Pushpa- 2 release date: ರಾಷ್ಟ್ರ ಪ್ರಶಸ್ತಿ ಸಿಕ್ಕ ಸಂಭ್ರಮದಲ್ಲೇ ಪುಷ್ಪ'-2 ರಿಲೀಸ್ ಡೇಟ್ ಫಿಕ್ಸ್!

2 ವರ್ಷಗಳ ಹಿಂದೆ 'ಪುಷ್ಪ' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಸುಕುಮಾರ್ ನಿರ್ದೇಶನದಲ್ಲಿ ಅಲ್ಲು ಅರ್ಜುನ್ ನಟನೆಯ ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿಗೆ ಅಲ್ಲು ಅರ್ಜುನ್ ಭಾಜನರಾಗಿದ್ದಾರೆ. ಟಾಲಿವುಡ್‌ನಲ್ಲಿ ಸಂಭ್ರಮ ಮನೆ ಮಾಡಿದೆ. ಇದೆಲ್ಲದರ ನಡುವೆ 'ಪುಷ್ಪ'-2 ರಿಲೀಸ್ ಡೇಟ್ ಕನ್ಫರ್ಮ್ ಆಗಿದೆ ಎನ್ನಲಾಗ್ತಿದೆ.

'ಪುಷ್ಪ' ಚಿತ್ರದಲ್ಲಿ ರಕ್ತಚಂದನ ಸ್ಮಗ್ಲರ್ ಆಗಿ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಮಿಂಚಿದ್ದರು. ಚಿತ್ತೂರು ಶೈಲಿಯ ಭಾಷೆ ಕಲಿತು ವಿಭಿನ್ನ ಸ್ಟೈಲ್, ಮ್ಯಾನರಿಸಂ, ಬಾಡಿ ಲಾಂಗ್ವೇಜ್‌ನಿಂದ 'ಪುಷ್ಪ'ರಾಜ್ ಆಗಿ ಅಬ್ಬರಿಸಿದ್ದರು. ಪಾತ್ರಕ್ಕಾಗಿ ಸಾಕಷ್ಟು ಶ್ರಮಿಸಿದ್ದರು. ಅದಕ್ಕೆ ಫಲ ಎನ್ನುವಂತೆ ಈಗ ರಾಷ್ಟ್ರ ಪ್ರಶಸ್ತಿ ಅಲ್ಲು ಅರ್ಜುನ್‌ಗೆ ಸಿಕ್ಕಿದೆ. ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ 'ಪುಷ್ಪ' ಸರಣಿ ಸಿನಿಮಾಗಳನ್ನು ನಿರ್ಮಾಣ ಮಾಡ್ತಿದೆ.

Allu Arjuns Pushpa-2 The Rule release date finalized

ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿ ಪಡೆದ ಮೊದಲ ತೆಲುಗು ನಟ ಎನ್ನುವ ಹೆಗ್ಗಳಿಕೆಗೆ ಅಲ್ಲು ಅರ್ಜುನ್ ಪಾತ್ರರಾಗಿದ್ದಾರೆ. ಸೂರ್ಯ, ಜ್ಯೂ. ಎನ್‌ಟಿಆರ್, ಧನುಷ್, ರಾಮ್‌ಚರಣ್ ಈ ವಿಭಾಗದಲ್ಲಿ ಪ್ರಶಸ್ತಿಗಾಗಿ ಪೈಪೋಟಿ ನಡೆಸಿದ್ದರು. ಆದರೆ ಎಲ್ಲರನ್ನು ಮೀರಿ ಅಲ್ಲು ಅರ್ಜುನ್ ಸಕ್ಸಸ್ ಕಂಡಿದ್ದಾರೆ. ಶೀಘ್ರದಲ್ಲೇ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಇನ್ನು 'ಪುಷ್ಪ' ಚಿತ್ರದ ಸಂಗೀತಕ್ಕಾಗಿ ದೇವಿಶ್ರೀ ಪ್ರಸಾದ್ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಒಬ್ಬ ಸಾಮಾನ್ಯ ರಕ್ತಚಂದನ ಸ್ಮಗ್ಲರ್ ಆಗಿದ್ದ 'ಪುಷ್ಪ'ರಾಜ್ ಕೊನೆಗೆ ಆ ದಂಧೆಯ ಸಿಂಡಿಕೇಟ್‌ನ ತನ್ನ ಕಂಟ್ರೋಲ್‌ಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದ. ಆದರೆ ಅಲ್ಲಿಂದ ಮುಂದೆ 'ಪುಷ್ಪ'ರಾಜ್ ಆರ್ಭಟ ಹೇಗಿರುತ್ತದೆ? ಪೊಲೀಸ್ ಅಧಿಕಾರಿ ಭನ್ವರ್ ಸಿಂಗ್ ಶೇಖಾವತ್ ಜೊತೆ ಆತನ ಕಾದಾಟ ಯಾವ ರೀತಿ ಇರುತ್ತದೆ? ಅನ್ನೋದನ್ನು ಸೀಕ್ವೆಲ್‌ನಲ್ಲಿ ಕಟ್ಟಿಕೊಡಲಾಗುತ್ತಿದೆ. ಕಾರಣಾಂತರಗಳಿಂದ ಸಿನಿಮಾ ಶೂಟಿಂಗ್ ಪದೇ ಪದೇ ತಡವಾಗುತ್ತಿದೆ. 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ 'ಪುಷ್ಪ'ರಾಜ್ ದರ್ಬಾರ್ ಬೆನ್ನಲ್ಲೇ ಸೀಕ್ವೆಲ್ ರಿಲೀಸ್ ಡೇಟ್ ಫಿಕ್ಸ್ ಆಗಿರುವ ಸಿಗುತ್ತಿದೆ.

Allu Arjuns Pushpa-2 The Rule release date finalized

ಮುಂದಿನ ವರ್ಷ ಮಾರ್ಚ್ 22ಕ್ಕೆ 'ಪುಷ್ಪ'-2 ಸಿನಿಮಾ ರಿಲೀಸ್ ಆಗುತ್ತೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ರಿಲೀಸ್ ಡೇಟ್ ಫಿಕ್ಸ್ ಆಗಿದೆ. ಇನ್ನೆರಡು ದಿನಗಳಲ್ಲಿ ಚಿತ್ರತಂಡವೇ ಡೇಟ್ ಅನೌನ್ಸ್ ಮಾಡುತ್ತದೆ ಎನ್ನುವ ಮಾತುಗಳು ಟಾಲಿವುಡ್‌ನಲ್ಲಿ ಕೇಳಿಬರ್ತಿದೆ. ಮಾರ್ಚ್‌ 22ರಂದು ಸಿನಿಮಾ ರಿಲೀಸ್ ಆದ್ರೆ ಮಾರ್ಚ್ 25ರಂದು ಸೋಮವಾರ ಹೋಳಿ ರಜೆ ಇದೆ. ಹಾಗಾಗಿ ಲಾಂಗ್‌ ವೀಕೆಂಡ್ ನೋಡಿ ಡೇಟ್ ಫಿಕ್ಸ್ ಮಾಡಿದ್ದಾರೆ ಎನ್ನಲಾಗ್ತಿದೆ. ಮಾರ್ಚ್ 29 ಗುಡ್‌ಫ್ರೈಡೇ ರಜೆ ಕೂಡ ಇರಲಿದೆ. ಹಾಗಾಗಿ ಮೊದಲ 10 ದಿನದಲ್ಲಿ 'ಪುಷ್ಪ- 2' ಸಿನಿಮಾ ಭರ್ಜರಿ ಕಲೆಕ್ಷನ್ ಲೆಕ್ಕಾಚಾರ ನಡೀತಿದೆ.

ಮೊದಲ ಭಾಗದಲ್ಲಿ ನಟಿಸಿದ್ದ ಬಹುತೇಕ ಕಲಾವಿದರು 2ನೇ ಭಾಗದಲ್ಲೂ ಕಾಣಿಸಿಕೊಳ್ಳಲಿದ್ದಾರೆ. ರಶ್ಮಿಕಾ ಮಂದಣ್ಣ ಶ್ರೀವಲ್ಲಿಯಾಗಿ ಮತ್ತೆ ರಂಜಿಸೋಕೆ ಬರ್ತಿದ್ದಾರೆ. ಜಾಲಿ ರೆಡ್ಡಿಯಾಗಿ ನಟ ರಾಕ್ಷಸ ಧನಂಜಯ್ ಅಬ್ಬರಿಸಲಿದ್ದಾರೆ. 2ನೇ ಭಾಗದಲ್ಲಿ ಅಲ್ಲು ಅರ್ಜುನ್ ಹಾಗೂ ಫಹಾದ್ ಫಾಸಿಲ್ ನಡುವಿನ ಮುಖಾಮುಖಿ ಸನ್ನಿವೇಶಗಳು ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ಕೊಡಲಿದೆ. ಪ್ರೀಕ್ವೆಲ್ 350 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿತ್ತು. 1000 ಕೋಟಿ ರೂ. ಗಳಿಕೆ ಟಾರ್ಗೆಟ್ ಮಾಡಿ ಸೀಕ್ವೆಲ್ ಕಟ್ಟಿಕೊಡಲಾಗುತ್ತಿದೆ.

ಅಲ್ಲು ಅರ್ಜುನ್ ಹುಟ್ಟುಹಬ್ಬಕ್ಕೆ ಬಂದ 'ಪುಷ್ಪ' ಎಲ್ಲಿ? ಟೀಸರ್ ಹಾಗೂ ಫಸ್ಟ್ ಲುಕ್ ಪೋಸ್ಟರ್ ಹಿಟ್ ಆಗಿತ್ತು. ಸ್ಟೈಲಿಶ್ ಸ್ಟಾರ್ ಗಂಗಮ್ಮ ತಲ್ಲಿ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದ ಪೋಸ್ಟರ್ ಅಭಿಮಾನಿಗಳ ಮನಗೆದ್ದಿತ್ತು. ಹಾಗಾಗಿ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕಿದೆ.

More from Filmibeat

English summary
Allu Arjun Starrer Pushpa- 2 Release Date Locked March 22.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X