ವದಂತಿಗಳ ಬೆನ್ನಲ್ಲೇ ಒಟ್ಟಿಗೆ ಕಾಣಿಸಿಕೊಂಡ ಐಶ್ವರ್ಯಾ ರೈ-ಅಭಿಷೇಕ್ ಬಚ್ಚನ್: ಆದರೂ, ಇಲ್ಲೊಂದು ಟ್ವಿಸ್ಟ್!
ಐಶ್ವರ್ಯಾ ರೈ - ಅಭಿಷೇಕ್ ಬಚ್ಚನ್ ವಿಚ್ಛೇದನ ಪಡೆಯಲಿದ್ದಾರೆ ಎಂಬ ವದಂತಿಗಳ ಬೆನ್ನಲ್ಲೇ ಡಿಸೆಂಬರ್ 15 ರಂದು ಮುಂಬೈನಲ್ಲಿ ನಡೆದ ಧೀರೂಭಾಯಿ ಅಂಬಾನಿ ಇಂಟರ್ನ್ಯಾಷನಲ್ ಸ್ಕೂಲ್ ವಾರ್ಷಿಕ ದಿನದ ಕಾರ್ಯಕ್ರಮದಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಇಡೀ ಬಚ್ಚನ್ ಕುಟುಂಬ ಕಾರ್ಯಕ್ರಮದಲ್ಲಿ ಭಾಗಿಯಾಗಿತ್ತು.
ನಟಿ ಐಶ್ವರ್ಯಾ ರೈ ಬಚ್ಚನ್ ಅತ್ತೆ ಮನೆಯನ್ನು ತೊರೆದು ತಾಯಿಯ ಜೊತೆಯಲ್ಲಿ ವಾಸ ಮಾಡುತ್ತಿದ್ದಾರೆ ಎಂದು ನಿನ್ನೇಯಷ್ಟೇ ವರದಿಯಾಗಿತ್ತು. ಅದರ ಬೆನ್ನಲ್ಲೇ ಐಶ್ವರ್ಯಾ ರೈ, ಅಭಿಷೇಕ್ ಬಚ್ಚನ್, ಅಮಿತಾಬ್ ಬಚ್ಚನ್, ಅಗಸ್ತ್ಯ ನಂದಾ ಸೇರಿ ಹಲವರು ಒಂದೇ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ. ಐಶ್ವರ್ಯಾ ರೈ - ಅಭಿಷೇಕ್ ಬಚ್ಚನ್ ಅವರ ಹಲವು ಫೋಟೋಗಳು ಮತ್ತು ವಿಡಿಯೋಗಳು ಪಾಪರಾಜಿಗಳ ಸೋಷಿಯಲ್ ಮೀಡಿಯಾ ಹ್ಯಾಂಡಲ್‌ಗಳಲ್ಲಿ ವೈರಲ್ ಆಗುತ್ತಿವೆ.

ಐಶ್ವರ್ಯಾ ರೈ-ಅಭಿಷೇಕ್ ಬಚ್ಚನ್ ವಿಚ್ಛೇದನ ವದಂತಿ
ಕರಾವಳಿ ಬೆಡಗಿ ಐಶ್ವರ್ಯಾ ರೈ- ಮತ್ತು ಅಭಿಷೇಕ್ ಬಚ್ಚನ್ ದಾಂಪತ್ಯಕ್ಕೆ ಬರೋಬ್ಬರಿ ಹದಿನಾರು ವರ್ಷಗಳಾಗಿವೆ. ಇಬ್ಬರಿಗೆ ಆರಾಧ್ಯ ಎಂಬ ಮುದ್ದಾದ ಮಗಳಿದ್ದಾಳೆ. ಇಬ್ಬರು ಕೂಡ ಮಗಳಿಗಾಗಿಯೇ ಒಂದಾಗಿದ್ದಾರೆ ಎಂಬ ಮಾತುಗಳು ಇವೆ. ಕಳೆದ ಬಾರಿ ಕೂಡ ಇಂತಹದ್ದೇ ಸುದ್ದಿ ಹಬ್ಬಿದಾಗ 'ದಿ ಆರ್ಚೀಸ್' ಸಿನಿಮಾದ ಪ್ರೀಮಿಯರ್ ನೈಟ್‌ನಲ್ಲಿ ಇಡೀ ಬಚ್ಚನ್ ಕುಟುಂಬದೊಂದಿಗೆ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಜಂಟಿಯಾಗಿ ಕಾಣಿಸಿಕೊಂಡಿದ್ದರು.
ಈಗ ಮತ್ತೆ ಐಶ್ವರ್ಯಾ ರೈ ಗಂಡನ ಮನೆ ಬಿಟ್ಟು ಬಂದಿದ್ದಾರೆ ಎಂಬ ವರದಿಗಳ ಬೆನ್ನಲ್ಲೇ, ಮತ್ತೊಂದು ಕಾರ್ಯಕ್ರಮದಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಸದ್ಯ ಐಶ್ವರ್ಯಾ ರೈ, ಅವರ ತಾಯಿ ವೃಂದಾ ರೈ, ಅಭಿಷೇಕ್ ಬಚ್ಚನ್, ಅಮಿತಾಬ್ ಬಚ್ಚನ್ ಮತ್ತು ಅಗಸ್ತ್ಯ ನಂದಾ ಶಾಲಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.
ಬೇರೆ ಬೇರೆ ಕಾರುಗಳಲ್ಲಿ ಬಂದ ದಂಪತಿ!
ಬಾಲಿವುಡ್ ಜೋಡಿ ಇಬ್ಬರು ಒಟ್ಟಾಗಿ ಕಾಣಿಸಿಕೊಂಡಿದ್ದಾರೆ ನಿಜ. ಆದರೆ, ಇಬ್ಬರು ಬಂದಿದ್ದು ಬೇರೆ ಬೇರೆ ಕಾರುಗಳಲ್ಲಿ. ಅಂದರೆ ನಟಿ ಐಶ್ವರ್ಯಾ ರೈ ತಮ್ಮ ತಾಯಿ ಅವರೊಂದಿಗೆ ಕಾರಿನಲ್ಲಿ ಆಗಮಿಸಿದರೆ, ಅಭಿಷೇಕ್ ಬಚ್ಚನ್ ತಮ್ಮ ತಂದೆ, ನಟ ಅಮಿತಾಬ್ ಬಚ್ಚನ್ ಮತ್ತು ಸೋದರಳಿಯ ಅಗಸ್ತ್ಯ ನಂದಾ ಅವರೊಂದಿಗೆ ಬೇರೆ ಕಾರಿನಲ್ಲಿ ಬಂದಿದ್ದರು. ಇದು ಕೂಡ ಆಕೆ ಮನೆ ಬಿಟ್ಟು ತಾಯಿಯೊಂದಿಗೆ ಇದ್ದಾರೆ ಎಂಬುದಕ್ಕೆ ಪುಷ್ಠಿ ನೀಡುತ್ತಿದೆ.

ತನ್ನ ಕಾರಿನಿಂದ ಕೆಳಗಿಳಿದ ನಂತರ, ಐಶ್ವರ್ಯಾ ರೈ, ಅಭಿಷೇಕ್, ಅಗಸ್ತ್ಯ ನಂದಾ ಮತ್ತು ಅಮಿತಾಬ್ ಬಚ್ಚನ್ ಅವರೊಂದಿಗೆ ಶಾಲೆಯೊಳಗೆ ಹೋಗಿದ್ದಾರೆ. ಅಮಿತಾಬ್ ಬಚ್ಚನ್ ಅವರು ಐಶ್ವರ್ಯಾ ಅವರ ತಾಯಿಯೊಂದಿಗೆ ಮುಂದೆ ಸಾಗುತ್ತಿದ್ದರು. ಅಗಸ್ತ್ಯನ ಹತ್ತಿರ ಬಂದು ನಿಂತಾಗ ಐಶ್ವರ್ಯಾ ರೈ ಪ್ರೀತಿಯಿಂದ ಅವನ ಕೆನ್ನೆ ಮುಟ್ಟಿದ್ದಾರೆ.
ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್
ಕರಾವಳಿ ಬೆಡಗಿ ಐಶ್ವರ್ಯಾ ರೈ ಮತ್ತು ನಟ ಅಭಿಷೇಕ್ ಬಚ್ಚನ್ ಏಪ್ರಿಲ್ 20, 2007 ರಂದು ಅಮಿತಾಬ್ ಬಚ್ಚನ್ ಅವರ ಬಂಗಲೆಯಾದ ಪ್ರತೀಕ್ಷಾದಲ್ಲಿ ನಡೆದ ಆತ್ಮೀಯ ಸಮಾರಂಭದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಗುರು, ಧೂಮ್ 2, ಮತ್ತು ಉಮ್ರಾವ್ ಜಾನ್ ಮುಂತಾದ ಚಿತ್ರಗಳಲ್ಲಿ ದಂಪತಿ ತೆರೆ ಹಂಚಿಕೊಂಡಿದ್ದಾರೆ. 2011ರ ನವೆಂಬರ್ 16 ರಂದು ಈ ದಂಪತಿ ತಮ್ಮ ಮೊದಲ ಮಗು ಆರಾಧ್ಯಗೆ ಪೋಷಕರಾದರು.


Click it and Unblock the Notifications











