For Quick Alerts
  ALLOW NOTIFICATIONS  
  For Daily Alerts

  ಪ್ರಭಾಸ್-ದೀಪಿಕಾ ಪಡುಕೋಣೆ ಚಿತ್ರಕ್ಕಾಗಿ ಭಾರಿ ದೊಡ್ಡ ಸಂಭಾವನೆ ಪಡೆದ ಬಿಗ್‌-ಬಿ!

  |

  ಡಾರ್ಲಿಂಗ್ ಪ್ರಭಾಸ್ ನಟಿಸುತ್ತಿರುವ 21ನೇ ಚಿತ್ರದಲ್ಲಿ ಅಮಿತಾಭ್ ಬಚ್ಚನ್ ನಟಿಸಲಿದ್ದಾರೆ ಎಂದು ವೈಜಯಂತಿ ಮೂವೀಸ್ ಸಂಸ್ಥೆ ಅಧಿಕೃತ ಪ್ರಕಟಣೆ ಮಾಡಿದೆ. ಈ ಚಿತ್ರದಲ್ಲಿ ಪ್ರಭಾಸ್‌ಗೆ ಜೋಡಿಯಾಗಿ ದೀಪಿಕಾ ಪಡುಕೋಣೆ ಕಾಣಿಸಿಕೊಳ್ಳುತ್ತಿದ್ದಾರೆ.

  ನಾಗ್ ಅಶ್ವಿನ್ ಈ ಚಿತ್ರ ನಿರ್ದೇಶನ ಮಾಡುತ್ತಿದ್ದು, ಸೈನ್ಸ್ ಫಿಕ್ಷನ್ ಕಥೆ ಹೊಂದಿದೆ. ಇದುವರೆಗೂ ಚಿತ್ರದ ಹೆಸರು ಅಂತಿಮವಾಗಿಲ್ಲ. ಈ ನಡುವೆ ಪ್ರಭಾಸ್ ಹೊಸ ಚಿತ್ರದಲ್ಲಿ ನಟಿಸಲು ಅಮಿತಾಭ್ ಬಚ್ಚನ್ ಭಾರಿ ಸಂಭಾವನೆ ಪಡೆದುಕೊಂಡಿದ್ದಾರೆ ಎಂಬ ಸುದ್ದಿ ಟಾಲಿವುಡ್‌ನಲ್ಲಿ ಸದ್ದು ಮಾಡ್ತಿದೆ.

  ಪ್ರಭಾಸ್ ಸಿನಿಮಾದಲ್ಲಿ ನಟಿಸಲು ದೀಪಿಕಾಗಿಂತ ಹೆಚ್ಚು ಸಂಭಾವನೆ ಪಡೆದ ಬಿಗ್ ಬಿ ಅಮಿತಾಬ್

  ನಿರ್ಮಾಪಕ ಅಶ್ವಿನಿ ದತ್ ಅವರು ಬಿಗ್‌ಬಿ ಈ ಸಿನಿಮಾ ಮಾಡಲು 25 ಕೋಟಿ ಆಫರ್ ನೀಡಿದ್ದಾರಂತೆ. ಸ್ಕ್ರಿಪ್ಟ್‌ಗೆ ಓಕೆ ಎಂದಿರುವ ಅಮಿತಾಭ್ ಮುಂಬೈನಲ್ಲಿ ನಡೆಯಲಿರುವ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರಂತೆ. ಆದ್ರೆ, ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ.

  ಸದ್ಯದ ಮಾಹಿತಿ ಪ್ರಕಾರ, ಈ ಸಿನಿಮಾ ಪ್ಯಾನ್ ಇಂಡಿಯಾ ಬಿಡುಗಡೆಯಾಗಲಿದ್ದು, ದೇಶಾದ್ಯಂತ ಖ್ಯಾತಿ ಗಳಿಸಿಕೊಂಡಿರುವ ಕಲಾವಿದರನ್ನು ಆಯ್ಕೆಮಾಡಿಕೊಂಡು ಒಂದೇ ಸಲ ಅಧಿಕೃತವಾಗಿ ಘೋಷಣೆ ಮಾಡುವ ಯೋಜನೆ ಹಾಕಿಕೊಂಡಿದ್ದಾರೆ.

  ಸಿಹಿಸುದ್ದಿ ಕೊಟ್ಟ ಬಿಗ್ ಬಾಸ್ ಸಂಜನಾ | Filmibeat Kannada

  ಇನ್ನು ಅಮಿತಾಭ್ ಬಚ್ಚನ್ ಚೆಹ್ರೆ, ಬ್ರಹ್ಮಾಸ್ತ್ರ, ಜುಂಡ್, ಕನ್ನಡದ ಬಟರ್‌ ಫ್ಲೈ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆ ಕಡೆ ಪ್ರಭಾಸ್ ಪೂಜಾ ಹೆಗ್ಡೆ ಜೊತೆ ರಾಧೇ ಶ್ಯಾಮ್ ಸಿನಿಮಾ ಮಾಡಿದ್ದಾರೆ. ಇದಾದ ಬಳಿಕ ಆದಿಪುರುಷ್ ಚಿತ್ರದಲ್ಲಿ ಸಹ ಪ್ರಭಾಸ್ ನಟಿಸುತ್ತಿದ್ದಾರೆ.

  English summary
  Bollywood Big B Amitabh Bachchan charging Rs 25 crore for his next with Prabhas & Deepika Padukone.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X