For Quick Alerts
  ALLOW NOTIFICATIONS  
  For Daily Alerts

  ಬಣ್ಣದಲೋಕಕ್ಕೆ ಅಲ್ಲು ಅರ್ಜುನ್ ಪತ್ನಿ ಸ್ನೇಹಾ ರೆಡ್ಡಿ ಎಂಟ್ರಿ? ಹೀರೊ ಯಾರು ಗೊತ್ತಾ?

  |

  ತೆಲುಗು ನಟ ಅಲ್ಲು ಅರ್ಜುನ್ ಪತ್ನಿ ಸ್ನೇಹಾ ರೆಡ್ಡಿ ಸಿನಿಮಾ ಹೀರೊಯಿನ್‌ನ ಮೀರಿಸುವಂತಹ ಚೆಲುವೆ. ಈಕೆ ಈವರೆಗೂ ಯಾವುದೇ ಸಿನಿಮಾದಲ್ಲಿ ನಟಿಸದೇ ಇದ್ದರೂ ಸ್ಟಾರ್ ನಟಿಗಿರುವ ಕ್ರೇಜ್ ಇದೆ. ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟೀವ್ ಆಗಿರುವ ಸ್ನೇಹ ಕಲರ್‌ಫುಲ್ ಫೋಟೊಗಳನ್ನು ಶೇರ್ ಮಾಡುತ್ತಿರುತ್ತಾರೆ. ಸದ್ಯ ಅಲ್ಲು ಫ್ಯಾಮಿಲಿ ಸೊಸೆ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಾರೆ ಎನ್ನುವ ಗುಸುಗುಸು ಶುರುವಾಗಿದೆ.

  ಗಂಡನ ಜೊತೆ ಮಕ್ಕಳ ಜೊತೆ ಇರುವ ಫೋಟೊಗಳನ್ನು ಸ್ನೇಹಾ ರೆಡ್ಡಿ ಶೇರ್ ಮಾಡುತ್ತಿರುತ್ತಾರೆ. ಇತ್ತೀಚೆಗೆ ವೆರೈಟಿ ವೆರೈಟಿ ಕಾಸ್ಟ್ಯೂಮ್ಸ್‌ನಲ್ಲಿ ಫೋಟೊಶೂಟ್ ಮಾಡಿಸಿ ಅದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡಿ ಗಮನ ಸೆಳೀತಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಸ್ನೇಹಾರೆಡ್ಡಿ ಭಾರೀ ಫ್ಯಾನ್ ಫಾಲೋಯಿಂಗ್ ಇದೆ. ಸದ್ಯ ಮಲಯಾಳಂ ಚಿತ್ರದಲ್ಲಿ ನಟಿಸೋ ಅವಕಾಶ ಅಲ್ಲು ಅರ್ಜುನ್ ಪತ್ನಿಯನ್ನು ಅರಸಿ ಬಂದಿದೆಯಂತೆ. ಪೃಥ್ವಿರಾಜ್ ಸುಕುಮಾರನ್ ಸಿನಿಮಾದಲ್ಲಿ ಅಲ್ಲು ಫ್ಯಾಮಿಲಿ ಸೊಸೆ ನಟಿಸ್ತಾರೆ ಎನ್ನಲಾಗ್ತಿದೆ. ಚಿತ್ರದಲ್ಲಿ ಆಕೆಯ ಪಾತ್ರ ಏನು? ಅತಿಥಿ ಪಾತ್ರನಾ? ಮುಖ್ಯವಾದ ಪಾತ್ರನಾ? ಎನ್ನುವುದು ಇನ್ನಷ್ಟೇ ಗೊತ್ತಾಗಬೇಕಿದೆ.

  ಮಗಳ ಎದುರು ಸೋತ 'ಪುಷ್ಪ'ರಾಜ್: ವಿಡಿಯೋ ವೈರಲ್ಮಗಳ ಎದುರು ಸೋತ 'ಪುಷ್ಪ'ರಾಜ್: ವಿಡಿಯೋ ವೈರಲ್

  ಮಲಯಾಳಂನಲ್ಲಿ ನಿರ್ಮಾಣವಾಗುವ ಈ ಸಿನಿಮಾ ತೆಲುಗು, ತಮಿಳು, ಕನ್ನಡ ಭಾಷೆಗಳಿಗೂ ಡಬ್ ಆಗಲಿದೆಯಂತೆ. ಸ್ನೇಹಾರೆಡ್ಡಿಗೆ ಸಿನಿಮಾದಲ್ಲಿ ನಟಿಸೋ ಅವಕಾಶ ಬಂದಿದೆ ಎಂದು ಬನ್ನಿ ಫ್ಯಾನ್ಸ್ ಸಂಭ್ರಮಿಸುತ್ತಿದ್ದಾರೆ. ಸ್ಟಾರ್ ನಟಿಯರೇ ಒಳ್ಳೆ ಅವಕಾಶಕ್ಕಾಗಿ ಸರ್ಕಸ್ ಮಾಡುತ್ತಿದ್ದಾರೆ. ಅಂತಹ ಸಮಯದಲ್ಲಿ ಸ್ನೇಹಾ ರೆಡ್ಡಿಗೆ ಅವಕಾಶ ಬಂದಿರೋದು ಕೆಲವರ ಅಚ್ಚರಿಗೆ ಕಾರಣವಾಗಿದೆ. ಸದ್ಯ ಸುಕುಮಾರ್ ಸಾಲು ಸಾಲು ಸಿನಿಮಾಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಪ್ರಶಾಂತ್ ನೀಲ್- ಪ್ರಭಾಸ್ ಕಾಂಬಿನೇಷನ್‌ನ 'ಸಲಾರ್' ಚಿತ್ರದ ಮುಖ್ಯ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ.

  Allu Arjuns Wife Sneha reddy to make her Mollywood debut opposite Prithviraj Sukumaran

  ಹೊಂಬಾಳೆ ಫಿಲ್ಮ್ಸ್ ಬ್ಯಾನರ್‌ನ 'ಟೈಸನ್' ಚಿತ್ರವನ್ನು ನಿರ್ದೇಶಿಸಿ ನಟಿಸುತ್ತಿದ್ದಾರೆ. ಇನ್ನು ಅಲ್ಲು ಅರ್ಜುನ್ ಹಾಗೂ ಸ್ನೇಹಾ ರೆಡ್ಡಿ ದಂಪತಿಯ ಮುದ್ದಿನ ಮಗಳು ಅಲ್ಲು ಅರ್ಹಾ 'ಶಾಕುಂತಲಂ' ಚಿತ್ರದಲ್ಲಿ ನಟಿಸಿದ್ದಾಳೆ. ಸಮಂತಾ ನಟನೆಯ ಈ ಮಹಿಳಾ ಪ್ರಧಾನ ಚಿತ್ರದಲ್ಲಿ ಅರ್ಹಾ ನಟಿಸಿರೋದು ವಿಶೇಷ. ಕೆಲ ದಿನಗಳ ಹಿಂದೆ ಆಕೆ ಸೆಟ್‌ಗೆ ಬಂದಿದ್ದ ವಿಡಿಯೋ ವೈರಲ್ ಆಗಿತ್ತು. ಇನ್ನು ಅಲ್ಲು ಅರ್ಜುನ್ 'ಪುಷ್ಪ'- 2 ಸಿನಿಮಾ ಚಿತ್ರೀಕರಣ ಆರಂಭಿಸಲು ತುದಿಗಾಗಲ್ಲಿ ನಿಂತಿದ್ದಾರೆ. ಕಳೆದ ವರ್ಷ ತೆರೆಕಂಡಿದ್ದ ಪ್ರೀಕ್ವೆಲ್ ಸೂಪರ್ ಹಿಟ್ ಆಗಿ ಸೀಕ್ವೆಲ್ ಬಗ್ಗೆ ನಿರೀಕ್ಷೆ ಹೆಚ್ಚುವಂತೆ ಮಾಡಿದೆ.

  English summary
  Allu Arjun's Wife Sneha reddy to make her Mollywood debut opposite Prithviraj Sukumaran. Allu Sneha Reddy is very active on social media and loves to share her lovely moments with her followers through her Instagram handle. know Moe.
  Friday, November 4, 2022, 10:46
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X