For Quick Alerts
  ALLOW NOTIFICATIONS  
  For Daily Alerts

  40 ಕೋಟಿ ವೆಚ್ಚದಲ್ಲಿ ತಯಾರಾಗಲಿದೆ 'ಪುಷ್ಪ' ಚಿತ್ರದ ಸಾಹಸ ದೃಶ್ಯ

  |

  ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಪುಷ್ಪ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸುಕುಮಾರ್ ನಿರ್ದೇಶನದ ಈ ಚಿತ್ರ ಟೀಸರ್ ಮೂಲಕ ಭಾರಿ ಕುತೂಹಲ ಮೂಡಿಸಿದೆ. ಪ್ಯಾನ್ ಇಂಡಿಯಾ ಭಾಷೆಗಳಲ್ಲಿ ಬಿಡುಗಡೆಯಾಗಲಿರುವ ಪುಷ್ಪ ಭಾರಿ ಬಜೆಟ್ ಸಿನಿಮಾ ಎನ್ನುವುದು ವಿಶೇಷ.

  ರಶ್ಮಿಕಾ ಮಂದಣ್ಣ ಈ ಚಿತ್ರದಲ್ಲಿ ನಾಯಕಿಯಾಗಿದ್ದು, ಮೊಟ್ಟ ಮೊದಲ ಸಲ ಅಲ್ಲು ಅರ್ಜುನ್ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಈ ಫ್ರೆಶ್ ಜೋಡಿ ಮೇಲೆ ಸಹ ಅಷ್ಟೇ ನಿರೀಕ್ಷೆ ಇದೆ.

  'ಪುಷ್ಪ' ಟ್ರೈಲರ್‌: ಮ್ಯೂಸಿಕ್‌ ಕದ್ದು ಮಾಡಿದ್ರಾ ದೇವಿಶ್ರೀ? ಕಾಲೆಳೆದ ನೆಟ್ಟಿಗರು'ಪುಷ್ಪ' ಟ್ರೈಲರ್‌: ಮ್ಯೂಸಿಕ್‌ ಕದ್ದು ಮಾಡಿದ್ರಾ ದೇವಿಶ್ರೀ? ಕಾಲೆಳೆದ ನೆಟ್ಟಿಗರು

  ಪುಷ್ಪ ನೈಜ ಘಟನೆಗಳನ್ನು ಆಧರಿಸಿ ತಯಾರಾಗುತ್ತಿರುವ ಸಿನಿಮಾ. ಸದ್ಯದ ಮಾಹಿತಿ ಪ್ರಕಾರ, ಅಲ್ಲು ಅರ್ಜುನ್ ಈ ಚಿತ್ರದಲ್ಲಿ ಲಾರಿ ಡ್ರೈವರ್ ಪಾತ್ರ ನಿರ್ವಹಿಸುತ್ತಿದ್ದು, ರಕ್ತಚಂದನ ಕಳ್ಳ ಸಾಗಣಿಕೆ ಮಾಡುವ ಗ್ಯಾಂಗ್‌ನ ಸದಸ್ಯನಾಗಿರ್ತಾರೆ.

  ಇದೀಗ, ಚಿತ್ರದ ಆಕ್ಷನ್ ದೃಶ್ಯವೊಂದಕ್ಕೆ ಪುಷ್ಪ ಸಿನಿಮಾ ಸದ್ದು ಮಾಡ್ತಿದೆ. ಟಾಲಿವುಡ್ ಮಾಯಾನಗರಿಯಲ್ಲಿ ಚರ್ಚೆಯಾಗುತ್ತಿರುವ ಹೊಸ ವಿಷಯ ಏನಪ್ಪಾ ಅಂದ್ರೆ ಸಾಹಸ ದೃಶ್ಯವೊಂದಕ್ಕೆ ಬರೋಬ್ಬರಿ 40 ಕೋಟಿ ಖರ್ಚು ಮಾಡುತ್ತಿದ್ದಾರಂತೆ ನಿರ್ಮಾಪಕರು.

  ಮೈತ್ರಿ ಮೂವಿ ಮೇಕರ್ಸ್ ಈ ಚಿತ್ರ ನಿರ್ಮಾಣ ಮಾಡ್ತಿದ್ದು, 200 ಕೋಟಿಗೂ ಅಧಿಕ ಬಜೆಟ್ ಈ ಚಿತ್ರಕ್ಕಾಗಿ ಮೀಸಲಿಟ್ಟಿದೆಯಂತೆ. ಅದರಲ್ಲಿ ಆಕ್ಷನ್ ದೃಶ್ಯಗಳಿಗೆ ಹೆಚ್ಚಿನ ಹಣ ಖರ್ಚು ಮಾಡಲಾಗುತ್ತಿದೆ. ಹಾಗಾಗಿ, ಪುಷ್ಪ ಸಿನಿಮಾದಲ್ಲಿ ಆಕ್ಷನ್ ದೃಶ್ಯಗಳು ಬಹಳ ಅದ್ಧೂರಿಯಾಗಿ ಬರಲಿದೆ ಎಂಬ ನಿರೀಕ್ಷೆ ಇದೆ.

  ಇನ್ನುಳಿದಂತೆ ಪ್ರಕಾಶ್ ರಾಜ್, ಜಗಪತಿ ಬಾಬು, ಸುನಿಲ್, ಧನಂಜಯ್ ಮುಂತಾದವರು ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ಮಲಯಾಳಂ ಸೂಪರ್ ಸ್ಟಾರ್ ಫಹಾದ್ ಫಾಸಿಲ್ ಮುಖ್ಯ ವಿಲನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ದೇವಿಶ್ರೀ ಪ್ರಸಾದ್ ಸಂಗೀತ ಇರಲಿದೆ.

  English summary
  Allu Arjun Starrer Pushpa movie producer to spend Rs 40 crores for Action sequences.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X