ಸುದೀಪ್ 'ಫ್ಯಾಂಟಮ್' ಸಿನಿಮಾದಲ್ಲಿ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್?

By ಫಿಲ್ಮ್ ಡೆಸ್ಕ್

ಕಿಚ್ಚ ಸುದೀಪ್ ನಟನೆಯ ಫ್ಯಾಂಟಮ್ ಸಿನಿಮಾ ಅನೇಕ ವಿಚಾರಗಳಿಗೆ ಸದ್ದು ಮಾಡುತ್ತಿದೆ. ದೊಡ್ಡ ಮಟ್ಟದಲ್ಲಿ ತಯಾರಾಗುತ್ತಿರುವ ಫ್ಯಾಂಟಮ್ ಸಿನಿಮಾದ ಮೇಲೆ ಅಭಿಮಾನಿಗಳ ನಿರೀಕ್ಷೆ ಸಹ ದೊಡ್ಡದಾಗಿದೆ. ಇಂದು ಜನವರಿ 21ರಂದು ಸಂಜೆ ಫ್ಯಾಂಟಮ್ ಸಿನಿಮಾದಿಂದ ಬಿಗ್ ಅನೌನ್ಸ್ ಮೆಂಟ್ ಮಾಡುವುದಾಗಿ ಸಿನಿಮಾತಂಡ ಹೇಳಿದೆ.

ಚಿತ್ರತಂಡ ಹೇಳುತ್ತಿದ್ದಂತೆ ಏನಿರಬಹುದು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ. ಈಗಾಗಲೇ ಕೇಳಿಬರುತ್ತಿರುವ ಸುದ್ದಿಯ ಪ್ರಕಾರ ಚಿತ್ರದ ಟೈಟಲ್ ಫ್ಯಾಂಟಮ್ ನಿಂದ ವಿಕ್ರಾಂತ್ ರೋಣಾ ಆಗಿ ಬದಲಾಗಲಿದೆ ಎನ್ನಲಾಗುತ್ತಿದೆ. ಚಿತ್ರದಲ್ಲಿ ಸುದೀಪ್ ವಿಕ್ರಾಂತ್ ರೋಣಾ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ, ಹಾಗಾಗಿ ಪಾತ್ರದ ಹೆಸರನ್ನೇ ಟೈಟಲ್ ಮಾಡಿದರೆ ಉತ್ತಮ ಎನ್ನುವ ತೀರ್ಮಾನಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ.

ಫ್ಯಾಂಟಮ್ ಸಿನಿಮಾದಲ್ಲಿ ಬಾಲಿವುಡ್ ಬಿಗ್ ಬಿ

ಫ್ಯಾಂಟಮ್ ಸಿನಿಮಾದಲ್ಲಿ ಬಾಲಿವುಡ್ ಬಿಗ್ ಬಿ

ಇವತ್ತಿನ ಬಿಗ್ ಅನೌನ್ಸ್ ಮೆಂಟ್ ನಲ್ಲಿ ಚಿತ್ರದ ಟ್ರೈಲರ್ ರಿಲೀಸ್ ಡೇಟ್ ಬಹಿರಂಗವಾಗಲಿದೆ ಎನ್ನಲಾಗುತ್ತಿದೆ. ಇದರ ನಡುವೆ ಮತ್ತೊಂದು ಸುದ್ದಿ ಗಾಂಧಿನಗರದ ಗಲ್ಲಿಯಲ್ಲಿ ಹರಿದಾಡುತ್ತಿದೆ. ಫ್ಯಾಂಟಮ್ ಸಿನಿಮಾದಲ್ಲಿ ಬಾಲಿವುಡ್ ಬಿಗ್ ಬಿ ಅಮಿತಾಬ್ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಒಂದು ವೇಳೆ ಅಮಿತಾಬ್ ಫ್ಯಾಂಟಮ್ ನಲ್ಲಿ ಬಣ್ಣ ಹಚ್ಚಿದರೆ ಎರಡನೇ ಬಾರಿಗೆ ಕನ್ನಡ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಕನ್ನಡದ ಅಮೃತಧಾರೆ ಸಿನಿಮಾದಲ್ಲಿ ಅಮಿತಾಬ್

ಕನ್ನಡದ ಅಮೃತಧಾರೆ ಸಿನಿಮಾದಲ್ಲಿ ಅಮಿತಾಬ್

ಈ ಮೊದಲು ಅಮಿತಾಬ್, ರಮ್ಯಾ ಮತ್ತು ದ್ಯಾನ್ ನಟನೆಯ ಅಮೃತಧಾರೆ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಫ್ಯಾಂಟಮ್ ಸಿನಿಮಾದಲ್ಲೂ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಇದು ಎಷ್ಟರ ಮಟ್ಟಿಗೆ ಸತ್ಯ ಎನ್ನುವುದನ್ನು ಸಿನಿಮಾತಂಡವೇ ಉತ್ತರಿಸಬೇಕಿದೆ. ಅಮಿತಾಬ್ ಕಾಣಿಸಿಕೊಂಡರೆ ಫ್ಯಾಂಟಮ್ ಮತ್ತೊಂದು ರೇಂಜ್ ಗೆ ಹೋಗಲಿದೆ ಎನ್ನುವುದು ಅಭಿಮಾನಿಗಳ ಲೆಕ್ಕಾಚಾರ.

ರಣ್ ಚಿತ್ರದಲ್ಲಿ ಅಮಿತಾಬ್ ಜೊತೆ ಸುದೀಪ್ ನಟನೆ

ರಣ್ ಚಿತ್ರದಲ್ಲಿ ಅಮಿತಾಬ್ ಜೊತೆ ಸುದೀಪ್ ನಟನೆ

ಅಂದಹಾಗೆ ಸುದೀಪ್ ಈಗಾಗಲೇ ಅಮಿತಾಬ್ ಜೊತೆ ತೆರೆಹಂಚಿಕೊಂಡಿದ್ದಾರೆ. ಬಾಲಿವುಡ್ ನ ರಣ್ ಚಿತ್ರದಲ್ಲಿ ಸುದೀಪ್, ಅಮಿತಾ ಜೊತೆ ಕಾಣಿಸಿಕೊಂಡಿದ್ದಾರೆ. ಇದೀಗ ಫ್ಯಾಂಟಮ್ ನಲ್ಲೂ ಬಿಗ್ ಬಿ ಕಾಣಿಸಿಕೊಂಡರೆ ಕಿಚ್ಚನ ಅಭಿಮಾನಿಗಳ ಸಂತಸ, ಸಂಭ್ರಮ ಮತ್ತಷ್ಟು ಹೆಚ್ಚಾಗಲಿದೆ.

ಫ್ಯಾಂಟಮ್ ನಲ್ಲಿ ಜಾಕ್ವೆಲಿನ್ ಫರ್ನಾಂಡೀಸ್

ಫ್ಯಾಂಟಮ್ ನಲ್ಲಿ ಜಾಕ್ವೆಲಿನ್ ಫರ್ನಾಂಡೀಸ್

ಫ್ಯಾಂಟಮ್ ನಲ್ಲಿ ಜಾಕ್ವೆಲಿನ್ ಫರ್ನಾಂಡೀಸ್ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಫ್ಯಾಂಟಮ್ ಸಿನಿಮಾದ ಹಾಡಿನಲ್ಲಿ ಜಾಕ್ವೆಲಿನ್ ಕಿಚ್ಚನ ಜೊತೆ ಹೆಜ್ಜೆ ಹಾಕಲಿದ್ದಾರೆ ಎನ್ನುವ ಮಾತುಗಳು ಬಲವಾಗಿ ಕೇಳಿಬರುತ್ತಿದೆ. ಸದ್ಯ ಟಾಕಿ ಭಾಗ ಮುಗಿಸಿರುವ ಸಿನಿಮಾತಂಡ ಹಾಡಿನ ಚಿತ್ರೀಕರಣಕ್ಕಾಗಿ ಕಾಯುತ್ತಿದೆ ಎನ್ನಲಾಗುತ್ತಿದೆ. ಇದೇನೆ ಇದ್ರು ಇಂದು ಅನೌನ್ಸ್ ಮಾಡುತ್ತಿರುವ ವಿಚಾರ ಏನಿರಬಹುದು ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

More from Filmibeat

English summary
Bollywood Big B Amitabh Bachchan likely to play in Sudeep Phantom movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X