For Quick Alerts
  ALLOW NOTIFICATIONS  
  For Daily Alerts

  ಅಂಬರೀಷ್ ತಮ್ಮ ಗೆಳಯನಿಗೇ 'ವಸತಿ' ಮಾಡಿಕೊಡಲಿಲ್ಲ..!

  By ಕುಸುಮ
  |

  ಅಂಬರೀಷ್ ರನ್ನು ರಾಜ್ಯ ಸರ್ಕಾರದ ಸಚಿವ ಸ್ಥಾನದಿಂದ ಕೆಳಗಿಳಿಸಿದ್ದಕ್ಕೆ ನಿನ್ನೆ ಚಿತ್ರರಂಗದ ನಿರ್ಮಾಪಕರು ಪ್ರತಿಭಟಿಸಿದ್ದಾರೆ. ಸಿನಿಮಾಗೆ ಬಂದರೆ ಅಂಬರೀಷ್ ಕನ್ನಡ ಚಿತ್ರರಂಗದ ಪರಮೋಚ್ಚ ನಾಯಕರೇ ಆದರೆ ರಾಜಕೀಯದಲ್ಲಿ ಅಂಬಿಗಿಂತ ಹಿರಿಯ ತಲೆಗಳಿದ್ದಾರೆ ಮತ್ತು ಅವಕಾಶಕ್ಕಾಗಿ ಕಾದವರಿದ್ದಾರೆ. ಇಷ್ಟಕ್ಕೂ ಅಂಬರೀಷ್ ಗೆ ಮನೋರಂಜನಾ ವಲಯಕ್ಕೆ ಸಂಬಂಧಪಟ್ಟ ಖಾತೆಯನ್ನು ಕೊಟ್ಟು ಈಗ ಕೆಳಗಿಳಿಸಿದರೆ? ಇದ್ದದ್ದು ವಸತಿ ಖಾತೆ.

  ಇದಕ್ಕಿಂತ ಹೆಚ್ಚು ಬೇಸರದ ಸಂಗತಿ ಅಂದ್ರೆ ತಮ್ಮ ಕುಚಿಕೂ ಗೆಳೆಯ ಕನ್ನಡಿಗರ ಯಜಮಾನ ವಿಷ್ಣುವರ್ಧನ್ ರಿಗೇ ಒಂದು ವಸತಿ ಮಾಡಿಕೊಡಲಾಗದ ರೆಬೆಲ್ ಸ್ಟಾರ್ ವಿಧಾನಸೌಧದಲ್ಲಿ ವಸತಿ ಖಾತೆ ಪಡೆದು ಏನೇ ಕೆಲಸ ಮಾಡಿದ್ದರೂ ನಮಗೆ ಸಮಾಧಾನ ಇಲ್ಲ ಎನ್ನುತ್ತಿದೆ ವಿಷ್ಣು ಅಭಿಮಾನಿ ಬಳಗ. [ಮುಖ್ಯಮಂತ್ರಿ ಸಿದ್ದರಾಮಯ್ಯಗೆ ವಿಷ್ಣು ಅಭಿಮಾನಿಗಳ ಪತ್ರ]

  ಅಂಬರೀಷ್ ಮನಸ್ಸು ಮಾಡಿದರೆ ಭಾರತಿ ವಿಷ್ಣುವರ್ಧನ್ ರನ್ನು ಮನವೋಲಿಸುವುದು ಸರ್ಕಾರದಿಂದ ಸಕಲ ವ್ಯವಸ್ಥೆಯನ್ನು ಮಾಡುವುದು ದೊಡ್ಡ ಕಷ್ಟದ ಕೆಲಸವೇನೂ ಅಲ್ಲ ಎನ್ನುತ್ತಿದ್ದಾರೆ ಸಾಹಸಿಂಹನ ಅಭಿಮಾನಿಗಳು. [ವಿಷ್ಣುವರ್ಧನ್ ಸ್ಮಾರಕದ ಕಥೆ ಹೇಳುವೆ, ನಿನ್ನ ಕಥೆ ಹೇಳುವೆ!]

  ಮೂರು ವರ್ಷ ಹಿಂದಕ್ಕೆ ಒಮ್ಮೆ ಯೋಚಿಸಿ, ಅಂಬರೀಷ್ ರಿಗೆ ಸಚಿವಸ್ಥಾನ ಸಿಕ್ಕಾಗ ಎಲ್ಲರಿಗೂ ಮೊದಲು ನೆನಪಾಗಿದ್ದೇ ವಿಷ್ಣು ಸಮಾಧಿಯ ವಿಚಾರ. ಅಂಬಿ ಸಚಿವರಾದ್ರೆ ವಿಷ್ಣು ಸಮಾಧಿ ನಿರ್ಮಾಣವಾದಂತೆಯೇ ಅಂತ ಚಿತ್ರರಂಗದವರು ಮತ್ತು ಚಿತ್ರಪ್ರೇಮಿಗಳು ಅಂದುಕೊಂಡ್ರು.

  ಈಗ ಚಿತ್ರರಂಗ ಅಂಬರೀಷ್ ಗೆ ಸಚಿವ ಸ್ಥಾನ ಕೈ ತಪ್ಪಿದ್ದಕ್ಕೆ ಪ್ರತಿಭಟಿಸುತ್ತದೆಯಾ? ಮತ್ತೆ ಅಂಬಿ ಮಂತ್ರಿಯಾಗ್ತಾರಾ? ಗೊತ್ತಿಲ್ಲ. ಆದರೆ ಅದೊಂದು ಕೆಲಸ ಮಾಡಿದ್ರೆ ಅಂಬಿಯನ್ನು ಇಡೀ ಕರ್ನಾಟಕವೇ ಕೃತಜ್ಞತೆಯಿಂದ ಸ್ಮರಿಸುತ್ತೆ.

  English summary
  Being Housing Minister, Kannada Actor, Congress Politician, Housing Minister Ambareesh could have taken initiative to build Dr.Vishnuvardhan memorial. But now Ambareesh has lost that opportunity.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X