ನಿಹಾರಿಕಾ- ಚೈತನ್ಯಾ ಬಳಿಕ ಕಲ್ಯಾಣ್ ದೇವ್- ಶ್ರೀಜಾ ಡಿವೋರ್ಸ್? 'ಮಿಸ್ ಯೂ ಮೈ ಬೇಬಿ' ಎಂದ ಚಿರು ಅಳಿಯ

ಚಿರಂಜೀವಿ ಸಹೋದರ ನಾಗಬಾಬು ಪುತ್ರಿ ನಿಹಾರಿಕಾ ಇತ್ತೀಚೆಗೆ ಪತಿಯಿಂದ ಡಿವೋರ್ಸ್ ಪಡೆದಿದ್ದರು. ಕಳೆದ ಕೆಲ ದಿನಗಳಿಂದ ಇಬ್ಬರು ದೂರಾಗುವುದರ ಬಗ್ಗೆ ಗುಸುಗುಸು ಕೇಳಿಬರ್ತಿತ್ತು. ಇತ್ತೀಚೆಗೆ ಅದನ್ನು ಅಧಿಕೃತವಾಗಿ ದಂಪತಿ ಘೋಷಿಸಿದ್ದಾರೆ. ನ್ಯಾಯಾಲಯದಿಂದ ಇಬ್ಬರಿಗೂ ಡಿವೋರ್ಸ್ ಸಿಕ್ಕಿದೆ. ಈಗ ಚಿರು ಪುತ್ರಿ ಶ್ರೀಜಾ ಹಾಗೂ ಕಲ್ಯಾಣ್ ದೇವ್ ದೂರಾಗುವ ಬಗ್ಗೆ ಟಾಲಿವುಡ್‌ನಲ್ಲಿ ಚರ್ಚೆ ಹೆಚ್ಚಾಗ್ತಿದೆ.

ನಿಹಾರಿಕಾ- ಚೈತನ್ಯಾ ಜೊನ್ನಲಗಡ್ಡ ಡಿವೋರ್ಸ್ ವದಂತಿ ರೀತಿಯಲ್ಲೇ ಕಲ್ಯಾಣ್ ಹಾಗೂ ಶ್ರೀಜಾ ಡಿವೋರ್ಸ್ ಬಗ್ಗೆ ವದಂತಿ ಹರಿದಾಡುತ್ತಲೇ ಇದೆ. ಇಬ್ಬರು ಸೋಶಿಯಲ್ ಮೀಡಿಯಾದಲ್ಲಿ ಒಬ್ಬರನ್ನೊಬ್ಬರು ಅನ್‌ಫಾಲೋ ಮಾಡಿದ್ದಾರೆ. ಇಬ್ಬರ ನೆನಪುಗಳನ್ನು ಅಳಿಸಿ ಹಾಕುವ ಪ್ರಯತ್ನ ಮಾಡುತ್ತಾ ಬರ್ತಿದ್ದಾರೆ. ಅಂದರೆ ತಮ್ಮಿಬ್ಬರ ಫೋಟೊಗಳನ್ನು ಡಿಲೀಟ್ ಮಾಡಿದ್ದಾರೆ. ಇನ್ನು ಕಲ್ಯಾಣ್ ದೇವ್ ಆಗಿಂದಾಗ್ಗೆ ಪರೋಕ್ಷವಾಗಿ ತಮ್ಮ ಮಗಳಿಂದ ದೂರ ಇರುವ ಬಗ್ಗೆ ಸುಳಿವು ನೀಡುತ್ತಿದ್ದಾರೆ. ಇದನ್ನೆಲ್ಲಾ ನೋಡಿ ಇಬ್ಬರಿಬ್ಬರು ಕೂಡ ಡಿವೋರ್ಸ್ ಪಡೆಯಲು ಮುಂದಾಗಿದ್ದಾರೆ ಎಂದು ಕೆಲವರು ಮಾತನಾಡುತ್ತಿದ್ದಾರೆ.

Sreeja -Kalyan- dev- Divorce- Rumours

ಚಿರು ಪುತ್ರಿ ಶ್ರೀಜಾಗೆ ಕಲ್ಯಾಣ್ ದೇವ್ ಜೊತೆ ಇದು ಎರಡನೇ ಮದುವೆ. ಶಿರೀಶ್ ಭಾರಧ್ವಜ್ ಎಂಬುವವರನ್ನು ಪ್ರೀತಿಸಿ ಪೋಷಕರ ವಿರೋಧ ಕಟ್ಟಿಕೊಂಡು ಶ್ರೀಜಾ ಮದುವೆ ಆಗಿದ್ದರು. ನಂತರ ಅತ್ತೆ ಮನೆಯಲ್ಲಿ ಕಿರುಕುಳ ನೀಡುತ್ತಿದ್ದಾರೆ ಎಂದು ಆತನಿಗೆ ಡಿವೋರ್ಸ್ ನೀಡಿ ತಂದೆ ಮನೆಗೆ ವಾಪಸ್ ಆಗಿದ್ದರು. 2016ರಲ್ಲಿ ಕಲ್ಯಾಣ್ ದೇವ್ ಹಾಗೂ ಶ್ರೀಜಾ ಮದುವೆ ಆಗಿದ್ದರು. ದಂಪತಿಗೆ ಒಬ್ಬ ಮಗಳು ಇದ್ದಾಳೆ. 7 ವರ್ಷಗಳ ಹಿಂದೆ ಬೆಂಗಳೂರಿನ ದೇವನಹಳ್ಳಿಯ ಚಿರು ಪ್ರಕೃತಿ ಫಾರ್ಮ್‌ ಹೌಸ್‌ನಲ್ಲಿ ಇಬ್ಬರ ಮದುವೆ ನಡೆದಿತ್ತು.

'ಮಿಸ್ ಯೂ ಮೈ ಬೇಬಿ' ಎಂದ ದೇವ್

ಶ್ರೀಜಾ ಹಾಗೂ ಕಲ್ಯಾಣ್ ದೇವ್ ಕಳೆದ ಕೆಲ ದಿನಗಳಿಂದ ಬೇರೆ ಬೇರೆಯಾಗಿ ವಾಸಿಸುತ್ತಿದ್ದಾರೆ. ಅದಕ್ಕೆ ಕಾರಣ ಏನು ಎನ್ನುವುದು ಮಾತ್ರ ಗೊತ್ತಿಲ್ಲ. ಸದ್ಯ ಮಗಳು ನಿವಿಷ್ಕ, ತಾಯಿ ಶ್ರೀಜ ಜೊತೆಗೆ ಇದ್ದಾಳೆ. ವಾರದಲ್ಲಿ ಒಂದು ದಿನ ಅದು ಕೂಡ ಕೇವಲ 4 ಗಂಟೆಗಳ ಕಾಲ ಮಾತ್ರ ತಂದೆ ಬಳಿಗೆ ನಿವಿಷ್ಕ ಹೋಗ್ತಾಳಂತೆ. ಇತ್ತೀಚೆಗೆ ಕಲ್ಯಾಣ್ ದೇವ್ ಪೋಸ್ಟ್‌ನಿಂದ ಅದು ರಿವೀಲ್ ಆಗಿತ್ತು. ಇದೀಗ ಮತ್ತೊಂದು ಪೋಸ್ಟ್‌ನಲ್ಲಿ ಮಗಳ ಬಗ್ಗೆ 'ಮಿಸ್ ಯೂ ಮೈ ಬೇಬಿ' ಎಂದು ಬರೆದುಕೊಂಡಿದ್ದಾರೆ.

ಕಲ್ಯಾಣ್ ದೇವ್ ತಾಯಿ ಹುಟ್ಟುಹಬ್ಬ

ಇತ್ತೀಚೆಗೆ ಕಲ್ಯಾಣ್ ದೇವ್ ತಮ್ಮ ತಾಯಿ ಹುಟ್ಟುಹಬ್ಬ ಆಚರಿಸಿದ್ದಾರೆ. ಆಕೆಗೆ ಶುಭಾಶಯ ಕೋರಿ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್‌ನಲ್ಲಿ ಮಗಳನ್ನು ನೆನಪಿಸಿಕೊಂಡಿದ್ದಾರೆ. 'ಮಿಸ್ ಯೂ ಮೈ ಬೇಬಿ' ನಿವಿಷ್ಕ ಎಂದು ಬರೆದುಕೊಂಡಿದ್ದಾರೆ. ಇಂತಹ ಸಂತಸದ ಸಮಯದಲ್ಲಿ ಮಗಳು ಇರಬೇಕಿತ್ತು ಎಂದು ಚಿರು ಅಳಿಯ ಭಾವಿಸಿದ್ದಾರೆ. ಪ್ರತಿವಾರ ಮಗಳನ್ನು ಭೇಟಿ ಆಗುತ್ತಿದ್ದರೂ ಆಕೆಯನ್ನು ಬಿಟ್ಟಿರಲು ಸಾಧ್ಯವಾಗುತ್ತಿಲ್ಲ ಎಂದು ಕಲ್ಯಾಣ್ ದೇವ್ ಹೇಳುತ್ತಿರುವುದಾಗಿ ನೆಟ್ಟಿಗರು ಅಂದುಕೊಳ್ಳುತ್ತಿದ್ದಾರೆ.

ಈಗಾಗಲೇ ಶ್ರೀಜಾ- ಕಲ್ಯಾಣ್ ಡಿವೋರ್ಸ್?

ಕಲ್ಯಾಣ್ ದೇವ್ 3 ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ. 'ಸೂಪರ್ ಮಚ್ಚಿ' ಎನ್ನುವ ಚಿತ್ರದಲ್ಲಿ ರಚಿತಾ ರಾಮ್, ಚಿರು ಅಳಿಯನ ಜೋಡಿಯಾಗಿ ಮಿಂಚಿದ್ದರು. ಆದರೆ ಆತ ಸಿನಿಮಾಗಳಿಗೆ ಮೆಗಾ ಫ್ಯಾಮಿಲಿ ಸ್ಟಾರ್ಸ್ ಬೆಂಬಲ ಸಿಗಲಿಲ್ಲ. ಅಂದಹಾಗೆ ಹಲವು ದಿನಗಳಿಂದ ಕಲ್ಯಾಣ್- ಶ್ರೀಜಾ ದೂರಾಗಿ ವಾಸಿಸುತ್ತಿದ್ದಾರೆ. ಇಬ್ಬರಿಗೂ ಡಿವೋರ್ಸ್ ಕೂಡ ಸಿಕ್ಕಿದೆ ಎನ್ನಲಾಗ್ತಿದೆ. ಆದರೆ ಇಬ್ಬರು ಇದನ್ನು ಅಧಿಕೃತವಾಗಿ ಎಲ್ಲೂ ಹೇಳಿಕೊಂಡಿಲ್ಲ ಅಷ್ಟೆ ಎನ್ನುವ ವದಂತಿ ಕೂಡ ಇದೆ. ಆದರೆ ಮೆಗಾ ಫ್ಯಾನ್ಸ್ ಇದನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ.

Sreeja -Kalyan- dev- Divorce- Rumours

ಈ ಹಿಂದಿನ ಪೋಸ್ಟ್‌ನಲ್ಲೂ ಸುಳಿವು

ಕೆಲ ದಿನಗಳ ಹಿಂದೆ ಕಲ್ಯಾಣ್ ದೇವ್ ಮಾಡಿದ್ದ ಪೋಸ್ಟ್ ಅಚ್ಚರಿಗೆ ಕಾರಣವಾಗಿತ್ತು. ಮಕ್ಕಳು ಪೋಷಕರನ್ನು ನೋಡುತ್ತಿದ್ದಂತೆ ಎಕ್ಸೈಟ್ ಆಗುವ ಫೋಟೊವೊಂದನ್ನು ಇನ್‌ಸ್ಟಾ ಸ್ಟೋರಿಯಲ್ಲಿ ಹಂಚಿಕೊಂಡಿದ್ದರು. "ಮಕ್ಕಳಿಗೆ ತಂದೆ ತಾಯಿ ಪ್ರೀತಿ, ಬೆಂಬಲ ಬಹಳ ಮುಖ್ಯ, ಮಿಸ್ಸಿಂಗ್ ನಿವಿಷ್ಕ, ನಿವಿತ್ರಿ " ಎಂದು ಕಲ್ಯಾಣ್ ದೇವ್ ಬರೆದುಕೊಂಡಿದ್ದರು. ಆ ಪೋಸ್ಟ್ ನೋಡಿದವರಿಗೂ ಇಬ್ಬರು ಡಿವೋರ್ಸ್ ಮುಂದಾಗಿದ್ದಾರೆ ಎನ್ನುವ ಅನುಮಾನ ವ್ಯಕ್ತಪಡಿಸಿದ್ದರು. ಇದೀಗ ಹೊಸ ಪೋಸ್ಟ್‌ನಲ್ಲೂ ಕಲ್ಯಾನ್ ದೇವ್ ಡಿವೋರ್ಸ್ ಬಗ್ಗೆ ಸುಳಿವು ನೀಡುತ್ತಿರುವಂತೆ ಕಾಣ್ತಿದೆ.

More from Filmibeat

English summary
Amid divorce rumours: Chiranjeevi Daughter Sreeja's husband kalyan dev posted miss you my baby. The divorce speculation began after Sreeja changed her name in Instagram and unfollowed him. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X