ಚಿರು ಪುತ್ರಿ ಶ್ರೀಜಾ- ಕಲ್ಯಾಣ್ ದೇವ್ ದಾಂಪತ್ಯದಲ್ಲಿ ಬಿರುಕು? ಅಳಿಯನ ಪೋಸ್ಟ್ ವೈರಲ್

ಮೆಗಾಸ್ಟಾರ್ ಚಿರಂಜೀವಿ ಪುತ್ರಿ ಶ್ರೀಜಾ 2ನೇ ಮದುವೆ ಆಗಿರುವುದು ಗೊತ್ತೇಯಿದೆ. ಬಹಳ ಹಿಂದೆ ಶ್ರೀಜಾ ಪೋಷಕರನ್ನು ದಿಕ್ಕರಿಸಿ ಪ್ರೀತಿಸಿದ ಹುಡುಗನ ಜೊತೆ ಹಸೆಮಣೆ ಏರಿದ್ದರು. ಆದರೆ ವೈಯಕ್ತಿಕ ಭಿನ್ನಾಭಿಪ್ರಾಯಗಳಿಂದ ಡಿವೋರ್ಸ್ ಪಡೆದಿದ್ದರು. ನಂತರ ಕಲ್ಯಾಣ್ ದೇವ್ ಎಂಬುವವರ ಜೊತೆ ಬೆಂಗಳೂರಿನಲ್ಲಿ ಅದ್ದೂರಿಯಾಗಿ 2ನೇ ಮದುವೆ ಆಗಿದ್ದರು. ದಂಪತಿಗೆ ಒಬ್ಬ ಮಗಳು ಕೂಡ ಇದ್ದಾಳೆ.

ಬಹಳ ದಿನಗಳಿಂದ ಶ್ರೀಜಾ ಹಾಗೂ ಕಲ್ಯಾಣ್‌ ದೇವ್ ದಾಂಪತ್ಯದಲ್ಲಿ ಎಲ್ಲವೂ ಸರಿಯಿಲ್ಲ. ಇಬ್ಬರೂ ದೂರಾಗಿದ್ದಾರೆ, ಡಿವೋರ್ಸ್‌ಗೂ ಮುಂದಾಗಿದ್ದಾರೆ ಎನ್ನುವ ಗುಸುಗುಸು ಕೇಳಿಬರ್ತಿದೆ. ಆದರೆ ಈ ಬಗ್ಗೆ ಇಬ್ಬರು ಸ್ಪಷ್ಟನೆ ನೀಡುವ ಗೋಜಿಗೆ ಹೋಗುತ್ತಿಲ್ಲ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಪರೋಕ್ಷವಾಗಿ ಹಿಂಟ್ ಕೊಡುತ್ತಾ ಬರ್ತಿದ್ದಾರೆ. ಸೆಲೆಬ್ರೆಟಿಗಳು ಡಿವೋರ್ಸ್‌ಗೂ ಮುನ್ನ ಮಾಡುವಂತೆ ಸೋಷಿಯಲ್ ಮೀಡಿಯಾದಲ್ಲಿ ಸತಿ ಪತಿಯ ನೆನಪುಗಳನ್ನು ಅಳಿಸುವ ಪ್ರಯತ್ನ ಮಾಡ್ತಾರೆ. ಇತ್ತೀಚೆಗೆ ಶ್ರೀಜಾ ಕೂಡ ಕಲ್ಯಾಣ್ ದೇವ್ ಜೊತೆಗಿನ ಫೋಟೊಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಡಿಲೀಟ್ ಮಾಡಿದ್ದರು.

Amid divorce rumours: Chiranjeevi Daughter Sreejas husband kalyan dev post viral

ಶ್ರೀಜಾ- ಕಲ್ಯಾಣ್ ಇಬ್ಬರೂ ದೂರಾಗುತ್ತಾರೆ ಎಂದು ಸುದ್ದಿ ಆಗುತ್ತಿದ್ದರೂ ಎರಡು ಫ್ಯಾಮಿಲಿಯಿಂದ ಸ್ಪಷ್ಟನೆ ಸಿಕ್ಕಿಲ್ಲ. ಇನ್ನು ಶ್ರೀಜಾ ತವರು ಮನೆಯಲ್ಲಿ ಇದ್ದಾರೆ. ಇನ್ನು ಮೆಗಾ ಫ್ಯಾಮಿಲಿ ಕಾರ್ಯಕ್ರಮಗಳಲ್ಲಿ ಇತ್ತೀಚೆಗೆ ಕಲ್ಯಾಣ್ ದೇವ್ ಕಾಣಿಸಿಕೊಳ್ಳುತ್ತಿಲ್ಲ. ಶ್ರೀಜಾ ಹೊಸ ವರ್ಷಕ್ಕೆ ಹಾಕಿದ್ದ ಪೋಸ್ಟ್ ಕೂಡ ಡಿವೋರ್ಸ್ ಬಗ್ಗೆ ಸುಳಿವು ನೀಡುವಂತೆ ಇತ್ತು. ಇದೀಗ ಕಲ್ಯಾಣ್ ಇನ್‌ಸ್ಟಾ ಸ್ಟೋರಿ ಮತ್ತೊಮ್ಮೆ ಇದು ರೀತಿಯ ಅನುಮಾನ ಹುಟ್ಟುಹಾಕಿದೆ.

ಮಕ್ಕಳು ಪೋಷಕರನ್ನು ನೋಡುತ್ತಿದ್ದಂತೆ ಎಕ್ಸೈಟ್ ಆಗುವ ಫೋಟೊವನ್ನು ಶೇರ್ ಮಾಡಿ ಕಲ್ಯಾಣ್ ದೇವ್ "ಮಕ್ಕಳಿಗೆ ತಂದೆ ತಾಯಿ ಪ್ರೀತಿ, ಬೆಂಬಲ ಬಹಳ ಮುಖ್ಯ, ಮಿಸ್ಸಿಂಗ್ ನಿವಿಷ್ಕ, ನಿವಿತ್ರಿ ಎಂದು ಬರೆದುಕೊಂಡಿದ್ದಾರೆ. ಇದನ್ನು ನೋಡಿ ಫ್ಯಾನ್ಸ್ ಕಲ್ಯಾಣ್ ದೇವ್ ಹಾಗೂ ಶ್ರೀಜಾ ದೂರ ದೂರ ಇರುವುದು ನಿಜ. ಶೀಘ್ರದಲ್ಲೇ ಡಿವೋರ್ಸ್ ಕೂಡ ತೆಗೆದುಕೊಳ್ಳುತ್ತಾರೆ ಎನ್ನುತ್ತಿದ್ದಾರೆ. ಜೊತೆಗೆ ಗಂಡ ಹೆಂಡತಿ ದೂರಾದರೂ ಮಕ್ಕಳಿಗೆ ಇಬ್ಬರ ಪ್ರೀತಿ ಸಿಗಬೇಕು ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಶ್ರೀಜಾ ಪತಿಯಿಂದ ಮಕ್ಕಳನ್ನು ದೂರ ಮಾಡಿ ಟಾರ್ಚರ್ ಕೊಡುತ್ತಿದ್ದಾರೆ ಎನ್ನುವ ಅರ್ಥದಲ್ಲಿ ಈಗ ಟಾಲಿವುಡ್‌ನಲ್ಲಿ ಚರ್ಚೆ ಆಗುತ್ತಿದೆ. ಇದಕ್ಕೆಲ್ಲಾ ದಂಪತಿ ಸ್ಪಷ್ಟನೆ ನೀಡಬೇಕಿದೆ. ಇನ್ನು ಶ್ರೀಜಾ ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಹೆಸರಿನ ಜೊತೆಗಿದ್ದ ಕಲ್ಯಾಣ್ ದೇವ್ ಹೆಸರು ಕೈಬಿಟ್ಟಿದ್ದಾರೆ. ಇಬ್ಬರು ಒಬ್ಬರನ್ನೊಬ್ಬರು ಅನ್‌ಫಾಲೋ ಮಾಡಿದ್ದಾರೆ. ಶ್ರೀಜಾ ಮುಂಬೈಗೆ ಹೋಗಿ ಬ್ಯುಸಿನೆಸ್ ಮಾಡುತ್ತಾರೆ. ಅಲ್ಲಿಗೆ ಶಿಫ್ಟ್ ಆಗಿ ಸೆಟ್ಲ್ ಆಗ್ತಾರೆ ಎನ್ನುವ ಮಾತುಗಳು ಕೂಡ ಕೇಳಿ ಬಂದಿತ್ತುಕೆಲ ದಿನಗಳಿಂದ ಇಬ್ಬರೂ ಬೇರೆ ಬೇರೆ ವಾಸಿಸುತ್ತಿರುವ ಬಗ್ಗೆ ಗುಸುಗುಸು ಕೇಳಿ ಬರ್ತಿತ್ತು. ಕಲ್ಯಾಣ್ ದೇವ್ ಹೊಸ ಇನ್‌ಸ್ಟೋರಿಯಿಂದ ಈ ವದಂತಿಗೆ ರೆಕ್ಕೆ ಪುಟ್ಟ ಬಂದಂತಾಗಿದೆ. 2016ರಲ್ಲಿ ಇವರಿಬ್ಬರ ಮದುವೆ ನಡೆದಿತ್ತು.

ಇನ್ನು ಮೆಗಾ ಫ್ಯಾಮಿಲಿ ಸ್ಟಾರ್‌ಗಳು ಸಿನಿಮಾಗಳಲ್ಲಿ ಅಬ್ಬರಿಸುತ್ತಿದ್ದರೂ ಅವರವೈಯಕ್ತಿಯ ಜೀವನದ ವಿಚಾರಗಳು ಪದೇ ಪದೇ ಚರ್ಚೆಗೆ ಗ್ರಾಸವಾಗುತ್ತಿರುತ್ತದೆ. ಶ್ರೀಜಾ ತಮ್ಮ 19ನೇ ವಯಸ್ಸಿನಲ್ಲೇ ಸಿರೀಶ್ ಭಾರಧ್ವಜ್ ಎಂಬುವವರ ಕೈ ಹಿಡಿದಿದ್ದರು. ಪೋಷಕರ ವಿರೋಧದ ನಡುವೆ ಪ್ರೀತಿಸಿದ ಹುಡುಗನ ಮದುವೆ ಆಗಿದ್ದರು. ಆ ಸುದ್ದಿ ಆಗ ಟಾಲಿವುಡ್‌ನಲ್ಲಿ ಭಾರೀ ಸುದ್ದಿಯಾಗಿತ್ತು. ದೊಡ್ಡ ಹೈಡ್ರಾಮಾ ನಡೆದಿತ್ತು. ನಂತರ ಅತ್ತೆ ಮನೆಯಲ್ಲಿ ಕಾಟ ಕೊಡುತ್ತಿದ್ದಾರೆ ಎಂದು ಹೇಳಿ ಶ್ರೀಜಾ 2011ರಲ್ಲಿ ಡಿವೋರ್ಸ್ ಪಡೆದು ಶಿರೀಶ್ ಇಂದ ದೂರಾಗಿದ್ದರು. ನಂತರ ಮತ್ತೆ ತವರು ಮನೆ ಸೇರಿದ್ದರು.

More from Filmibeat

English summary
Amid divorce rumours: Chiranjeevi Daughter Sreeja's husband kalyan dev post viral. The divorce speculation began after Sreeja changed her name and unfollowed Kalyan Dev on Instagram. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X