»   » ಗಂಡನೊಂದಿಗೆ ಮುನಿಸಿಕೊಂಡ ತಾರೆ ಅಮಲಾ ಪೌಲ್

ಗಂಡನೊಂದಿಗೆ ಮುನಿಸಿಕೊಂಡ ತಾರೆ ಅಮಲಾ ಪೌಲ್

Posted By: ಉದಯರವಿ
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ದಕ್ಷಿಣದ ಚೆಲುವೆ ಅಮಲಾ ಪೌಲ್ ಅವರು ತಮಿಳು ನಿರ್ದೇಶಕ ವಿಜಯ್ ಅವರನ್ನು ಆರು ತಿಂಗಳ ಹಿಂದೆ ವರಿಸಿದ್ದರು. ಅಮಲಾ ಪೌಲ್ ಮಲಯಾಳಿ ಕ್ರಿಶ್ಚಿಯನ್ ಆದರೆ ವಿಜಯ್ ಅವರು ಅಪ್ಪಟ ಹಿಂದೂ ಕುಟುಂಬಕ್ಕೆ ಸೇರಿದವರು. ಇವರಿಬ್ಬರದ್ದೂ ಅಂತರ್ಧಮೀಯ ವಿವಾಹ ಎಂಬುದು ವಿಶೇಷ.

  ಸಂಸಾರದ ತಕ್ಕಡಿಯನ್ನು ಇಬ್ಬರೂ ಸರಿಯಾಗಿಯೇ ತೂಗಿಸಿಕೊಂಡು ಹೋಗುತ್ತಿದ್ದರು. ಆದರೆ ಒಂದು ಸಣ್ಣ ವಿಚಾರಕ್ಕೆ ಇಬ್ಬರ ನಡುವೆ ಮನಸ್ತಾಪ ಬಂದಿದೆ. ಅದೇನೆಂದರೆ ವಿಜಯ್ ಅವರ ಮನೆಯಲ್ಲಿ ಎಲ್ಲರೂ ಪಕ್ಕಾ ಶಾಕಾಹಾರಿಗಳು. [ಹಿಂದೂ ಸಂಪ್ರದಾಯದಂತೆ ಅಮಲಾ ಪೌಲ್ ಮದುವೆ]

  Amala Paul is fond of Non Vegeterian

  ಆದರೆ ಅಮಲಾ ಪೌಲ್ ಗೆ ಮಾತ್ರ ನಾನ್ ವೆಜ್ ಎಂದರೆ ಸಖತ್ ಇಷ್ಟವಂತೆ. ಆಹಾರದ ವಿಚಾರವಾಗಿ ಇತ್ತೀಚೆಗೆ ಇಬ್ಬರ ನಡುವೆ ಸಣ್ಣ ಜಗಳವಾಗಿದೆ. ಮಾಂಸಾಹರವನ್ನು ಬಿಟ್ಟುಬಿಡುವಂತೆ ಅಮಲಾಗೆ ತನ್ನ ಪತಿ ವಿಜಯ್ ಸಲಹೆ ನೀಡಿದ್ದಾರೆ. ಬಿಲ್ ಕುಲ್ ಅಂದ್ರೂ ನನ್ನಿಂದ ಆಗಲ್ಲ ಎಂದು ಮೂತಿ ತಿರುವಿದರಂತೆ ಅಮಲಾ. [ಸ್ಯಾಂಡಲ್ ವುಡ್ ಮಹಾಚುನಾವಣೆ 2014 - ನಿಮ್ಮ ಮತ ಯಾರಿಗೆ?]

  ಇದೇ ವಿಚಾರವಾಗಿ ಇಬ್ಬರ ನಡುವೆ ಈಗ ಮಾತಿಲ್ಲ ಕಥೆಯಿಲ್ಲವಂತೆ. ನಾನೊಂದು ತೀರಾ ನೀನೊಂದು ತೀರಾ ಎಂಬಂತಾಗಿದೆಯಂತೆ. ಗಂಡಹೆಂಡತಿ ಜಗಳ ಉಂಡು ಮಲಗುವ ತನಕ ಬಿಡ್ರಿ ಎಂದೂ ಅಮಲಾ ಅಭಿಮಾನಿಗಳು ತಲೆಕೆಡಿಸಿಕೊಂಡಿಲ್ಲ ಬಿಡಿ.

  ಗಂಡಹೆಂಡತಿ ಎಂದ ಮೇಲೆ ಈ ರೀತಿಯ ಸಣ್ಣಪುಟ್ಟ ಜಗಳ, ಮನಸ್ತಾಪ ಇಲ್ಲದಿದ್ದರೆ ಹೇಗೆ. ಇರಲಿ ಗಂಡಹೆಂಡತಿ ಜಗಳ ನಮಗ್ಯಾಕೆ ಬಿಡಿ. ಒಟ್ಟಾರೆ ತನ್ನ ಗಂಡನ ಸಂಪೂರ್ಣ ಸಹಕಾರದಿಂದ ಮದುವೆಯಾದ ಮೇಲೂ ಅಮಲಾ ಬಣ್ಣ ಹಚ್ಚುತ್ತಿದ್ದಾರೆ. ಇನ್ನೊಂದು ಕಡೆ ವಾಣಿಜ್ಯ ಜಾಹೀರಾತುಗಳಲ್ಲಿ ಮಿಂಚುತ್ತಿದ್ದಾರೆ.

  ತೀರಾ ಇತ್ತೀಚೆಗೆ ಚಿತ್ರೀಕರಣಕ್ಕೆಂದು ಮಲೇಷ್ಯಾಗೆ ಹೋಗಿದ್ದ ಅಮಲಾ ಅಲ್ಲಿ ಸಿಕ್ಕಾಪಟ್ಟೆ ಸೀ ಫುಡ್ ಅದೂ ಇದೂ ತಿಂದು ನಾಲಿಗೆ ಮರಗಟ್ಟಿ ಹೋಗಿತ್ತಂತೆ. ಕೇರಳಕ್ಕೆ ಬಂದ ಕೂಡಲೇ ಒಂದು ವಾರ ನಾನ್ ವೆಜ್ ಮುಟ್ಟಲ್ಲ ಎಂದು ಹೇಳಿ ಪಕ್ಕಾ ಸೊಪ್ಪು ಸದೆ ತರಕಾರಿಗೆ ಫಿದಾ ಆಗಿದ್ದಾರಂತೆ.

  English summary
  Most of the actors and actresses are foodie and loves to have variety of dishes while they are on some international tours. But Amala Paul is quite opposite to this wish, wait wait don’t come to a conclusion that she is not a foodie. Amala Paul is very fond of food and especially she craves for Kerala non-vegetarian cuisine.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more