜುನ್ ತಮ್ಮ ಸಂಭಾವನೆಯನ್ನು ದುಪ್ಪಟ್ಟು ಮಾಡಿಕೊಂಡಿರುವುದು ನಿರ್ಮಾಪಕರಿಗೆ ಶಾಕ್ ಕೊಟ್ಟಿದೆ. ಅದರೂ ಕೂಡ ಅಲ್ಲು ಅರ್ಜುನ್‌ಗೆ ಈ ಮೊತ್ತ ಭರಿಸಲು ನಿರ್ಮಾಣ ಸಂಸ್ಥೆ ತಯಾರಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ.

Allu Arjun Remuneration Touches 100 Crore After Pushpa Success

'ರಂಗಸ್ಥಳಂ' ಖ್ಯಾತಿಯ ಸುಕುಮಾರ್ ನಿರ್ದೇಶನದ, 'ಪುಷ್ಪ' ಮೊದಲ ಭಾಗದ ಯಶಸ್ಸು ದಾಖಲೆ ಮಾಡಿದೆ. ಈಗ ಭಾಗ 2ಕ್ಕಾಗಿ ಎಲ್ಲರೂ ಕಾಯುತ್ತಿದ್ದರೆ. ಈ ಚಿತ್ರ ಮತ್ತಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡುವ ನಿರೀಕ್ಷೆ ಇದೆ. ಅಲ್ಲು ಅರ್ಜುನ್ ಜೊತೆಗೆ ಕನ್ನಡತಿ ರಶ್ಮಿಕಾ ಮಂದಣ್ಣ ತೆರೆ ಹಂಚಿಕೊಂಡಿದ್ದಾರೆ.

Allu Arjun Remuneration Touches 100 Crore After Pushpa Success

'ಪುಷ್ಪ: ದಿ ರೂಲರ್' ಈ ವರ್ಷದ ಬಹು ನಿರೀಕ್ಷಿತ ಪ್ಯಾನ್ ಇಂಡಿಯನ್ ಆಕ್ಷನ್ ಚಿತ್ರಗಳಲ್ಲಿ ಒಂದಾಗಿದೆ. ಇದು ತೆಲುಗು, ಮಲಯಾಳಂ, ಕನ್ನಡ, ತಮಿಳು ಮತ್ತು ಹಿಂದಿ ಸೇರಿದಂತೆ ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಈ ಬಿಗ್ ಬಜೆಟ್ ಚಿತ್ರವನ್ನು ಮೈತ್ರಿ ಮೂವೀ ಮೇಕರ್ಸ್ ನಿರ್ಮಿಸುತ್ತಿದೆ.

'ಪುಷ್ಪ: ದಿ ರೈಸ್' ಚಿತ್ರದಲ್ಲಿ, ರಶ್ಮಿಕಾ ಮಂದಣ್ಣ, ಜಗದೀಶ್ ಪ್ರತಾಪ್ ಬಂಡಾರಿ, ಧನಂಜಯ್, ಅನಸೂಯಾ ಭಾರದ್ವಾಜ್, ಸುನಿಲ್, ರಾವ್ ರಮೇಶ್, ಅಜಯ್ ಮತ್ತು ಅಜಯ್ ಘೋಷ್ ಪ್ರಮುಖ ಪಾತ್ರಳಲ್ಲಿ ನಟಿದ್ದಾರೆ. ಈಗ ಭಾಗ ಎರಡರಲ್ಲೂ ಕೂಡ ದೊಡ್ಡ ಕಲಾವುದರು ಇರಲಿದ್ದಾರೆ.

More from Filmibeat

English summary
Allu Arjun Remuneration touches 100 crore after Pushpa movie success.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X