ವಿಷ್ಣು ಸ್ನೇಹಕ್ಕಾಗಿ ಅಂಬಿ ಅಂತ್ಯಸಂಸ್ಕಾರದ ವಿಧಿ ವಿಧಾನಗಳು ಬದಲಾಯ್ತಾ.?
ಮಂಡ್ಯದ ಮಳವಳ್ಳಿ ಹುಚ್ಚೇಗೌಡ ಅಮರ್ ನಾಥ್ ಮೂಲತಃ ಒಕ್ಕಲಿಗರು. ಒಕ್ಕಲಿಗ ಸಂಪ್ರದಾಯದಂತೆ ಅಂಬಿ ಅವರ ಸಂಪೂರ್ಣ ಅಂತ್ಯಕ್ರಿಯೆ ನಡೆದಿದ್ಯಾ ಎಂಬ ಕುತೂಹಲ ಈಗ ಕಾಡುತ್ತಿದೆ. ಯಾಕಂದ್ರೆ, ಬ್ರಾಹ್ಮಣ ಪದ್ದತಿಯನ್ನ ಹೋಲುವಂತೆ ಅಂತಿಮ ಸಂಸ್ಕಾರ ಮಾಡಲಾಗಿದೆ ಎಂಬ ಮಾತು ಕೇಳಿಬರುತ್ತಿದೆ.
ಅದಕ್ಕೆ ಕಾರಣವೂ ಇದೆಯಂತೆ. ರೆಬೆಲ್ ಸ್ಟಾರ್ ಅಂಬಿ ಅವರ ಆಸೆಯ ಪ್ರಕಾರವೇ ಅಂತ್ಯಕ್ರಿಯೆ ಆಗಬೇಕು ಎಂಬುದು ಕುಟುಂಬದವರ ನಿರ್ಧಾರವಾಗಿದ್ದು, ಅಂಬಿ ಅಂದುಕೊಂಡಂತೆ ವಿಧಿವಿಧಾನಗಳನ್ನ ಮಾಡಲಾಗಿದೆಯಂತೆ.
ಹಾಗಿದ್ರೆ, ಅಂಬರೀಶ್ ಅವರೇ ಹೇಳಿದ್ದರಾ, ''ನನ್ನ ಅಂತ್ಯಕ್ರಿಯೆ ಹೀಗೆ ನಡೆಯಬೇಕು'' ಎಂದು. ಅದಕ್ಕೆ ಕಾರಣ ಅಂಬಿಯ ಆಪ್ತಮಿತ್ರ ದಿವಂಗತ ನಟ ಡಾ ವಿಷ್ಣುವರ್ಧನ್ ಅಂತ ಹೇಳಲಾಗ್ತಿದೆ. ಅಷ್ಟಕ್ಕೂ, ಅಂಬಿಯ ಆಸೆ ಏನಾಗಿತ್ತು.? ಮುಂದೆ ಓದಿ....

ವಿಷ್ಣು ಜಾಗದಲ್ಲೇ ಅಂತ್ಯಕ್ರಿಯೆ ನಡೆಯಬೇಕಿತ್ತಂತೆ
ಡಾ ವಿಷ್ಣುವರ್ಧನ್ ಮತ್ತು ಅಂಬರೀಶ್ ಆಪ್ತಮಿತ್ರರು. ಬದುಕಿದ್ದಾಗ ಒಬ್ಬರನ್ನ ಬಿಟ್ಟು ಇನ್ನೊಬ್ಬರ ಇರದಂತೆ ಜೀವಿಸಿದ್ದರು. ಸ್ನೇಹಕ್ಕೆ ಮಾದರಿಯಾಗಿದ್ದರು. ಆದ್ರೆ, ಅಂಬಿಯನ್ನ ಬಿಟ್ಟು ವಿಷ್ಣು ವಿಧಿವಶರಾಗಿದ್ದರು. ಇದೀಗ, ಸ್ನೇಹಿತನನ್ನ ಬಿಟ್ಟು ಇರದ ಅಂಬಿ ಕುಚಿಕು ಬಳಿ ಹೋದರು. ಬಟ್, ಅಂಬರೀಶ್ ಗೆ ಒಂದು ಆಸೆಯಿತ್ತಂತೆ. ವಿಷ್ಣುವರ್ಧನ್ ಅಂತ್ಯ ಸಂಸ್ಕಾರ ನಡೆದ ಜಾಗದಲ್ಲಿ ನನ್ನ ಅಂತ್ಯಕ್ರಿಯೆಯೂ ಆಗಬೇಕು ಎಂಬ ಬಯಕೆ ಇತ್ತಂತೆ. ಇದು ಎಷ್ಟರ ಮಟ್ಟಿಗೆ ಸತ್ಯ ಎಂಬುದು ಕುತೂಹಲ ಮೂಡಿಸಿದೆ.

ವಿಷ್ಣು ಸಂಪ್ರದಾಯದಂತೆ ಅಂಬಿ ಅಂತ್ಯಕ್ರಿಯೆ.!
ಆರಂಭದಲ್ಲಿ ಅಂಬರೀಶ್ ಅವರ ಪಾರ್ಥಿವ ಶರೀರವನ್ನ ಮಣ್ಣಲ್ಲಿ ಹುಳುವುದು ಎನ್ನಲಾಗಿತ್ತು. ಆದ್ರೆ, ಅಂತಿಮ ಕ್ಷಣದಲ್ಲಿ ಅಗ್ನಿಸ್ಪರ್ಶ ಮಾಡಲು ನಿರ್ಧರಿಸಿದರು. ಅಲ್ಲಿಯೂ ವಿಷ್ಣುಗೆ ಅಗ್ನಿಸ್ಪರ್ಶದ ಮೂಲಕವೇ ಅಂತ್ಯಸಂಸ್ಕಾರ ಮಾಡಲಾಗಿತ್ತು. ಹೀಗಾಗಿ, ವಿಷ್ಣುವರ್ಧನ್ ಮಾಡಲಾಗಿದ್ದ ಸಂಪ್ರದಾಯದಂತೆ ಅಂಬಿಗೂ ಅಂತ್ಯಕ್ರಿಯೆ ಮಾಡಲಾಗಿದೆಯಂತೆ.

ಬ್ರಾಹ್ಮಣ ಸಂಪ್ರದಾಯದ ಸಾಮ್ಯತೆ.!
ಒಕ್ಕಲಿಗರ ಸಂಪ್ರದಾಯದಂತೆ ಅಂಬರೀಶ್ ಅವರ ಅಂತ್ಯ ಸಂಸ್ಕಾರ ಮಾಡಿದ್ದು, ಅದರ ಜೊತೆ ಬ್ರಾಹ್ಮಣ ಪದ್ದತಿಯ ಸಾಮ್ಯತೆ ಇರುವಂತೆ ಶಾಸ್ತ್ರಗಳನ್ನ ಮಾಡಲಾಗಿದೆಯಂತೆ. ಸ್ವತಃ ಅಂಬಿಗೆ ಈ ಬಯಕೆ ಇದ್ದರಿಂದ ಕುಟುಂಬದವರು ಅದನ್ನ ಈಡೇರಿಸಿದ್ದಾರೆ ಎನ್ನಲಾಗಿದೆ.

ವಿಷ್ಣು ಪಕ್ಕದಲ್ಲೇ ಮಾಡಬಹುದಿತ್ತು ಅಲ್ವಾ.!
ಅಂಬರೀಶ್ ಮತ್ತು ವಿಷ್ಣುವರ್ಧನ್ ಬದುಕಿದ್ದಾಗ ಒಟ್ಟಿಗೆ ಇದ್ರು, ಸತ್ತ ಮೇಲೂ ಒಟ್ಟಿಗೆ ಒರಲಿ ಎಂಬ ಆಸೆ ಅಭಿಮಾನಿಗಳಲ್ಲಿತ್ತು. ಹಾಗಾಗಿ, ಅಂಬರೀಶ್ ಅವರನ್ನ ಕೂಡ ಅಭಿಮಾನ್ ಸ್ಟುಡಿಯೋದಲ್ಲೇ ಅಂತ್ಯ ಸಂಸ್ಕಾರ ಮಾಡಿ ಎಂಬ ಮಾತು ಕೂಡ ಕೇಳಿಬಂತು. ಒಂದು ವೇಳೆ ಇದೇ ಆಗಿದ್ದರೇ, ಇವರಿಬ್ಬರ ಸ್ನೇಹಕ್ಕೆ ಇದಕ್ಕಿಂತ ಗೌರವ ಬೇರೆಯದ್ದು ಬೇಕಾಗಿರಲಿಲ್ಲ ಅನ್ಸುತ್ತೆ.


Click it and Unblock the Notifications











