»   » ಮುಂದಿನ ಆವೃತ್ತಿಯಿಂದ 'ಬಿಗ್ ಬಾಸ್' ನಿರೂಪಕ ಬದಲಾಗ್ತಿದ್ದಾರೆ.!

ಮುಂದಿನ ಆವೃತ್ತಿಯಿಂದ 'ಬಿಗ್ ಬಾಸ್' ನಿರೂಪಕ ಬದಲಾಗ್ತಿದ್ದಾರೆ.!

Posted By:
Subscribe to Filmibeat Kannada

ತೆಲುಗು ಬಿಗ್ ಬಾಸ್ ರಿಯಾಲಿಟಿ ಶೋ ಮೊದಲ ಆವೃತ್ತಿಯನ್ನ ಯಶಸ್ವಿಯಾಗಿ ನಿರೂಪಣೆ ಮಾಡಿದ್ದ ಜೂನಿಯರ್ ಎನ್.ಟಿ.ಆರ್ ಮುಂದಿನ ಆವೃತ್ತಿಯಲ್ಲಿ ಲಭ್ಯವಿರುವುದಿಲ್ಲ ಎಂಬ ಸುದ್ದಿ ವರದಿಯಾಗಿದೆ.

ಸತತ ಸಿನಿಮಾಗಳಲ್ಲಿ ಬ್ಯುಸಿಯಿರುವ ಕಾರಣ ರಿಯಾಲಿಟಿ ಶೋ ಕಡೆ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ ಎಂದು ಈ ತೀರ್ಮಾನಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ, ಮುಂದಿನ ಆವೃತ್ತಿಯಲ್ಲಿ ಜೂನಿಯರ್ ಎನ್.ಟಿ.ಆರ್ ಕಾಣಿಸಿಕೊಳ್ಳುವುದು ಅನುಮಾನವೆನ್ನಲಾಗಿದೆ.

'ಬಿಗ್ ಬಾಸ್' ಮನೆ ಬೆಂಗಳೂರಿಗೆ ಶಿಫ್ಟ್ ಆಗಿದ್ದೇ 'ಕಿಚ್ಚ'ನಿಂದ: ಈಗದೇ ಮನೆಗೆ ಕಿಚ್ಚು ಬಿತ್ತಲ್ಲ.!

ಎನ್.ಟಿ.ಆರ್ ಬದಲು ತೆಲುಗಿನ ಮತ್ತೊಬ್ಬ ಸ್ಟಾರ್ ನಟ ಬಿಗ್ ಬಾಸ್ ಗೆ ಎಂಟ್ರಿ ಕೊಡಲಿದ್ದಾರೆ. ಮೂಲಗಳ ಪ್ರಕಾರ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ತೆಲುಗು ಬಿಗ್ ಬಾಸ್ ಎರಡನೆ ಆವೃತ್ತಿಯನ್ನ ನಿರೂಪಣೆ ಮಾಡಲಿದ್ದಾರಂತೆ.

Allu Arjun to host Bigg Boss Telugu season 2

ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಆದ್ರೆ, ಈಗಾಗಲೇ ಇದು ನಿರ್ಧಾರವಾಗಿದ್ದು, ಮುಂದಿನ ಆವೃತ್ತಿಯಲ್ಲಿ ಇದು ಚಾಲ್ತಿಗೆ ಬರಲಿದೆಯಂತೆ.

ನಟ ಶಿವ ಬಾಲಾಜಿ ಅವರು ಬಿಗ್ ಬಾಸ್ ತೆಲುಗು ಮೊದಲ ಆವೃತ್ತಿಯ ವಿನ್ನರ್ ಆಗಿದ್ದರು. ತೆಲುಗಿನಲ್ಲಿ ಮಾತ್ರವಲ್ಲದೇ, ಕನ್ನಡ, ಹಿಂದಿ, ತಮಿಳಿನಲ್ಲೂ ಬಿಗ್ ಬಾಸ್ ರಿಯಾಲಿಟಿ ಶೋ ಮೂಡಿ ಬರುತ್ತಿದೆ.

English summary
According to source in place of Jr NTR, there is a solid dance that south superstar Allu Arjun might step in as the host of the bigg boss telugu season 2.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada