'ಡ್ರಾಮಾ' ಬಳಿಕ ಮತ್ತೆ ಯೋಗರಾಜ್ ಭಟ್ ಚಿತ್ರದಲ್ಲಿ ಅಂಬರೀಶ್
Recommended Video

ನಟ ಅಂಬರೀಶ್ ಒಂದು ಕಡೆ ತಮ್ಮ ಮಗ ಅಭಿಷೇಕ್ ಅವರನ್ನು 'ಅಮರ್' ಸಿನಿಮಾದ ಮೂಲಕ ಲಾಂಚ್ ಮಾಡುತ್ತಿದ್ದಾರೆ. ಇನ್ನೊಂದು ಕಡೆ ತಾವು 'ಅಂಬಿ ನಿಂಗೆ ವಯಸ್ತಾಯ್ತೋ' ಸಿನಿಮಾದಲ್ಲಿ ನಾಯಕ ನಟರಾಗಿ ನಟಿಸುತ್ತಿದ್ದಾರೆ. ವಿಶೇಷ ಅಂದರೆ, ಈ ಸಿನಿಮಾದ ನಂತರ ಮತ್ತೊಂದು ಹೊಸ ಸಿನಿಮಾದ ಹಾಡಿನಲ್ಲಿ ಅಂಬರೀಶ್ ಕಾಣಿಸಿಕೊಳ್ಳುತ್ತಿದ್ದಾರೆ.
ನಿರ್ದೇಶಕ ಯೋಗರಾಜ್ ಭಟ್ ತಮ್ಮ 'ಪಂಚತಂತ್ರ' ಸಿನಿಮಾದಲ್ಲಿ ಒಂದು ವಿಶೇಷ ಹಾಡನ್ನು ಪ್ಲಾನ್ ಮಾಡಿದ್ದಾರೆ. ತಮ್ಮ ಈ ಹಾಡಿಗೆ ಅಂಬರೀಶ್ ಕುಣಿಯಬೇಕು ಎನ್ನುವುದು ಭಟ್ಟರ ಆಸೆ ಆಗಿದೆ. ಈ ಬಗ್ಗೆ ಯೋಗರಾಜ್ ಭಟ್ ಈಗಾಗಲೇ ಅಂಬರೀಶ್ ಅವರ ಜೊತೆ ಮಾತುಕತೆ ನಡೆಸಿದ್ದಾರಂತೆ. ಅಂಬಿ ಓಕೆ ಎಂದ ತಕ್ಷಣ ಹಾಡಿನ ಚಿತ್ರೀಕರಣ ನಡೆಯಲಿದೆ.
ಅಂದಹಾಗೆ, ಈ ಹಿಂದೆ ಯೋಗರಾಜ್ ಭಟ್ ಅವರ 'ಡ್ರಾಮಾ' ಸಿನಿಮಾದ 'ಗೊಂಬೆ ಆಡ್ಸೋನು ಮೇಲೆ ಕುಂತವ್ನೆ..' ಹಾಡಿಗೆ ಅಂಬಿ ಹೆಜ್ಜೆ ಹಾಕಿದ್ದರು. ಈ ಹಾಡು ಜನರ ಫೇವರೇಟ್ ಆಗುವುದರ ಜೊತೆಗೆ ಎಷ್ಟೊ ಪ್ರಶಸ್ತಿಗಳನ್ನು ಪಡೆಯಿತು. ಸೋ, ಆ ಹಾಡಿನ ದೊಡ್ಡ ಯಶಸ್ಸಿನ ಬಳಿಕ ಮತ್ತೆ ಯೋಗರಾಜ್ ಭಟ್ ಹಾಗೂ ಅಂಬರೀಶ್ ಒಂದಾಗಲಿದ್ದಾರೆ.

'ಪಂಚತಂತ್ರ' ಸಿನಿಮಾದಲ್ಲಿ ವಿಹಾನ್ ಗೌಡ ಸೋನಲ್ ಹಾಗೂ ಅಕ್ಷರ ಗೌಡ ಲೀಡ್ ರೋಲ್ ನಲ್ಲಿ ನಟಿಸಿದ್ದಾರೆ. ಹರಿಕೃಷ್ಣ ಸಂಗೀತ, ಯೋಗರಾಜ್ ಭಟ್ ಸಾಹಿತ್ಯ ಹಾಡುಗಳಲ್ಲಿ ಇರಲಿದೆ.


Click it and Unblock the Notifications











