ಗಂಡನ ಹಾದಿಯಲ್ಲಿ ನಿಹಾರಿಕಾ.. ಚೈತು ನೆನಪುಗಳನ್ನು ಅಳಿಸಿದ್ರಾ ಮೆಗಾ ಡಾಟರ್? ಡಿವೋರ್ಸ್ ನಿಜವೇ?

By ಫಿಲ್ಮಿಬೀಟ್ ಡೆಸ್ಕ್

ಕಳೆದ ತಿಂಗಳಷ್ಟೇ ಮೆಗಾ ಡಾಟರ್ ನಿಹಾರಿಕಾ ಹಾಗೂ ಪತಿ ಚೈತನ್ಯಾ ಡಿವೋರ್ಸ್‌ಗೆ ಮುಂದಾಗಿದ್ದಾರೆ ಎನ್ನುವ ಗುಸುಗುಸು ಶುರುವಾಗಿತ್ತು. ಅದಕ್ಕೆ ಕಾರಣ ನಾಗಬಾಬು ಅಳಿಯ ತಮ್ಮ ಮದುವೆ ಫೋಟೊಗಳನ್ನು ಇನ್‌ಸ್ಟಾಗ್ರಾಮ್‌ನಿಂದ ಡಿಲೀಟ್ ಮಾಡಿದ್ದರು. ಇಬ್ಬರು ಒಬ್ಬರನ್ನೊಬ್ಬರು ಇನ್‌ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ ಮಾಡಿದ್ದರು. ಡಿವೋರ್ಸ್‌ಗೆ ಮುಂದಾಗುವ ಸೆಲೆಬ್ರೆಟಿಗಳೆಲ್ಲಾ ಮೊದಲು ಮಾಡುವ ಕೆಲಸವನ್ನೇ ಚೈತನ್ಯಾ ಕೂಡ ಮಾಡಿದ್ದಾರೆ ಎನ್ನಲಾಗಿತ್ತು.

ಇದೀಗ ಮತ್ತೆ ನಿಹಾರಿಕಾ- ಚೈತನ್ಯಾ ಡಿವೋರ್ಸ್ ವದಂತಿಗೆ ಜೀವ ಬಂದಂತಾಗಿದೆ. ಅದಕ್ಕೆ ಕಾರಣ ನಿಹಾರಿಕಾ ಕೂಡ ತಮ್ಮ ಮದುವೆ ಫೋಟೊಗಳನ್ನು ಡಿಲೀಟ್ ಮಾಡಿದ್ದಾರೆ. ಇದು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ. ಇಬ್ಬರು ದೂರಾಗ್ತಾರೆ ಎನ್ನುವ ಗುಸು ಗುಸು ಕೇಳಿ ಬೇರಸಗೊಂಡಿದ್ದವರು ಆ ರೀತಿ ಆಗಲ್ಲ, ಶೀಘ್ರದಲ್ಲೇ ಈ ಬಗ್ಗೆ ಪ್ರತಿಕ್ರಿಯೆ ಬರುತ್ತೆ ಅಂದುಕೊಂಡಿದ್ದರು. ಇದೀಗ ನಿಹಾರಿಕಾ ಕೂಡ ಸೋಶಿಯಲ್ ಮೀಡಿಯಾದಲ್ಲಿ ಗಂಡನ ನೆನೆಪುಗಳನ್ನು ಅಳಿಸುವ ಪ್ರಯತ್ನ ಮಾಡಿದ್ರಾ? ಎನ್ನುವ ಅನುಮಾನ ಶುರುವಾಗಿದೆ.

Amid divorce rumours, Niharika also Deletes All Pics With Husband chaithanya From Instagram

3 ವರ್ಷಗಳ ಹಿಂದೆ ರಾಜಸ್ಥಾನದ ಉದಯ್‌ಪುರ್‌ದಲ್ಲಿರುವ ಒಬೆರಾಯ್ ಉದಯ್ ವಿಲಾಸದಲ್ಲಿ ನಿಹಾರಿಕಾ- ಚೈತನ್ಯಾ ಡೆಸ್ಟಿನೇಷನ್ ವೆಡ್ಡಿಂಗ್ ನಡೆದಿತ್ತು. ತೆಲುಗು ಚಿತ್ರರಂಗದ ತಾರೆಯರು, ರಾಜಕೀಯ ಮುಖಂಡರು ಹಾಜರಾಗಿ ನವ ದಂಪತಿಗೆ ಶುಭ ಕೋರಿದ್ದರು. ಇದೀಗ ಇಬ್ಬರ ನಡುವೆ ಎಲ್ಲವೂ ಸರಿಯಿಲ್ಲ, ಇಬ್ಬರೂ ದೂರಾಗುತ್ತಾರೆ ಎನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ನಡೀತಿದೆ. ಈ ಬಗ್ಗೆ ಮೆಗಾ ಫ್ಯಾಮಿಲಿಯ ಯಾರೊಬ್ಬರು ಪ್ರತಿಕ್ರಿಯಿಸುವ ಗೋಜಿಗೇ ಹೋಗಲಿಲ್ಲ. ಅಭಿಮಾನಿಗಳು ಇದೆಲ್ಲಾ ಸುಳ್ಳು ಎಂದು ಹೇಳಿ ಎಂದು ಮನವಿ ಮಾಡುತ್ತಿದ್ದಾರೆ.

ಮೆಗಾಸ್ಟಾರ್ ಚಿರಂಜೀವಿ ಸಹೋದರ ನಾಗಬಾಬು ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ. ಒಂದಷ್ಟು ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಅವರ ಮುದ್ದಿನ ಮಗಳು ನಿಹಾರಿಕಾ ಕೋನಿದೇಲ 2016ರಲ್ಲಿ 'ಒಕ ಮನಸು' ಎನ್ನುವ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು. 'ಹ್ಯಾಪಿ ವೆಡ್ಡಿಂಗ್', 'ಸೂರ್ಯಕಾಂತಂ' ಎನ್ನುವ ಚಿತ್ರಗಳಲ್ಲೂ ನಟಿಸಿದ್ದಾರೆ. ಒಂದೆರಡು ಸಿನಿಮಾಗಳಲ್ಲಿ ನಟಿಸಿ ಸುಮ್ಮನಾದ ನಟಿ, ಮದುವೆ ಆಗಿ ಪರ್ಸನಲ್ ಲೈಫ್‌ನಲ್ಲಿ ಬ್ಯುಸಿ ಆಗಿದ್ದರು. ಆಗೊಮ್ಮೆ ಈಗೊಮ್ಮೆ ಕಿರುತೆರೆಯಲ್ಲಿ ಕಾಣಿಸಿಕೊಂಡು ವೀಕ್ಷಕರ ಗಮನ ಸೆಳೆಯುತ್ತಿದ್ದಾರೆ.

ಎರಡು ತಿಂಗಳ ಹಿಂದೆ ಚೈತನ್ಯಾ ಜೊನ್ನಲಗಡ್ಡ ತಮ್ಮ ಮದುವೆ ಫೋಟೊಗಳು, ನಿಹಾರಿಕಾ ಜೊತೆಗಿನ ಪಾರ್ಟಿ, ಟ್ರಿಪ್ ಫೋಟೊಗಳನ್ನು ಡಿಲೀಟ್ ಮಾಡಿದ್ದರು. ಆಗಲೇ ಇಬ್ಬರ ಡಿವೋರ್ಸ್ ಬಗ್ಗೆ ಗುಸುಗುಸು ಶುರುವಾಗಿತ್ತು. ಇದೀಗ ನಿಹಾರಿಕಾ ಕೂಡ ಅದನ್ನೇ ಮಾಡಿರೋದು ಆ ಅನುಮಾನಗಳಿಗೆ ಮತ್ತಷ್ಟು ತುಪ್ಪ ಸುರಿದಂತಾಗಿದೆ. ಗುಂಟೂರಿನ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ಜೆ. ಪ್ರಭಾಕರ ರಾವ್ ಪುತ್ರ ಚೈತನ್ಯ ಜೊನ್ನಲಗಡ್ಡ. ನಿಹಾರಿಕಾ- ಚೈತನ್ಯಾ ಅವರದ್ದು ಅರೇಂಜ್ಡ್ ಮ್ಯಾರೇಜ್.

ಸದ್ಯ ನಿಜಕ್ಕೂ ಇಬ್ಬರೂ ದೂರಾಗುತ್ತಿದ್ದಾರಾ? ಇಬ್ಬರು ನಡುವೆ ಎಲ್ಲವೂ ಸರಿಯಿಲ್ವಾ? ಡಿವೋರ್ಸ್ ಗಾಸಿಪ್ ಬಗ್ಗೆ ಸ್ಪಷ್ಟನೆ ನೀಡುವುದು ಬಿಟ್ಟು ಪರೋಕ್ಷ ಅದೇ ನಿಜ ಎಂದು ಕ್ಲಾರಿಟಿ ಕೊಟ್ಟಿದ್ದಾರಾ? ಎಂದು ಕೆಲವರು ತಲೆ ಕೆಡಿಸಿಕೊಂಡಿದ್ದಾರೆ. "ದಯವಿಟ್ಟು ಡಿವೋರ್ಸ್ ತಗೋಬೇಡಿ. ಇದೆಲ್ಲಾ ಸುಳ್ಳು ಎಂದು ಹೇಳಿ ಮೇಡಂ" ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. ಮದುವೆಯ ಎಲ್ಲಾ ಫೋಟೊಗಳನ್ನು ಡಿಲೀಟ್ ಮಾಡಿರುವ ನಿಹಾರಿಕಾ ಅದೊಂದು ಫೋಟೊವನ್ನು ಹಾಗೆ ಉಳಿಸಿಕೊಂಡಿದ್ದಾರೆ.

Amid divorce rumours, Niharika also Deletes All Pics With Husband chaithanya From Instagram

ಹೌದು ನಿಹಾರಿಕಾ ಮದುವೆಯ ಎಲ್ಲಾ ಫೋಟೊಗಳನ್ನು ಅಳಿಸಿದ್ದಾರೆ. ಆದರೆ ಮದುವೆ ಸಮಯದಲ್ಲಿ ತಮ್ಮ ಕುಟುಂಬ ಸದಸ್ಯರ ಜೊತೆಗೆ ಕ್ಲಿಕ್ಕಿಸಿದ ಫೋಟೊಗಳನ್ನು ಉಳಿಸಿಕೊಂಡಿದ್ದಾರೆ. ಇನ್ನು ಮದುವೆ ವೇಳೆ ಹಸೆಮಣೆ ಮೇಲೆ ಕೂತಿದ್ದ ಫೋಟೊವೊಂದು ಇದೆ. ಇದರಲ್ಲಿ ಚೈತನ್ಯಾ ಕೂಡ ಇದ್ದರೂ ಕೊಂಚ ಬ್ಲರ್ ಮಾಡಿದಂತೆ ಇದೆ. ನೆಟ್ಟಿಗರು ಕಾಮೆಂಟ್ ಮಾಡಿ ಎಲ್ಲಾ ಫೋಟೊ ಡಿಲೀಟ್ ಮಾಡಿದ್ದೀರಾ? ಇದು ಯಾಕೆ ಬಿಟ್ಟುಬಿಟ್ರಿ? ಎಂದು ಕೇಳ್ತಿದ್ದಾರೆ.

More from Filmibeat

English summary
Amid divorce rumours, Niharika also Deletes All Pics With Husband chaithanya From Instagram. 2 months back Chaitanya has apparently deleted all the pictures of him with Niharika. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X