For Quick Alerts
  ALLOW NOTIFICATIONS  
  For Daily Alerts

  ಗಾಯಕನ ಜತೆಗೆ 'ಹೆಬ್ಬುಲಿ' ನಾಯಕಿ ಲಿವ್ ಇನ್ ರಿಲೇಷನ್‌ಷಿಪ್?

  |

  ಸುದೀಪ್ ಜತೆ 'ಹೆಬ್ಬುಲಿ' ಚಿತ್ರದಲ್ಲಿ ನಟಿಸಿದ್ದ ಅಮಲಾ ಪೌಲ್ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದಾರೆಯೇ? ಹಾಗೆಂದು ಕಾಲಿವುಡ್‌ನಲ್ಲಿ ದಟ್ಟ ವದಂತಿ ಹರಡಿದೆ. ಅದಕ್ಕೆ ಪೂರಕವೆಂಬಂತೆ ಆಕೆ ಹಾಗೂ ಗಾಯಕನೊಬ್ಬ ಜತೆಗೆ ಸುತ್ತಾಡುತ್ತಿರುವ ಫೋಟೊ ವೈರಲ್ ಆಗಿದೆ.

  ದಕ್ಷಿಣ ಭಾರತದ ಸ್ಟಾರ್ ನಟಿಯ ತಂದೆ ವಿಧಿವಶ | Amala Paul | FilmiBeat Kannada

  ಕಳೆದ ವರ್ಷ 'ಆದೈ' ಸಿನಿಮಾದ ಪ್ರಚಾರದ ವೇಳೆ ಅಮಲಾ, ವ್ಯಕ್ತಿಯೊಬ್ಬರನ್ನು ಇಷ್ಟಪಡುತ್ತಿದ್ದು, ನೈಜ ಪ್ರೀತಿ ತಮ್ಮ ನೋವನ್ನು ವಾಸಿ ಮಾಡಿದೆ ಎಂದು ಹೇಳಿದ್ದರು. ಆದರೆ ತಮ್ಮ ಬಾಯ್‌ಫ್ರೆಂಡ್‌ನ ಗುರುತು ಬಹಿರಂಗಪಡಿಸಲು ಅವರು ನಿರಾಕರಿಸಿದ್ದರು. ಈಗ ಸುಮಾರು ಒಂದು ವರ್ಷದ ಬಳಿಕ ಅಮಲಾ ಪೌಲ್ ಪ್ರೇಮ ಪರಿಣಯದ ಪ್ರಸಂಗದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಿದಾಡುತ್ತಿದೆ. ಅಮಲಾ ಪೌಲ್, ಮುಂಬೈ ಮೂಲದ ಗಾಯಕರೊಬ್ಬರ ಜತೆ ಲಿವ್ ಇನ್ ರಿಲೇಷನ್‌ಷಿಪ್‌ನಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.

  ಅಮಲಾ ಪೌಲ್ ಮದುವೆ ಮುರಿದು ಬೀಳಲು ಧನುಷ್ ಕಾರಣನಾ.?ಅಮಲಾ ಪೌಲ್ ಮದುವೆ ಮುರಿದು ಬೀಳಲು ಧನುಷ್ ಕಾರಣನಾ.?

  ಅಮಲಾ-ಸಿಂಗ್ ಫೋಟೊ ವೈರಲ್

  ಅಮಲಾ-ಸಿಂಗ್ ಫೋಟೊ ವೈರಲ್

  ಮುಂಬೈ ಮೂಲದ ಗಾಯಕ ಭವ್ನಿಂದರ್ ಸಿಂಗ್ ಜತೆಗೆ ಅಮಲಾ ಪೌಲ್ ಲಿವ್ ಇನ್ ರಿಲೇಷನ್‌ಷಿಪ್‌ನಲ್ಲಿ ಇದ್ದಾರಂತೆ. ಭವ್ನಿಂದರ್ ಜತೆಗೆ ಅಮಲಾ ಬುರ್ಕಾದಲ್ಲಿ ಓಡಾಡುತ್ತಿದ್ದ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

  ಭವ್ನಿಂದರ್ ಇನ್‌ಸ್ಟಾದಲ್ಲಿ ಫೋಟೊ

  ಭವ್ನಿಂದರ್ ಇನ್‌ಸ್ಟಾದಲ್ಲಿ ಫೋಟೊ

  ಭವ್ನಿಂದರ್ ಅವರ ಇನ್‌ಸ್ಟಾಗ್ರಾಂ ಪುಟದಲ್ಲಿ ಮತ್ತೊಂದು ಫೋಟೊ ಇದ್ದು, ಅದರಲ್ಲಿ ಅವರು ಯುವತಿಯೊಬ್ಬಳನ್ನು ಹಿಂದಿನಿಂದ ತಬ್ಬಿಕೊಂಡಿರುವುದು ಕಾಣಿಸುತ್ತದೆ. ಆದರೆ ಯುವತಿಯ ಮುಖ ಕಾಣಿಸುವುದಿಲ್ಲ. ಇದು ಅಮಲಾಪೌಲ್ ಅವರೇ ಎಂದು ಅಭಿಮಾನಿಗಳು ಹೇಳಿದ್ದಾರೆ. ಇಬ್ಬರೂ ಇತ್ತೀಚೆಗೆ ಬಾಲಿಯಲ್ಲಿ ರಜೆ ದಿನಗಳನ್ನು ಕಳೆಯಲು ತೆರಳಿದ್ದರು. ಅಲ್ಲಿ ಅನೇಕ ಚಿತ್ರಗಳನ್ನು ಕ್ಲಿಕ್ಕಿಸಿದ್ದರು ಎಂದು ಹೇಳಲಾಗಿದೆ.

  ಧನುಶ್ ಬಗ್ಗೆ ಮಾತಾಡಿ ಮತ್ತೆ ಟ್ರೋಲ್ ಆದ ಅಮಲಾ ಪೌಲ್ಧನುಶ್ ಬಗ್ಗೆ ಮಾತಾಡಿ ಮತ್ತೆ ಟ್ರೋಲ್ ಆದ ಅಮಲಾ ಪೌಲ್

  ತಾಯಿ ಮಾತ್ರ ಅಂತಹ ತ್ಯಾಗ ಮಾಡಬಲ್ಲಳು

  ತಾಯಿ ಮಾತ್ರ ಅಂತಹ ತ್ಯಾಗ ಮಾಡಬಲ್ಲಳು

  ಇತ್ತೀಚೆಗೆ ಸಂದರ್ಶನವೊಂದರಲ್ಲಿ ಅಮಲಾ ಪೌಲ್, ತಮ್ಮನ್ನು ಬೆಂಬಲಿಸುವ ಸಲುವಾಗಿಯೇ ತಮ್ಮ ಬಾಯ್‌ಫ್ರಂಡ್ ತನ್ನ ವೃತ್ತಿ ಬದುಕನ್ನು ತ್ಯಾಗ ಮಾಡಿದ್ದಾನೆ ಎಂದು ಹೇಳಿಕೊಂಡಿದ್ದರು. 'ಒಬ್ಬ ತಾಯಿ ಮಾತ್ರ ಅಂತಹ ಬೇಷರತ್ ಪ್ರೀತಿ ಮತ್ತು ತ್ಯಾಗ ಮಾಡಬಲ್ಲಳು. ನನ್ನ ಜತೆ ಇದ್ದು ನನಗೆ ಬೆಂಬಲ ನೀಡುವ ಸಲುವಾಗಿಯೇ ಈ ವ್ಯಕ್ತಿ ತ್ಯಾಗ ಮಾಡಬಲ್ಲೆ ಮತ್ತು ತನ್ನ ಕೆಲಸ ಬಿಡಬಲ್ಲದೆ ಎಂಬುದನ್ನು ಸಾಬೀತುಪಡಿಸಿದ್ದಾನೆ. ಏಕೆಂದರೆ ಆತನಿಗೆ ನನ್ನ ಪ್ಯಾಷನ್ ಗೊತ್ತಿದೆ ಎಂದು ಅಮಲಾ ಹೇಳಿದ್ದಾರೆ.

  ಮದುವೆಯಾಗಿ ವಿಚ್ಛೇದನ ಪಡೆದಿದ್ದ ಅಮಲಾ

  ಮದುವೆಯಾಗಿ ವಿಚ್ಛೇದನ ಪಡೆದಿದ್ದ ಅಮಲಾ

  ಅಮಲಾ ಪೌಲ್ 2014ರಲ್ಲಿ ಎಎಲ್ ವಿಜಯ್ ಅವರನ್ನು ಅದ್ಧೂರಿ ಸಮಾರಂಭದಲ್ಲಿ ಮದುವೆಯಾಗಿದ್ದರು. ಆದರೆ ಇಬ್ಬರ ನಡುವಿನ ಮನಸ್ತಾಪದಿಂದ 2017ರಲ್ಲಿ ವಿಚ್ಛೇದನ ಪಡೆದುಕೊಂಡಿದ್ದರು. ಗಾಯಕ ಭವ್ನಿಂದರ್ ಸಿಂಗ್ ತಾವು ಮುಸ್ಲಿಂ ಎಂದು ಹೇಳಿಕೊಂಡಿದ್ದರು. ಅತ್ತ ಹುಟ್ಟಿನಿಂದ ಕ್ರೈಸ್ತ ಧರ್ಮಕ್ಕೆ ಸೇರಿರುವ ಅಮಲಾ, ಹಿಂದೂ ಧರ್ಮ ಪಾಲಿಸುತ್ತಿರುವುದಾಗಿ ತಿಳಿಸಿದ್ದರು. 'ಆದೈ' ಬಿಡುಗಡೆ ವೇಳೆ ಭವ್ನಿಂದರ್, 'ನಿನ್ನ ಬಗ್ಗೆ ಬಹಳ ಹೆಮ್ಮೆಯಾಗುತ್ತಿದೆ. ಮತ್ತಷ್ಟು ಎತ್ತರಕ್ಕೇರು ಮತ್ತು ಪ್ರೇಕ್ಷಕರನ್ನು ಮುದಗೊಳಿಸುವುದನ್ನು ಮುಂದುವರಿಸು' ಎಂದು ಹಾರೈಸಿದ್ದರು.

  ಅಮಲಾ ಪೌಲ್ ವಿಚ್ಛೇದನಕ್ಕೆ ಧನುಶ್ ಕಾರಣ: ವಿಜಯ್ ತಂದೆ ಆರೋಪಅಮಲಾ ಪೌಲ್ ವಿಚ್ಛೇದನಕ್ಕೆ ಧನುಶ್ ಕಾರಣ: ವಿಜಯ್ ತಂದೆ ಆರೋಪ

  English summary
  Reports says, south actress Amala Paul is in relationship with Mumbai based singer Bhavninder Singh.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X