ಅಂಬರೀಶ್ ಮಗನ ಮೊದಲ ಸಿನಿಮಾದ ಟೈಟಲ್ ಫಿಕ್ಸ್ ಆಯ್ತು!

By Naveen

ನಟ ರೆಬಲ್ ಸ್ಟಾರ್ ಅಂಬರೀಶ್ ಮಗನ ಸಿನಿಮಾ ಎಂಟ್ರಿಗೆ ವೇದಿಕೆ ಸಿದ್ಧವಾಗಿದೆ. ಈಗಾಗಲೇ ನಟನೆಗೆ ಬೇಕಾದ ತಯಾರಿಯನ್ನು ಅಂಬಿ ಪುತ್ರ ಅಭಿಷೇಕ್ ಮಾಡಿಕೊಳ್ಳುತ್ತಿದ್ದಾರೆ. ಇನ್ನು ನಿರ್ಮಾಪಕ ಸಂದೇಶ್ ನಾಗರಾಜ್ ಅಭಿಷೇಕ್ ಅವರನ್ನು ಲಾಂಚ್ ಮಾಡಲಿದ್ದಾರೆ.

ಆದರೆ ಇದೀಗ ಅಂಬಿ ಮಗನ ಮೊದಲ ಸಿನಿಮಾದ ಟೈಟಲ್ ಫಿಕ್ಸ್ ಆಗಿದೆ. ಚಿತ್ರಕ್ಕೆ 'ಜಲೀಲ' ಎಂಬ ಹೆಸರನ್ನು ಇಡಲಾಗಿದೆ. ವಿಶೇಷ ಅಂದರೆ ಅಂಬರೀಶ್ 'ಜಲೀಲ' ಪಾತ್ರದ ಮೂಲಕವೇ ಚಿತ್ರರಂಗ ಪ್ರವೇಶಿಸಿದ್ದರು. ಪುಟ್ಟಣ್ಣ ಕಣಗಾಲ್ ನಿರ್ದೇಶನದ 'ನಾಗರಹಾವು' ಸಿನಿಮಾದಲ್ಲಿ ಅಂಬಿ 'ಜಲೀಲ'ನಾಗಿ ಅಬ್ಬರಿಸಿದ್ದರು. ಈಗ ಅವರ ಮಗ ಅಭಿಷೇಕ್ ಕೂಡ ತಮ್ಮ ಮೊದಲ ಸಿನಿಮಾದಲ್ಲಿ 'ಜಲೀಲ' ಆಗಿದ್ದಾರೆ.

Ambarish son Abhishek's first movie titled as 'Jaleela'

ಸದ್ಯ ವಿದೇಶದಲ್ಲಿ ಟ್ರೈನಿಂಗ್ ಪಡೆಯುತ್ತಿರುವ ಅಭಿಷೇಕ್, ನಟನ ಕೌಶಲ್ಯವನ್ನ ಕಲಿತು ಭಾರತಕ್ಕೆ ವಾಪಸ್ ಆಗಲಿದ್ದಾರೆ. ಆ ಬಳಿಕ ಅಂದರೆ ಸದ್ಯದ ಮಾಹಿತಿ ಪ್ರಕಾರ 2018ರಲ್ಲಿ ಈ ಸಿನಿಮಾ ಆರಂಭವಾಗಲಿದೆ. ಇನ್ನು ಕನ್ನಡದ ಯುವ ನಿರ್ದೇಶಕರಾದ ಪವನ್ ಒಡೆಯರ್ ಅಥವಾ ಚೇತನ್ ಕುಮಾರ್ ಇಬ್ಬರಲ್ಲಿ ಒಬ್ಬರು ಅಭಿಷೇಕ್ ಅವರ ಚೊಚ್ಚಲ ಚಿತ್ರಕ್ಕೆ ನಿರ್ದೇಶನ ಮಾಡಲಿದ್ದಾರಂತೆ. ಇನ್ನುಳಿದಂತೆ ಈ ಸಿನಿಮಾದ ಬಗ್ಗೆ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. ಸ್ಕ್ರಿಪ್ಟ್ ಕೆಲಸ ನಡೆಯುತ್ತಿದ್ದು, ಯಾವ ಕಥೆ ಆಯ್ಕೆಯಾಗುತ್ತೋ, ಆ ಸ್ಕ್ರಿಪ್ಟ್ ಆಧಾರದ ಮೇಲೆ ಕಲಾವಿದರು ಮತ್ತು ನಿರ್ದೇಶಕನ ಆಯ್ಕೆ ಕೂಡ ಆಗಲಿದೆ.

More from Filmibeat

English summary
Kannada actor Ambarish son Abhishek's first movie titled as 'Jaleela'. Producer Sandesh Nagaraj formally announced that their next project under their banner will feature Ambareesh’s son to be produced by his son Sandesh N.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X