For Quick Alerts
  ALLOW NOTIFICATIONS  
  For Daily Alerts

  ಸ್ತನವರ್ಧಕ ಚಿಕಿತ್ಸೆ ಮಾಡಿಸಿಕೊಂಡ ತಾರೆ ಅಮಲಾ

  By Rajendra
  |

  ಇತ್ತೀಚೆಗೆ ಅಮಲಾ ಪೌಲ್ ಎಂಬ ತಾರೆ ಅಮೆರಿಕಾಗೆ ಭೇಟಿ ನೀಡಿರುವುದು ಪಕ್ಕದ ರಾಜ್ಯಗಳಲ್ಲಿ ಭಾರಿ ಸುದ್ದಿಯಾಗಿದೆ. ಅಮೆರಿಕಾಗೆ ಈಕೆ ಭೇಟಿ ನೀಡಿರುವ ಹಿಂದಿನ ಉದ್ದೇಶ ಏನಿರಬಹುದು ಎಂಬ ಬಗ್ಗೆ ಬಿಸಿಬಿಸಿ ಚರ್ಚೆ ನಡೆದಿದೆ. ಕಡೆಗೆ ಅದರ ರಹಸ್ಯವೂ ಬಹಿರಂಗವಾಗಿದೆ.

  ಚಿತ್ರರಂಗದ ಚಿತ್ರಗುಪ್ತರ ಕಿವಿಗೆ ಬಿದ್ದ ಸಮಾಚಾರ ಏನಪ್ಪಾ ಎಂದರೆ ಈಕೆ ಯುಎಸ್ ಗೆ ಭೇಟಿ ನೀಡಿದದ್ದು ತಮ್ಮ ಸ್ತನ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಎನ್ನಲಾಗಿದೆ. ತಮ್ಮ ಸ್ತನಗಳು ದುಂಡಗೆ ಎದ್ದು ಕಾಣುವಂತೆ ಮಾಡಿಸಿಕೊಳ್ಳಲು ಶಸ್ತ್ರಚಿಕಿತ್ಸೆಯನ್ನೂ ಮಾಡಿಸಿಕೊಂಡಿದ್ದಾರಂತೆ.

  ಈ ಸುದ್ದಿಯನ್ನು ಸ್ವತಃ ಅಮಲಾ ಅವರೇ ತಮ್ಮ ಆಪ್ತ ಬಳದ ಜೊತೆ ಕಿವಿಯಲ್ಲಿ ಹೇಳಿದ್ದಾರೆ. ಯಾರಿಗೂ ಹೇಳಬೇಡಿ ಎಂದಿದ್ದ ಆ ಸುದ್ದಿ ಆ ಕಿವಿಯಿಂದ ಈ ಕಿವಿಗೆ ಹರಿದು ಕಡೆಗೆ ಎಲ್ಲೆಡೆಯೂ ಟಾಂ ಟಾಂ ಆಗಿದೆ. ಇತ್ತೀಚೆಗೆ ಯಾವುದೋ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಈಕೆಯ ಸೌಂದರ್ಯ ವರ್ಧಕ ಚಿಕಿತ್ಸೆ ಎಲ್ಲರ ಕಣ್ಣು ಕುಕ್ಕಿದೆ.

  ಯುಎಸ್ ನಲ್ಲಿರುವ ಪ್ರಮುಖ ಕಾಸ್ಮೆಟಿಕ್ ಕ್ಲಿನಿಕ್ ನಲ್ಲಿ ಮೊದಲೇ ಅಪಾಯಿಂಟ್ ಮೆಂಟ್ ತೆಗೆದುಕೊಂಡಿದ್ದರಂತೆ. ಮೂರು ನಾಲ್ಕು ದಿನಗಳ ಕಾಲ ಎಡಬಿಡದೆ ಚಿಕಿತ್ಸೆ ನಡೆದಿದ್ದು ಈಕೆಯ ಖಾಸಗಿ ಆಸ್ತಿಯನ್ನು ನುರಿತ ವೈದ್ಯರು ಜೀರ್ಣೋದ್ಧಾರ ಮಾಡಿದ್ದಾರೆ.

  ಆದರೆ ಈ ಸುದ್ದಿಯನ್ನು ಅಮಲಾ ಸಾರಾಸಗಟಾಗಿ ತಳ್ಳಿಹಾಕದೆ ಒಂಚೂರು ಬೇರೆ ಅರ್ಥದಲ್ಲಿ ಹೇಳಿಕೊಂಡಿದ್ದಾರೆ. "ನನ್ನ ಹೇರ್ ಸ್ಟೈಲ್ ಬದಲಾಯಿಸಿಕೊಳ್ಳಲು ಯುಎಸ್ ಗೆ ಹೋಗಿದ್ದೆ. ಕೂದಲ ಆರೈಕೆ ಹಾಗೂ ಹೊಸ ಹೇರ್ ಸ್ಟೈಲ್ ಕಲಿಯಲು ತಾವು ಭೇಟಿ ನೀಡಿದ್ದೆವು" ಎಂದಿದ್ದಾರೆ. ಆದರೆ ಆಕೆಯ ಮಾತುಗಳನ್ನು ನಂಬುವ ಸ್ಥಿತಿಯಲ್ಲಿ ಯಾರೂ ಇಲ್ಲ.

  ಈಗಾಗಲೆ ತಮಿಳು, ತೆಲುಗು ಹಾಗೂ ಮಲಯಾಳಂ ಚಿತ್ರಗಳಲ್ಲಿ ಅಭಿನಯಿಸಿರುವ ಅಮಲಾ ಪೌಲ್ ಗೆ ಅಷ್ಟಾಗಿ ಬೇಡಿಕೆ ಇಲ್ಲದ ತಾರೆ ಎಂಬ ಮುದ್ರೆ ಬಿದ್ದಿತ್ತು. ಈ ಮುದ್ರೆಯನ್ನು ಅಳಿಸಿ ಹಾಕಿಕೊಳ್ಳುವ ಪ್ರಯತ್ನದ ಫಲವೇ ಸ್ತನ ವರ್ಧಕ ಚಿಕಿತ್ಸೆ ಎನ್ನಲಾಗಿದೆ.

  ಕೆಲವರು ಚಿಕ್ಕದು ಎಂದು ದೊಡ್ಡದು ಮಾಡಿಸಿಕೊಂಡರೆ ಇನ್ನೂ ಕೆಲವರು ತೀರಾ ದೊಡ್ಡದಾಯಿತು ಎಂದು ಚಿಕ್ಕದು ಮಾಡಿಸಿಕೊಂಡ ಉದಾಹರಣೆಗಳು ನಮ್ಮ ಮುಂದಿವೆ. ಅಂದಹಾಗೆ ತಾರೆ ನಮಿತಾ ಅವರದು ಉಲ್ಟಾ ಕೇಸು. ಓದಿ ನೋಡಿ. (ಏಜೆನ್ಸೀಸ್)

  English summary
  It is reported that the actress Amala Paul had been to U.S. not to take part in any shooting schedule but to enhance her ‘assets’ to as to look more glamourous on screen in films.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X