Duknki: ಶಾರುಖ್ ಖಾನ್ 'ಡಂಕಿ' ಆ ಸೂಪರ್ ಹಿಟ್ ಸಿನಿಮಾ ರೀಮೆಕ್?
ಡಿಸೆಂಬರ್ 22ಕ್ಕೆ 'ಸಲಾರ್' Vs 'ಡಂಕಿ' ಬಾಕ್ಸಾಫೀಸ್ ಕ್ಲ್ಯಾಶ್ ಭಾರೀ ಕುತೂಹಲ ಮೂಡಿಸಿದೆ. ಇತ್ತ ಪ್ರಭಾಸ್ ಹಾಗೂ ಪ್ರಶಾಂತ್ ನೀಲ್. ಅತ್ತ ಶಾರುಖ್ ಖಾನ್ ಹಾಗೂ ರಾಜ್ ಕುಮಾರ್ ಹಿರಾನಿ. ಹೀಗೆ ಕ್ರೇಜಿ ಕಾಂಬಿನೇಷನ್‌ನ 2 ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾಗಳು ಒಂದೇ ದಿನ ತೆರೆಗಪ್ಪಳಿಸುತ್ತಿರುವುದು ಭಾರೀ ಚರ್ಚೆ ಹುಟ್ಟಾಕ್ಕಿದೆ.
ಸೆಪ್ಟೆಂಬರ್ 28ಕ್ಕೆ ರಿಲೀಸ್ ಆಗಬೇಕಿದ್ದ 'ಸಲಾರ್' ಚಿತ್ರವನ್ನು ವರ್ಷಾಂತ್ಯಕ್ಕೆ ಮುಂದೂಡಲಾಗಿದೆ. ಆದರೆ ಬಹಳ ಹಿಂದೆಯೇ ಕ್ರಿಸ್‌ಮಸ್ ಸಂಭ್ರಮದಲ್ಲಿ ಬಿಡುಗಡೆಗೆ ಸಜ್ಜಾಗಿದ್ದ 'ಡಂಕಿ' ಚಿತ್ರಕ್ಕೆ ಇದರಿಂದ ಸಂಕಷ್ಟ ಎದುರಾಗುತ್ತಿದೆ. ಆದರೆ ಶಾರುಖ್ ಕೂಡ ಸಿನಿಮಾ ರಿಲೀಸ್ ಡೇಟ್ ಬದಲಿಸಲು ಸಿದ್ಧರಿಲ್ಲ. ಎರಡೂ ಕೂಡ ದೊಡ್ಡ ಸಿನಿಮಾಗಳಾಗಿರುವುದರಿಂದ ಸಹಜವಾಗಿಯೇ ಬಾಕ್ಸಾಫೀಸ್‌ನಲ್ಲಿ ಭಾರೀ ಪೈಪೋಟಿ ಏರ್ಪಡಲಿದೆ.

ಪ್ರಭಾಸ್‌ಗೆ ಈಗ ಉತ್ತರ ಭಾರತದಲ್ಲೂ ದೊಡ್ಡ ಅಭಿಮಾನಿ ಬಳಗ ಇದೆ. ಹಾಗಾಗಿ ಹಿಂದಿ ಬೆಲ್ಟ್‌ನಲ್ಲಿ 'ಡಂಕಿ' ಚಿತ್ರಕ್ಕೆ ಹಿನ್ನಡೆಯಾಗುವ ಸಾಧ್ಯತೆಯಿದೆ. ಇನ್ನು ಓವರ್‌ಸೀಸ್, ಗಲ್ಫ್ ಭಾಗಗಳಲ್ಲಿ ಶಾರುಖ್ ಹವಾ ಜೋರಾಗಿದ್ದು ಅಲ್ಲಿ 'ಸಲಾರ್' ಸಿನಿಮಾ ಕಲೆಕ್ಷನ್ ಮೇಲೆ ಪೆಟ್ಟು ಬೀಳಬಹುದು ಎಂದು ಅಂದಾಜಿಸಲಾಗುತ್ತಿದೆ. ಬಾಕ್ಸಾಫೀಸ್ ಪಂಡಿತರು ಇದೇ ಲೆಕ್ಕಾಚಾರದಲ್ಲಿ ಬ್ಯುಸಿಯಾಗಿದ್ದಾರೆ. ಸಾವಿರಾರು ಸ್ಕ್ರೀನ್‌ಗಳಲ್ಲೇ ಏಕಕಾಲಕ್ಕೆ ವಿಶ್ವದಾದ್ಯಂತ ಎರಡೂ ಸಿನಿಮಾಗಳು ರಿಲೀಸ್ ಆಗುತ್ತಿವೆ.
'ಸಲಾರ್' Vs 'ಡಂಕಿ' ಚರ್ಚೆ ನಡುವೆಯೇ ನೆಗೆಟಿವ್ ಟ್ರೋಲ್ ಶುರುವಾಗಿದೆ. ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್', ಕನ್ನಡದ 'ಉಗ್ರಂ' ರೀಮೆಕ್ ಎನ್ನುವ ಚರ್ಚೆಯನ್ನು ಕೆಲವರು ಮುಂದಕ್ಕೆ ತಂದಿದ್ದಾರೆ. ಅದಕ್ಕೆ ಒಂದಷ್ಟು ಸಾಕ್ಷಾಧಾರ ತೋರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಚಿತ್ರತಂಡ ಈ ಬಗ್ಗೆ ಮಾತನಾಡಿಲ್ಲ. ಶಾರುಖ್ ಖಾನ್ ಫ್ಯಾನ್ಸ್ ಬೇಕು ಅಂತ್ಲೇ ಈ ರೀತಿ ಟ್ರೋಲ್ ಮಾಡುತ್ತಿದ್ದಾರೆ ಎನ್ನುವ ಆರೋಪವೂ ಕೇಳಿಬರ್ತಿದೆ. ಇದೆಲ್ಲದರ ನಡುವೆ 'ಡಂಕಿ' ಕೂಡ ಮಲಯಾಳಂ ಸಿನಿಮಾ ರೀಮೆಕ್ ಎನ್ನುವ ವಾದವನ್ನು ಪ್ರಭಾಸ್ ಫ್ಯಾನ್ಸ್ ಮುಂದಿಟ್ಟಿದ್ದಾರೆ.
ಹೌದು ಶಾರುಖ್ ಖಾನ್ ನಟನೆಯ 'ಡಂಕಿ' ಚಿತ್ರದಲ್ಲಿ ರಾಜ್‌ಕುಮಾರ್ ಹಿರಾನಿ ಅಕ್ರಮ ವಲಸಿಗರ ಕತೆ ಹೇಳುತ್ತಿದ್ದಾರೆ ಎನ್ನಲಾಗ್ತಿದೆ. ಇಂತದ್ದೇ ಕತೆ ಆಧರಿಸಿ ಮಲಯಾಳಂನಲ್ಲಿ ದುಲ್ಕತ್ ಸಲ್ಮಾನ್ 'CIA' ಎನ್ನುವ ಸಿನಿಮಾ ಬಂದು ಸಕ್ಸಸ್ ಕಂಡಿತ್ತು. ಈ ಚಿತ್ರದಲ್ಲಿ ಒಂದು ಹುಡುಗಿಗಾಗಿ ದುಲ್ಕರ್ ಮಾಡುವ ಪ್ರಯಾಣದ ಕತೆಯನ್ನು ಬಹಳ ಸೊಗಸಾಗಿ ತೆರೆಗೆ ತರಲಾಗಿತ್ತು. ಎಮೋಷನಲ್ ರೋಲರ್ ಕೋಸ್ಟರ್ ರೈಡ್ ಆಗಿದ್ದ ಸಿನಿಮಾಗೆ ಪ್ರೇಕ್ಷಕರು ಫಿದಾ ಆಗಿದ್ದರು.

'ಡಂಕಿ' ದುಲ್ಕರ್ ನಟಿಸಿದ 'CIA' ಸಿನಿಮಾ ಪ್ರೀಮೇಕ್ ಎನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಶುರುವಾಗಿದೆ. ಕೆಲವರು ರೀಮೆಕ್ ಸಿನಿಮಾ ತಂದು 'ಸಲಾರ್' ಜೊತೆ ಪೈಪೋಟಿ ಏನು ಸರ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಆದರೆ ರಾಜ್‌ಕುಮಾರ್ ಹಿರಾನಿ ಪ್ರತಿಭೆ ತಿಳಿದವರು 'ಡಂಕಿ' ರೀಮೆಕ್ ಸಿನಿಮಾ ಅನ್ನೋದನ್ನು ಒಪ್ಪಲು ಸಿದ್ಧರಿಲ್ಲ. 'ಉಗ್ರಂ' ರೀಮೆಕ್ 'ಸಲಾರ್' ಎಂದು ಟ್ರೋಲ್‌ಗೆ ಪ್ರತಿಯಾಗಿ 'CIA' ರೀಮೆಕ್ 'ಡಂಕಿ' ಎನ್ನುವ ಟ್ರೆಂಡ್ ನಡೀತಿದೆ ಅನ್ನೋದು ಕೆಲವರ ವಾದ.
ಈ ವರ್ಷ 'ಪಠಾಣ್' ಹಾಗೂ 'ಜವಾನ್' ಸಿನಿಮಾಗಳ ಮೂಲಕ ಶಾರುಖ್ ಖಾನ್ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾರೆ. ಎರಡೂ ಸಿನಿಮಾಗಳು 1000 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು. ಹಾಗಾಗಿ ಸಹಜವಾಗಿಯೇ ಡಂಕಿ ಸಿನಿಮಾ ಕುತೂಹಲ ಮೂಡಿಸಿದೆ. ರಾಜ್‌ಕುಮಾರ್ ಹಿರಾನಿ ಆಕ್ಷನ್ ಕಟ್ ಹೇಳ್ತಿದ್ದಾರೆ ಅನ್ನೋದು ಕೂಡ ನಿರೀಕ್ಷೆ ಹುಟ್ಟಾಕ್ಕಿದೆ.
ಈ ವರ್ಷ 'ಪಠಾಣ್' ಹಾಗೂ 'ಜವಾನ್' ಸಿನಿಮಾಗಳ ಮೂಲಕ ಶಾರುಖ್ ಖಾನ್ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾರೆ. ಎರಡೂ ಸಿನಿಮಾಗಳು 1000 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು. ಹಾಗಾಗಿ ಸಹಜವಾಗಿಯೇ ಡಂಕಿ ಸಿನಿಮಾ ಕುತೂಹಲ ಮೂಡಿಸಿದೆ. ರಾಜ್‌ಕುಮಾರ್ ಹಿರಾನಿ ಆಕ್ಷನ್ ಕಟ್ ಹೇಳ್ತಿದ್ದಾರೆ ಅನ್ನೋದು ಕೂಡ ನಿರೀಕ್ಷೆ ಹುಟ್ಟಾಕ್ಕಿದೆ.


Click it and Unblock the Notifications











