ಅಲ್ಲು ಅರ್ಜುನ್‌ 'ಪುಷ್ಪ' ಮುಗಿಯೋ ಸಮಯದಲ್ಲಿ ಹೊರಬಿತ್ತು ಭರ್ಜರಿ ಸುದ್ದಿ?

ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ನಟನೆಯಲ್ಲಿ ತಯಾರಾಗಿರುವ 'ಪುಷ್ಪ' ಸಿನಿಮಾ ಬಹುತೇಕ ಚಿತ್ರೀಕರಣ ಮುಗಿಸಿದೆ. ಅದಾಗಲೇ ರಿಲೀಸ್ ದಿನಾಂಕ ಪ್ರಕಟ ಮಾಡಿರುವ ಪುಷ್ಪ ಆಗಸ್ಟ್ 13 ರಂದು ತೆರೆಗೆ ಬರಬೇಕಿದೆ. ಆದರೆ, ದೇಶದಲ್ಲಿ ಕೋವಿಡ್ ಎರಡನೇ ಅಲೆ ನಿಯಂತ್ರಣಕ್ಕೆ ಬಾರದ ಹಿನ್ನೆಲೆ ಚಿತ್ರದ ಬಿಡುಗಡೆ ಮುಂದೂಡುವ ಸಾಧ್ಯತೆ ಹೆಚ್ಚಿದೆ.

ಇದೇ ಮೊದಲ ಸಲ ಅಲ್ಲು ಅರ್ಜುನ್ ಬಹಳ ವಿಶೇಷ ಪಾತ್ರದಲ್ಲಿ ನಟಿಸಿದ್ದು, ರಶ್ಮಿಕಾ ಮಂದಣ್ಣ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಫಾಹದ್ ಫಾಸಿಲ್, ಧನಂಜಯ್, ಜಗಪತಿ ಬಾಬು, ಪ್ರಕಾಶ್ ರಾಜ್ ಸೇರಿದಂತೆ ಸ್ಟಾರ್ ಕಲಾವಿದರು ತಾರಬಳಗದಲ್ಲಿದ್ದಾರೆ. ಸಿನಿಮಾ ಸಂಪೂರ್ಣವಾಗಿ ಮುಗಿಯಿತು ಎನ್ನುವ ಸಮಯದಲ್ಲಿ ಪುಷ್ಪ ಚಿತ್ರತಂಡದಿಂದ ಭರ್ಜರಿ ಸುದ್ದಿಯೊಂದು ಹೊರಬಿದ್ದಿದೆ. ಏನದು? ಮುಂದೆ ಓದಿ....

ಪುಷ್ಪಗೆ ಎಂಟ್ರಿ ಕೊಟ್ಟ ದಿಶಾ ಪಟಾನಿ?

ಪುಷ್ಪಗೆ ಎಂಟ್ರಿ ಕೊಟ್ಟ ದಿಶಾ ಪಟಾನಿ?

ಟಾಲಿವುಡ್‌ನ ಖ್ಯಾತ ವೆಬ್‌ಸೈಟ್ ವರದಿ ಮಾಡಿರುವ ಪ್ರಕಾರ, ಪುಷ್ಪ ಚಿತ್ರದ ವಿಶೇಷ ಹಾಡೊಂದಕ್ಕೆ ಹೆಜ್ಜೆ ಹಾಕಲು ಬಿಟೌನ್ ಸುಂದರಿ ದಿಶಾ ಪಟಾನಿ ಪ್ರವೇಶ ಆಗಲಿದೆ. ಈ ಮೂಲಕ ಪುಷ್ಪ ಚಿತ್ರದಲ್ಲಿ ಅಲ್ಲು ಅರ್ಜುನ್ ಮತ್ತು ದಿಶಾ ಪಾಟನಿ ಜೋಡಿಯಿಂದ ಜಬರ್‌ದಸ್ತ್‌ ಡ್ಯಾನ್ಸ್ ನಂಬರ್ ನೋಡಬಹುದು ಎಂಬ ನಿರೀಕ್ಷೆ ಹುಟ್ಟಿಕೊಂಡಿದೆ.

ಮೆಗಾಸ್ಟಾರ್ ಹಾಡಿಗೆ ಡ್ಯಾನ್ಸ್

ಮೆಗಾಸ್ಟಾರ್ ಹಾಡಿಗೆ ಡ್ಯಾನ್ಸ್

ದಿಶಾ ಪಟಾನಿ ಎಂಟ್ರಿಯ ಜೊತೆ ಮತ್ತೊಂದು ಮೆಗಾ ಸುದ್ದಿಯಂದರೆ ಈ ಸ್ಪೆಷಲ್ ನಂಬರ್, ಮೆಗಾಸ್ಟಾರ್ ಚಿರಂಜೀವಿಯ ಸಿನಿಮಾ ಹಿಟ್ ಗೀತೆಯಾಗಿರಲಿದೆಯಂತೆ. ಚಿರಂಜೀವಿಯ ಸೂಪರ್ ಹಾಡೊಂದಕ್ಕೆ ಅಲ್ಲು ಅರ್ಜುನ್ ಮತ್ತು ದಿಶಾ ಪಟಾನಿ ಹೆಜ್ಜೆ ಹಾಕಲು ಪ್ಲಾನ್ ಮಾಡಲಾಗಿದೆ ಎಂದು ತೆಲುಗು ಮಾಯಲೋಕದಲ್ಲಿ ಚರ್ಚೆಯಾಗುತ್ತಿದೆ.

ಹಾಡು ಯಾವುದು?

ಹಾಡು ಯಾವುದು?

ಚಿರಂಜೀಯ ಹಳೆಯ ಹಾಡೊಂದಕ್ಕೆ ಅಲ್ಲು ಅರ್ಜುನ್ ಮತ್ತು ದಿಶಾ ಪಟಾನಿ ಡ್ಯಾನ್ಸ್ ಮಾಡಲಿದ್ದಾರೆ ಎಂಬ ಸುದ್ದಿ ಮಾತ್ರ ಬಹಿರಂಗವಾಗಿದೆ. ಆದರೆ, ಅದು ಯಾವ ಹಾಡು ಎನ್ನುವುದು ಸದ್ಯಕ್ಕೆ ಕುತೂಹಲವಾಗಿ ಉಳಿದಿದೆ.

ಪ್ಯಾನ್ ಇಂಡಿಯಾ ರಿಲೀಸ್

ಪ್ಯಾನ್ ಇಂಡಿಯಾ ರಿಲೀಸ್

ಸುಕುಮಾರ್ ಈ ಚಿತ್ರ ನಿರ್ದೇಶಿಸಿದ್ದು, ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡಿದ್ದಾರೆ. ಪ್ಯಾನ್ ಇಂಡಿಯಾ ಭಾಷೆಯಗಳಲ್ಲಿ ತೆಲುಗು, ತಮಿಳು, ಕನ್ನಡ, ಮಲಯಾಳಂ ಹಾಗೂ ಹಿಂದಿಯಲ್ಲಿ ಪುಷ್ಪ ಬಿಡುಗಡೆಯಾಗಲಿದೆ. ಮತ್ತೊಂದು ವಿಷಯ ಏನಪ್ಪಾ ಅಂದ್ರೆ ಎರಡು ಭಾಗಗಳಲ್ಲಿ ಪುಷ್ಪ ಸಿನಿಮಾ ರಿಲೀಸ್ ಆಗುವ ಲೆಕ್ಕಾಚಾರ ಇದೆ. ಆದರೆ, ಇದು ಅಧಿಕೃತವಾಗಿಲ್ಲ.

ಅಲ್ಲು ಡ್ಯಾನ್ಸ್ ಮೆಚ್ಚಿದ್ದ ನಟಿ

ಅಲ್ಲು ಡ್ಯಾನ್ಸ್ ಮೆಚ್ಚಿದ್ದ ನಟಿ

ಈ ಹಿಂದೆ ತೆರೆಕಂಡು ದೊಡ್ಡ ಬ್ಲಾಕ್ ಬಸ್ಟರ್ ಆಗಿದ್ದ ಅಲಾ ವೈಕುಂಠಪುರಂಲೋ ಚಿತ್ರದ ಬುಟ್ಟ ಬೊಮ್ಮ ಹಾಡಿನಲ್ಲಿ ಅಲ್ಲು ಅರ್ಜುನ್ ಡ್ಯಾನ್ಸ್ ನೋಡಿ ದಿಶಾ ಪಟಾನಿ ಫಿದಾ ಆಗಿದ್ದರು. ಈ ಹಾಡನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದ ನಟಿ ''ನೀವು ಹೇಗೆ ಇಷ್ಟು ಚೆನ್ನಾಗಿ ಡ್ಯಾನ್ಸ್ ಮಾಡ್ತೀರಾ''? ಎಂದು ಪ್ರಶ್ನಿಸಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ್ದ ಅಲ್ಲು ಅರ್ಜುನ್ 'ನನಗೆ ಸಂಗೀತ ತುಂಬಾ ಇಷ್ಟ. ಉತ್ತಮ ಸಂಗೀತ ನೃತ್ಯಮಾಡಿಸುತ್ತೆ. ನೀವು ಇಷ್ಟ ಪಟ್ಟಿದ್ದಕ್ಕೆ ಧನ್ಯವಾದಗಳು" ಎಂದಿದ್ದರು.

More from Filmibeat

English summary
Icon star Allu arjun to Dance with bollywood actress Disha patani in pushpa movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X